For Quick Alerts
ALLOW NOTIFICATIONS  
For Daily Alerts

ಹೃದಯದ ಆರೋಗ್ಯಕ್ಕೆ ಮೊಟ್ಟೆ ತಿನ್ನುವುದು ಒಳ್ಳೆಯದಲ್ವಾ?

By Sushma Charhra
|

ಮೊಟ್ಟೆಯು ಸಾಮಾನ್ಯವಾಗಿ ರಕ್ತದ ಕೊಲೆಸ್ಟ್ರಾಲ್ ಲೆವೆಲ್ ನ್ನು ಹೆಚ್ಚಿಸುತ್ತೆ. ಹಾಗಾಗಿ ಅತಿಯಾಗಿ ಮೊಟ್ಟೆ ತಿನ್ನುವುದರಿಂದಾಗಿ ನಿಮ್ಮ ಡಯಟ್ ಹಾಳಾಗುತ್ತೆ ಮತ್ತು ಹೃದಯದ ಸಮಸ್ಯೆಗಳಿಗೆ ಅದು ಕಾರಣವಾಗಬಹುದು. ಮೊಟ್ಟೆಯಲ್ಲಿ ಅತಿಯಾದ ಕ್ಯಾಲೋರಿ ಅಂಶಗಳಿರುತ್ತೆ. ಅತಿಯಾಗಿ ಮೊಟ್ಟೆ ತಿನ್ನುವುದರಿಂದ ವ್ಯಕ್ತಿಯ ತೂಕವು ಹೆಚ್ಚಳವಾಗುತ್ತೆ. ಯಾರು ಹೆಚ್ಚು ಮೊಟ್ಟೆ ತಿನ್ನುತ್ತಾರೋ ಅವರ ತೂಕವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತೆ.

ಹಾಗಾಗಿ ಮೊಟ್ಟೆಯಲ್ಲಿ ಹೆಚ್ಚಿನ ಕ್ಯಾಲೋರಿ ಅಂಶ,ಕೊಲೆಸ್ಟ್ರಾಲ್ ಪ್ರಮಾಣ, ಕೊಬ್ಬಿನಾಂಶ, ಎಲ್ಲವೂ ಸಮ್ಮಿಶ್ರಣವಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುವ ಸಾಧ್ಯತೆಗಳಿರುತ್ತೆ.

ಮೊಟ್ಟೆ ತಿನ್ನುವುದರ ಋಣಾತ್ಮಕ ಪರಿಣಾಮಗಳು

1. ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಕೊಲೆಸ್ಟ್ರಾಲ್ ಅಂಶಗಳು

ಒಂದು ಪೂರ್ಣ ಮೊಟ್ಟೆಯಲ್ಲಿ 210ಎಂಜಿಯಷ್ಟು ಕೊಲೆಸ್ಟ್ರಾಲ್ ಇರುತ್ತೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ ಬೇಕಾಗುವ ಕೊಲೆಸ್ಟ್ರಾಲ್ ಪ್ರಮಾಣದ ಒಂದುವರೆ ಪಟ್ಟು ಇದು ಹೆಚ್ಚು. 5ಗ್ರಾಂನಷ್ಟು ಫ್ಯಾಟ್ ಅಂಶವು ಇದರಲ್ಲಿರುತ್ತೆ. 1.6 ಗ್ರಾಂನಷ್ಟು ಸ್ಯಾಚುರೇಡೆಟ್ ಕೊಬ್ಬಿನಾಂಶವನ್ನೂ ಕೂಡ ಇದು ಒಳಗೊಂಡಿದೆ. ಮೊಟ್ಟೆಯ ಹಳದಿ ಬಣ್ಣದಲ್ಲಿ ಎಲ್ಲಾ ರೀತಿಯ ಕೊಬ್ಬಿನಾಂಶ ಮತ್ತು ಕೊಲೆಸ್ಟ್ರಾಲ್ ಅಂಶವೂ ಇರುತ್ತೆ. ಮೊಟ್ಟೆಯ ಬಿಳಿ ಭಾಗದಲ್ಲಿ ಕೇವಲ 0.06ಗ್ರಾಂ ನಷ್ಟು ಫ್ಯಾಟ್ ಅಂಶವಿರುತ್ತೆ ಆದರೆ ಸ್ಯಾಚುರೆಟೆಡ್ ಫ್ಯಾಟ್ ಅಥವಾ ಕೊಬ್ಬಿನಾಂಶವಿರುವುದಿಲ್ಲ.

ಇವೆರಡ ಜೊತೆಗೆ ಮೊಟ್ಟೆಯ ಹಳದಿ ಭಾಗದಲ್ಲಿ ಹೃದಯ ಆರೋಗ್ಯಕ್ಕೆ ಹಿತವಾಗಿರುವ ಒಮೆಗಾ-3 ಫ್ಯಾಟಿ ಆಸಿಡ್ ಕೂಡ ಇರುತ್ತೆ.100 ರಿಂದ 200 ಮಿಲಿಗ್ರಾಂನಷ್ಟು ಒಮೆಗಾ 3 ಫ್ಯಾಟಿ ಆಸಿಡ್ ಇರುತ್ತೆ. ಆದರೆ ಮೊಟ್ಟೆಯ ಬಿಳಿ ಭಾಗದಲ್ಲಿ ಯಾವುದೇ ಒಮೆಗಾ 3 ಫ್ಯಾಟಿ ಆಸಿಡ್ ಗಳು ಇರುವುದಿಲ್ಲ. ಹಾಗಾಗಿ ಅತಿಯಾಗಿ ಮೊಟ್ಟೆ ಸೇವನೆ ಆರೋಗ್ಯಕ್ಕೆ ಹಿತವಲ್ಲ. ಆದರೆ ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಸೇವಿಸುವುದರಿಂದ ಆರೋಗ್ಯಕ್ಕೆ ಲಾಭಗಳೇ ಹೆಚ್ಚು., ದಿನಕ್ಕೆ ಒಂದು ಮೊಟ್ಟೆ ತಿನ್ನುವುದರಿಂದ ಏನೂ ಆಗುವುದಿಲ್ಲ. ಇದು ಮನುಷ್ಯನಿಗೆ ಅಗತ್ಯವೂ ಹೌದು. ಹೀಗೆ ಒಂದು ಮೊಟ್ಟೆ ಸೇವನೆಯಿಂದ ಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ. ಆದರೆ ಡಯಾಬಿಟೀಸ್ ರೋಗಿಗಳು ದಿನಕ್ಕೆ ಒಂದು ಮೊಟ್ಟೆ ಸೇವಿಸುವುದನ್ನೂ ನಿಲ್ಲಿಸುವುದು ಒಳಿತು. ವಾರಕ್ಕೆ ಕೇವಲ ಮೂರು ಮೊಟ್ಟೆ ಸೇವನೆ ಓಕೆ. ಇದರಿಂದ ಅವರು ಅವರ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು. ಒಂದು ಪೂರ್ಣ ಮೊಟ್ಟೆಯು 71 ಕ್ಯಾಲೋರಿ ಅಂಶವನ್ನು ಹೊಂದಿರುತ್ತೆ.ಅದರಲ್ಲಿ 6.3 ಗ್ರಾಂ ಪ್ರೋಟೀನ್ ಇದ್ದು, ಮೊಟ್ಟೆಯ ಬಿಳಿಭಾಗದಲ್ಲಿ 3.6 ನಷ್ಟು ಮತ್ತು ಹಳದಿಯಲ್ಲಿ 2.7 ಗ್ರಾಂನಷ್ಟಿರುತ್ತೆ. ವಿಟಮಿನ್ ಬಿ12,ವಿಟಮಿನ್ ಎ ಮತ್ತು ಡಿ, ವಿಟಮಿನ್ ಇ ಮತ್ತು ಕೆ, ಕ್ಯಾಲ್ಸಿಯಂ, ಕಬ್ಬಿಣ,ಲುಟೀನ್, ಕೆರೋಟನಾಯ್ಡ್ಸ್ ಸೇರಿದಂತೆ ಇನ್ನೂ ಹಲವು ಅಂಶಗಳು ಮೊಟ್ಟೆಯ ಹಳದಿ ಭಾಗದಲ್ಲಿ ಇರುತ್ತೆ. ಇನ್ನು ಮೊಟ್ಟೆಯ ಬಿಳಿ ಭಾಗದಲ್ಲೂ ಕೂಡ ಫೋಲೆಟ್,ವಿಟಮಿನ್ ಬಿ 12,ಕೋಲೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವಿರುತ್ತೆ.

2. ಡಯಟ್ ನಲ್ಲಿ ಮೊಟ್ಟೆಯ ಪ್ರಮಾಣದ ಲೆಕ್ಕಾಚಾರ ಹೇಗೆ ಇಟ್ಟುಕೊಳ್ಳುವುದು?

ದಿನಕ್ಕೆ ಒಂದು ಮೊಟ್ಟೆ ಅಥವಾ ವಾರಕ್ಕೆ ಕೆಲವೇ ಕೆಲವು ಮೊಟ್ಟೆ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದಕ್ಕಿಂತ ಹೆಚ್ಚು ಮೊಟ್ಟೆಯನ್ನು ಸೇವಿಸುವವರು ಬೇರೆ ಆಹಾರಗಳನ್ನು ಕಡಿತ ಮಾಡಿಕೊಳ್ಳುವುದು ಒಳಿತು. ಅದ್ರಲ್ಲೂ ಫ್ಯಾಟ್ ಅಂಶಗಳಿರುವ ತುಪ್ಪ,ಬೆಣ್ಣೆ, ಮಾಂಸ, ಆಲೂಗಡ್ಡೆ. ಇತ್ಯಾದಿಗಳು.. ಡಯಾಬಿಟೀಸ್ ಮತ್ತು ಹೃದಯದ ಸಮಸ್ಯೆ ಇರುವವರು ವಾರಕ್ಕೆ 3 ಮೊಟ್ಟೆ ತಿನ್ನುವುದರಿಂದ ಆರೋಗ್ಯವಾಗಿರಬಹುದು ಎಂದು ಅಧ್ಯಯನವೊಂದು ತಿಳಿಸುತ್ತದೆ.

ಮೊಟ್ಟೆಯನ್ನು ಸಂಪೂರ್ಣವಾಗಿ ಬಳಸುವುದಕ್ಕಿಂತ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ಬಳಕೆ ಮಾಡುವುದು ಸೂಕ್ತ. ಉದಾಹರಣೆಗೆ ಮೂರು ಮೊಟ್ಟೆಯ ಬಿಳಿಭಾಗ ಮತ್ತು ಒಂದು ಮೊಟ್ಟೆಯ ಅರಿಶಿನ ಭಾಗ ಮಾತ್ರ ಬಳಸಿ ಆಮ್ಲೆಟ್ ತಯಾರಿಸಿಕೊಳ್ಳುವುದರಿಂದ ಹೆಚ್ಚು ಆರೋಗ್ಯವಂತರಾಗಿರಲು ಸಾಧ್ಯ.

3. ದೇಹದಲ್ಲಿ ಮೊಟ್ಟೆಯಿಂದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಳವಾಗಿ ಅಪಾಯ ತರುತ್ತೆ

ಅಧ್ಯಯನ ಮಾಡುವ ವಿಜ್ಞಾನಿಗಳು,ನ್ಯೂಟ್ರೀಷಿಯಸ್ ಆಹಾರಗಳಲ್ಲಿ ಮೊಟ್ಟೆ ಅತ್ಯಂತ ಕೆಟ್ಟದ್ದು ಎಂದು ವಾದ ಮಂಡಿಸುತ್ತಾರೆ. ಇದನ್ನು ಅವರು ಅದರಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಬಹಿರಂಗಪಡಿಸಿ ಸ್ಪಷ್ಟಪಡಿಸುತ್ತಾರೆ. ಕೊಲೆಸ್ಟ್ರಾಲ್ ನಮ್ಮ ದೇಹದ ರಕ್ತದಲ್ಲಿ ಸೇರಿಕೊಳ್ಳುತ್ತೆ. ಕೆಲವೇ ಕೆಲವು ಪ್ರಮಾಣದ ಕೊಲೆಸ್ಟ್ರಾಲ್ ನಮ್ಮ ದೇಹಕ್ಕೆ ಅಗತ್ಯವಿರುತ್ತೆ. ಅದಕ್ಕಿಂತ ಹೆಚ್ಚಾದರೆ ಅನಾರೋಗ್ಯಕಾರಿ. ಅತಿಯಾದ ಕೊಲೆಸ್ಟ್ರಾಲ್ ಪ್ರಮಾಣವು ರಕ್ತವನ್ನು ದಪ್ಪ ಮಾಡುತ್ತೆ ಮತ್ತು ರಕ್ತವು ಸಂಚಾರವಾಗಲು ಕಷ್ಟವಾಗುತ್ತೆ. ರಕ್ತ ಸಂಚರಿಸುವುದು ಕಷ್ಟವಾಗುತ್ತಿದೆ ಎಂದರೆ ಹೃದಯದ ಆರೋಗ್ಯವೂ ಹಾಳಾಗಿದೆ ಎಂದರ್ಥ.

ಒಟ್ಟಿನಲ್ಲಿ ಹೇಳುವುದಾದರೆ ಮೊಟ್ಟೆ ಸೇವನೆಯಿಂದ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಕೆಟ್ಟದ್ದನ್ನು ನಿರ್ಲಕ್ಷಿಸಿ, ತಮ್ಮ ಡಯಟ್ ಹಾಳು ಮಾಡಿಕೊಂಡರೆ ಅದಕ್ಕೆ ಪ್ರಶ್ಚಾತ್ತಾಪ ಪಡಬೇಕಾದದ್ದು ಮೊಟ್ಟೆ ಸೇವಿಸಿದವರೇ ಹೊರತು ಮತ್ತೊಬ್ಬರಲ್ಲ. ಮೊಟ್ಟೆ ತಿನ್ನುವುದನ್ನೇ ಬಿಡುವುದು ಸರಿಯಲ್ಲ ಯಾಕೆಂದರೆ ಅದರಲ್ಲಿ ಪ್ರೊಟೀನ್ ಅಂಶವು ಅಧಿಕವಾಗಿರುತ್ತೆ ಅದು ನಿಮ್ಮ ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೀವು ಡಯಟ್ ಮಾಡುವ ಮುನ್ನ ಸರಿಯಾದ ಮಾರ್ಗದರ್ಶಕರ ಬಳಿ ಡಯಟ್ ಚಾರ್ಟ್ ಹಾಕಿಸಿಕೊಳ್ಳುವುದು ಸೂಕ್ತ. ಸರಿಯಾದ ಪ್ರಮಾಣದಲ್ಲಿ ನೀವು ಮೊಟ್ಟೆ ಸೇವಿಸುತ್ತಿದ್ದೀರಾ ತಿಳಿದುಕೊಳ್ಳಿ.

Read more about: health
English summary

are-eggs-harmful-for-heart-health

are-eggs-harmful-for-heart-health
Story first published: Friday, May 18, 2018, 15:49 [IST]
X
Desktop Bottom Promotion