For Quick Alerts
ALLOW NOTIFICATIONS  
For Daily Alerts

ಇದೆಲ್ಲಾ ಖತರ್ನಾಕ್ 'ಚರ್ಮದ ಕ್ಯಾನ್ಸರ್' ರೋಗದ ಲಕ್ಷಣಗಳು! ನಿರ್ಲಕ್ಷಿಸಬೇಡಿ

|

ತ್ವಚೆಯ ವಿಷಯ ಬಂದಾಗ ನಾವೆಲ್ಲಾ ಈ ಅಂಗವನ್ನು ಆರೋಗ್ಯಕ್ಕಿಂತಲೂ ಸೌಂದರ್ಯದ ಕಾಳಜಿಯ ಪ್ರತೀಕವಾಗಿಯೇ ಹೆಚ್ಚು ಪರಿಗಣಿಸುತ್ತೇವೆ. ಉದಾಹಣೆಗೆ ನಾವು ಚೆನ್ನಾಗಿ ಕಾಣುವಂತಾಗಬೇಕು ಎಂದು ನಿಯಮಿತವಾದ ಚರ್ಮದ ಆರೈಕೆ, ಕಲೆಯಿಲ್ಲದ ತ್ವಚೆಗಾಗಿ ಬಳಸುವ ಸೌಂದರ್ಯ ಉತ್ಪನ್ನಗಳು ಹಾಗೂ ಕಾಂತಿಯುಕ್ತ ತ್ವಚೆಗಾಗಿ ಅನುಸರಿಸುವ ಸೌಂದರ್ಯವರ್ಧಕಗಳು ಇದಕ್ಕೆ ಸಾಕ್ಷಿಯಾಗಿವೆ.

ತ್ವಚೆಯ ಆರೈಕೆಗಾಗಿ ನಾವು ತ್ವಚೆಗೆ ತೇವಕಾರಕಗಳನ್ನು ಒದಗಿಸುವುದು, ಸತ್ತ ಜೀವಕೋಶಗಳನ್ನು ನಿವಾರಿಸುವುದು, ಆಗಾಗ ತೊಳೆದುಕೊಳ್ಳುತ್ತಿರುವುದು, ಉತ್ತಮ ಗುಣಮಟ್ಟದ ಪ್ರಸಾದನಗಳನ್ನು ಉಪಯೋಗಿಸುವುದು ಮೊದಲಾದವುಗಳನ್ನು ಅನುಸರಿಸುತ್ತೇವೆ. ಜೊತೆಗೇ ಇವೆಲ್ಲಾ ಪ್ರಯತ್ನಗಳನ್ನು ನೀರಿನಲ್ಲಿ ಹೋಮ ಮಾಡಿದಂತೆ ತ್ವಚೆಯ ಮೇಲೆ ಮೇಕಪ್ ಧರಿಸಿ ಕೃತಕ ಬಣ್ಣದ ಮುಖವಾಡ ಧರಿಸುತ್ತೇವೆ.

for cancer

ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರು ಅನುಸರಿಸುವ ಕ್ರಿಯೆಗಳಲ್ಲಿ ತ್ವಚೆಯ ಆರೋಗ್ಯದ ಕಾಳಜಿ ಕಡಿಮೆ ಹಾಗೂ ಚೆನ್ನಾಗಿ ಕಾಣುವಂತಾಗಬೇಕು ಎಂಬ ಹಂಬಲವೇ ಹೆಚ್ಚಿರುತ್ತದೆ. ಆದರೆ ದೇಹದ ಉಳಿದ ಅಂಗಗಳಿಗೆ ಮಾರಕವಾಗಬಹುದಾದ ಕ್ರಿಯೆಗಳನ್ನು ಮಾತ್ರ ನಾವು ಮಾಡದೇ ಚರ್ಮಕ್ಕೆ ಮಾತ್ರ ದ್ರೋಹ ಬಗೆಯುತ್ತೇವೆ. ನಮ್ಮ ಚರ್ಮವೂ ಒಂದು ಅಗತ್ಯವಾದ ಅಂಗವೇ ಆಗಿದೆ.

ಕ್ಯಾನ್ಸರ್ ರೋಗ ನಿಯಂತ್ರಿಸುವ ಪವರ್ ಇಂತಹ ಆಹಾರಗಳಲ್ಲಿದೆ...

ವಾಸ್ತವವಾಗಿ ಚರ್ಮ ನಮ್ಮ ದೇಹದ ಅತಿ ದೊಡ್ಡ ಹಾಗೂ ಅತಿ ವಿಸ್ತಾರವಾದ ಅಂಗವಾಗಿದೆ. ದೇಹಕ್ಕೆ ಎರಗುವ ಇತರ ಕಾಯಿಲೆಗಳಂತೆಯೇ ಚರ್ಮಕ್ಕೂ ಕಾಯಿಲೆ ಬರಬಹುದು. ಇದರಲ್ಲಿ ಚರ್ಮದ ಕ್ಯಾನ್ಸರ್ ಅತ್ಯಂತ ಘೋರವಾದ ಕಾಯಿಲೆಯಾಗಿದೆ. ಇದರಲ್ಲಿ ಮೊದಲಿಗೆ ಚರ್ಮದ ಜೀವಕೋಶಗಳು ಪ್ರಭಾವಿತವಾಗುತ್ತವೆ ಹಾಗೂ ಇದು ಒಳಗೇ ಬೆಳೆಯುತ್ತಾ ಇದರ ಅಡಿಯಲ್ಲಿರುವ ಪ್ರಮುಖವಾದ ಅಂಗದ ಮೇಲೂ ಪ್ರಭಾವ ಬೀರಿ ಕ್ಯಾನ್ಸರ್ ಹರಡಿಸುತ್ತದೆ. ಚರ್ಮದ ಕ್ಯಾನ್ಸರ್ ಗೆ ಕೆಲವೊಮ್ಮೆ ನಮಗೆ ಅರಿವಿಲ್ಲದೇ ನಮ್ಮ ಕೆಲವು ಅಭ್ಯಾಸಗಳೇ ಕಾರಣವಾಗಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ:

ಬಿಸಿಲಿನಲ್ಲಿ ಸನ್ ಸ್ಕ್ರೀನ್ ಬಳಸದೇ ಇರುವುದು

ಬಿಸಿಲಿನಲ್ಲಿ ಸನ್ ಸ್ಕ್ರೀನ್ ಬಳಸದೇ ಇರುವುದು

ಬಿಸಿಲಿನ ಝಳ ನೇರವಾಗಿ ಚರ್ಮದ ಮೇಲೆ ಬಿದ್ದಾಗ ಇದರ ಪ್ರಭಾವದಿಂದ ಕ್ಯಾನ್ಸರ್ ಎದುರಾಗಬಹುದು. ಈ ವಿಷಯವನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿದ್ದು ಭಾರತದ ಬಹುತೇಕ ಜನರು ನಿತ್ಯವೂ ಒಡ್ಡುವ ಸೂರ್ಯನ ಕಿರಣಗಳಿಗೆ ಯಾವುದೇ ಬಗೆಯ ರಕ್ಷಣೆಯನ್ನು ಪಡೆಯುವುದಿಲ್ಲ ಎಂಬ ಮಾಹಿತಿಯನ್ನು ಒದಗಿಸಿದೆ. ಚರ್ಮದ ಕ್ಯಾನ್ಸರ್ ಗೆ ಸೂರ್ಯನ ಬೆಳಕಿನಲ್ಲಿರುವ ಅತಿನೇರಳೆ ಕಿರಣಗಳೇ ಪ್ರಮುಖವಾದ ಕಾರಣವಾಗಿದೆ. ಒಂದು ವೇಳೆ ಸತತವಾಗಿ ಸೂರ್ಯನ ಈ ಹಾನಿಕಾರಕ ಕಿರಣಗಳಿಗೆ ಒಡ್ಡಿಕೊಂಡರೆ ಅಲ್ಪಾವಧಿಯಲ್ಲಿಯೇ ಕ್ಯಾನ್ಸರ್ ಆವರಿಸಬಹುದು. ಆದ್ದರಿಂದ ನಿತ್ಯವೂ ಸೂರ್ಯನ ಪ್ರಖರ ಕಿರಣಗಳಿಗೆ ತ್ವಚೆ ಒಡ್ಡಿಕೊಳ್ಳಬೇಕಾದ ಸಂದರ್ಭ ಎದುರಾದರೆ ಸನ್ ಸ್ಕ್ರೀನ್ ಕಡ್ಡಾಯವಾಗಿ ಉಪಯೋಗಿಸಬೇಕು. ಒಂದು ವೇಳೆ ಹೆಚ್ಚಿನ ವೇಳೆ ನೆರಳಿನಲ್ಲಿಯೇ ಇದ್ದು ಕೊಂಚ ಹೊತ್ತಿಗಾಗಿ ಬಿಸಿಲಿಗೆ ಒಡ್ಡಿಕೊಳ್ಳಬೇಕಾದರೂ ಸ್ಕ್ರೀನ್ ಕಡ್ಡಾಯವಾಗಿ ಉಪಯೋಗಿಸಬೇಕು

ಅಪೌಷ್ಟಿಕ ಆಹಾರ

ಅಪೌಷ್ಟಿಕ ಆಹಾರ

ಒಂದು ವೇಳೆ ನಿಮ್ಮ ನಿತ್ಯದ ಆಹಾರದಲ್ಲಿ ಹಣ್ಣು, ತರಕಾರಿಗಳಂತಹ ಪ್ಪೌಷ್ಟಿಕ ಆಹಾರವಿಲ್ಲದೇ ಇದ್ದರೆ ತ್ವಚೆಯ ಜೀವಕೋಶಗಳು ದುರ್ಬಲವಾಗುತ್ತವೆ ಹಾಗೂ ಹಾನಿಕಾರಕ ಕ್ಯಾನ್ಸರ್ ಪೀಡಿತ ಜೀವಕೋಶಗಳ ಆಕ್ರಮಣಕ್ಕೆ ಸುಲಭವಾಗಿ ತುತ್ತಾಗುತ್ತವೆ. ಬಳಿಕ ಈ ಜೀವಕೋಶಗಳು ದ್ವಿಗುಣಗೊಳ್ಳುತ್ತಾ ವೇಗವಾಗಿ ದೊಡ್ಡ ಪ್ರಮಾಣದಲ್ಲಿ ವೃದ್ದಿಗೊಳ್ಳುತ್ತದೆ. ಹಣ್ಣು ಮತ್ತು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ಚರ್ಮದ ಕ್ಯಾನ್ಸರ್ ಸಹಿತ ಇನ್ನೂ ಹಲವು ಬಗೆಯ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ. ಆದ್ದರಿಂದ ನಿಮ್ಮ ನಿತ್ಯದ ಆಹಾರದಲ್ಲಿ ಸಾಕಷ್ಟು ಹಣ್ಣು ಮತ್ತು ತರಕಾರಿಗಳಿರುವಂತೆ ನೋಡಿಕೊಳ್ಳಿ.

ಅತಿ ಹೆಚ್ಚು ಸಕ್ಕರೆಯ ಸೇವನೆ

ಅತಿ ಹೆಚ್ಚು ಸಕ್ಕರೆಯ ಸೇವನೆ

ಒಂದು ವೇಳೆ ನಿಮಗೆ ಸಿಹಿ ಅತಿಯೇ ಎನಿಸುವಷ್ಟು ಇಷ್ಟವಾಗಿದ್ದರೆ ಹಾಗೂ ಸಿಹಿತಿಂಡಿ, ಚಾಕಲೇಟು, ಲಘು ಪಾನೀಯಗಳು ಮೊದಲಾದವು ಪಂಚಪ್ರಾಣವಾಗಿದ್ದರೆ ನಿಮಗೆ ಚರ್ಮದ ಕ್ಯಾನ್ಸರ್ ಆವರಿಸುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಈ ವಿಷಯವನ್ನು ಕೆಲವು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದ್ದು ಅತಿ ಹೆಚ್ಚಿನ ಪ್ರಮಾಣದ ಸಕ್ಕರೆಯ ಸೇವನೆಯಿಂದ ಚರ್ಮದ ಕ್ಯಾನ್ಸರ್ ಸಹಿತ ಇನ್ನೂ ಹಲವು ಮಾರಕ ರೋಗಗಳು ಎದುರಾಗಬಹುದು. ಸ್ಥೂಲಕಾಯ, ಮಧುಮೇಹ, ದಂತಕುಳಿ, ಮೂತ್ರಪಿಂಡಗಳ ಕಾಯಿಲೆಗಳು ಇದರಲ್ಲಿ ಪ್ರಮುಖವಾಗಿವೆ.

ಹೊರಾಂಗಣದಲ್ಲಿ ಚರ್ಮದ ಸುರಕ್ಷತೆಯ ಬಗ್ಗೆ ಅವಗಣನೆ

ಹೊರಾಂಗಣದಲ್ಲಿ ಚರ್ಮದ ಸುರಕ್ಷತೆಯ ಬಗ್ಗೆ ಅವಗಣನೆ

ಈಗಾಗಲೇ ನೀವು ತಿಳಿದಿರುವಂತೆ ನಮ್ಮ ಪರಿಸರದ ಗಾಳಿ ಕಲುಷಿತಗೊಂಡಿದೆ. ಹೊಗೆ, ಧೂಳು, ರಾಸಾಯನಿಕಗಳು ಗಾಳಿಯಲ್ಲಿ ತುಂಬಿಕೊಂಡಿದ್ದು ಇವುಗಳು ಸಹಾ ಚರ್ಮಕ್ಕೆ ಹಾನಿಕಾರಕವಾಗಿರಬಹುದು. ಭಾರತದಂತಹ ದೇಶದಲ್ಲಿ ಇಂಧನದ ದಹನ ಸತತವಾಗಿದ್ದು ಈ ಗಾಳಿಯನ್ನು ಸೇವಿಸುವ ಯಾರಿಗೂ ತೊಂದರೆ ಎದುರಾಗಬಹುದು. ಆದ್ದರಿಂದ ಹೊರಗೆ ಹೋಗುವ ಸಮಯದಲ್ಲಿ ಕೈಗವಸು, ಕಾಲುಚೀಲ, ಮುಖಕ್ಕೆ ಮಾಸ್ಕ್, ಕುತ್ತಿಗೆಗೆ ಸ್ಕಾರ್ಫ್ ಮೊದಲಾದವುಗಳನ್ನು ಧರಿಸಿಯೇ ಹೋಗಬೇಕು. ಅಷ್ಟೇ ಅಲ್ಲ, ಬಿಸಿಲಿನ ಝಳ ನೇರವಾಗಿ ಬೀಳದಂತೆ ಛತ್ರಿ, ತಲೆಯನ್ನು ಹೊದ್ದುಕೊಳ್ಳುವುದು, ಕೈಗಳು ಬಿಸಿಲಿಗೆ ಒಡ್ಡದಂತೆ ನೋಡಿಕೊಳ್ಳುವುದು, ಅತಿನೇರಳೆ ಕಿರಣ ನಿರೋಧಕ ತಂಪು ಕನ್ನಡಕ ಧರಿಸುವುದು ಮೊದಲಾದ ಕ್ರಮಗಳಿಂದ ಸಾಕಷ್ಟು ರಕ್ಷಣೆ ಪಡೆಯಬಹುದು.

ಧೂಮಪಾನ

ಧೂಮಪಾನ

ಧೂಮಪಾನದಿಂದ ಶ್ವಾಸಕೋಶದ ಕ್ಯಾನ್ಸರ್ ಜೊತೆಗೇ ಚರ್ಮದ ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಹೆಚ್ಚು. ಈ ಮಾಹಿತಿ ಹೆಚ್ಚಿನವರಿಗೆ ಅಚ್ಚರಿ ತರಿಸುತ್ತದೆ. ಏಕೆಂದರೆ ಧೂಮಪಾನ ಶ್ವಾಸಕೋಶದೊಳಕ್ಕೆ ಹಾನಿ ಮಾಡಬೇಕೇ ವಿನಃ ಹೊರಗಿನ ಚರ್ಮಕ್ಕಲ್ಲ! ಆದರೆ ನಾವೆಲ್ಲರೂ ನಂಬಿಕೊಂಡಿರುವ ಈ ಮಾಹಿತಿ ತಪ್ಪು ಎಂದು ತಿಳಿಸಲು ಹಲವಾರು ವೈಜ್ಞಾನಿಕ ಆಧಾರಗಳಿವೆ. ಧೂಮಪಾನದಿಂದ ಎದುರಾಗುವ ಹತ್ತು ಹಲವು ತೊಂದರೆಗಳಲ್ಲಿ ಚರ್ಮದ ಕ್ಯಾನ್ಸರ್ ಸಹಾ ಒಂದು. ಇದನ್ನು ಕೇಳಿದ ಮೇಲಾದರೂ ಧೂಮಪಾನ ತ್ಯಜಿಸುವತ್ತ ಚಿತ್ತ ಹರಿಸುವವನೇ ಜಾಣ.

ಅತಿ ಹೆಚ್ಚು ಮೊಬೈಲ್ ಫೋನ್ ಬಳಕೆ

ಅತಿ ಹೆಚ್ಚು ಮೊಬೈಲ್ ಫೋನ್ ಬಳಕೆ

ಇಂದು ಜಾತಿ ಮತ ಬೇಧ ವಯಸ್ಸು ಲಿಂಗ ಎಲ್ಲವನ್ನೂ ಮೀರಿ ಒಂದು ವಿಷಯದ ಎಲ್ಲರಲ್ಲಿಯೂ ಸಮಾನವಾಗಿದ್ದರೆ ಅದು ಮೊಬೈಲ್ ಫೋನ್ ಬಳಕೆಯಾಗಿದೆ. ನಮ್ಮ ಉಸಿರಿನಷ್ಟೇ ನಮಗೆ ಇಂದು ಮೊಬೈಲ್ ಫೋನ್ ಅಗತ್ಯವಾಗಿದೆ. ಮೊಬೈಲ್ ಫೋನುಗಳ ವಿಕಿರಣಗಳ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಇದನ್ನು ದೇಹಕ್ಕೆ ಎಷ್ಟು ಹತ್ತಿರ ಇಟ್ಟುಕೊಳ್ಳುತ್ತೇವೆಯೋ ಅಷ್ಟೂ ಚರ್ಮದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚು ಎಂದು ಕಂಡುಕೊಳ್ಳಲಾಗಿದೆ. ಇದರ ಕಾರ್ಯನಿರ್ವಹಣೆಗೆ ಅಗತ್ಯವಾದ ರೇಡಿಯೋ ಅಲೆಗಳು ಚರ್ಮದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಹುಟ್ಟು ಹಾಕುವ ಕ್ಷಮತೆ ಹೊಂದಿವೆ!

ಅತಿಹೆಚ್ಚು ಕಾಲ ಕುಳಿತಿರುವುದು

ಅತಿಹೆಚ್ಚು ಕಾಲ ಕುಳಿತಿರುವುದು

ಇನ್ನೊಂದು ಅಚ್ಚರಿಯ ಮಾಹಿತಿ ಎಂದರೆ ಅತಿ ಹೆಚ್ಚು ಕಾಲ ಕುಳಿತೇ ಇರುವ ವ್ಯಕ್ತಿಗಳೂ ಚರ್ಮದ ಕ್ಯಾನ್ಸರ್ ಗೆ ಸುಲಭವಾಗಿ ತುತ್ತಾಗುತ್ತಾರೆ. ಇಂದು ಕಂಫ್ಯೂಟರ್ ಮೂಲಕ ಒದಗಿರುವ ಉದ್ಯೋಗಾವಕಾಶಗಳು ಬೇಡಬೇಡವೆಂದರೂ ಹೆಚ್ಚು ಹೊತ್ತು ಕುಳಿತುಕೊಳ್ಳಲೇಬೇಕಾಗುತ್ತದೆ. ಈ ಅಭ್ಯಾಸದಿಂದ ಚರ್ಮದ ಸೆಳೆತ ಕಡಿಮೆಯಾಗುತ್ತದೆ ಹಾಗೂ ಈ ಮೂಲಕ ಚರ್ಮದ ಜೀವಕೋಶಗಳು ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚುತ್ತದೆ.

ಚರ್ಮವೈದ್ಯರನ್ನು ಭೇಟಿಯಾಗುವುದನ್ನು ಮುಂದೂಡುವುದು

ಚರ್ಮವೈದ್ಯರನ್ನು ಭೇಟಿಯಾಗುವುದನ್ನು ಮುಂದೂಡುವುದು

ನಮಗೆಲ್ಲಾ ಎಲ್ಲಿಯವರೆಗೆ ವೈದ್ಯರನ್ನು ಕಾಣುವ ಅನಿವಾರ್ಯತೆ ಎದುರಾಗುವುದಿಲ್ಲವೋ ಅಲ್ಲಿಯವರೆಗೂ ವೈದ್ಯರ ಭೇಟಿಯನ್ನು ಮುಂದೂಡುವುದು ಒಂದು ಅಭ್ಯಾಸವಾಗಿಬಿಟ್ಟಿದೆ. ನಡುವಯಸ್ಸು ದಾಟಿದ ಬಳಿಕ ಎಲ್ಲಾ ಅಂಗಗಳು ಸರಿಯಾರಿ ಕಾರ್ಯನಿರ್ವಹಿಸುತ್ತಿವೆ ಎಂದು ಪರಿಶೀಲಿಸಿಕೊಳ್ಳಲು ಆಗಾಗ ತಪಾಸಣೆಗೆ ಒಳಗಾಗುತ್ತಲೇ ಇರಬೇಕು. ಅಂತೆಯೇ ತ್ವಚೆಯ ತೊಂದರೆಗಳೂ ಇಲ್ಲವೆಂದು ಖಚಿತಪಡಿಸಿಕೊಳ್ಳಲು ಚರ್ಮವೈದ್ಯರಲ್ಲಿ ನಿಯಮಿತವಾಗಿ ತಪಾಸಣೆಗೊಳಗಾಗಬೇಕು. ಸಾಮಾನ್ಯವಾಗಿ ನಮ್ಮ ಗಮನಕ್ಕೆ ಬರದ, ಗಮನಕ್ಕೆ ಬಂದರೂ ಅರ್ಥವಾಗದ ಚರ್ಮದ ಸೂಚನೆಗಳನ್ನು ಚರ್ಮವೈದ್ಯರು ತಕ್ಷಣವೇ ಗುರುತುಹಿಡಿಯಬಲ್ಲರು ಹಾಗೂ ಒಂದು ವೇಳೆ ಇದು ಚರ್ಮದ ಕ್ಯಾನ್ಸರ್ ಆಗಿದ್ದರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಉಲ್ಬಣಗೊಳ್ಳದಿರುವಂತೆ ಸೂಕ್ತ ಕ್ರಮ ಕೈಗೊಳ್ಳಬಲ್ಲರು.

 ಅತಿ ಹೆಚ್ಚು ಮೇಕಪ್ ಬಳಕೆ

ಅತಿ ಹೆಚ್ಚು ಮೇಕಪ್ ಬಳಕೆ

ನಿತ್ಯವೂ ಮೇಕಪ್ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವ ವ್ಯಕ್ತಿಗಳಿಗೆ ಇದು ಆ ಸಮಯದಲ್ಲಿ ತಾನು ಚೆನ್ನಾಗಿ ಕಾಣಿಸಿಕೊಳ್ಳುತ್ತಿದ್ದೇವೆಂಬ ಭಾವನೆ ಆಪಾರ ಆತ್ಮವಿಶ್ವಾಸ ಮೂಡಿಸಿದರೂ ಕೆಲವು ಅಧ್ಯಯನಗಳಲಿ ಕಂಡುಕೊಂಡ ಪ್ರಕಾರ ಮೇಕಪ್ ಪ್ರಸಾಧನಗಳನ್ನು ನಿತ್ಯವೂ ಬಳಸುವ ಮೂಲಕ ಚರ್ಮದ ಕ್ಯಾನ್ಸರ್ ಗೆ ಪ್ರಚೋದನೆ ದೊರಕುತ್ತದೆ. ಕೆಲವು ಸಂಸ್ಥೆಗಳ ಮೇಕಪ್ ಸಾಧನಗಳಲ್ಲಿ ಕೆಲವಾರು ರಾಸಾಯನಿಕಗಳಿದ್ದು ಇವು ಕೆಲವರಿಗೆ ಅಲರ್ಜಿಕಾರಕವಾಗಿರಬಹುದು ಅಥವಾ ಚರ್ಮ ಕ್ಯಾನ್ಸರ್‌ಗೆ ನಿಧಾನವಾಗಿ ಆಹ್ವಾನವನ್ನೂ ನೀಡುತ್ತಿರಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಲಿಂಕ್ ಅನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

ಸೈಲೆಂಟಾಗಿ ಕಾಡುವ ಭಯಾನಕ ಚರ್ಮದ ಕ್ಯಾನ್ಸರ್‌ನ ಲಕ್ಷಣಗಳು

English summary

9 Dangerous Habits That Cause Skin Cancer

When it comes to the skin, most of us regard it from a beauty care point of view rather than the health part of it, right? For example, we take a lot of effort in following a regular skin care routine, to keep the external part of our skin spotless and great looking. We exfoliate, moisturise, wash our skin with the products best suited for our skin, and we even apply makeup to make it look all the more appealing! . Skin cancer is one of the deadliest types of cancers, which can affect the skin cells and can eventually affect the other internal organs too. So, here are a few dangerous habits which could increase the risk of skin cancer!
X
Desktop Bottom Promotion