For Quick Alerts
ALLOW NOTIFICATIONS  
For Daily Alerts

ಮುಂಜಾನೆಯ ಆಯಾಸ ನಿವಾರಿಸುವ ಒಂಬತ್ತು ಅತ್ಯುತ್ತಮ ಆಹಾರಗಳು

|
ಮುಂಜಾನೆಯ ಸುಸ್ತನ್ನು ದೂರವಿಡಲು 9 ಉತ್ತಮ ಆಹಾರಗಳು | Oneindia Kannada

ಮುಂಜಾನೆ ಎದ್ದ ಬಳಿಕ ಲವಲವಿಕೆಯಿಂದ ಕೂಡಿರಬೇಕು. ಆದರೆ ಎದ್ದು ತುಂಬಾ ಹೊತ್ತಾದರೂ ಸುಸ್ತು ಆವರಿಸಿದಂತೆ ಅನ್ನಿಸುತ್ತಿದೆಯೇ? ಸಾಮಾನ್ಯವಾಗಿ ರಾತ್ರಿಯ ನಿದ್ದೆ ಪೂರ್ತಿಯಾಗಿರದೇ ಇದ್ದ ಸಮಯದಲ್ಲಿ ಮುಂಜಾನೆ ಸುಸ್ತು ಆವರಿಸುತ್ತದೆ. ಹಿಂದಿನ ದಿನದ ಅತಿಯಾದ ಆಯಾಸದಿಂದ ಹೆಚ್ಚಿನ ನಿದ್ದೆ ಬೇಕಾಗಿದ್ದ ಸಮಯದಲ್ಲಿ ನಿದ್ದೆ ಕಡಿಮೆಯಾಗಿದ್ದರೂ ಈ ಸುಸ್ತು ಆವರಿಸುತ್ತದೆ. ಒಂದು ವೇಳೆ ನಿಮಗೆ ಈ ಕಾರಣಗಳ ಹೊರತಾಗಿಯೂ ಮುಂಜಾನೆಯ ಆಯಾಸ ಅನವರತವಾಗಿ ಬಾಧಿಸುತ್ತಿದ್ದರೆ ಇಂದಿನ ಲೇಖನದಲ್ಲಿ ನೀಡಿರುವ ಮಾಹಿತಿಗಳು ಉಪಯುಕ್ತವಾಗಲಿವೆ.

ಮುಂಜಾನೆಯ ಸುಸ್ತು ಆವರಿಸಲು ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾಗಿರುವುದೆಂದರೆ ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ಎದುರಾಗಿರುವುದು. ಇದರಿಂದ ಅಗತ್ಯವಾದ ಪೋಷಕಾಂಶಗಳು ದೊರಕದೇ ಇರುವ ಕಾರಣ ಅಂಗಾಂಗಗಳು ಪೂರ್ಣಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸೋಲುತ್ತವೆ.

foods to fight morning fatigue

ಆದ್ದರಿಂದಲೇ, ಉತ್ತಮ ಆರೋಗ್ಯಕ್ಕಾಗಿ ಸೂಕ್ತಪ್ರಮಾಣದ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸುವುದು ಅಗತ್ಯವಾಗಿದ್ದು ತನ್ಮೂಲಕ ದೇಹಕ್ಕೆ ಶಕ್ತಿ ಮತ್ತು ಇಡಿಯ ದಿನದ ಕೆಲಸಕ್ಕಾಗಿ ಚೈತನ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ಅಗತ್ಯವಾದ ಪೋಷಕಾಂಶ ಲಭಿಸದೇ ಹೋದಾಗ ಮಾನಸಿಕ ಹಾಗೂ ದೈಹಿಕವಾಗಿ ಸುಸ್ತು ಅನುಭವಿಸುವುದು ಸಾಮಾನ್ಯ. ಇಂದು ಮಾರುಕಟ್ಟೆಯಲ್ಲಿ ಸುಸ್ತು ನಿವಾರಿಸಲು ಸಿದ್ದೌಷಧಿ ಎಂದು ಭಾರೀ ಪ್ರಚಾರ ಪಡೆಯುತ್ತಿರುವ ಎನರ್ಜಿ ಡ್ರಿಂಕ್ ಅತಿ ಅಪಾಯಕಾರಿಯಾಗಿದ್ದು ಇದರ ಸೇವನೆಯಿಂದ ಮುಂಜಾನೆಯ ಸುಸ್ತನ್ನು ನಿವಾರಿಸಲು ಸಾಧ್ಯವಿಲ್ಲ ಬದಲಿಗೆ ಮುಖ್ಯ ಅಂಗಗಳ ಮೇಲೆ ಅಪಾರವಾದ ಒತ್ತಡ ಹೇರಿದಂತಾಗುತ್ತದೆ. ಈ ಸುಸ್ತನ್ನು ನಿವಾರಿಸಲು ಕೇವಲ ನೈಸರ್ಗಿಕ ಆಹಾರಗಳೇ ಸಾಕು. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

1. ಓಟ್ಸ್ ರವೆ:

1. ಓಟ್ಸ್ ರವೆ:

ಓಟ್ಸ್ ರವೆ ಒಂದು ಪರಿಪೂರ್ಣವಾದ ಹಾಗೂ ಪೌಷ್ಟಿಕ ಆಹಾರವಾಗಿದೆ. ಈ ಆಹಾರ ಸೇವನೆಯ ಮೂಲಕ ಲಭಿಸುವ ಶಕ್ತಿಯ ಕಾರಣದಿಂದಾಗಿ ನಿಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಓಟ್ಸ್ ರವೆಯಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ ಹಾಗೂ ಇದು ಜೀರ್ಣಕ್ರಿಯೆಗೆ ನೆರವು ನೀಡುವ ಮತ್ತು ಹಸಿವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ವಿವಿಧ ವಿಟಮಿನ್ನುಗಳು ಮತ್ತು ಖನಿಜಗಳು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತವೆ, ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತವೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನೂ ಉತ್ತಮಗೊಳಿಸುತ್ತವೆ. ಆಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಉತ್ತಮ ಕೊಲೆಸ್ಟ್ರಾಲ್ ಮಟ್ಟಗಳನ್ನು ಹೆಚ್ಚಿಸುವ ಮೂಲಕ ಹೃದಯದ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.

2. ಒಣಫಲಗಳು:

2. ಒಣಫಲಗಳು:

ಒಣಫಲಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ ಹಾಗೂ ಇವು ಮುಂಜಾನೆಯ ಸುಸ್ತು ಮತ್ತು ಹಸಿವಾಗುವುದರಿಂದ ತಡೆಯುತ್ತದೆ. ಅಲ್ಲದೇ ಅಧಿಕ ಸಾಂದ್ರತೆಯಲ್ಲಿ ವಿಟಮಿನ್ ಬಿ ಹಾಗೂ ಕೊಬ್ಬಿನ ಆಮ್ಲಗಳಿವೆ ಹಾಗೂ ಇವು ನರವ್ಯವಸ್ಥೆ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಿ ಏಕಾಗ್ರತೆ ಹೆಚ್ಚಲು ನೆರವಾಗುತ್ತದೆ. ಅಲ್ಲದೇ ಒಣಫಲಗಳಲ್ಲಿ ಕರಗದ ನಾರು ಮತ್ತು ಆಂಟಿ ಆಕ್ಸಿಡೆಂಟುಗಳಿದ್ದು ತಲೆನೋವು, ಉದ್ವೇಗ ಮತ್ತು ಸ್ನಾಯುಗಳ ನೋವನ್ನು ನಿವಾರಿಸಿ ಆರೋಗ್ಯವನ್ನು ವೃದ್ದಿಸುತ್ತದೆ.

3. ಹಾಲು:

3. ಹಾಲು:

ಸಾಮಾನ್ಯವಾಗಿ ಲಾಕ್ಟೋಸ್ ಅಸಹಿಷ್ಟುತೆ ಇರುವ ವ್ಯಕ್ತಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಲು ಸಾಧ್ಯವಿಲ್ಲ. ಒಂದು ವೇಳೆ ನಿಮಗೆ ಈ ತೊಂದರೆ ಇಲ್ಲದಿದ್ದರೆ ಮುಂಜಾನೆಯ ಸುಸ್ತಿನಿಂದ ರಕ್ಷಣೆ ಪಡೆಯಲು ಒಂದು ಲೋಟ ಬಿಸಿ ಹಾಲು ಕುಡಿಯಬಹುದು. ಹಾಲಿನಲ್ಲಿರುವ ಅವಶ್ಯಕ ಅಮೈನೋ ಆಮ್ಲಗಳು, ವಿಟಮಿನ್ನುಗಳು ಹಾಗೂ ಇತರ ಪೋಷಕಾಂಶಗಳಿದ್ದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಚೈತನ್ಯದ ಭಾವನೆಯನ್ನು ಮೂಡಿಸುತ್ತದೆ. ಹಾಲಿನಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲ ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತವನ್ನು ಹೆಚ್ಚು ಸ್ರವಿಸಲು ನೆರವಾಗುತ್ತದೆ.

4. ದ್ವಿದಳ ಧಾನ್ಯಗಳು:

4. ದ್ವಿದಳ ಧಾನ್ಯಗಳು:

ದ್ವಿದಳಧಾನ್ಯಗಳು ಅತ್ಯುತ್ತಮ ಆಹಾರವಾಗಿದ್ದು ಇವುಗಳ ಅಡುಗೆ ಸುಲಭವಾಗಿದ್ದು ಅವಶ್ಯಕ ಪೋಷಕಾಂಶಗಳಿಂದ ಸಮೃದ್ದವಾಗಿವೆ. ಇವು ಒಟ್ಟಾರೆ ಆರೋಗ್ಯವನ್ನು ವೃದ್ದಿಸುತ್ತದೆ ಹಾಗೂ ಇವು ಸುಲಭವಾಗಿ ವರ್ಷದ ಎಲ್ಲಾ ಸಮಯದಲ್ಲಿಯೂ ಲಭ್ಯವಿವೆ. ಈ ಧಾನ್ಯಗಳಲ್ಲಿ ಪ್ರೋಟೀನುಗಳು ಮತ್ತು ಕಬ್ಬಿಣ ಉತ್ತಮ ಪ್ರಮಾಣದಲ್ಲಿದೆ ಹಾಗೂ ಕಬ್ಬಿಣದ ಕೊರತೆಯ ಅಡ್ಡಪರಿಣಾಮಗಳನ್ನು ಇಲ್ಲವಾಗಿಸುತ್ತದೆ. ಅಲ್ಲದೇ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು ಲಭ್ಯವಿದ್ದು ರಕ್ತಪರಿಚಲನೆಯನ್ನೂ ಉತ್ತಮಗೊಳಿಸುತ್ತದೆ.

5) ಬೀಜಗಳು:

5) ಬೀಜಗಳು:

ಮುಂಜಾನೆಯ ಸುಸ್ತಿನಿಂದ ರಕ್ಷಿಸಲು ಬೀಜಗಳು ಇನ್ನೊಂದು ಉತ್ತಮ ಆಹಾರವಾಗಿದೆ. ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳು ಕಡಿಮೆ ಇರುತ್ತವೆ ಹಾಗೂ ಅತ್ಯುತ್ತಮವಾದ ಪೋಷಕಾಂಶಗಳಿದ್ದು ಇವು ಹೃದಯದ ಕ್ಷಮತೆ ಮತ್ತು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತವೆ ಹಾಗೂ ಮಾನಸಿಕ ಆರೋಗ್ಯವನ್ನೂ ವೃದ್ದಿಸುತ್ತವೆ. ವಿಶೇಷವಗಿ ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳಲ್ಲಿ ಈ ಕ್ಷಮತೆ ಹೆಚ್ಚೇ ಇವೆ. ಉಳಿದಂತೆ, ಸೂರ್ಯಕಾಂತಿ, ಕುಂಬಳ ಮತ್ತು ಎಳ್ಳಿನ ಬೀಜಗಳಲ್ಲಿ ಹೆಚ್ಚಿನ ಅಮೈನೋ ಆಮ್ಲ ಹಾಗೂ ಖನಿಜಗಳಿದ್ದು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಮನೋಭಾವದಲ್ಲಿ ಆಗುವ ಏರುಪೇರಿನಿಂದ ರಕ್ಷಿಸುತ್ತದೆ.

6. ಕಪ್ಪು ಚಾಕಲೇಟು:

6. ಕಪ್ಪು ಚಾಕಲೇಟು:

ಮುಂಜಾನೆ ಎದ್ದಾಗ ಲವಲವಿಕೆಯಿಂದಿರಬೇಕೇ? ಇದಕ್ಕಾಗಿ ಕಪ್ಪು ಚಾಕಲೇಟೊಂದನ್ನು ತಿನ್ನಬಾರದೇಕೆ? ಇದರಿಂದ ದಿನವಿಡೀ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ ಹಾಗೂ ಇದರಲ್ಲಿರುವ ಕೊಬ್ಬು ಮತ್ತು ಕಾರ್ಬೋಹೈಡ್ರೇಟುಗಳು ದೇಹದ ಎಲ್ಲಾ ಜೀವಕೋಶಗಳಿಗೆ ಶಕ್ತಿ ಒದಗಿಸುವ ಮೂಲಕ ಹೆಚ್ಚಿನ ಶಕ್ತಿ ದೊರಕುತ್ತದೆ. ಕಪ್ಪು ಚಾಕಲೇಟು ಮೆದುಳಿಗೆ ಹಾನಿ ಎಸಗುವ ಉತ್ಕರ್ಷಣಶೀಲ ಒತ್ತಡದ ವಿರುದ್ದ ರಕ್ಷಣೆ ನೀಡುತ್ತದೆ ಹಾಗೂ ನರವ್ಯವಸ್ಥೆಗೆ ಪ್ರಚೋದನೆ ನೀಡುವ ಮೂಲಕ ಹೃದಯದ ಆರೋಗ್ಯವನ್ನೂ ವೃದ್ದಿಸುತ್ತದೆ.

7. ಬಾಳೆಹಣ್ಣು

7. ಬಾಳೆಹಣ್ಣು

ಮುಂಚಾನೆಯ ಸುಸ್ತನ್ನು ನಿವಾರಿಸಲು ಬಾಳೆಹಣ್ಣು ಅತ್ಯುತ್ತಮ ಆಹಾರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಈ ಅದ್ಭುತ ಹಣ್ಣಿನ ಸೇವನೆಯಿಂದ ತೂಕ ನಿಯಂತ್ರಣ, ಮನೋಭಾವನೆಗಳನ್ನು ನಿಯಂತ್ರಿಸಲು ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು ಮೊದಲಾದ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟುಗಳು ಮತ್ತು ನೈಸರ್ಗಿಕ ಸಕ್ಕರೆ ಶಕ್ತಿಯ ಮಟ್ಟಗಳನ್ನು ಹೆಚ್ಚಿಸಲು, ಚೈತನ್ಯವನ್ನು ಹೆಚ್ಚಿಸಲು ಹಾಗೂ ನರವ್ಯವಸ್ಥೆಯನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಅಲ್ಲದೇ ಹೊಟ್ಟೆಯನ್ನು ಹೆಚ್ಚಿನ ಹೊತ್ತು ತುಂಬಿರುವ ಭಾವನೆಯನ್ನು ಮೂಡಿಸುತ್ತದೆ ಹಾಗೂ ಮನೋಭಾವವನ್ನು ಉತ್ತಮಗೊಳಿಸುತ್ತದೆ ಮೊದಲಾದ ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ ತೂಕ ಹೆಚ್ಚುವ ಹೆದರಿಕೆ ಇಲ್ಲದೇ ಬಾಳೆಹಣ್ಣನ್ನು ಸೇವಿಸಿ.

8. ಹಸಿರು ಟೀ

8. ಹಸಿರು ಟೀ

ಹಸಿರು ಟೀ ಯಲ್ಲಿ ಕೆಫೀನ್ ಮತ್ತು ಎಲ್-ಥಿಯಾನೈನ್ ಎಂಬ ಪೋಷಕಾಂಶಗಳ ಸಂಯುಕ್ತವಿದ್ದು ಇವು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಈ ಬಗ್ಗೆ ನಡೆಸಿದ ಸಂಸೋಧನೆಯಲ್ಲಿ ಕಂಡುಕೊಂಡ ಪ್ರಕಾರ ಅತಿಯಾದ ಶ್ರಮದ ಬಳಿಕ ಕುಂಠಿತಗೊಂಡ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಹಸಿರು ಟೀ ಉತ್ತಮ ಆಯ್ಕೆಯಾಗಿದೆ. ಹಸಿರು ಟೀ ಸೇವನೆಯಿಂದ ಹಲವು ಬಗೆಯ ಪ್ರಯೋಜನಗಳಿದ್ದರೂ ಇದರ ಹೆಚ್ಚು ಸೇವನೆ ಸಲ್ಲದು. ಏಕೆಂದರೆ ಇದರಲ್ಲಿಯೂ ಕೆಲವು ಅಡ್ಡ ಪರಿಣಾಮಗಳಿದ್ದು ಹೆಚ್ಚಿನ ಸೇವನೆಯಿಂದ ಅಡ್ಡಪರಿಣಾಮಗಳು ಆರೋಗ್ಯವನ್ನು ಬಾಧಿಸಬಹುದು.

9. ಇಡಿಯ ಗೋಧಿಯ ಬ್ರೆಡ್

9. ಇಡಿಯ ಗೋಧಿಯ ಬ್ರೆಡ್

ಒಂದು ವೇಳೆ ಮುಂಜಾನೆಯ ಸುಸ್ತಿನಿಂದ ಹೊರಬರಲು ಹೆಚ್ಚು ಕಷ್ಟವಾಗುತ್ತಿದ್ದರೆ ನಿಮ್ಮ ಉಪಾಹಾರದಲ್ಲಿ ಇಡಿಯ ಗೋಧಿಯ ಬ್ರೆಡ್ (whole wheat bread) ಸೇವಿಸಲು ಪ್ರಾರಂಭಿಸಿ. ಈ ಬ್ರೆಡ್ ಸೇವನೆಯಿಂದ ಹೆಚ್ಚಿನ ಹೊತ್ತು ಶಕ್ತಿಯನ್ನು ಒದಗಿಸುತ್ತದೆ ಹಾಗೂ ಇದರಲ್ಲಿರುವ ಸಂಯುಕ್ತ ಕಾರ್ಬೋಹೈಡ್ರೇಟುಗಳು ನಿಧಾನವಾಗಿ ಜೀರ್ಣಗೊಂಡು ರಕ್ತದಲ್ಲಿಯೂ ನಿಧಾನವಾಗಿಯೇ ಲಭಿಸುತ್ತದೆ. ಈ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಥಟ್ಟನೇ ಸಕ್ಕರೆಯ ಮಟ್ಟವನ್ನು ಏರುವುದರಿಂದ ತಡೆದಂತಾಗುತ್ತದೆ.

ಈ ಮಾಹಿತಿ ನಿಮಗೆ ಉಪಯುಕ್ತವೆಂದು ಅನ್ನಿಸಿದರೆ ನಿಮ್ಮ ಆತ್ಮೀಯರು ಮತ್ತು ಆಪ್ತರೊಂದಿಗೆ ಹಂಚಿಕೊಳ್ಳಿ.

English summary

Best Foods To Fight Morning Fatigue

Morning fatigue can also happen due to many other things as well. Health experts say that poor nutrition is a big culprit which can cause your body to lack in essential nutrients. It is important that you maintain a healthy diet that provides you energy and high performance throughout the day. When your body is missing out on any essential nutrient, it's normal to experience some kind of physical or mental fatigue.
X
Desktop Bottom Promotion