For Quick Alerts
ALLOW NOTIFICATIONS  
For Daily Alerts

ಸಾಂಕ್ರಾಮಿಕ ರೋಗ ದಡಾರದ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು

By Sushma Charhra
|

ದಡಾರ ಇಲ್ಲವೆ ರುಬೆಲ್ಲಾ ಕಾಯಿಲೆಯು ಮನುಷ್ಯನ ಶ್ವಾಸಕೋಸದಲ್ಲಾಗುವ ಸೋಂಕಿನಂತ ಕಾಯಿಲೆ. ಇದೊಂದು ರೀತಿ ಶ್ವಾಸಕೋಶಕ್ಕಾಗುವ ವೈರಲ್ ಇನ್ಫೆಕ್ಷನ್ ಎಂದು ಹೇಳಬಹುದು. ಇದು ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುತ್ತದೆ.

ಸೋಂಕಿನ ಸಿಂಬಳ ಮತ್ತು ಲಾಲಾರಸದಿಂದ ಅಂಟುರೋಗವಾಗಿ ಪರಿಣಮಿಸುತ್ತೆ. ದಡಾರ ಕಾಯಿಲೆಯಿಂದ ಸೋಂಕಿಗೆ ಒಳಗಾಗಿರುವ ವ್ಯಕ್ತಿಯು ಕೆಮ್ಮುವುದು ಮತ್ತು ಸೀನುವಾಗ ತಮ್ಮ ಸೋಂಕಿನ ಬ್ಯಾಕ್ಟೀರಿಯಾವನ್ನು ಗಾಳಿಯಲ್ಲಿ ಹರಡಿಸುತ್ತಾರೆ. ಹಾಗಾಗಿ ಈ ಬ್ಯಾಕ್ಟೀರಿಯಾವು ಒಬ್ಬರಿಂದ ಒಬ್ಬರಿಗೆ ಹರಡುತ್ತೆ ಮತ್ತು ಇದು ಭಯಾನಕ ಕಾಯಿಲೆಯಾಗಿ ಪರಿಣಮಿಸುತ್ತೆ.

ಅಷ್ಟೇ ಅಲ್ಲ, ಈ ವೈರಸ್ ನೆಲದಲ್ಲಿ ಮತ್ತು ಗಾಳಿಯಲ್ಲಿ ಹಲವು ದಿನಗಳ ಕಾಲ ಜೀವಂತವಾಗಿರುವ ಸಾಮರ್ಥ್ಯ ಹೊಂದಿದೆ. ಆ ಕಾರಣದಿಂದಾಗಿ ಸೋಂಕಿರುವ ವೈರಸ್ ನ ಬಳಿ ಯಾರೇ ಹೋದರೂ ಕೂಡ ಅದು ಅವರಿಗೆ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚು. ಇದು ಎಷ್ಟು ಭಯಾನಕ ಕಾಯಿಲೆಯೆಂದರೆ ಒಂದು ವೇಳೆ ಕಾಯಿಲೆ ಇರುವ ವ್ಯಕ್ತಿಯು ಬಳಸಿದ ಯಾವುದಾದರೂ ಪಾತ್ರೆಯನ್ನು ಮತ್ತೊಬ್ಬ ವ್ಯಕ್ತಿ ಬಳಸಿದರೂ ಕೂಡ ಈ ಕಾಯಿಲೆ ಅವರಿಗೆ ಅಂಟುವ ಸಾಧ್ಯತೆಗಳಿರುತ್ತೆ.

ದಡಾರದ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು

. ದಡಾರ ಕಾಯಿಲೆಯ ಚಿಹ್ನೆಗಳು ಮತ್ತು ತೊಡಕುಗಳು

ದಡಾರ ಕಾಯಿಲೆಯ ಚಿಹ್ನೆಗಳು ಈ ಕೆಳಗಿನಂತಿವೆ.

. ಜ್ವರ ಮತ್ತು ಕೆಮ್ಮು

.ಶೀತ

. ಒಣ ಕೆಮ್ಮು

. ಕಣ್ಣು ಊದಿಕೊಳ್ಳುವುದು ಮತ್ತು ನೋವು, ಕಣ್ಣಿನ ರೆಟಿನಾ ಭಾಗದಲ್ಲಿ ನೀರಿಳಿಯುವುದು

.ಫೋಟೋಫೋಬಿಯಾ ಅಥವಾ ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು

. ಸೀನುವುದು

.ಕೆಂಪು, ಮತ್ತು ಕಾಫಿ ಬಣ್ಣದ ರ್ಯಾಷಸ್

. ಮೈ ಕೈ ನೋವು

ಯಾರಿಗೆ ದಡಾರ ಕಾಯಿಲೆ ಇರುತ್ತೋ ಅವರಿಗೆ ಜ್ವರ ಬರಬಹುದು. ಸಣ್ಣ ಪ್ರಮಾಣದಿಂದ ಹಿಡಿದು ದೊಡ್ಡ ಮಟ್ಟದಲ್ಲೂ ಇದು ಇರಬಹುದು. ಒಮ್ಮೆ ಇಳಿಮುಖವಾಗುವುದು ಮತ್ತೆ ಜ್ವರ ಹೆಚ್ಚಾಗುವುದು ಆಗುವ ಸಾಧ್ಯತೆಗಳಿವೆ. ಪದೇ ಪದೇ ಜ್ವರ ಮರುಕಳಿಸುತ್ತಲೇ ಇರುತ್ತದೆ. ಎರಡು ಮೂರು ದಿನದಲ್ಲಿ ಚರ್ಮದಲ್ಲಿ ಕೆಂಪು ಇಲ್ಲವೇ ಕಾಫಿ ಬಣ್ಣದ ರ್ಯಾಷಸ್ ಗಳು ಕಾಣಿಸಿಕೊಳ್ಳಬಹುದು. ಇದು ಒಂದು ವಾರದ ವರೆಗೂ ಇರುವ ಸಾಧ್ಯತೆಗಳಿವೆ.

ಇದು ಕಿವಿ ಹಿಂಭಾಗದಲ್ಲಿ ಕಾಣಿಸಿಕೊಂಡು ನಂತರ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಹರಡುತ್ತದೆ.

. ಈ ಕಾಯಿಲೆಯ ತೊಡಕುಗಳು

ಕಾಯಿಲೆಯನ್ನು ಕಂಡುಹಿಡಿಯಲು ಇರುವ ತೊಡಕೆಂದರೆ ಚಿಹ್ನೆಗಳು ಕೆಲವರಿಗೆ ಸಣ್ಣ ಪ್ರಮಾಣದಲ್ಲೂ ಇರಬಹುದು ಕೆಲವರಿಗೆ ದೊಡ್ಡ ಪ್ರಮಾಣದಲ್ಲೂ ಇರಬಹುದು. ಈ ಕಾಯಿಲೆಯು ಯಾರ ಬಳಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತೋ ಅಂತವರಿಗೆ ಬೇಗನೆ ಹರಡುತ್ತೆ. ಉದಾಹರಣೆಗೆ HIV, AIDS, ಲುಕೇಮಿಯಾ, ಮತ್ತು ಯಾರಿಗೆ ವಿಟಮಿನ್ ಕೊರತೆ ಇರುತ್ತೋ ಅಂತವರು, ಸಣ್ಣ ಮಕ್ಕಳು,20 ವರ್ಷದ ಒಳಗಿನ ಅಡಲ್ಟ್ಸ್ ಗೆ ಬೇಗನೆ ಹರಡುವ ಸಾಧ್ಯತೆ ಇರುತ್ತೆ. ವಯಸ್ಸಾದವರಿಗಿಂತ ಹೆಚ್ಚಾಗಿ 5 ವರ್ಷದ ಒಳಗಿನ ಮಕ್ಕಳು ಈ ಕಾಯಿಲೆಗೆ ತುತ್ತಾಗುವುದು ಹೆಚ್ಚು.

. ಇಂಗ್ಲೆಂಡ್ ನ ಸಾಂಕ್ರಾಮಿಕ ರೋಗವಾಗಿರುವ ದಡಾರದ ಬಗ್ಗೆ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ತಜ್ಞರು ಇಂಗ್ಲೆಂಡ್ ಗೆ ಈ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಪೋಷಕರು ತಮ್ಮ ಮಕ್ಕಳಿಗೆ ಸರಿಯಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸದೇ, ಲಸಿಕೆ ಕೊಡಿಸದೆ ಇರುವುದರಿಂದಾಗಿ ಆಗುತ್ತಿರುವ ಕರಾಳ ಕಾಯಿಲೆಯ ಭೀಕರತೆಯನ್ನು ಇಂಗ್ಲೆಂಡ್ ನಾದ್ಯಂತ ಹರಡುವ ಕೆಲಸವನ್ನು ಇಲ್ಲಿನ ಆರೋಗ್ಯ ಅಧಿಕಾರಿಗಳೂ ಕೂಡ ಮಾಡುತ್ತಿದ್ದಾರೆ.

ಇಲ್ಲಿನ ಆರೋಗ್ಯ ಅಧಿಕಾರಿಗಳಿಗೂ ತಲೆನೋವಾಗಿದ್ದ ವಿಚಾರವೆಂದರೆ ಶಾಲೆಗೆ ಹೋದ ಮಕ್ಕಳಿಗೆ ದಡಾರ ಕಾಯಿಲೆಯು ಹರಡುತ್ತಿತ್ತು. ಇದನ್ನು ತಡೆಯುವುದು ಸವಾಲಿನ ಕೆಲಸವಾಗಿತ್ತು. ಹಾಗಾಗಿ ಇಲ್ಲಿನ ಪೋಷಕರಿಗೆ ಸರಿಯಾದ ಎಚ್ಚರಿಕೆಯನ್ನು ನೀಡಲಾಗಿತ್ತು. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಹೇಳಲಾಗಿತ್ತು.

MMR ಚುಚ್ಚುಮದ್ದನ್ನು ದಡಾರ ಕಾಯಿಲೆಯ ನಿಯಂತ್ರಣಕ್ಕಾಗಿ ನೀಡಲಾಗುತ್ತಿದ್ದರೂ ಕೂಡ ಅದರ ಬಗ್ಗೆ ಹಲವು ದೂರುಗಳು ಕೂಡ ಕೇಳಿಬರುತ್ತಿದೆ. ಈ ಚುಚ್ಚುಮದ್ದಿನ ಸೈಡ್ ಎಫೆಕ್ಟ್ ಗಳ ಬಗ್ಗೆ ದೂರುಗಳಿವೆ. ಈ ಚುಚ್ಚುಮದ್ದು ಆತ್ರೈಟೀಸ್,ಮಲರೋಗ, ಸ್ವಲೀನತೆ, ಕಿವುಡುತನ ಮತ್ತು ಕರುಳಿಗೆ ಸಂಬಂಧಿಸಿದ ಇತರೆ ಕಾಯಿಲೆಗಳಿಗೆ ಕಾರಣವಾಗುತ್ತೆ ಎಂದು ಹೇಳಲಾಗುತ್ತೆ.

ಆದರೆ, ಇದೇ ಭಯದ ಕಾರಣದಿಂದಾಗಿ , ಕಳೆದ 5 ವರ್ಷಗಳಿಂದ, 92 ಶೇಕಡಾ ಚುಚ್ಚುಮದ್ದುನ್ನು ಕೊಡಿಸುತ್ತಿದ್ದ ಪೋಷಕರ ಸಂಖ್ಯೆ ಶೇಕಡಾ 89 ಕ್ಕೆ ಇಳಿದಿದೆ. ಇದರ ಪರಿಣಾಮವಾಗಿ ಲಸಿಕೆ ಕೊಡಿಸದ ಪೋಷಕರ ಮಕ್ಕಳು ದಡಾರ ಕಾಯಿಲೆಗೆ ತುತ್ತಾಗಿದ್ದಾರೆ. ಇದು ಕಳೆದ ವರ್ಷ ಐರ್ಲೆಂಡ್ ದೇಶದಲ್ಲಿ ಕಂಡುಬಂದಿತ್ತು.

ಆದರೆ ಜಾಗೃತಿ ಕಾರ್ಯಕ್ರಮಗಳು ಸತತವಾಗಿ ನಡೆಯುತ್ತಲೇ ಇದೆ. ಆರೋಗ್ಯ ಇಲಾಖೆಯು ಚುಚ್ಚುಮದ್ದನ್ನು ಕಡ್ಡಾಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಕೊಡಿಸಲೇ ಬೇಕು ಎಂದು ಹೇಳಿದೆ.ಇನ್ನು ವೈದ್ಯರಿಗೂ ಕೂಡ ಈ ಬಗ್ಗೆ ಹೇಳಲಾಗಿದೆ.

ದಡಾರ ಚಿಕಿತ್ಸೆ

. ಇಂಗ್ಲೆಂಡ್ - ದಡಾರ ಕಾಯಿಲೆಯಿಂದ ಭಯಾನಕವಾಗಿ ಬಳಲಿದೆ.

ದಿನದಿಂದ ದಿನಕ್ಕೆ ಇಂಗ್ಲೆಂಡ್ ದಡಾರ ಕಾಯಿಲೆಯ ಲಕ್ಷಣಗಳು ಹಲವರಲ್ಲಿ ಕಂಡುಬಂದಿದೆ. ದಿನದಿಂದ ದಿನಕ್ಕೆ ಇದು ಹೆಚ್ಚಾಗುತ್ತಲೂ ಇದೆ. ಜನವರಿ 1 ರಿಂದ ಮೇ 9 ರ ವರೆಗೆ ಸುಮಾರು 440 ಮಂದಿ ಇಂಗ್ಲೆಂಡ್ ಜನರಲ್ಲಿ ಈ ಕಾಯಿಲೆ ಇರುವುದು ದೃಢಪಟ್ಟಿದೆ. 2017 ಕ್ಕೆ ಹೋಲಿಸಿದರೆ ಇದು ಅಧಿಕವಾಗಿದ್ದು, 267 ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಅದೇ 2016 ರಲ್ಲೂ 531 ಮಂದಿಯಲ್ಲಿ ಈ ಕಾಯಿಲೆ ಗುರುತಿಸಲ್ಪಟ್ಟಿತ್ತು.

Public Health England (PHE) ನ ಅಧಿಕಾರಗಳು ಹೇಳುವ ಪ್ರಕಾರ ಇಂಗ್ಲೆಂಡ್ ನಲ್ಲಿ ಈ ಕಾಯಿಲೆ ಅಧಿಕಗೊಳ್ಳಲು ಕಾರಣ ಯುರೋಪ್ ದೇಶಗಳಲ್ಲಿ ಸಮಸ್ಯೆ ಉದ್ಭವಿಸುತ್ತಿರುವುದು.ಹದಿಹರೆಯದವರಲ್ಲಿ ಮತ್ತು ಯುವಕರಲ್ಲೇ ಇದು ಹೆಚ್ಚಾಗಿ ಗುರುತಿಸಲ್ಪಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅವರು ಮಗುವಾಗಿದ್ದಾಗ MMR ಲಸಿಕೆಯನ್ನು ಹಾಕಿಸದೇ ಇರುವುದು.

ಯುರೇಪಿಯನ್ ದೇಶಗಳಲ್ಲಿ ಅತಿಯಾಗಿರುವ ಈ ಸಮಸ್ಯೆಯು ಇಂಗ್ಲೆಂಡ್ ಗೆ ಹರಡುತ್ತಿರುವುದರಿಂದಾಗಿ ಯಾರು ರುಮಾನಿಯಾ ಮತ್ತು ಇಂಗ್ಲೆಂಡ್ ಗೆ ಓಡಾಡುತ್ತಿರುತ್ತಾರೋ ಅವರು ಹೆಚ್ಚು ಜಾಗರೂಕರಾಗಿರಬೇಕು ಎಂಬ ಸಂದೇಶವನ್ನು ಇಲ್ಲಿನ ಅಧಿಕಾರಿಗಳು ನೀಡಿದ್ದಾರೆ.

ಯಾಕೆಂದರೆ ಈ ಎರಡು ದೇಶಗಳು ಒಂದಕ್ಕೊಂದು ಅಂಚಿನಲ್ಲಿರುವ ದೇಶಗಳು ಮತ್ತು ಯಾವಾಗಲೂ ಇಲ್ಲಿನ ಜನ ಅಲ್ಲಿಗೆ, ಅಲ್ಲಿನವರು ಇಲ್ಲಿಗೆ ಸಂಚರಿಸುತ್ತಲೇ ಇರುತ್ತಾರೆ. ಇಲ್ಲಿಗೆ ಸಂಚರಿಸುವ ಮುನ್ನ ಯಾರು MMR ಲಸಿಕೆ ಪಡೆದುಕೊಂಡಿರುವುದಿಲ್ಲವೋ ಅವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಇಂಗ್ಲೆಂಡ್ ನಲ್ಲಿ ಒಟ್ಟು ದಡಾರದ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೀಗಿದೆ.ಲಂಡನ್ ನಲ್ಲಿ 166,ಸೌತ್ ಈಸ್ಟ್ ನಲ್ಲಿ 86,ವೆಸ್ಟ್ ಮಿಡ್ ಲ್ಯಾಂಡ್ ನಲ್ಲಿ 78, ಸೌತ್ ವೆಸ್ಟ್ ನಲ್ಲಿ 42,ವೆಸ್ಟ್ ಯಾಕ್ ಶಯರ್ ನಲ್ಲಿ 37.

ಇಂಗ್ಲೆಂಡ್ ನಲ್ಲಿ ಹೀಗೆ ದಡಾರ ಕಾಯಿಲೆ ದೊಡ್ಡ ಸಮಸ್ಯೆಯಾಗಿರುವುದಕ್ಕೆ ಕಾರಣ ಸರಿಯಾದ ಸಮಯಕ್ಕೆ ಮಗುವಿಗೆ MMR ಲಸಿಕೆಯನ್ನು ಪೋಷಕರು ಹಾಕಿಸದೇ ಇರುವುದು. ಹಾಗಾಗಿ ಈ ನಿಟ್ಚಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. MMR ಲಸಿಕೆಯ ಅಡ್ಡಪರಿಣಾಮಗಳನ್ನು ಚಿಂತಿಸದೆ ಪ್ರತಿಯೊಬ್ಬ ಪೋಷಕರೂ ಕೂಡ ದಡಾರ ಲಸಿಕೆಯನ್ನು ಮಗುವಿಗೆ ನೀಡಲೇಬೇಕು.

English summary

All You Need To Know About Measles

All You Need To Know About Measles
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more