For Quick Alerts
ALLOW NOTIFICATIONS  
For Daily Alerts

ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು 7 ಸಪ್ಲಿಮೆಂಟ್ಸ್‌ಗಳು

By Arshad
|

ಸಾಮಾನ್ಯ ಬುದ್ಧಿಮತ್ತೆಯ ವ್ಯಕ್ತಿಗಳು ತಮ್ಮ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಕೆಲವು ಮೆದುಳನ್ನು ಚುರುಕುಗೊಳಿಸುವ ಹೆಚ್ಚುವರಿ ಆಹಾರಗಳನ್ನು ಸೇವಿಸಬಹುದು. ಈ ಹೆಚ್ಚುವರಿ ಆಹಾರಗಳು ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಹೆಚ್ಚುವರಿ ಆಹಾರಗಳಂತೆಯೇ ಕಾರ್ಯನಿರ್ವಹಿಸುತ್ತವೆ, ವ್ಯತ್ಯಾಸವೆಂದರೆ ಇವು ಮೆದುಳಿಗೆ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತವೆ ಹಾಗೂ ಒಟ್ಟಾರೆ ಚುರುಕುತನವನ್ನು ಹೆಚ್ಚಿಸುತ್ತವೆ. ಈ ಆಹಾರಗಳನ್ನು ಒಟ್ಟಾರೆಯಾಗಿ nootropics ಎಂದು ಕರೆಯಲಾಗುತ್ತದೆ.

boosting supplements

ಮೆದುಳಿನ ಕ್ಯಾನ್ಸರ್! ಆವರಿಸುವ ಪ್ರಾರಂಭಿಕ ಸೂಚನೆಗಳು

ಇವು ಮೆದುಳಿನ ಕಾರ್ಯಚಟುವಟಿಕೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ. ಮೆದುಳು ಅತಿವೇಗವಾಗಿ ನಿರ್ವಹಿಸಬೇಕಾದ ಜಾಗರೂಕತನ, ಕ್ರಿಯಾತ್ಮಕತೆ, ಪ್ರೇರಣೆ ಹಾಗೂ ಗ್ರಹಣಾಶಕ್ತಿ ಮೊದಲಾದವುಗಳನ್ನು ಈ ಆಹಾರಗಳು ಉತ್ತಮಗೊಳಿಸುತ್ತವೆ. ಸಾಮಾನ್ಯವಾಗಿ ವಯಸ್ಸಾಗುತ್ತಾ ಹೋದಂತೆ ಮೆದುಳಿನ ಕ್ಷಮತೆಯೂ ಉಡುಗುತ್ತದೆ ಹಾಗೂ ಈ ಆಹಾರಗಳನ್ನು ನಿಯಮಿತವಾಗಿ ಸೇವಿಸುತ್ತಾ ಹೋಗುವ ಮೂಲಕ ಈ ಉಡುಗುವಿಕೆ ಯನ್ನು ಆದಷ್ಟೂ ತಡವಾಗಿಸಬಹುದು. ಬನ್ನಿ, ಈ ಆಹಾರಗಳ ಪಟ್ಟಿಯಲ್ಲಿ ಅರ್ಹತೆ ಪಡೆದಿರುವ ಏಳು ಆಹಾರಗಳು ಯಾವುದು ಎಂಬುದನ್ನು ನೋಡೋಣ:

ಅಸಿಟೈಲ್-ಎಲ್-ಕಾರ್ನಿಟೈನ್ (Acetyl-L-Carnitine)

ಅಸಿಟೈಲ್-ಎಲ್-ಕಾರ್ನಿಟೈನ್ (Acetyl-L-Carnitine)

ಇದೊಂದು ನಮ್ಮ ದೇಹವೇ ನೈಸರ್ಗಿಕವಾಗಿ ಉತ್ಪಾದಿಸುವ ಅಮೈನೋ ಆಮ್ಲವಾಗಿದೆ. ದೇಹದ ಒಟ್ಟಾರೆ ಜೀವರಾಸಾಯನಿಕ ಕ್ರಿಯೆಯನ್ನು ನಡೆಸಲು ಹಾಗೂ ಶಕ್ತಿಯ ಉತ್ಪಾದನೆಗೆ ಈ ಅಮೈನೋ ಆಮ್ಲ ಪ್ರಮುಖ ಪಾತ್ರ ವಹಿಸುತ್ತದೆ. ಈ ಅಮೈನೋ ಆಮ್ಲವುಳ್ಳ ಹೆಚ್ಚುವರಿ ಆಹಾರಗಳನ್ನು ಸೇವಿಸಿದ ವ್ಯಕ್ತಿಗಳು ಹೆಚ್ಚು ಚುರುಕುತನವನ್ನು ಪ್ರಕಟಿಸಿದ್ದಾರೆ. ಅಲ್ಲದೇ ಸ್ಮರಣಶಕ್ತಿಯನ್ನು ಹೆಚ್ಚಿಸುವುದು ಮತ್ತು ವಯೋಸಹಜ ಮರೆಗುಳಿತನವನ್ನು ನಿವಾರಿಸಲು ನೆರವಾಗುತ್ತದೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಕಂಡುಕೊಂಡ ಅಂಶಗಳೆಂದರೆ ಈ ರಾಸಾಯನಿಕ ಕಲಿಯುವಿಕೆಯನ್ನು ಉತ್ತಮಗೊಳಿಸುತ್ತದೆ ಹಾಗೂ ವಯಸ್ಸಿನ ಪ್ರಭಾವ ಮೆದುಳಿನ ಮೇಲಾಗುವುದನ್ನು ತಡವಾಗಿಸುತ್ತದೆ. ಮನುಷ್ಯರ ಮೇಲೆ ನಡೆಸಿದ ಪ್ರಯೋಗಗಳಲ್ಲಿ ವಯಸ್ಸಿನ ಪ್ರಭಾವದಿಂದ ಕುಂಠಿತವಾಗುವ ಮೆದುಳಿನ ಕ್ಷಮತೆ ಕಡಿಮೆಯಾಗಿರುವುದು ಕಂಡುಬಂದಿದೆ. ಅಲ್ಲದೇ ಅಲ್ಜೀಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೂ ಈ ರಾಸಾಯನಿಕ ಉತ್ತಮ ಪರಿಣಾಮವನ್ನು ತೋರಿದೆ.

ಸೈಟಿಕೋಲೈನ್ (Citicholine)

ಸೈಟಿಕೋಲೈನ್ (Citicholine)

ಮೆದುಳನ್ನು ರಕ್ಷಿಸಲು ಈ ಪೂರಕ ಆಹಾರ ಉತ್ತಮ ಪರಿಣಾಮ ಒದಗಿಸುತ್ತದೆ. ಈ ರಾಸಾಯನಿಕ ನಮ್ಮ ಪ್ರತಿ ಜೀವಕೋಶದಲ್ಲಿಯೂ ನೈಸರ್ಗಿಕವಾಗಿ ಉಪಸ್ಥಿತವಿರುತ್ತದೆ. ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಇದು ಅತ್ಯುತ್ತಮ ಆಹಾರವಾಗಿದ್ದು ವಿಶೇಷವಾಗಿ ಮೆದುಳಿನ ಜೀವಕೋಶಗಳ ಹೊರಪದರವನ್ನು ಬೆಳೆಸಲು ನೆರವಾಗುತ್ತದೆ. ಅಲ್ಲದೇ ಈ ಸಂಯುಕ್ತ ಮೆದುಳಿಗೆ ರಕ್ತಪರಿಚಲನೆಯನ್ನು ಹೆಚ್ಚಿಸುತದೆ. ಅಲ್ಲದೇ ವಯಸ್ಸಿಗನುಗುಣವಾಗಿ ಮೆದುಳು ಬದಲಾವಣೆಗೆ ಒಳಪಡುವ ಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಜೀವಕೋಶದ ಒಂದು ಭಾಗವಾದ ಮೈಟೋಕಾಂಡ್ರಿಯಾ ಎಂಬ ಭಾಗವನ್ನು ಪ್ರಚೋದಿಸಿ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವದಿಂದ ಎದುರಾಗುವ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ನಮ್ಮ ಮೆದುಳಿಗೆ ಅಗತ್ಯವಿರುವ ಎರಡು ನ್ಯೂರೋಟ್ರಾನ್ಸ್ಮಿಟರುಗಳೆಂದರೆ ಡೋಪಮೈನ್ ಮತ್ತು ಅಸಿಟೈಲ್ ಕೋಲೈನ್. ಈ ಸಂಯುಕ್ತ ಈ ಎರಡೂ ಅಂಶಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಒಂದು ವೇಳೆ ಅಸಿಟೈಲ್ ಕೋಲೈನ್ ನ ಅಂಶ ಕಡಿಮೆಯಾದರೆ ಮರೆಗುಳಿತನ ಮತ್ತು ಅಲ್ಜೀಮರ್ಸ್ ಕಾಯಿಲೆ ಎದುರಾಗಬಹುದು. ಡೋಪಮೈನ್ ಉತ್ಪಾದಕತೆ ಮತ್ತು ಪ್ರೇರಣೆಗೆ ನೆರವಾಗುತ್ತದೆ. ಹಾಗಾಗಿ ಸೈಟೋಕೋಲೈನ್ ಪೂರಕ ಆಹಾರಗಳನ್ನು ಸೇವಿಸುವ ಮೂಲಕ ಏಕಾಗ್ರತೆ ಹೆಚ್ಚಿಸಲು, ಗಮನ ಕೇಂದ್ರೀಕರಿಸಲು ಹಾಗೂ ಸ್ಮರಣಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

3. ಡೋಕೋಸಾಹೆಕ್ಸಾನಿಕ್ ಆಮ್ಲ (Docosahexaenoic Acid (DHA)

3. ಡೋಕೋಸಾಹೆಕ್ಸಾನಿಕ್ ಆಮ್ಲ (Docosahexaenoic Acid (DHA)

ಇದೊಂದು ಒಮೆಗಾ ೩ ಅವಶ್ಯಕ ಕೊಬ್ಬಿನ ಆಮ್ಲವಾಗಿದ್ದು ಮೆದುಳಿನ ಕ್ಷಮತೆಗೆ ತೀರಾ ಅಗತ್ಯವಾದ ರಾಸಾಯನಿಕವಾಗಿದೆ. ಅದರಲ್ಲೂ ಡಿಎಚ್ ಎ ಎಲ್ಲಾ ಒಮೆಗಾ ಕೊಬ್ಬಿನಾಮ್ಲಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ಈ ಅಂಶವನ್ನು ಕೇವಲ ಆಹಾರದ ಮೂಲಕ ಪಡೆಯಲು ಕಷ್ಟಕರವಾಗಿದೆ. ಈ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರಗಳೆಂದರೆ ಸಾಲ್ಮನ್, ಬಂಗಡೆ ಮತ್ತು ಬೂತಾಯಿ ಮೀನುಗಳಾಗಿವೆ. ನಮ್ಮ ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಎಂಬ ಭಾಗ ಚಿಂತನೆಗೆ ಬಳಸಲ್ಪಡುವ ಭಾಗವಾಗಿದ್ದು ಇದರ ಜೀವಕೋಶಗಳ ತಳಹದಿಯಲ್ಲಿ ಈ ಕೊಬ್ಬಿನಾಮ್ಲ ಒಳಗೊಂಡಿರುತ್ತದೆ. ಈ ಕೊಬ್ಬಿನಾಮ್ಲದ ಕೊರತೆಯಿಂದ ಖಿನ್ನತೆ, ಮನೋವೈಜ್ಞಾನಿಕ ತೊಂದರೆಗಳು ಮೊದಲಾದವು ಎದುರಾಗುತ್ತವೆ. ಈ ಅಂಶವುಳ್ಳ ಪೂರಕ ಆಹಾರಗಳ ಸೇವನೆಯಿಂದ ಸ್ಮರಣಶಕ್ತಿ ಕುಂದುವುದು, ಮನೋಭಾವ ಬದಲಾಗುವುದು, ಮರೆಗುಳಿತನ ಮೊದಲಾದವುಗಳು ಆವರಿಸುವುದರಿಂದ ತಡೆಯುತ್ತದೆ.

4.ಆಲ್ಫಾ ಜಿಪಿಸಿ (Alpha-GPC)

4.ಆಲ್ಫಾ ಜಿಪಿಸಿ (Alpha-GPC)

(alpha-glycerophosphocholine) ಎಂಬ ವೈಜ್ಞಾನಿಕ ಹೆಸರಿನ ಇದೊಂದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ರಾಸಾಯನಿಕವಾಗಿದ್ದು ಕೋಲೈನ್ (ಮೆದುಳಿನ ಬೆಳವಣಿಗೆ ಮತ್ತು ನ್ಯೂರೋಟ್ರಾನ್ಸ್ ಮಿಟರ್ ಗಳ ಉತ್ಪಾದನೆಗೆ ಅಗತ್ಯವಾಗಿರುವ ಅಂಶ) ವನ್ನು ಮೆದುಳಿಗೆ ತಲುಪಿಸಲು ನೆರವಾಗುತ್ತದೆ. ಪರಿಣಾಮವಾಗಿ ಮೆದುಳಿನ ಜೀವಕೋಶಗಳ ಹೊರಪದರದ ಬೆಳವಣಿಗೆಗೆ ಈ ಕೋಲೈನ್ ನೆರವಾಗುತ್ತದೆ. ಅಲ್ಲದೇ, ಆಲ್ಫಾ ಜಿಪಿಸಿ ಮೆದುಳಿನಲ್ಲಿರುವ ಸೆರೋಟೋನಿನ್, ಡೋಪಮೈನ್ ಹಾಗೂ ಗಾಮಾ-ಅಮೈನೋಬ್ಯೂಟೈಕ್ ಆಮ್ಲ (GABA) ಎಂಬ ಅಂಶವನ್ನು ಹೆಚ್ಚಿಸಲೂ ನೆರವಾಗುತ್ತದೆ. ಈ ಅಂಶವುಳ್ಳ ಪೂರಕ ಆಹಾರಗಳನ್ನು ಸೇವಿಸುವ ಮುಲಕ ಗಮನ ಹೆಚ್ಚಿಸಲು ಹಾಗೂ ಸ್ಮರಣಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಸ್ಮರಣಶಕ್ತಿಯ ತೊಂದರೆ ಇರುವ ವ್ಯಕ್ತಿಗಳಿಗೆ ವಿಶ್ವದಾದ್ಯಂತ ಈ ಅಂಶವಿರುವ ಔಷಧಿಗಳನ್ನೇ ಒದಗಿಸಲಾಗುತ್ತದೆ.

5.ರ್‍ಹೋಡಿಯೋಲಾ ರೋಸಿಯಾ (Rhodiola Rosea)

5.ರ್‍ಹೋಡಿಯೋಲಾ ರೋಸಿಯಾ (Rhodiola Rosea)

ಇದೇ ಹೆಸರಿನ ಸಸ್ಯದಿಂದ ಪ್ರತ್ಯೇಕಿಸಲ್ಪಟ್ಟ ಈ ಪೂರಕ ಔಷಧಿ ಚೀನಾದ ಔಷಧಿಗಳಲ್ಲಿ ಒಟ್ಟಾರೆ ಆರೋಗ್ಯ ಹೆಚ್ಚಿಸುವ ಸಲುವಾಗಿ ಬಳಸಲ್ಪಡುತ್ತದೆ. ಆಯಾಸವಾಗುವುದನ್ನು ಕಡಿಮೆಗೊಳಿಸುವುದು ಹಾಗೂ ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದು ಇದರ ಗುಣವಾಗಿದ್ದು ಹಲವಾರು ಸಂಶೋಧನೆಗಳ ಮೂಲಕ ಈ ವಿಷಯವನ್ನು ಖಚಿತಪಡಿಸಿಕೊಳ್ಳಲಾಗಿದೆ.

6. ಜಿನ್ಸೆಂಗ್ (Ginseng)

6. ಜಿನ್ಸೆಂಗ್ (Ginseng)

ಅಮೇರಿಕನ್ ಜಿನ್ಸೆಂಗ್ ಎಂದೂ ಕರೆಯಲ್ಪಡುವ ಈ ಅಂಶ ಮೆದುಳಿನ ಚುರುಕುತನವನ್ನು ಹೆಚ್ಚಿಸುವ ರಾಸಾಯನಿಕವೆಂದು ಪ್ರಸಿದ್ದಿ ಪಡೆದಿದೆ. ನಮ್ಮ ಹಸಿಶುಂಠಿಯನ್ನೇ ಹೋಲುವ ಜಿನ್ಸೆಂಗ್ ಎಂಬ ಗಡ್ಡೆಯಿಂದ ಈ ಅಂಶವನ್ನು ಪ್ರತ್ಯೇಕಿಸಲಾಗುತ್ತದೆ ಹಾಗೂ ಇದರ ಸೇವನೆಯಿಂದ ಮೆದುಳಿನ ತಾರ್ಕಿಕ ಶಕ್ತಿ ಹೆಚ್ಚುತ್ತದೆ. ಇದರ ಸೇವನೆಯಿಂದ ಶೀಘ್ರವೇ ಸ್ಮರಣಶಕ್ತಿ ಹೆಚ್ಚುತ್ತದೆ, ಮೆದುಳು ಚುರುಕುಗೊಳ್ಳುತ್ತದೆ ಹಾಗೂ ಮಾನಸಿಕ ಸ್ಪಷ್ಟತೆಯೂ ಹೆಚ್ಚುತ್ತದೆ. ಅಲ್ಲದೇ ಈ ರಾಸಾಯನಿಕದ ಸೇವನೆಯಿಂದ ಮೆದುಳಿನಲ್ಲಿ ಅಸಿಟೈಲ್ ಕೋಲೈನ್ ಮಟ್ಟವೂ ಏರುತ್ತದೆ.

ಈ ರಾಸಾಯನಿಕದಲ್ಲಿ ಮೆದುಳಿನ ಸವೆತವನ್ನು ತಡೆಯುವ ಗುಣವಿದೆ. ಇದು ಏಶಿಯಾ ಮೂಲಕ ಗಡ್ಡೆಯಾಗಿದ್ದರೂ ಅಮೇರಿಕನ್ ಜಿನ್ಸೆಂಗ್ ಆಯ್ದುಕೊಳ್ಳುವುದೇ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಅಲ್ಲದೇ ಉದ್ವೇಗದ ಒಂದು ಬಗೆಯಾದ postprandial hypoglycemia ಎಂಬ ಸ್ಥಿತಿಯನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ.

7. ಮೆಗ್ನೀಶಿಯಂ ಎಲ್ ಥ್ರಿಯೋನೇಟ್ (Magnesium L-Threonate)

7. ಮೆಗ್ನೀಶಿಯಂ ಎಲ್ ಥ್ರಿಯೋನೇಟ್ (Magnesium L-Threonate)

ಇದೊಂದು ಮೆದುಳಿನಲ್ಲಿ ಲಭ್ಯವಿರುವ ಖನಿಜವಾಗಿದೆ. ಇದರ ಕೊರತೆಯಿಂದ ಗಮನ ಕೇಂದ್ರೀಕರಿಸಲು ಸಾಧ್ಯವಾಗದಿರುವುದು, ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗದಿರುವುದು, ಮಂಕು ಕವಿಯುವುದು, ನಿದ್ದೆ ಬಾರದೇ ಇರುವುದು, ಕೆಫೀನ್ ಗೆ ದಾಸನಾಗುವುದು ಹಾಗೂ ಸಾಮಾನ್ಯ ಸುಸ್ತು ಮೊದಲಾದವು ಎದುರಾಗುತ್ತದೆ. ಆರೋಗ್ಯ ಉತ್ತಮವಾಗಿರಲು ಮೆಗ್ನೇಶಿಯಂ ಅಗತ್ಯವಾಗಿದ್ದು ದೇಹದ ಹಲವಾರು ಜೀವರಾಸಾಯನಿಕ ಕ್ರಿಯೆಗಳಿಗೆ ಅಗತ್ಯವಾಗಿದೆ. ಮೆದುಳಿಗೆ ಸಂಬಂಧಿಸಿದ ಹಲವಾರು ತೊಂದರೆಗಳನ್ನು ಮೆಗ್ನೀಶಿಯಂ ಪೂರಕ ಔಷಧಿಗಳನ್ನು ನೀಡುವ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ.

ಮೆಗ್ನೀಶಿಯಂ ಎಲ್ ಥ್ರಿಯೋನೇಟ್, ಇದೊಂದು ಮೆಗ್ನೀಶಿಯಂನ ರೂಪವಾಗಿದ್ದು ರಕ್ತ ಮತ್ತು ಮೆದುಳಿನ ನಡುವಣ ಗೋಡೆಯನ್ನು ತೂರಿಹೋಗುವ ಶಕ್ತಿ ಹೊಂದಿದೆ. ಸ್ಮರಣಶಕ್ತಿ ಹೆಚ್ಚಿಸಲು ಹಾಗೂ ಖಿನ್ನತೆಯನ್ನು ಗುಣಪಡಿಸಲು ಮೆದುಳಿನ ಜೀವಕೋಶದ ಪದರದ ಒಳಗೆ ತಲುಪುವ ಗುಣವುಳ್ಳ ಈ ಅಂಶವನ್ನು ಬಳಸಲಾಗುತ್ತದೆ. ಅಲ್ಲದೇ ಮೆದುಳಿನಲ್ಲಿ ಮೆಗ್ನೀಶಿಯಂ ನ ಸಾಂದ್ರತೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಮೇಲೆ ವಿವರಿಸಿದ ಪೂರಕ ಅಂಶಗಳು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಮೆದುಳಿನ ಗರಿಷ್ಟ ಉಪಯೋಗ ಪಡೆಯಲು ಸಾಧ್ಯವಾಗುತ್ತದೆ. ನಿತ್ಯದ ಆಹಾರದ ಜೊತೆಗೆ ಈ ಪೂರಕ ಆಹಾರಗಳನ್ನು ಸೇವಿಸುವ ಮೂಲಕ ಸ್ಮರಣಶಕ್ತಿ ಹಾಗೂ ಚುರುಕುತನ ಉತ್ತಮಗೊಳ್ಳುತ್ತದೆ ಹಾಗೂ ಸುಸ್ತಾಗುವ, ಖಿನ್ನತೆ ಹಾಗೂ ಉದ್ವೇಗದ ಭಾವನೆಯನ್ನು ಕಡಿಮೆಗೊಳಿಸುತ್ತದೆ.

ಮೆದುಳಿನ ಕ್ಷಮತೆ ಹಾಗೂ ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳು

English summary

Brain-boosting Supplements You Should Know About

The brain-boosting supplements are known to boost alertness, creativity, motivation and cognitive ability. Age-related decline of the brain is also taken care of by certain brain-boosting supplements. For instance, acetyl-L-carnitine enhances the learning capacity and prevents age-related decline of the brain's functionality.
Story first published: Monday, September 10, 2018, 17:26 [IST]
X
Desktop Bottom Promotion