For Quick Alerts
ALLOW NOTIFICATIONS  
For Daily Alerts

ದೇಹದ ತೂಕ ಇಳಿಸಿಕೊಳ್ಳಲು 'ಆಯುರ್ವೇದ ಟಿಪ್ಸ್'

|

ನಿಮ್ಮ ದೇಹದ ತೂಕ ಹೆಚ್ಚಾಗುತ್ತಿದೆಯೆಂದು ಚಿಂತೆ ಮಾಡುತ್ತಿದ್ದೀರಾ? ತೂಕ ಇಳಿಸಲು ಅಡ್ಡ ಪರಿಣಾಮ ಬೀರುವ ಔಷಧಗಳನ್ನು ಸೇವಿಸಲು ಹಿಂಜರಿಕೆ ಪಡುತ್ತೀರಾ? ಹಾಗಾದರೆ ನೀವು ಆಯುರ್ವೇದದಲ್ಲಿ ಲಭ್ಯವಿರುವ ಸಹಜ ವಿಧಾನಗಳಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವುದು ಒಳಿತು.

weight loss tips in kannada

ಆಯುರ್ವೇದ ಅತಿ ಪುರಾತನ ಹಾಗೂ ವಿಶ್ವಾಸಾರ್ಹ ಚಿಕಿತ್ಸಾ ಪದ್ಧತಿಯಾಗಿದೆ. ತೂಕ ಕಡಿಮೆ ಮಾಡಿಕೊಳ್ಳಲು ಆಯುರ್ವೇದದಲ್ಲಿ ಹಲವಾರು ದಾರಿಗಳಿವೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಲು ಆಯುರ್ವೇದ ಸಹಕಾರಿಯಾಗಿದೆ. ದೇಹ ತೂಕ ಕಡಿಮೆ ಮಾಡಿಕೊಳ್ಳಲು ಆಯುರ್ವೇದದಲ್ಲಿ ಇರುವ ವಿಧಾನಗಳ ಬಗ್ಗೆ ಮುಂದೆ ತಿಳಿದುಕೊಳ್ಳೋಣ.

ಆಯುರ್ವೇದವೇ ಯಾಕೆ?

ಆಯುರ್ವೇದವೇ ಯಾಕೆ?

ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ನಿಮ್ಮ ಮನದಲ್ಲಿ ಶಂಕೆಗಳಿದ್ದರೆ ಮೊದಲು ಅದನ್ನು ದೂರ ಮಾಡಿ. ಆಯುರ್ವೇದ ಚಿಕಿತ್ಸೆ ಉತ್ತಮ ಫಲಿತಾಂಶ ನೀಡುತ್ತದೆ. ಹಾಗೆಯೇ ತೂಕ ಇಳಿಸಿಕೊಳ್ಳಲು ಇದು ಸಹಜ ಹಾಗೂ ಉತ್ತಮ ಮಾರ್ಗವಾಗಿದೆ ಎಂಬ ವಿಷಯವನ್ನು ತಿಳಿದುಕೊಳ್ಳುವುದು ಅಗತ್ಯ.

ಮನೆಯಲ್ಲಿಯೇ ಸಹಜ ವಿಧಾನಗಳಿಂದ ತೂಕ ಕಡಿಮೆ ಮಾಡಿಕೊಳ್ಳಲು ಆಯುರ್ವೇದದಲ್ಲಿ ಅನೇಕ ವಿಧಾನಗಳಿವೆ. ಆರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದು ಆಯುರ್ವೇದದ ವೈಶಿಷ್ಟ್ಯವಾಗಿದೆ. ರೋಗದ ಮೂಲವನ್ನು ಕಂಡು ಹಿಡಿದು ಚಿಕಿತ್ಸೆ ನೀಡುವುದು ಆಯುರ್ವೇದದ ಲಕ್ಷಣವಾಗಿದೆ.

ವ್ಯಕ್ತಿಯ ದೈಹಿಕ ಅಂಶಗಳನ್ನು ಆಧರಿಸಿ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಅತಿ ಶೀಘ್ರವಾಗಿ ಎಲ್ಲ ಸಮಸ್ಯೆಗಳು ದೂರವಾಗಲಾರವು. ನಿಧಾನವಾಗಿ, ಆದರೆ ಶಾಶ್ವತವಾಗಿ ಪರಿಹಾರ ಸಿಗುವುದು ಸತ್ಯ.

ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಆಯುರ್ವೇದ ಪ್ರಯೋಜನಕಾರಿಯಾಗಿದೆ. ಹಾಗಾಗಿಯೇ ತೂಕ ಇಳಿಸಿಕೊಳ್ಳಲು ಸಹ ಆಯುರ್ವೇದ ವಿಶ್ವಾಸಾರ್ಹ ಪದ್ಧತಿಯಾಗಿದೆ. ಆದರೆ ನಿಯಮಗಳ ಪಾಲನೆ ಮಾತ್ರ ಅತಿ ಅಗತ್ಯ. ಬೆಸ್ಟ್ 10 ಆಯುರ್ವೇದ ವಿಧಾನಗಳು:

1.ಜೇನು ತುಪ್ಪ ಮತ್ತು ನಿಂಬೆ ರಸ

1.ಜೇನು ತುಪ್ಪ ಮತ್ತು ನಿಂಬೆ ರಸ

ಆಯುರ್ವೇದದ ಈ ವಿಧಾನದ ಬಗ್ಗೆ ತಾವೆಲ್ಲ ಹಲವಾರು ಬಾರಿ ಕೇಳಿರಬಹುದು. ಇದು ತೂಕ ಇಳಿಸಿಕೊಳ್ಳಲು ಬಹುತೇಕರಿಗೆ ತಿಳಿದಿರುವ ಸಾಮಾನ್ಯ ವಿಧಾನವಾಗಿದೆ. ಅಧ್ಯಯನಗಳ ಪ್ರಕಾರ ಜೇನು ತುಪ್ಪ ಹಾಗೂ ನಿಂಬೆ ರಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದು ಉತ್ತಮ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಕಾಲ ಕ್ರಮೇಣ ಉತ್ತಮ ಫಲಿತಾಂಶಗಳು ಗೋಚರಿಸಲಾರಂಭಿಸುತ್ತವೆ. ನಿಂಬೆ ರಸ ಹಾಗೂ ಜೇನಿನ ಮಿಶ್ರಣದ ರುಚಿಯೂ ಮಧುರವಾಗಿರುವುದರಿಂದ ಇದನ್ನು ಸೇವಿಸಲು ಹಿಂಜರಿಯುವ ಪ್ರಶ್ನೆಯೇ ಬರುವುದಿಲ್ಲ. ಈ ಮಿಶ್ರಣದ ಸೇವನೆಯಿಂದ ಹಸಿವಿನ ಬಯಕೆ ಕಡಿಮೆಯಾಗುವುದರ ಜೊತೆಗೆ ದೇಹದಲ್ಲಿನ ವಿಷಕಾರಿ ಅಂಶಗಳು ಸಹ ಹೊರ ಹೋಗುತ್ತವೆ. ನಿಂಬೆರಸ ಸೇವೆನೆಯಿಂದ ಶೀತವಾಗುತ್ತಿದ್ದರೆ ಉಗುರು ಬೆಚ್ಚಗಿನ ನೀರಿನ ಬದಲಾಗಿ ಬಿಸಿ ನೀರನ್ನು ಉಪಯೋಗಿಸಬಹುದು.

2. ಕಾಳು ಮೆಣಸು

2. ಕಾಳು ಮೆಣಸು

ನಿಂಬೆರಸ ಹಾಗೂ ಜೇನಿನ ಮಿಶ್ರಣ ಸೇವನೆಯಿಂದ ಕೊಬ್ಬು ಕರಗುತ್ತದೆ ಎಂಬುದನ್ನು ಈಗಾಗಲೇ ತಿಳಿದು ಕೊಂಡಿದ್ದೇವೆ. ಆದರೆ ಇದರೊಂದಿಗೆ ಒಂಚೂರು ಕಾಳುಮೆಣಸಿನ ಪುಡಿಯನ್ನು ಮಿಕ್ಸ್ ಮಾಡಿದರೆ ಫಲಿತಾಂಶ ಇನ್ನೂ ಉತ್ತಮವಾಗಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಇದನ್ನು ಸೇವಿಸುವುದು ಯೋಗ್ಯವಲ್ಲವಾದ್ದರಿಂದ ದಿನದ ಹೊತ್ತಿನಲ್ಲಿ ಒಂದು ಬಾರಿ ಯಾವಾಗಾದರೂ ಸೇವನೆ ಮಾಡಬಹುದು. ನಿಂಬೆರಸ, ಜೇನು ಹಾಗೂ ಕಾಳುಮೆಣಸಿನ ಪುಡಿಯ ಮಿಶ್ರಣ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ಶೀತವನ್ನು ಸಹ ಕಡಿಮೆ ಮಾಡುತ್ತದೆ.

3. ಎಲೆಕೋಸು

3. ಎಲೆಕೋಸು

ಬಹಳಷ್ಟು ಜನರಿಗೆ ಎಲೆಕೋಸಿನ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿದಿಲ್ಲ. ಎಲೆಕೋಸಿನ ನಿಯಮಿತ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೊಜ್ಜು ಕಡಿಮೆ ಮಾಡಲು ಹಸಿರು ತರಕಾರಿ, ಸೊಪ್ಪು ಸೇವನೆ ಸಹಕಾರಿ ಎಂಬುದು ನಮಗೆ ತಿಳಿದ ವಿಷಯವಾಗಿದೆ. ಅದರಲ್ಲೂ ಎಲೆಕೋಸು ಸೇವನೆಯಿಂದ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಚುರುಕು ಪಡೆಯುವುದು ಖಂಡಿತ. ಇದನ್ನು ಬೇಯಿಸಿ ಅಥವಾ ಹಸಿಯಾಗಿ ಸೇವಿಸಬಹುದು. ದಿನಕ್ಕೊಂದು ಬಟ್ಟಲು ಹಸಿ ಎಲೆಕೋಸು ತಿಂದು ಉತ್ತಮ ಪರಿಣಾಮಗಳನ್ನು ನೀವೇ ನೋಡಿ.

4.ಜೀರ್ಣಕ್ರಿಯೆ ಸುಧಾರಿಸುವ ವಸ್ತುಗಳು

4.ಜೀರ್ಣಕ್ರಿಯೆ ಸುಧಾರಿಸುವ ವಸ್ತುಗಳು

ತೂಕ ಹೆಚ್ಚಳಕ್ಕೆ ನೀವು ಸೇವಿಸುವ ಆಹಾರವೇ ಯಾವಾಗಲೂ ಕಾರಣವಾಗಿರುವುದಿಲ್ಲ. ತಿಂದ ಆಹಾರವು ಸರಿಯಾಗಿ ಜೀರ್ಣವಾಗದ ಕಾರಣದಿಂದ ಸಹ ಬೊಜ್ಜು ಬೆಳೆಯುತ್ತದೆ ಎಂಬುದು ಗೊತ್ತಿರಲಿ. ಆದ್ದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುವ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ ಅಭ್ಯಾಸವಾಗಿದೆ. ಶುಂಠಿ, ಪಪ್ಪಾಯಿ, ಬೆಳ್ಳುಳ್ಳಿ, ಮೆಣಸಿಕಾಯಿ ಮುಂತಾದುವು ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಈ ಪದಾರ್ಥಗಳ ಸೇವನೆಯಿಂದ ಬೊಜ್ಜು ಬೆಳೆಯುವಿಕೆಯನ್ನು ನಿಯಂತ್ರಣದಲ್ಲಿಡಬಹುದು.

5. ಆಹಾರದಲ್ಲಿ ಮಸಾಲೆ ಪದಾರ್ಥಗಳಿರಲಿ

5. ಆಹಾರದಲ್ಲಿ ಮಸಾಲೆ ಪದಾರ್ಥಗಳಿರಲಿ

ಜೀರ್ಣಕ್ರಿಯೆಗೆ ಸಹಕಾರಿಯಾಗುವ ಆಹಾರ ಪದಾರ್ಥ ಸೇವನೆ ಅಗತ್ಯ ಎಂಬುದು ಈಗಾಗಲೇ ತಿಳಿದ ವಿಷಯವಾಗಿದೆ. ತಿಂದದ್ದನ್ನು ಭಸ್ಮ ಮಾಡುವ ಜೀರ್ಣಶಕ್ತಿಯಿಂದ ತೂಕ ಇಳಿಸಿಕೊಳ್ಳಲು ಸಾಧ್ಯ. ಆದ್ದರಿಂದ ಜೀರ್ಣಶಕ್ತಿಗೆ ಜೀವ ತುಂಬುವ ಮಸಾಲೆ ಪದಾರ್ಥದ ಆಹಾರ ಸೇವನೆಯೂ ಅಗತ್ಯವಾಗಿದೆ. ಜೀರಿಗೆ, ಮೆಣಸು, ಸಾಸಿವೆ, ಮುಂತಾದ ವಸ್ತುಗಳನ್ನು ಹಾಕಿ ಮಾಡಿದ ಆಹಾರ ಬೊಜ್ಜು ಕರಗಿಸಲು ಸಹಕಾರಿ. ಪೆಪ್ಪರ್ ಬೇಡವೆನ್ನುವವರು ಮೆಣಸಿನಕಾಯಿ ಉಪಯೋಗಿಸಬಹುದು. ಪೆಪ್ಪರ್‌ನಿಂದ ಪಿತ್ತ ಹೆಚ್ಚಾಗುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದ್ದು, ವಾಸ್ತವದಲ್ಲಿ ಪೆಪ್ಪರ್ ಹೊಟ್ಟೆಯನ್ನು ತಣ್ಣಗಾಗಿಸುತ್ತದೆ.

6. ಆಮ ಕಡಿಮೆ ಮಾಡಿಕೊಳ್ಳಿ

6. ಆಮ ಕಡಿಮೆ ಮಾಡಿಕೊಳ್ಳಿ

ಆಹಾರ ಸಂಪೂರ್ಣ ಜೀರ್ಣವಾಗದೆ ದೇಹದಲ್ಲಿ ಉತ್ಪತ್ತಿಯಾಗುವ ಬೇಡವಾದ ವಸ್ತುವನ್ನು ಆಯುರ್ವೇದದಲ್ಲಿ ಆಮ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಎಲ್ಲೆಡೆ ಪಸರಿಸುವ ಆಮದಿಂದ ಬಹಳಷ್ಟು ದುಷ್ಪರಿಣಾಮಗಳು ಉಂಟಾಗುತ್ತವೆ. ಇದು ದೇಹದಲ್ಲಿ ದುಗ್ಧರಸವನ್ನು ಕೆಲಸ ಮಾಡದಂತೆ ತಡೆಯುತ್ತದೆ. ಇದು ಬೊಜ್ಜು ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ. ಆಮ ತಡೆಗಟ್ಟಲು ಅರಿಶಿಣ, ತ್ರಿಕಾಟು (ಶುಂಠಿ, ಕಾಳುಮೆಣಸು ಮಿಶ್ರಣ) ಮುಂತಾದುವುಗಳನ್ನು ಹೊಂದಿದ ಆಹಾರ ಸೇವನೆ ಮಾಡಬೇಕು. ಇದರಿಂದ ಆಮ ಕಡಿಮೆಯಾಗಿ ಆರೋಗ್ಯ ಸುಧಾರಿಸುತ್ತದೆ.

7. ಉಪವಾಸ

7. ಉಪವಾಸ

ಉಪವಾಸ ಮಾಡುವುದು ಆರೋಗ್ಯಕ್ಕೆ ಹಿತಕರ ಎಂಬುದು ನಮ್ಮ ಪೂರ್ವಜರಿಂದ ತಿಳಿದಿರುವ ಜ್ಞಾನವಾಗಿದೆ. ಆಯುರ್ವೇದದಲ್ಲಿಯೂ ಉಪವಾಸಕ್ಕೆ ಮಹತ್ವದ ಸ್ಥಾನವಿದೆ. ದಿನವಿಡೀ ಏನೂ ತಿನ್ನದೆ ಇರುವುದೇ ಉಪವಾಸ. ಆದರೆ ಉಪವಾಸದಿಂದ ಆರೋಗ್ಯ ಹಾಳಾಗುತ್ತದೆ ಹಾಗೂ ನಿಶ್ಯಕ್ತಿ ಬರುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ವಾರಕ್ಕೊಮ್ಮೆ ಉಪವಾಸ ಮಾಡುವುದು ನಮ್ಮ ಆರೋಗ್ಯಕ್ಕೆ ಅತಿ ಅಗತ್ಯವಾಗಿದೆ. ಉಪವಾಸದಿಂದ ದೇಹದಲ್ಲಿ ಸಂಗ್ರಹವಾದ ವಿಷಕಾರಿ ಅಂಶಗಳು ನಿವಾರಣೆಗೊಂಡು ಜೀರ್ಣಕ್ರಿಯೆ ಸುಧಾರಿಸುತ್ತದೆ. ಬೊಜ್ಜು ಕರಗಿಸಲು ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಉಪವಾಸ ಸಂದರ್ಭದಲ್ಲಿ ಗ್ರೀನ್ ಟೀ ಅಥವಾ ನೀರು ಕುಡಿಯುವುದು ಸೂಕ್ತ.

8. ಆಯುರ್ವೇದ ವಸ್ತುಗಳ ಮಿಶ್ರಣದ ಸೇವನೆ

8. ಆಯುರ್ವೇದ ವಸ್ತುಗಳ ಮಿಶ್ರಣದ ಸೇವನೆ

ತೂಕ ಇಳಿಸಲು ಆಯುರ್ವೇದದಲ್ಲಿ ಹೇಳಲಾಗಿರುವ ವಿಶಿಷ್ಟ ವಸ್ತುಗಳ ಮಿಶ್ರಣದ ಸೇವನೆ ಉಪಯುಕ್ತವಾಗಿದೆ. ಕುಟ್ಕಿ, ಚಿತ್ರಕ ಹಾಗೂ ತ್ರಿಕಾಟುಗಳನ್ನು ಸೂಕ್ತ ಪ್ರಮಾಣದಲ್ಲಿ ಮಿಶ್ರಣ ಮಾಡಿ ನಿಯಮಿತವಾಗಿ ಸೇವಿಸಬೇಕು. ದೇಹದ ಬೊಜ್ಜಿನ ಪ್ರಮಾಣ ನೋಡಿಕೊಂಡು ಈ ಮಿಶ್ರಣಕ್ಕೆ ನೀರು ಸೇರಿಸಿ ಸೇವನೆ ಮಾಡಬೇಕು. ಅತಿಯಾದ ಬೊಜ್ಜು ಇದ್ದರೆ ದಿನಕ್ಕೆ ಎರಡು ಬಾರಿ, ಕಡಿಮೆ ಬೊಜ್ಜು ಇದ್ದರೆ ದಿನಕ್ಕೊಮ್ಮೆ ಈ ಮಿಶ್ರಣ ಸೇವನೆ ಮಾಡುವುದು ಉತ್ತಮ.

9. ಗಿಡಮೂಲಿಕೆಗಳು

9. ಗಿಡಮೂಲಿಕೆಗಳು

ಗಿಡಮೂಲಿಕೆಗಳು ಬಹುತೇಕ ಎಲ್ಲ ರೋಗಗಳ ನಿವಾರಣೆಯಲ್ಲಿಯೂ ಬಳಸಲ್ಪಡುತ್ತವೆ. ಅದರಲ್ಲೂ ತೂಕ ಕಡಿಮೆ ಮಾಡಲು ಇವುಗಳ ಪಾತ್ರ ಮುಖ್ಯವಾಗಿದೆ. ಸಾಮಾನ್ಯವಾಗಿ ಲಭ್ಯವಿರುವ ಅನೇಕ ಗಿಡಮೂಲಿಕೆಗಳು ತೂಕ ಇಳಿಸಲು ಸಹಕಾರಿಯಾಗಿವೆ. ಬಿಭಿತಕಿ, ಹರಿತಕಿ, ಆಮಲಕಿ, ಲಿಕೊರೈಸ್, ತುಳಸಿ, ಅಲೋ ವೆರಾ, ವೃಕ್ಷಾಮ್ಲ ಮುಂತಾದ ಗಿಡಮೂಲಿಕೆಗಳ ಸೇವನೆಯಿಂದ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಇವು ಸಹಜವಾಗಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಉಪಶಮನ ನೀಡುತ್ತವೆ. ಇವು ನೇರವಾಗಿ ಸಿಗದಿದ್ದರೆ ಆಯುರ್ವೇದ ಔಷಧ ಅಂಗಡಿಗಳಲ್ಲಿ ಸಿಗುವ ಇವುಗಳ ಮಾತ್ರೆಗಳನ್ನು ಬಳಸಬಹುದು.

10. ಶುಂಠಿ

10. ಶುಂಠಿ

ಆಯುರ್ವೇದದಲ್ಲಿ ಶುಂಠಿಗೆ ಅತಿ ಮಹತ್ವದ ಸ್ಥಾನವಿದೆ. ಹಲವಾರು ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಹೊಂದಿರುವ ಇದು ಬೊಜ್ಜು ನಿವಾರಣೆಯಲ್ಲೂ ಅತಿ ಉಪಯುಕ್ತವಾಗಿದೆ. ತಾಜಾ ಶುಂಠಿಯನ್ನು ಪ್ರತಿದಿನ ಸೇವಿಸುತ್ತ ಬಂದರೆ ಇದರ ಒಳ್ಳೆಯ ಪರಿಣಾಮಗಳನ್ನು ನೋಡಬಹುದು. ಅದರಲ್ಲೂ ಪ್ರತಿದಿನ ಬೆಳಗ್ಗೆ ಶುಂಠಿಯ ಸೇವನೆ ಹಿತಕರ. ಇದು ದೇಹವನ್ನು ಬೆಚ್ಚಗೆ ಇಟ್ಟು ಶೀತಬಾಧೆ ಆಗದಂತೆ ತಡೆಯುತ್ತದೆ.

English summary

Ayurvedic Supplements For Weight Loss

There are many ways in which you can use Ayurveda for losing your weight. These medicines will help you attain a good health. Also, it comes without any kind of side effects. Here are some of the best Ayurvedic medicine for weight loss.
X
Desktop Bottom Promotion