For Quick Alerts
ALLOW NOTIFICATIONS  
For Daily Alerts

ಪುರುಷರ ಗರ್ಭನಿರೋಧಕ ಮಾತ್ರೆ ಬಗ್ಗೆ ತಿಳಿಯಿರಿ

By Hemanth
|

ವಿಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಈಗಿನ ಕಾಲದಲ್ಲಿ ಮಹಿಳೆಯರಿಗೆ ಗರ್ಭ ನಿರೋಧಕಕ್ಕಾಗಿ ಹಲವಾರು ಮಾತ್ರೆಗಳು ಇರುವಂತೆ ಪುರುಷರಿಗೂ ಇಂತಹ ಮಾತ್ರೆಗಳನ್ನು ಕಂಡು ಹಿಡಿಯಲಾಗಿದೆ ಎಂದು ವೈದ್ಯಕೀಯ ವಿಜ್ಞಾನವು ತಿಳಿಸಿದೆ. ಮಹಿಳೆಯರ ಗರ್ಭನಿರೋಧಕ ಮಾತ್ರೆಗಳಲ್ಲಿ ಹಾರ್ಮೋನು, ಒಸ್ಟ್ರೋಜನ್ ಮತ್ತು ಪ್ರೋಗೆಸ್ಟ್ರೊನ್ ಇದೆ. ಇದರಿಂದ ಕೆಲವೊಮ್ಮೆ ಮಹಿಳೆಯರಲ್ಲಿ ತೂಕ ಹೆಚ್ಚಳ, ವಾಕರಿಕೆ ಮತ್ತು ಮನಸ್ಥಿತಿ ಬದಲಾವಣೆಯಂತಹ ಕೆಲವೊಂದು ಅಡ್ಡಪರಿಣಾಮಗಳು ಕೂಡ ಉಂಟಾಗುವುದು ಇದೆ. ಪುರುಷರಿಗೆ ಗರ್ಭನಿರೋಧಕವೆಂದರೆ ಅದು ಕಾಂಡೋಮ್. ಆದರೆ ಇದು ಶೇ.18ರಷ್ಟು ವಿಫಲವಾಗುವುದು ಹೆಚ್ಚು.

ಎಪೊಸ್ಸ್ ಎನ್ನುವ ಸಂಯುಕ್ತವು ವೀರ್ಯದ ಪ್ರೋಟೀನ್ ನ್ನು ಕಟ್ಟಿಹಾಕಿ, ಹಾರ್ಮೋನ್ ಗೆ ಯಾವುದೇ ತೊಂದರೆಯಾಗದಂತೆ ತೀವ್ರತೆ ಕಡಿಮೆ ಮಾಡುವುದು. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಎಪೊಸ್ಸ್ ನ್ನು ಪುರುಷರ ಗರ್ಭನಿರೋಧಕವಾಗಿ ಮಾಡಲಾಗುತ್ತಿದೆ. ಯೂನಿವರ್ಸಿಟಿ ಆಫ್ ನಾರ್ತ್ ಕರೊಲಿನಾ ಪ್ರಕಟಿಸಿರುವಂತಹ ಸಂಶೋಧನಾ ವರದಿಯಲ್ಲಿ ಇದನ್ನು ಹೇಳಲಾಗಿದೆ.

ಎಪೊಸ್ಸ್ ಎನ್ನುವ ಅಂಶವು ವೀರ್ಯವು ಈಜಾಡುವಂತಹ ಸಾಮರ್ಥ್ಯವನ್ನು ಕಡಿಮೆ ಮಾಡುವುದು. ಇದರಿಂದ ಫಲವತ್ತತೆ ಕುಂದುವುದು. ಪ್ರಸ್ತುತ ಕಾಂಡೋಮ್ ಬದಲಿಗೆ ಇರುವಂತಹ ಪುರುಷರ ಗರ್ಭನಿರೋಧಕವೆಂದರೆ ಅದು ಹಾರ್ಮೋನು ಔಷಧಿ. ಇದು ವೀರ್ಯದ ಉತ್ಪತ್ತಿ ಮೇಲೆ ಪರಿಣಾಮ ಬೀರುವುದು. ಆದರೆ ಇದು ಮಹಿಳೆಯರ ಗರ್ಭನಿರೋಧಕ ಮಾತ್ರೆಗಳಲ್ಲಿ ಇರುವಂತೆ ಪುರುಷರ ಹಾರ್ಮೋನು ಮೇಲೆ ಪರಿಣಾಮ ಬೀರುವುದು.

Contraceptive Pill

ಮಹಿಳೆಯರ ಗರ್ಭನಿರೋಧಕ ಮಾತ್ರೆಯು ಅಂಡೋತ್ಪತ್ತಿಯನ್ನು ತಡೆದು ಗರ್ಭ ನಿಲ್ಲದಂತೆ ನೋಡಿಕೊಳ್ಳುವುದು. ಹಾರ್ಮೋನು, ಒಸ್ಟ್ರೋಜನ್. ಪ್ರೋಗೆಸ್ಟ್ರೋನ್ ಅಥವಾ ಎರಡೂ ಈ ಮಾತ್ರೆಗಳಲ್ಲಿ ಇರುವುದು. ಈ ಮಾತ್ರೆಗಳು ಕಾಂಡೋಮ್ ತಡೆಯುವಂತೆ ಲೈಂಗಿಕ ರೋಗಗಳನ್ನು ತಡೆಯುವುದಿಲ್ಲ.

ಮಹಿಳೆಯರ ಗರ್ಭನಿರೋಧಕ ಮಾತ್ರೆಗಳಲ್ಲಿ ಕೆಲವೊಂದು ರೀತಿಯ ಅಡ್ಡಪರಿಣಾಮಗಳು ಇವೆ. ಇದರಲ್ಲಿ ಪ್ರಮುಖವೆಂದರೆ ವಾಖರಿಕೆ, ಸ್ತನ ಮೆತ್ತಗೆ ಆಗುವುದು, ತಲೆನೋವು, ಮೈಗ್ರೇನ್, ತೂಕ ಹೆಚ್ಚಳ, ಮನಸ್ಥಿತಿ ಬದಲಾವಣೆ, ಋತುಚಕ್ರ ಸರಿಯಾಗಿ ಆಗದಿರುವುದು, ಕಾಮಾಸಕ್ತಿ ಕುಂಠಿತ, ಯೋನಿಯಿಂದ ಸ್ರವಿಸುವಿಕೆ, ಕನ್ನಡಕ ಬಳಸುವವರಲ್ಲಿ ದೃಷ್ಟಿ ಮೇಲೆ ಪರಿಣಾಮ ಇತ್ಯಾದಿಗಳು. ಅಡ್ಡಪರಿಣಾಮಗಳ ಬಗ್ಗೆ ತುಂಬಾ ವಿವರವಾಗಿ ತಿಳಿದುಕೊಳ್ಳುವ....

ಪುರುಷರಿಗೂ ಸಂತಾನ ನಿಯಂತ್ರಣ ಮಾತ್ರೆ ಬಂದಿದೆಯಂತೆ!!

ಇಂಟರ್ಮೆಸ್ಟ್ರಾಲ್ ಸ್ಪಾಟಿಂಗ್
ನಿರೀಕ್ಷಿತ ಋತುಚಕ್ರದ ಮಧ್ಯೆ ಕೆಲವೊಮ್ಮೆ ಹಠಾತ್ ಆಗಿ ರಕ್ತಸ್ರಾವವಾಗುವುದು. ಗರ್ಭನಿರೋಧಕ ಮಾತ್ರೆ ತೆಗೆದುಕೊಂಡ ಮೂರು ತಿಂಗಳಲ್ಲಿ ಇಂತಹ ಸಮಸ್ಯೆಯು ಕಾಣಿಸಿಕೊಳ್ಳುವುದು. ಯಾವುದೇ ತಪ್ಪು ಮಾಡದೆ ನೀವು ಮಾತ್ರೆ ಸೇವನೆ ಮಾಡಿದ್ದರೆ ಆಗ ಇಂತಹ ಸಮಸ್ಯೆ ಕಂಡುಬರುವುದು. ಮಾತ್ರೆ ಸೇವನೆ ಮಾಡುತ್ತಿರುವಾಗ 5 ಅಥವಾ ಅದಕ್ಕಿಂತ ಹೆಚ್ಚು ದಿನ ರಕ್ತಸ್ರಾವವಾದರೆ ಅಥವಾ 3 ಅಥವಾ ಅದಕ್ಕಿಂತ ಹೆಚ್ಚು ದಿನ ಅತಿಯಾಗಿ ರಕ್ತಸ್ರಾವವಾದರೆ ಆಗ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ.

ಸ್ತನ ಮೆತ್ತಗಾಗುವುದು
ಗರ್ಭನಿರೋಧಕ ಮಾತ್ರೆಗಳ ಸೇವನೆಯಿಂದಾಗಿ ಮಹಿಳೆಯರಲ್ಲಿ ಸ್ತನ ಮೆತ್ತಗಾಗಬಹುದು ಅಥವಾ ಜೋತು ಬೀಳಬಹುದು. ಮಾತ್ರೆ ಸೇವನೆ ಮಾಡಲು ಆರಂಭಿಸಿದ ಕೆಲವು ವಾರಗಳಲ್ಲಿ ಇದು ಕಂಡುಬರುವುದು. ಸ್ತನದಲ್ಲಿ ಯಾವುದೇ ಗಡ್ಡೆ ಅಥವಾ ಅನಿಯಮಿತ ನೋವು ಅಥವಾ ಸ್ತನ ಮೆತ್ತಗಾಗಿ ನೋವು ಕಂಡುಬಂದರೆ ಆಗ ನೀವು ವೈದ್ಯರನ್ನು ಭೇಟಿಯಾಗಬೇಕು. ಕೆಫಿನ್, ಉಪ್ಪು ಸೇವನೆ ಕಡಿಮೆ ಮಾಡಿಕೊಂಡು ಸ್ತನಕ್ಕೆ ಹೊಂದಿಕೊಳ್ಳುವಂತ ಬ್ರಾ ಧರಿಸಿದರೆ ಸ್ತನ ಜೋತುಬೀಳುವುದನ್ನು ತಪ್ಪಿಸಬಹುದು.

ವಾಕರಿಕೆ
ಮಹಿಳೆಯು ಮೊದಲ ಮಾತ್ರೆ ತೆಗೆದುಕೊಂಡ ವೇಳೆ ಆಕೆಗೆ ವಾಖರಿಕೆ ಬರುವುದು. ಇದು ಕ್ರಮೇಣ ಕಡಿಮೆಯಾಗುವುದು. ಮಾತ್ರೆಯನ್ನು ಆಹಾರ ಸೇವಿಸಿದ ಬಳಿ ಅಥವಾ ರಾತ್ರಿ ಮಲಗುವ ಮೊದಲು ಸೇವನೆ ಮಾಡಿ. ವಾಕರಿಕೆ ತುಂಬಾ ದೀರ್ಘ ಸಮಯ, ಅಂದರೆ ಮೂರು ತಿಂಗಳಿಗೂ ಹೆಚ್ಚಿದ್ದರೆ ನೀವು ವೈದ್ಯರನ್ನು ಭೇಟಿಯಾಗಿ.

ತಲೆನೋವು ಮತ್ತು ಮೈಗ್ರೇನ್
ಗರ್ಭನಿರೋಧಕ ಮಾತ್ರೆಗಳಲ್ಲಿ ಇರುವಂತಹ ಹಾರ್ಮೋನುಗಳು ತಲೆನೋವು ಮತ್ತು ಮೈಗ್ರೇನ್ ಉಂಟು ಮಾಡುವುದು. ಒಂದೊಂದು ರೀತಿಯ ಮಾತ್ರೆಗಳಲ್ಲಿ ಹಾರ್ಮೋನು ಪ್ರಮಾಣವು ಹೆಚ್ಚುಕಡಿಮೆ ಇರಬಹುದು. ಇದರಿಂದ ಬೇರೆ ಬೇರೆ ಸಮಸ್ಯೆ ಬರಬಹುದು. ಕಡಿಮೆ ಹಾರ್ಮೋನು ಇರುವಂತಹ ಮಾತ್ರೆ ಸೇವಿಸಿದರೆ ತಲೆನೋವು ಕಡಿಮೆ ಮಾಡಬಹುದು. ಋತುಚಕ್ರದ ವೇಳೆ ಹಾರ್ಮೋನು ಬದಲಾವಣೆಯಿಂದಾಗಿಯೂ ಕೆಲವು ಮಹಿಳೆಯರಲ್ಲಿ ತಲೆನೋವು ಉಂಟಾಗಬಹುದು. ಮೈಗ್ರೇನ್ ನಿರಂತರವಾಗಿದ್ದರೆ ವೈದ್ಯರನ್ನು ಭೇಟಿಯಾಗಿ.

ತೂಕ ಹೆಚ್ಚಳ
ಹಾರ್ಮೋನು ಒಳಗೊಂಡಿರುವಂತಹ ಗರ್ಭನಿರೋಧಕ ಮಾತ್ರೆಗಳು ತೂಕ ಹೆಚ್ಚಳ ಮಾಡುವುದು. ಒಸ್ಟ್ರೋಜನ್ ಅಧಿಕವಾಗಿರುವಂತಹ ಮಾತ್ರೆಗಳಿಂದ ಕೂಡ ತೂಕ ಹೆಚ್ಚಳವಾಗಬಹುದು. ಯಾಕೆಂದರೆ ಇದರಿಂದ ಹಸಿವು ಹೆಚ್ಚಳ ಮತ್ತು ದೇಹದಲ್ಲಿ ನೀರು ಸಂಗ್ರಹವಾಗುವುದು. ಇತ್ತೀಚೆಗೆ ನಡೆಸಿರುವ ವರದಿಯೊಂದರ ಪ್ರಕಾರ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡು ನಾಲ್ಕರಲ್ಲಿ ಒಬ್ಬಳು ಮಹಿಳೆ ಶೇ.5ರಷ್ಟು ತೂಕ ಏರಿಸಿಕೊಂಡಿದ್ದಾಳೆ.

ಋತುಚಕ್ರ ಆಗದಿರುವುದು
ಮಾತ್ರೆಗಳ ಸೇವನೆ ಸರಿಯಾಗಿ ಮಾಡುತ್ತಲಿದ್ದರೆ ಆಗ ಮಹಿಳೆಯು ಋತುಚಕ್ರ ಕಳೆದುಕೊಳ್ಳುವಂತಹ ಸಾಧ್ಯತೆಯು ಇರುವುದು. ಇದಕ್ಕೆ ಪ್ರಮುಖ ಕಾರಣವೆಂದರೆ ಅನಾರೋಗ್ಯ, ಒತ್ತಡ, ಪ್ರಯಾಣ, ಹಾರ್ಮೋನು ಮತ್ತು ಥೈರಾಯ್ಡ್ ಅಸಾಮಾನ್ಯತೆ. ಮಾತ್ರೆಗಳು ವಿವಿಧ ರೀತಿಯ ಹಾರ್ಮೊನುಗಳನ್ನು ನಿಮ್ಮ ದೇಹದೊಳಗೆ ಕಳುಹಿಸುವುದು. ಇದರಿಂದ ಋತುಚಕ್ರದ ಮೇಲೆ ಪರಿಣಾಮವಾಗುವುದು. ಋತುಚಕ್ರ ಕಳೆದುಕೊಳ್ಳುತ್ತಿದ್ದರೆ ಆಥವಾ ಋತುಚಕ್ರ ಲಘುವಾಗಿದ್ದರೆ ಗರ್ಭಧಾರಣೆಯ ಸಾಧ್ಯತೆಯು ಇದೆ.

ಮನಸ್ಥಿತಿ ಬದಲಾವಣೆ
ಗರ್ಭಧಾರಣೆಯ ಮಾತ್ರೆ ಸೇವನೆ ಮಾಡುವುದರಿಂದ ಇದು ಮಹಿಳೆಯರ ಮನಸ್ಥಿತಿ ಮೇಲೆ ಪರಿಣಾಮ ಬೀರುವುದು. ಇದರಿಂದ ಖಿನ್ನತೆ ಅಥವಾ ಇತರ ಭಾವನಾತ್ಮಕ ಬದಲಾವಣೆಗಳು ಕಂಡುಬರಬಹುದು. ಕೆಲವು ಮಹಿಳೆಯರಲ್ಲಿ ಖಿನ್ನತೆ ಅಥವಾ ಕಿರಕಿರಿಯಾಗುವ ಮನಸ್ಥಿತಿ ಉಂಟಾಗಬಹುದು. ಗರ್ಭನಿರೋಧಕ ತೆಗೆದುಕೊಳ್ಳುವಂತಹ ಮಹಿಳೆಯರಲ್ಲಿ ಖಿನ್ನತೆ ಮತ್ತು ಮನಸ್ಥಿತಿ ಬದಲಾವಣೆ ಲಕ್ಷಣಗಳು ಕಂಡುಬರುವುದು.

ಯೋಗಿಸ್ರವಿಸುವಿಕೆ
ಮಾತ್ರೆ ಸೇವನೆ ಮಾಡುವುದರಿಂದ ಯೋನಿಯಲ್ಲಿ ಸ್ರವಿಸುವಿಕೆ ಕಂಡುಬರಬಹುದು. ಯೋನಿಯ ಲೂಬ್ರಿಕೆಂಟ್ ಕಡಿಮೆ ಅಥವಾ ಹೆಚ್ಚಾಗಬಹುದು ಅಥವಾ ಸ್ರವಿಸುವಿಕೆ ಪ್ರಮಾಣದಲ್ಲಿ ಬದಲಾವಣೆಯಾಗಬಹುದು. ಇದು ಹೀಗೆ ಉಳಿದರೆ ನೀವು ವೈದ್ಯರ ನೆರವು ಪಡೆಯಿರಿ. ಯೋನಿ ಸ್ರವಿಸುವಿಕೆ ಅಷ್ಟೊಂದು ಅಪಾಯಕಾರಿಯಲ್ಲ. ಆದರೆ ಪ್ರಮಾಣ, ಬಣ್ಣ ಮತ್ತು ವಾಸನೆ ಸೋಂಕಿನ ಲಕ್ಷಣವಾಗಿದೆ. ಕಡಿಮೆ ಪ್ರಮಾಣದಲ್ಲಿ ಸ್ರವಿಸುವಿಕೆ ಆಗುತ್ತಲಿದ್ದರೆ ಇದು ಬ್ಯಾಕ್ಟೀರಿಯಾ ಅಥವಾ ಕಿಣ್ವದ ಸೋಂಕಾಗಿರಬಹುದು.

ದೃಷ್ಟಿ ಬದಲಾವಣೆ
ಗರ್ಭನಿರೋಧಕ ಮಾತ್ರೆಗಳಲ್ಲಿ ಇರುವಂತಹ ಹಾರ್ಮೋನು ಕಣ್ಣಿನಲ್ಲಿರುವ ಕಾರ್ನಿಯಾವನ್ನು ದಪ್ಪ ಮಾಡುವಂತಹ ಗುಣ ಹೊಂದಿದೆ. ಖಿನ್ನತೆ ಹಾಗೂ ಆತಂಕ ಕಡಿಮೆ ಮಾಡುವಂತಹ ಮಾತ್ರೆಗಳು ಕೂಡ ದೃಷ್ಟಿ ಮಂದವಾಗಲು ಕಾರಣವಾಗಿದೆ. ಗರ್ಭಧಾರಣೆಯ ಬಲಿಷ್ಠ ಹಾರ್ಮೊನುಗಳು ಕಿರಿಕಿರಿ, ಒಣ ಹಾಗೂ ಕಣ್ಣಿನಲ್ಲಿ ನೀರು ಬರುವ ಸಮಸ್ಯೆ ಉಂಟು ಮಾಡಬಹುದು. ನಿಮಗೆ ಈ ಲೇಖನವು ಇಷ್ಟವಾಗಿದ್ದರೆ ಇತರೊಂದಿಗೆ ಕೂಡ ಇದನ್ನು ಹಂಚಿಕೊಳ್ಳಿ.

English summary

All You Need To Know About The New Male Contraceptive Pill

New research has come into light, which states that scientists have come one step closer to creating a male contraceptive pill. Earlier there were only female contraceptive pills which contained a mix of the hormones oestrogen and progesterone, which can cause weight gain, nausea and erratic moods. Here's all you need to know about the male contraceptive pills: Currently, the male contraceptive pills are largely limited to condoms, which have the chances to fail up to 18 percent of the time, if it's worn incorrectly.
X
Desktop Bottom Promotion