For Quick Alerts
ALLOW NOTIFICATIONS  
For Daily Alerts

ನೋಡಿ ಬದನೆಕಾಯಿ ತಿಂದರೆ ಇಷ್ಟೆಲ್ಲಾ ಕಾಯಿಲೆಗಳನ್ನು ನಿಯಂತ್ರಿಸಬಹುದು

|

ಬದನೆಕಾಯಿ ಸಾಂಬಾರು ಮಾಡಿದರೆ ಅದರ ರುಚಿಗೆ ಎದುರಿಲ್ಲ. ಬದನೆಕಾಯಿಯನ್ನು ಹೆಚ್ಚಿನವರು ಇಷ್ಟಪಡುವರು. ಆದರೆ ಕೆಲವರು ಬದನೆಕಾಯಿಯಿಂದ ದೂರ ಹೋಗುವರು. ಇದರಲ್ಲಿರುವಂತಹ ಪೋಷಕಾಂಶಗಳನ್ನು ತಿಳಿದರೆ ಮಾತ್ರ ಖಂಡಿತವಾಗಿಯೂ ಪ್ರತಿಯೊಬ್ಬರು ಬದನೆಕಾಯಿಯನ್ನು ತಿನ್ನುವರು. ಎಲ್ಲಾ ತರಕಾರಿಗಳಂತೆ ಬದನೆಯಲ್ಲಿಯೂ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಅದರಿಂದ ಆರೋಗ್ಯ ಲಾಭಗಳು ಇವೆ. ಏಶ್ಯಾದ ಬದನೆಕಾಯಿ ಮತ್ತು ಪಾಶ್ಚಿಮಾತ್ಯ ಬದನೆಕಾಯಿ ಎನ್ನುವ ಎರಡು ವಿಧಗಳಿವೆ. ಈ ಲೇಖನದಲ್ಲಿ ಬದನೆಯಿಂದ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

ಬದನೆ ಬಗ್ಗೆ ಇರುವ ಆಸಕ್ತಿಯ ವಿಚಾರಗಳು
ಬದನೆಯು ಕೇವಲ ನೇರಳೆ ಬಣ್ಣದಲ್ಲಿ ಮಾತ್ರವಲ್ಲದೆ ಹಲವಾರು ರೀತಿಯ ಗಾತ್ರ, ಬಣ್ಣ ಹಾಗೂ ವಿನ್ಯಾಸದಲ್ಲಿ ಕಂಡುಬರುವುದು. ಬದನೆಯನ್ನು ಬೇಯಿಸಿ, ಕಾಯಿಸಿ, ಹಬೆಯಲ್ಲಿರಿಸಿ, ಫ್ರೈ ಮಾಡಿಕೊಂಡು ತಿನ್ನಬಹುದಾಗಿದೆ. ಹಬೆಯಲ್ಲಿರಿಸಿ ಬೇಯಿಸಿದ ಬದನೆಕಾಯಿಯಲ್ಲಿ ಅತ್ಯಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮಟ್ಟವು ಇರುವುದು. ಆಂಥೋಸಿಯಾನ್ಸಿಸ್ ಎನ್ನುವ ಅಂಶವು ಹೃದಯದ ಆರೋಗ್ಯ ಕಾಪಾಡುವುದು. ಬದನೆಯಲ್ಲಿರುವ ನಸುನಿನ್ ಎನ್ನುವ ಮತ್ತೊಂದು ಅಂಶವು ಮೆದುಳಿಗೆ ರಕ್ತಸಂಚಾರವು ಸರಾಗವಾಗಿ ಆಗಲು ನೆರವಾಗುವುದು.

ಬದನೆಯಲ್ಲಿರುವ ಪೋಷಕಾಂಶಗಳು
ಬದನೆಯು ಹೊರಗಿನಿಂದ ಗಟ್ಟಿಯಾಗಿರುವ ಒಳಗೆ ಬೀಜಗಳ ರಾಶಿಯನ್ನೇ ಹೊಂದಿರುವಂತಹ ತರಕಾರಿ. ಈ ಬೀಜಗಳನ್ನು ತಿನ್ನಬಹುದು ಮತ್ತು ತುಂಬಾ ಆರೋಗ್ಯಕಾರಿ. ಅತ್ಯಧಿಕ ನೀರಿನಾಂಶವನ್ನು ಹೊಂದಿರುವಂತಹ ಬದನೆಯು ಮೂತ್ರವರ್ಧಕ ಮತ್ತು ವಿರೇಚಕ. ಬದನೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಾದ ಸತು, ಫೋಸ್ಪರಸ್, ಕಬ್ಬಿನಾಂಶ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಸಂಕೀರ್ಣಗಳಾದ ಬಿ1, ಬಿ2, ಬಿ2 ಮತ್ತು ಬಿ6 ಇದೆ...

 ಬದನೆಯ ಆರೋಗ್ಯ ಲಾಭಗಳು

ಬದನೆಯ ಆರೋಗ್ಯ ಲಾಭಗಳು

1. ಹೃದಯದ ಕಾಯಿಲೆ ಅಪಾಯ ತಗ್ಗಿಸುವುದು

ಬದನೆಯಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್ ಹೃದಯದ ಕಾಯಿಲೆಯ ಅಪಾಯ ತಗ್ಗಿಸುವುದು ಎಂದು ಅಧ್ಯಯನಗಳು ಹೇಳಿವೆ. ಹೃದಯ ಕಾಯಿಲೆಗೆ ಕಾರಣವಾಗುವಂತಹ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಗಳು ಬದನೆ ಸೇವನೆಯಿಂದ ಕಡಿಮೆಯಾಗುವುದು. ಹೃದಯದ ಕಾಯಿಲೆಯನ್ನು ದೂರವಿಡಲು ಬದನೆ ತಿನ್ನಿ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು

ಬದನೆಕಾಯಿಯಲ್ಲಿ ನಾರಿನಾಂಶವು ಅತ್ಯಧಿಕವಾಗಿದ್ದು, ಇದು ಜೀರ್ಣಕ್ರಿಯೆ ಮತ್ತು ದೇಹವು ಸಕ್ಕರೆ ಅಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆನ್ನು ನಿಧಾನಗೊಳಿಸಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡುವುದು. ನಿಧಾನಗತಿಯ ಹೀರಿಕೊಳ್ಳುವಿಕೆಯ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಸ್ಥಿರವಾಗಿದ್ದು, ಏರಿಕೆಯಾಗದಂತೆ ತಡೆಯುವುದು. ಬದನೆಯಲ್ಲಿರುವ ಪಾಲಿಫೆನಾಲ್ ಗಳಿಂದ ಸಕ್ಕರೆ ಹೀರುವಿಕೆ ಕಡಿಮೆಯಾಗಿ ಇನ್ಸುಲಿನ್ ಸ್ರವಿಸುವಿಕೆ ಹೆಚ್ಚಾಗುವುದು ಎಂದು ಅಧ್ಯಯನಗಳು ಹೇಳಿವೆ.

ತೂಕ ಕಾಪಾಡಲು ಸಹಕಾರಿ

ತೂಕ ಕಾಪಾಡಲು ಸಹಕಾರಿ

ಬದನೆಯಲ್ಲಿ ನಾರಿನಾಂಶ ಅತ್ಯಧಿಕವಾಗಿದೆ ಮತ್ತು ಕ್ಯಾಲರಿ ಕಡಿಮೆ ಇದೆ. ಇದು ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ ಆಹಾರ. ಬದನೆಯಲ್ಲಿರುವಂತಹ ನಾರಿನಾಂಶವು ಹೊಟ್ಟೆ ತುಂಬಿದಂತೆ ಮತ್ತು ತೃಪ್ತಿ ನೀಡುವುದು. ಇದರಿಂದ ಕ್ಯಾಲರಿ ಸೇವನೆ ಕಡಿಮೆಯಾಗುವುದು.

ಕ್ಯಾನ್ಸರ್ ವಿರುದ್ಧ ಹೋರಾಡುವುದು

ಕ್ಯಾನ್ಸರ್ ವಿರುದ್ಧ ಹೋರಾಡುವುದು

ಬದನೆಯಲ್ಲಿ 13 ರೀತಿಯ ಫೆನಾಲಿಕ್ ಅಂಶಗಳು ಇದ್ದು, ಕ್ಯಾನ್ಸರ್ ವಿರುದ್ಧ ಹೋರಾಡುವಂತಹ ಸಾಮರ್ಥ್ಯ ಹೊಂದಿದೆ. ಬದನೆಯಲ್ಲಿರುವ ಸೊಲಾಸೊಡೈನ್ ರಾಮ್ನೋಸಿಲ್ ಗ್ಲೈಕೋಸೈಡ್ ಗಳು ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುತ್ತದೆ ಎಂದು ಪ್ರನಾಳ ಪರೀಕ್ಷೆಗಳು ಹೇಳಿವೆ. ನಸುನಿನ್ ಎನ್ನುವ ಫೈಥೋನ್ಯೂಟ್ರಿಯೆಂಟ್ ಮತ್ತು ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

ಬದನೆಯಿಂದ ಬೇರೆ ಬೇರೆ ಆರೋಗ್ಯ ಸಮಸ್ಯೆ ನಿವಾರಿಸಬಹುದೇ?

ಬದನೆಯಿಂದ ಬೇರೆ ಬೇರೆ ಆರೋಗ್ಯ ಸಮಸ್ಯೆ ನಿವಾರಿಸಬಹುದೇ?

ಬದನೆಕಾಯಿಯನ್ನು ಕೇವಲ ಖಾದ್ಯಗಳಲ್ಲಿ ಬಳಸುವುದು ಮಾತ್ರವಲ್ಲದೆ ಇತರ ರೀತಿಯಲ್ಲಿ ಕೆಲವು ಕಾಯಿಲೆಗಳಿಗೆ ಮದ್ದುಗಳಾಗಿ ಬಳಸಬಹುದು. ಇದರ ಬಗ್ಗೆ ತಿಳಿಯಿರಿ.

*ತೂಕ ಇಳಿಸಲು ಬದನೆ, ಅನಾನಸು ಮತ್ತು ಮೂಲಂಗಿ

ಒಂದು ತುಂಡರಿಸಿದ ಬದನೆ, 3 ಮೂಲಂಗಿ ತುಂಡರಿಸಿದ್ದು ಮತ್ತು ಒಂದು ತುಂಡು ಅನಾನಸನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಸೇವನೆ ಮಾಡಿ. ಇನ್ನು ಬದನೆಕಾಯಿಯಲ್ಲಿ ನೀರಿನಂಶವು ಅಧಿಕವಾಗಿರುತ್ತದೆ ಮತ್ತು ಕ್ಯಾಲೋರಿಗಳು ಕಡಿಮೆಯಿರುತ್ತವೆ. ಅಲ್ಲದೆ ಇದರಲ್ಲಿ ಯಥೇಚ್ಛವಾದ ಡಯೇಟರಿ

ಫೈಬರ್‌ಗಳಿದ್ದು, ಇವು ನಮ್ಮ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ದೇಹದಲ್ಲಿರುವ ನಂಜನ್ನು ಹೊರದಬ್ಬುವ ಪ್ರಕ್ರಿಯೆಯನ್ನು ವೇಗಗೊಳಿಸುವುದಲ್ಲದೆ, ನಮ್ಮ ಹೊಟ್ಟೆ ತುಂಬಿದ ಅನುಭವವನ್ನು ದೀರ್ಘಕಾಲದವರೆಗೆ ನೀಡುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಅಂಶಗಳು ಕ್ಯಾಲೋರಿಗಳನ್ನು ಕರಗುವಂತೆ ಮಾಡಿ, ನಮ್ಮ ತೂಕ ಇಳಿಯಲು ಸಹಾಯ ಮಾಡುತ್ತವೆ.

ಟ್ರೈಗ್ಲಿಸರೈಡ್ ಗಳು ತಗ್ಗಿಸಲು ಬದನೆ ಮತ್ತು ಸೌತೆಕಾಯಿ

ಟ್ರೈಗ್ಲಿಸರೈಡ್ ಗಳು ತಗ್ಗಿಸಲು ಬದನೆ ಮತ್ತು ಸೌತೆಕಾಯಿ

ಅರ್ಧ ಬದನೆಕಾಯಿ ತುಂಡರಿಸಿಕೊಳ್ಳಿ ಮತ್ತು ಒಂದು ಸೌತೆಕಾಯಿ ತುಂಡು ಮಾಡಿಕೊಂಡು ಸ್ವಲ್ಪ ನೀರಿನ ಜತೆಗೆ ಮಿಕ್ಸಿಗೆ ಹಾಕಿ ರುಬ್ಬಿ. ಇದನ್ನು ಸೋಸಿಕೊಂಡು ಉಪಾಹಾರಕ್ಕೆ ಮೊದಲು ಪ್ರತನಿತ್ಯ 15 ದಿನಗಳ ಕಾಲ ಸೇವಿಸಿ.

ಅಧಿಕ ರಕ್ತದೊತ್ತಡಕ್ಕೆ ಬದನೆ

ಅಧಿಕ ರಕ್ತದೊತ್ತಡಕ್ಕೆ ಬದನೆ

ಒಂದು ಬದನೆ ತುಂಡು ಮಾಡಿಕೊಂಡು ಅದನ್ನು ಮಿಕ್ಸಿಗೆ ಹಾಕಿ. ಇದನ್ನು ಸರಿಯಾಗಿ ರುಬ್ಬಿಕೊಂಡ ಬಳಿಕ ಅದರ ನೀರನ್ನು ಸೋಸಿಕೊಂಡು 10 ದಿನಗಳ ಕಾಲ ಕುಡಿಯಿರಿ.

ಬದನೆ ಮತ್ತು ಕಡಲಕಳೆ

ಬದನೆ ಮತ್ತು ಕಡಲಕಳೆ

ಒಂದು ಚಮಚ ಕಡಲಕಳೆ, ಒಂದು ಚಿಟಿಕೆ ಉಪ್ಪು ಮತ್ತು ಎರಡು ಚಮಚ ಬದನೆ ಹುಡಿಗೆ ತೆಗೆದುಕೊಳ್ಳಿ.ಗಾಜಿನ ಡಬ್ಬಕ್ಕೆ ಹಾಕಿಕೊಂಡು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಅರ್ಧಕಪ್ ನೀರಿಗೆ ಹಾಕಿ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಇದನ್ನು ಸೇವಿಸಿ.

ಕೊಲೆಸ್ಟ್ರಾಲ್ ಪ್ರಮಾಣವನ್ನು ಇಳಿಸುತ್ತದೆ

ಕೊಲೆಸ್ಟ್ರಾಲ್ ಪ್ರಮಾಣವನ್ನು ಇಳಿಸುತ್ತದೆ

ಬದನೆಯನ್ನು ಚೆನ್ನಾಗಿ ಬೇಯಿಸಿದ್ದರೆ, ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಇದನ್ನು ಹುರಿದು ಬಳಸುವುದಕ್ಕಿಂತ ಬೇಯಿಸಿ ಸೇವಿಸುವುದೇ ಉತ್ತಮವಾಗಿದೆ.

ರಕ್ತ ಸಂಚಾರವನ್ನು ವೃದ್ಧಿಸುತ್ತದೆ

ರಕ್ತ ಸಂಚಾರವನ್ನು ವೃದ್ಧಿಸುತ್ತದೆ

ಬದನೆಯ ಇನ್ನೊಂದು ಪರಿಣಾಮಕಾರಿ ಅಂಶವೆಂದರೆ ಇದು ರಕ್ತಸಂಚಾರವನ್ನು ವೃದ್ಧಿಸುತ್ತದೆ ಎನ್ನುವುದಾಗಿದೆ. ದಿನವೂ ಬದನೆಕಾಯಿಯನ್ನು ಸೇವಿಸುವುದು ಮೆದುಳನ್ನು ಸಮೃದ್ಧ ಗೊಳಿಸುತ್ತದೆ ಏಕೆಂದರೆ ಇದರಲ್ಲಿ ಫೈಟೋನ್ಯೂಟ್ರಿಯೆಂಟ್ಸ್

ಇದೆ.

 ಮಧುಮೇಹ ನಿಯಂತ್ರಣಕ್ಕೆ

ಮಧುಮೇಹ ನಿಯಂತ್ರಣಕ್ಕೆ

ಬದನೆಕಾಯಿಯಲ್ಲಿರುವ ಯಥೇಚ್ಛವಾದ ನಾರು ಮತ್ತು ಸೋಡಿಯಂಗಳು ರಕ್ತವು ಅಧಿಕ ಪ್ರಮಾಣದ ಗ್ಲೂಕೋಸನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಆ ಮೂಲಕ ಇದು ಟೈಪ್ 2 ಮಧುಮೇಹವನ್ನು ಹೊಂದಿರುವ ರೋಗಿಗಳ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫೆನಲ್‍ಗಳು ಮತ್ತು ಕಡಿಮೆ ಪ್ರಮಾಣದ ಗ್ಲಿಸೆಮಿಕ್‍ಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡುತ್ತವೆ. ಹೀಗಾಗಿ ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ.

ಕಫ ನಿವಾರಿಸಲು

ಕಫ ನಿವಾರಿಸಲು

ಬೆಂಕಿಯಲ್ಲಿ ಸುಟ್ಟು, ಅದಕ್ಕೆ ಉಪ್ಪನ್ನು ಹಾಕಿದ ಬದನೆಕಾಯಿಯನ್ನು ತಿನ್ನುವುದರಿಂದ ನಮ್ಮ ಗಂಟಲಿನಲ್ಲಿ ತೊಂದರೆ ಕೊಡುವ ಅಧಿಕ ಕಫವನ್ನು ತೆಗೆಯಬಹುದು ಮತ್ತು ಉಸಿರಾಟ ಹಾಗು ಕೆಮ್ಮನ್ನು ಸಹ ಸುಧಾರಿಸಬಹುದು. ಇದು ಕಫ ತೆಗೆಯಲು ಬಳಸುವ ತುಂಬಾ ಪ್ರಾಚೀನ ವಿಧಾನವಾಗಿದೆ.

ನೆನಪಿಡಿ

ನೆನಪಿಡಿ

ಗರ್ಭಿಣಿಯರು ಮಾತ್ರ ಬದನೆಕಾಯಿಯನ್ನು ಅತಿಯಾಗಿ ತಿನ್ನಬಾರದು. ಯಾಕೆಂದರೆ ಇದರಿಂದ ದುಷ್ಪರಿಣಾಮ ಉಂಟಾಗಬಹುದು. ಬದನೆಕಾಯಿಯಲ್ಲಿ ಜನನದ ವೇಳೆ ಉಂಟಾಗುವ ತೊಂದರೆ, ಗರ್ಭದಲ್ಲಿ ಶಿಶುವಿನ ಬೆಳವಣಿಗೆ, ಗರ್ಭದಲ್ಲಿ ಕಾಣಿಸಿಕೊಳ್ಳುವ ಮಧುಮೇಹ ಮತ್ತು ಮಲಬದ್ಧತೆಗೆ ತುಂಬಾ ಪರಿಣಾಮಕಾರಿ. ಆದರೆ ಇದರಿಂದ ಕೆಲವೊಂದು ಅಡ್ಡಪರಿಣಾಮಗಳೂ ಇದೆ. ಬದನೆಕಾಯಿ ತಿನ್ನಬೇಕೆಂದು ನಿಮಗನಿಸಿದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಮಬದನೆಕಾಯಿಯಿಂದ ಆಗುವಂತಹ ಕೆಲವೊಂದು ಅಡ್ಡಪರಿಣಾಮಗಳನ್ನು ಇಲ್ಲಿ ನೀಡಲಾಗಿದೆ. ಬದನೆಕಾಯಿಯಲ್ಲಿರುವ ಪೈಥೋ ಹಾರ್ಮೋನು ಮಾಸಿಕ ಋತುವನ್ನು ಪ್ರೇರೇಪಿಸುತ್ತದೆ. ಇದರಿಂದ ಗರ್ಭಿಣಿಯರು ಅತಿಯಾಗಿ ಬದನೆಕಾಯಿ ತಿಂದರೆ ಗರ್ಭಪಾತವಾಗುವ ಸಂಭವವಿದೆ.

English summary

Amazing Health Benefits of Eggplant You May Have Not Heard

Eggplant, commonly known as brinjal, is a widely popular and a versatile vegetable used in a variety of cuisines. Brinjals are usually of two types - Asian Brinjals and Western Brinjals. Brinjals are very nutritious and today, we will be writing about the nutrition facts and health benefits of brinjal or eggplant.
X
Desktop Bottom Promotion