For Quick Alerts
ALLOW NOTIFICATIONS  
For Daily Alerts

ಒಂದರ ಬದಲು ಎರಡು ಕಾಂಡೊಮ್‪ಗಳನ್ನು ಬಳಸಿದರೆ ಹೆಚ್ಚಿನ ಸುರಕ್ಷತೆ ಸಿಗಬಹುದೇ?

|

ಲೈಂಗಿಕ ಸಂಪರ್ಕದಲ್ಲಿ ಕಾಂಡೊಮ್‌ಗಳ ಮಹತ್ವ ಏನೆಂದು ಎಲ್ಲಾ ವಯಸ್ಕರಿಗೂ ತಿಳಿದಿದೆ. ಈ ಮೂಲಕ ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳುವ ಇಬ್ಬರೂ ಲೈಂಗಿಕ ರೋಗಗಳಿಂದ ರಕ್ಷಣೆ ಪಡೆಯಬಹುದು ಹಾಗೂ ಅನೈಚ್ಛಿಕ ಗರ್ಭಧಾರಣೆಯಿಂದ ತಡೆಯಲೂಬಹುದು. ಈ ಪರಿಕರ ಅತಿ ಅಗ್ಗವಾಗಿ ಅಥವಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿಯೂ ಸಿಗುತ್ತದೆ. ಇದುವರೆಗೂ ಈ ವಿಧಾನ ಅತ್ಯಂತ ಸುರಕ್ಷಿತ ಎಂದೇ ಭಾವಿಸಲಾಗಿತ್ತು ಹಾಗೂ ಹೆಚ್ಚಿನ ವೈದ್ಯರು ಇದರ ಬಳಕೆಗೆ ಒತ್ತು ನೀಡುತ್ತಿದ್ದರು. ಈಗಂತೂ ಬಹುರಾಷ್ಟ್ರೀಯ ಸಂಸ್ಥೆಗಳೇ ಈ ವ್ಯವಹಾರಕ್ಕೆ ಇಳಿದ ಬಳಿಕ ವಿಶ್ವದ ಅತ್ಯುತ್ತಮ ಗುಣಮಟ್ಟದ, ವಿವಿಧ ಆಯ್ಕೆಗಳಿರುವ ಕಾಂಡೊಮ್‌ಗಳು ಇಂದು ಭಾರತದಲ್ಲಿಯೂ ಲಭಿಸುತ್ತಿವೆ ಹಾಗೂ ಭಾರೀ ಜನಪ್ರಿಯವಾಗಿವೆ.

ಶ್!! ಅದನ್ನು ಬಳಸದೇ ಕೂಡ ಗರ್ಭಧಾರಣೆಯನ್ನು ತಡೆಯಬಹುದಂತೆ!!

ಯಾವಾಗ ಒಂದು ವಸ್ತು ಜನಪ್ರಿಯವಾಯಿತೋ, ಆಗ ಅದಕ್ಕಂಟಿಕೊಂಡೇ ಕೆಲವು ಮಿಥ್ಯೆಗಳೂ, ಇದರ ಜನಪ್ರಿಯತೆಯ ಬುಡವನ್ನೇ ಅಲ್ಲಾಡಿಸುವಂತಹ ಮಾಹಿತಿಗಳೂ ಚರ್ಚಿಸಲ್ಪಡುತ್ತವೆ. ಅಂತೆಯೇ ಕಾಂಡೊಮ್ ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಇಂದು ಹೆಚ್ಚಿನವರು ಕೇಳುತ್ತಿದ್ದಾರೆ. ಈ ಉತ್ಪನ್ನದ ಬಗ್ಗೆ ಇಂದು ಅತಿ ಹೆಚ್ಚಾಗಿ ಕೇಳಲ್ಪಡುವ ಪ್ರಶ್ನೆ ಎಂದರೆ ಒಂದರ ಬದಲು ಎರಡು ಕಾಂಡೊಮ್‌ಗಳನ್ನು ಬಳಸಿದರೆ ಹೆಚ್ಚಿನ ಸುರಕ್ಷತೆ ಸಿಗಬಹುದೇ? ತಜ್ಞರು ಈ ಬಗ್ಗೆ ಏನು ಉತ್ತರಿಸುತ್ತಾರೆ? ನೋಡೋಣ...

ಒಂದರ ಬದಲಿಗೆ ಎರಡು ಉಪಯೋಗಿಸಿದರೆ ಹೇಗೆ?

ಒಂದರ ಬದಲಿಗೆ ಎರಡು ಉಪಯೋಗಿಸಿದರೆ ಹೇಗೆ?

ಸಾಮಾನ್ಯವಾಗಿ 'ಒಬ್ಬರಿಗಿಂತ ಇಬ್ಬರಿದ್ದರೆ ಲೇಸು' ಎಂಬ ಕನ್ನಡದ ನಾಣ್ಣುಡಿ ಎಲ್ಲೆಡೆ ಅನ್ವಯವಾಗುವುದಿಲ್ಲ. ಸಾಮಾನ್ಯವಾಗಿ ಸಮಸ್ಯೆಯನ್ನು ಪರಿಹರಿಸಲು ಇಬ್ಬರಿದ್ದರೆ ವಿಚಾರ ವಿಮರ್ಶಿಸಿ, ಪರಸ್ಪರ ಸಹಕಾರದ ಮೂಲಕ ಈ ಸಮಸ್ಯೆಯನ್ನು ಬಿಡಿಸುವುದು ಹೆಚ್ಚು ಸುಲಭವಾಗುತ್ತದೆ ಎಂಬುದೇ ಈ ನಾಣ್ಣುಡಿಯ ಅರ್ಥವಾಗಿದೆ. ಈ ನಾಣ್ಣುಡಿ ಎಲ್ಲಾ ಸಂದರ್ಭಗಳಲ್ಲಿಯೂ ಅನ್ವಯಿಸಿಕೊಳ್ಳಬಹುದು ಎಂದು ನಂಬಿರುವ ವ್ಯಕ್ತಿಗಳು ಒಂದರ ಬದಲು ಎರಡು ಕಾಂಡೊಮ್‌ಗಳನ್ನು ಬಳಸಿದರೆ ಹೆಚ್ಚಿನ ಸುರಕ್ಷತೆ ಸಿಗಬಹುದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಹೆಚ್ಚಿನ ರಬ್ಬರ್ ಎಂದರೆ ಇಬ್ಬರಿಗೂ ಹೆಚ್ಚಿನ ಸುರಕ್ಷತೆ ಎಂದು ಇವರ ಲೆಕ್ಕಾಚಾರ. ಆದರೆ, ಇದು ನಿಜವೇ?

ಪುರುಷರ ಕಾಂಡೊಮ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಪುರುಷರ ಕಾಂಡೊಮ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಪರಿಕರದ ಮುಖ್ಯ ಉದ್ದೇಶ ಪುರುಷರ ವೀರ್ಯಾಣು ಮಹಿಳೆಯ ಗರ್ಭಕಂಠಕ್ಕೆ ತಲುಪದಂತೆ ಮಾಡುವುದು. ಪುರುಷ ಜನನಾಂಗ ಉದ್ರೇಕ್ತ ಸ್ಥಿತಿಯಲ್ಲಿದ್ದಾಗ ಕಾಂಡೊಮ್ ಧರಿಸಬೇಕು. ಇದರ ತುದಿಯಲ್ಲಿ ಚಿಕ್ಕದಾದ ಚೀಲದಂತಹ ಭಾಗವಿದ್ದು ಇದು ಧರಿಸುವ ಮುನ್ನ ಖಾಲಿಯಾಗಿರುತ್ತದೆ.

ಪುರುಷರ ಕಾಂಡೊಮ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಪುರುಷರ ಕಾಂಡೊಮ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಖಾಲಿಜಾಗವನ್ನು ಸ್ಖಲನದ ಬಳಿಕ ವೀರ್ಯಾಣುಗಳನ್ನು ಸಂಗ್ರಹಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಖಾಲಿಜಾಗ ಉಳಿದ ಭಾಗದಂತೆ ಬಿಗಿಯಾಗಿ ಅಂಟಿಕೊಂಡಿರದೇ ಸಡಿಲವಾಗಿರುವುದೇ ಇದು ಹರಿಯುವ ಸಂಭವವಿರುತ್ತದೆ.

ಇದನ್ನು ತಡೆಗಟ್ಟಲು ಎರಡು ಕಾಂಡೊಮ್ ಬಳಸಿದರೆ?

ಇದನ್ನು ತಡೆಗಟ್ಟಲು ಎರಡು ಕಾಂಡೊಮ್ ಬಳಸಿದರೆ?

ಮೊದಲನೆಯ ಕಾಂಡೊಮ್ ಮೇಲೆ ಎರಡನೆಯದನ್ನು ಧರಿಸಿದರೆ ಹೆಚ್ಚಿನ ಘರ್ಷಣೆಗೆ ಹಾಗೂ ಹೆಚ್ಚಿನ ಬಿಗಿತಕ್ಕೆ ಕಾರಣವಾಗುತ್ತದೆಯೇ ಹೊರತು ಹರಿಯುವಿಕೆಯ ವಿರುದ್ಧ ಪೂರ್ಣವಾದ ರಕ್ಷಣೆ ಒದಗುವುದಿಲ್ಲ. ಅಲ್ಲದೇ ಕಾಂಡೊಮ್ ಅನ್ನು ಒಂದು ಬಾರಿಗೆ ಒಂದೇ ಉಪಯೋಗಿಸುವಂತೆ ವಿನ್ಯಾಸಗೊಳಿಸಲಾಗಿದ್ದು ಇದರ ಮೇಲೆ ಎರಡನೆಯದನ್ನು ಧರಿಸಿದರೆ ಇದು ಸರಿಯಾಗಿ ಕುಳಿತುಕೊಳ್ಳುವುದೂ ಇಲ್ಲ ಹಾಗೂ ಎರಡನೆಯ ಕಾಂಡೊಮ್‌ನ ತುದಿಯ ಖಾಲಿಚೀಲ ಒಳಗಿನ ಕಾಂಡೊಮ್‌ನ ಖಾಲಿಚೀಲವನ್ನು ಮಡಚಿರುವಂತೆ ಮಾಡಿ ಹರಿಯುವ ಸಾಧ್ಯತೆಯನ್ನು ಹೆಚ್ಚಿಸ್ತುತದೆ. ಎರಡು ಕಾಂಡೊಮ್‌ಗಳನ್ನು ಧರಿಸಿವುದು ಖಚಿತವಾಗಿಯೂ ಅಸಮರ್ಪಕ ವಾಗಿರುತ್ತದೆ ಹಾಗೂ ಒಂದರ ಮೇಲೊಂದು ಸುಲಭವಾಗಿ ಜಾರುವ ಮೂಲಕ ಮೂಲ ಉದ್ದೇಶವೇ ಭಂಗಗೊಳ್ಳುತ್ತದೆ.

ಇನ್ನೊಂದು ಮಿಥ್ಯೆ

ಇನ್ನೊಂದು ಮಿಥ್ಯೆ

ಕಾಂಡೊಮ್ ಬಳಕೆಯನ್ನು ನಿರಾಕರಿಸುವವರು ನೀಡುವ ಕಾರಣವೆಂದರೆ ಇದರಿಂದ ಲೈಂಗಿಕ ಸಂಪರ್ಕದ ಸಂವೇದನೆ ಕಡಿಮೆಯಾಗುತ್ತದೆ ಎಂಬುದಾಗಿದೆ.

ಇನ್ನೊಂದು ಮಿಥ್ಯೆ

ಇನ್ನೊಂದು ಮಿಥ್ಯೆ

2007ರಲ್ಲಿ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ನಡೆಸಲಾದ ಸಂಶೋಧನೆಯೊಂದರಲ್ಲಿ ಹದಿನೆಂಟು ದಾಟಿದ ಯುವಕರನ್ನು ಸುಮಾರು ಸುಮಾರು ಮೂವತ್ತು ದಿನಗಳ ಕಾಲ ತಾವು ಅನುಭವಿಸಿದ ಸಂವೇದನೆಯ ಬಗ್ಗೆ ತಮ್ಮ ಅನುಭವಗಳನ್ನು ಹೇಳಿಕೊಳ್ಳಲು ಕೇಳಿಕೊಂಡಾಗ ಹೆಚ್ಚಿನವರು ತಮ್ಮ ಸಂವೇದನೆ ಕಾಂಡೋಮ್ ಧರಿಸಿದಾಗ ಕಡಿಮೆಯೇನೂ ಆಗಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಮಿಥ್ಯೆ

ಇನ್ನೊಂದು ಮಿಥ್ಯೆ

ಆದ್ದರಿಂದ ಮುಂದಿನ ಬಾರಿಯ ಮಿಲನದ ಸಮಯದಲ್ಲಿ ಕಾಂಡೋಮ್ ಬೇಡ ಎಂಬ ಸಬೂಬು ಬೇಡ. ಇದನ್ನು ಧರಿಸಿ, ಸುರಕ್ಷಿತರಾಗಿರಿ.

English summary

can-using-two-condoms-give-extra-protections

SHOULD YOU USE TWO CONDOMS FOR EXTRA PROTECTION? By now we all know how important it is to use a condom during sexual intercourse. Using condoms is the best way to protect you and your partner against STDs and unwanted pregnancy. Cheap, easy and effective, condoms are considered as the simplest method of contraception until now. As condoms are famous and are commonly used what goes without saying are the myths
X
Desktop Bottom Promotion