For Quick Alerts
ALLOW NOTIFICATIONS  
For Daily Alerts

ಎಳನೀರು + ಜೇನುತುಪ್ಪ = 8 ಆರೋಗ್ಯ ಲಾಭಗಳು

ನಿಮ್ಮನ್ನು ನೀವು ಆರೋಗ್ಯವಂತರನ್ನಾಗಿ ಮಾಡಿಕೊಳ್ಳಬೇಕಾ..ಹಾಗಿದ್ದರೆ ಈ ರುಚಿರುಚಿ ಪಾನೀಯ ಸೇವಿಸಿ ಎಳನೀರು ಮತ್ತು ಜೇನುತುಪ್ಪ ಸೇರಿಸಿ ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ

By Sushma Charhra
|

ದಕ್ಷಿಣ ಭಾರತದಾದ್ಯಂತ ನಾವು ಹೊರಗಡೆ ಕಾಲಿಟ್ಟ ಕೂಡಲೇ ಅಲ್ಲಲ್ಲಿ ಎಳನೀರು ಮಾರಾಟ ಮಾಡುತ್ತಿರುವವರನ್ನೇ ನೋಡಿಯೇ ನೋಡುತ್ತೇವೆ. ಈಗಾಗಲೇ ನಮಗೆಲ್ಲ ತಿಳಿದಿರುವಂತೆ ಎಳನೀರಿನಲ್ಲಿ ಹಲವಾರು ಪೋಷಕಾಂಶಗಳಿದ್ದು, ಅದು ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಹಲವಾರು ಆರೋಗ್ಯ ಲಾಭಗಳನ್ನು ಇದರಿಂದ ಪಡೆಯಬಹುದು ಅನ್ನುವುದು ಗೊತ್ತಿರುವ ಸಂಗತಿಯೇ. ಅದರಲ್ಲೂ ಬೇಸಿಗೆಯಲ್ಲಿ ಎಳನೀರು ಸೇವನೆಯಿಂದ ದೇಹವನ್ನು ತಂಪಾಗಿಸಿಟ್ಟುಕೊಳ್ಳಬಹುದು. ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ಇದು ನಿಯಂತ್ರಿಸುತ್ತೆ ಮತ್ತು ಇತರೆ ಅನಾರೋಗ್ಯಕಾರಿ ಕೂಲ್ ಡ್ರಿಂಕ್ಸ್ ಗಳಿಗಿಂತ ನೈಸರ್ಗಿಕವಾಗಿ ದೊರೆಯುವ, ಕೆಮಿಕಲ್ ರಹಿತ ಎಳನೀರು ಸೇವನೆ ಬಹಳ ಉತ್ತಮವಾದದ್ದು.

ಈಗಂತೂ ಎಲ್ಲರೂ ಕಾಯಿಲೆ ಇಲ್ಲದ ಜೀವನವನ್ನೇ ಬೇಕು ಅಂತ ಬಯಸುತ್ತೀವಿ ಅಲ್ವಾ.. ಒಂದು ಸಣ್ಣ ತಲೆನೋವು ಕೂಡ ನಮಗೆ ಎಷ್ಟು ತೊಂದರೆಯನ್ನುಂಟು ಮಾಡುತ್ತೆ. ಹಾಗಿರುವಾಗ ದೊಡ್ಡದೊಡ್ಡ ಕಾಯಿಲೆಗಳು ಬಂದರೆ ಅದನ್ನು ಸಹಿಸೋಕೆ ಸಾಧ್ಯವೆ.. ಅದಕ್ಕೆ ಅಲ್ವಾ ಆರೋಗ್ಯವೇ ಭಾಗ್ಯ ಅಂತ ಹೇಳೋದು.. ಆರೋಗ್ಯ ಸರಿಯಿದ್ದರೆ ಏನು ಬೇಕಾದ್ರೂ ಮಾಡಬಹುದು. ಅದೇ ಇಲ್ಲದಿದ್ರೆ ಜೀವನ ನಶ್ವರ ಎನ್ನಿಸಿಕೊಳ್ಳುತ್ತೆ.

Health benifits from tender coconut

ಹಾಗಾಗಿ ಕಾಯಿಲೆಗಳು ಬಂದ ಮೇಲೆ ಚಿಂತಿಸಿ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆಯನ್ನು ಬರದಂತೆ ತಡೆಗಟ್ಟಿ ನಿಯಂತ್ರಿಸಿಕೊಳ್ಳೋದು ಬುದ್ಧಿವಂತರ ಲಕ್ಷಣ. ಅದಕ್ಕೆ ಆದಷ್ಟು ನೈಸರ್ಗಿಕ ವಿಧಾನಗಳನ್ನು ಬಳಸಿದರೆ ಸೂಕ್ತ. ಎಳನೀರು ಮತ್ತು ಜೇನುತುಪ್ಪವನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಕಾಯಿಲೆಗಳನ್ನು ನಿಯಂತ್ರಿಸಿಕೊಳ್ಳುವುದು ಮಾತ್ರವಲ್ಲದೆ, ನಮ್ಮಲ್ಲಿರುವ ಹಲವಾರು ಜೀವಕೋಶಗಳನ್ನು ಹತೋಟಿಯಲ್ಲಿಡಲು ನೈಸರ್ಗಿಕವಾಗಿ ಇದು ಸಹಕಾರಿಯಾಗಿದೆ ಎಂಬುದು ಎಷ್ಟು ಜನರಿಗೆ ತಿಳಿದಿದೆ..?

ಹಾಗಿದ್ರೆ ಇದನ್ನು ಹೇಗೆ ತಯಾರಿಸಿಕೊಳ್ಳಬೇಕು ಮತ್ತು ಅದರಿಂದಾಗುವ ಲಾಭಗಳ ಬಗೆಗಿನ ವಿವರ ಈ ಲೇಖನದಲ್ಲಿದೆ.ಮುಂದೆ ಓದಿ.

ತಯಾರಿಸುವ ವಿಧಾನ

ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಒಂದು ಲೋಟದಷ್ಟು ಎಳನೀರಿಗೆ ಬೆರೆಸಿ. ಚೆನ್ನಾಗಿ ಬೆರೆಸಿ ಪ್ರತಿದಿನ ಬೆಳಿಗ್ಗೆ ತಿಂಡಿಗೂ ಮುನ್ನ ಕುಡಿಯಿರಿ. ಇದನ್ನು ಸೇವನೆಯಿಂದಾಗುವ ಒಳಿತುಗಳ ಬಗ್ಗೆ ಕೆಳಗೆ ತಿಳಿಸಲಾಗಿದೆ.

1. ಬೇಗನೆ ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತೆ

1. ಬೇಗನೆ ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತೆ

ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಜೀವಕೋಶಗಳು ಬೆಳೆದಂತೆ ಪ್ರತಿ ಜೀವಿಯೂ ವಯಸ್ಸಾದಂತೆ ಕಾಣುವುದು. ಇದು ಪ್ರತಿಯೊಂದು ಜೀವಿಯಲ್ಲೂ ನಡೆದೇ ನಡೆಯುತ್ತೆ. ಆದ್ರೆ ಇದು ಒಂದು ವಯಸ್ಸು ತಲುಪಿದ ನಂತರ ನಡೆಯಬೇಕು. ಮನುಷ್ಯನಲ್ಲಿ ಕಾಣುವ ಬಿಳಿಕೂದಲು, ಚರ್ಮ ಸುಕ್ಕುಗಟ್ಟುವುದು ಇಂತಹ ಲಕ್ಷಣಗಳು ವಯಸ್ಸಾಗುವುದಕ್ಕಿಂತ ಮುನ್ನವೇ ಕಾಣಿಸಿಕೊಂಡರೆ ಅದು ಅನಾರೋಗ್ಯ ಲಕ್ಷಣ. ಎಳನೀರು ಮತ್ತು ಜೇನುತುಪ್ಪದಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳಿಂದಾಗಿ ಹೀಗೆ ಜೀವಕೋಶಗಳು ಬೆಳೆದು ಬೇಗನೆ ವಯಸ್ಸಾದಂತೆ ಕಾಣಿಸಿಕೊಳ್ಳುವ ಗುಣಲಕ್ಷಣಗಳು ನಿಯಂತ್ರಣಕ್ಕೆ ಬಂತು ನೀವು ವಯಸ್ಸಿಗೆ ತಕ್ಕಂತೆ ಕಾಣಿಸಿಕೊಳ್ಳಲು ಸಹಕಾರಿಯಾಗಿದೆ.

Most Read:ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನುತುಪ್ಪ ಸೇವಿಸಿದರೆ, ಆರೋಗ್ಯಕ್ಕೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳಿವೆ

2. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ

2. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ

ಎಳನೀರು ಮತ್ತು ಜೇನುತುಪ್ಪದ ಕಾಂಬಿನೇಷನ್ ನ ಜ್ಯೂಸ್ ಪ್ರತಿದಿನ ಸೇವಿಸುವುದರಿಂದ ಕಾಯಿಲೆಗಳನ್ನು ತಡೆಗಟ್ಟಿಕೊಳ್ಳಬಹುದು. ಯಾಕೆಂದರೆ ರೋಗವನ್ನು ಬರದಂತೆ ತಡೆಯುವ ರೋಗನಿರೋಧಕ ಶಕ್ತಿಯ ಬಲವರ್ಧನೆಗೆ ಇದು ಸಹಕಾರಿಯಾಗಿದೆ. ಜೇನುತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಎಳನೀರಿನಲ್ಲಿರುವ ವಿಟಮಿನ್ ಸಿ ಅಂಶವು ಸಮ್ಮಿಲನಗೊಂಡು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಕಾಯಿಲೆಗಳ ವಿರುದ್ಧ ಹೋರಾಡುವ ಸಮರ್ಥ ದೇಹವನ್ನಾಗಿ ನಿಮ್ಮ ದೇಹವನ್ನು ಪರಿವರ್ತಿಸುತ್ತೆ.

3. ಶಕ್ತಿ ವರ್ಧಿಸಲು ಸಹಕಾರಿ

3. ಶಕ್ತಿ ವರ್ಧಿಸಲು ಸಹಕಾರಿ

ಹೆಚ್ಚಿನವರು ತಮ್ಮ ದಿನಚರಿಯಲ್ಲಿ ಒಂದು ಲೋಟ ಕಾಫಿ ಅಥವಾ ಟೀ ಸೇವನೆಯಿಂದ ಆರಂಭಿಸುತ್ತಾರೆ ಮತ್ತು ಆ ಮೂಲಕ ದಿನಪೂರ್ತಿ ಆಕ್ಟೀವ್ ಆಗಿ ಇರಬಹುದು ಎಂದು ಭಾವಿಸಿದ್ದಾರೆ. ಆದರೆ ಅದರ ಸೇವನೆಯಿಂದ ಏನೆಲ್ಲಾ ಅಡ್ಡಪರಿಣಾಮಗಾಳಾಗುತ್ತೆ ಅನ್ನುವ ವಿಚಾರವನ್ನು ಈಗಾಗಲೇ ಚರ್ಚೆಯಲ್ಲಿದೆ. ಆದರೆ ಎಳನೀರು ಮತ್ತು ಜೇನುತುಪ್ಪದ ಜ್ಯೂಸ್ ಸೇವನೆಯಿಂದ ನಿಮ್ಮ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬಹುದು. ಯಾಕೆಂದರೆ ಇದರಲ್ಲಿ ಪೊಟಾಷಿಯಂ ಅಂಶವಿದೆ.

4. ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದೆ

4. ಜೀರ್ಣಕ್ರಿಯೆಗೆ ಅತ್ಯುತ್ತಮವಾಗಿದೆ

ಹೊಟ್ಟೆನೋವು, ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆಯಲ್ಲಿ ಗುಳುಗುಳು ಆಗುವುದು, ಇತ್ಯಾದಿ ಸಮಸ್ಯೆಗಳಿಗೆ ಎಳನೀರು ಮತ್ತು ಜೇನು ಮಿಶ್ರಿತ ಸೇವನೆ ಬಹಳ ಉಪಯೋಗಕಾರಿ ಅನ್ನುವುದು ಹಲವು ಅಧ್ಯಯನಗಳಿಂದ ತಿಳಿದು ಬಂದಿರುವುದರಿಂದಾಗಿ ಹಲವಾರು ಮಂದಿ ಈಗಾಗಲೇ ಇದರ ಸೇವನೆಯನ್ನು ಆರಂಭಿಸಿದ್ದಾರೆ. ಹೊಟ್ಟೆಯಲ್ಲಿರುವ ಆಸಿಡ್ ಅಂಶವನ್ನು ಸಮತೋಲನದಲ್ಲಿಟ್ಟು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುವ ಸಾಮರ್ಥ್ಯ ಇದಕ್ಕಿದೆ.

5. ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತೆ

5. ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತೆ

ಮೇಲೆ ಹೇಳಿರುವಂತೆ ಜೀರ್ಣಕ್ರಿಯೆ ಸಮಸ್ಯೆಯನ್ನು ಎಳನೀರು ಮತ್ತು ಜೇನು ಸೇವನೆಯಿಂದ ನಿವಾರಿಸಿಕೊಳ್ಳಬಹುದು. ಅದರ ಜೊತೆಜೊತೆಗೆ ಮಲಬದ್ಧತೆ ಸಮಸ್ಯೆಯನ್ನೂ ಕೂಡ ಇದರ ಸೇವನೆಯಿಂದ ನಿವಾರಿಸಿಕೊಳ್ಳಬಹುದಾಗಿದೆ ಯಾಕೆಂದರೆ ಈ ಪಾನೀಯದಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತೆ ಮತ್ತು ಇದು ದೇಹದಲ್ಲಿನ ತ್ಯಾಜ್ಯವನ್ನು ಹೊರದೂಡಲು ಸಹಕರಿಸುತ್ತೆ.

Most Read:'ತೊಂಡೆಕಾಯಿ ಎಲೆಗಳು': ಮಧುಮೇಹ, ಕಾಮಾಲೆ ರೋಗ ಸಹಿತ ಹಲವಾರು ರೋಗಗಳನ್ನು ನಿಯಂತ್ರಿಸುತ್ತದೆ

6. ಕಿಡ್ನಿಯಲ್ಲಿ ಕಲ್ಲುಗಳಾಗದಂತೆ ತಡೆಯುತ್ತೆ

6. ಕಿಡ್ನಿಯಲ್ಲಿ ಕಲ್ಲುಗಳಾಗದಂತೆ ತಡೆಯುತ್ತೆ

ದೇಹದಲ್ಲಿ ಕೆಲವು ಆಕ್ಸೈಡ್ ಗಳು ಮತ್ತು ಉಪ್ಪಿನ ಅಂಶ ಮಿಶ್ರಿತಗೊಂಡು ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯಲು ಕಾರಣವಾಗುತ್ತೆ. ಇದು ದೇಹದ ತುಂಬಾ ಭಯಾನಕ ಸಮಸ್ಯೆಯಾಗಿದ್ದು, ಸರಿಯಾದ ಚಿಕಿತ್ಸೆ ಪಡೆಯದೆ ಹೋದರೆ ಪ್ರಾಣಕ್ಕೂ ಅಪಾಯ ತಂದೊಡ್ಡುತ್ತೆ. ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸೋದ್ರಿಂದ ಮತ್ತು ಎಳನೀರು-ಜೇನು ಬೆರೆಸಿ ಸೇವಿಸುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು. ಅಷ್ಟೇ ಅಲ್ಲ ಒಂದು ವೇಳೆ ಸಣ್ಣ ಪ್ರಮಾಣದ ಕಲ್ಲುಗಳಾಗಿದ್ದರೂ ಕೂಡ ಅದನ್ನು ಕರಗಿಸುವ ಸಾಮರ್ಥ್ಯ ಇದಕ್ಕಿದೆ ಎಂದು ಹೇಳಲಾಗುತ್ತೆ.

7. ಹೃದಯದ ಆರೋಗ್ಯದ ಬಲವರ್ಧನೆ

7. ಹೃದಯದ ಆರೋಗ್ಯದ ಬಲವರ್ಧನೆ

ನಮ್ಮ ದೇಹದ ಬಹುಮುಖ್ಯ ಅಂಗಗಳಲ್ಲಿ ಹೃದಯವೂ ಒಂದು., ಹೃದಯದಿಂದಲೇ ದೇಹದ ಇತರ ಎಲ್ಲಾ ಭಾಗಗಳಿಗೆ ರಕ್ತಸಂಚಾರವಾಗುವುದು. ಒಂದು ವೇಳೆ ನಿಮ್ಮ ಹೃದಯ ಸಮಸ್ಯೆಯಲ್ಲಿದೆ ಎಂದರೆ ನಿಮ್ಮ ದೇಹದ ಇತರೆ ಭಾಗಗಳೂ ಕೂಡ ಸಮಸ್ಯೆಯನ್ನು ಎದುರಿಸಬಹುದು. ಎಳನೀರು ಮತ್ತು ಜೇನುತುಪ್ಪದಲ್ಲಿ ಅಡಗಿರುವ ಮಿನರಲ್ ಗಳು ಹೃದಯದ ಮಾಂಸಖಂಡಗಳನ್ನು ಬಲಿಷ್ಟಗೊಳಿಸಲು ಸಹಕಾರಿಯಾಗಿದೆ ಮತ್ತು ಬ್ಲಡ್ ಪ್ರಷರ್ ಲೆವೆಲ್ ನ್ನು ಕಡಿಮೆಗೊಳಿಸುತ್ತೆ. ಹಾಗಾಗಿ ಹೃದಯವನ್ನು ಹೆಚ್ಚು ಸಮಯದ ವರೆಗೆ ಆರೋಗ್ಯವಾಗಿಟ್ಟುಕೊಳ್ಳಲು ನೆರವಾಗುತ್ತೆ.

8. ಸಕ್ಕರೆ ಕಾಯಿಲೆ ಬರದಂತೆ ತಡೆಯುತ್ತೆ

8. ಸಕ್ಕರೆ ಕಾಯಿಲೆ ಬರದಂತೆ ತಡೆಯುತ್ತೆ

ಒಂದು ನಿರ್ದಿಷ್ಟ ವಯಸ್ಸೆ ತಲುಪಿದ ಕೂಡಲೇ ಪ್ರಪಂಚದ ಒಟ್ಟು ಜನಸಂಖ್ಯೆ ಶೇಕಡಾ 50 ರಷ್ಟು ಜನರನ್ನು ಕಾಡುವ ಸಮಸ್ಯೆ ಸಕ್ಕರೆ ಕಾಯಿಲೆ. ಬ್ಲಡ್ ಶುಗರ್ ಲೆವೆಲ್ ಸಾಮಾನ್ಯವಾಗಿ ಮನುಷ್ಯನಲ್ಲಿ ಎಷ್ಟಿರಬೇಕೋ ಅಷ್ಟು ಇಲ್ಲದೆ ಹೆಚ್ಚುಕಡಿಮೆಯಾಗುವುದೇ ಸಕ್ಕರೆ ಕಾಯಿಲೆಯ ಕಾರಣ. ಆದರೆ ಅಧ್ಯಯನವೊಂದು ತಿಳಿಸಿರುವ ಪ್ರಕಾರ ಯಾರು ಎಳನೀರು ಮತ್ತು ಜೇನುತುಪ್ಪ ಸೇವನೆ ಮಾಡುತ್ತಾರೋ ಅವರಲ್ಲಿ ಈ ಸಮಸ್ಯೆ ಬಾಧಿಸುವುದಿಲ್ಲ.

Read more about: health
English summary

Benefits Of Tender Coconut Juice With Honey Every Morning

It is not an uncommon site for people to see tender coconut being sold in abundance, every time you step out, especially in certain states on India, right? Well, most of us already know that tender coconut is an exceptionally nutritious natural drink, which comes with a number of health benefits!
Story first published: Wednesday, May 9, 2018, 16:22 [IST]
X
Desktop Bottom Promotion