For Quick Alerts
ALLOW NOTIFICATIONS  
For Daily Alerts

ಈ ಒಂಬತ್ತು ಆಹಾರಗಳು ಕಿಡ್ನಿ ಆರೋಗ್ಯಕ್ಕೆ ಬಹಳ ಒಳ್ಳೆಯದು...

|

ಯಾವಾಗ ನಿಮ್ಮ ಉಸಿರನ್ನು ನಿಮ್ಮಿಂದ ಕಸಿದುಕೊಳ್ಳಲಾಗುವುದಿಲ್ಲವೋ, ಅಲ್ಲಿಯವರೆಗೆ ಆ ಉಸಿರಿನ ಬೆಲೆಯನ್ನು ಅರಿಯಲಾರಿರಿ. ಮೂತ್ರಪಿಂಡಗಳ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ಏಕೆ? ಮೂತ್ರಪಿಂಡಗಳು ಕೆಲಸ ನಿಲ್ಲಿಸಿದರೆ ಒಂದೆರಡು ದಿನಗಳಲ್ಲಿಯೇ ನಮ್ಮ ದೇಹ ಕಲ್ಮಶಗಳಿಂದ ತುಂಬಿ ಇದರ ವಿಷಕಾರಿ ಪರಿಣಾಮವನ್ನು ತಡೆಯಲಾರದೆ ಸಾವು ಸಂಭವಿಸುತ್ತದೆ.

ಒಂದು ವೇಳೆ ಸಾಕಷ್ಟು ನೀರು ಕುಡಿಯದೇ ಇದ್ದರೆ ಅಥವಾ ಈಗಾಗಲೇ ಅಲ್ಪಪ್ರಮಾಣದ ಮೂತ್ರಪಿಂಡದ ಕಾಯಿಲೆಗೆ ತುತ್ತಾಗಿದ್ದರೆ ನಿಮ್ಮ ಮೂತ್ರಪಿಂಡಗಳ ಕ್ಷಮತೆ ಕಡಿಮೆಯಾಗುತ್ತಾ ಸಾಗಿರಬಹುದು. ಹಾಗಾಗಿ ನಿಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ಉತ್ತಮಗೊಳಿಸಲು ಈ ಆಹಾರಗಳನ್ನು ಸೇವಿಸುವ ಮೂಲಕ ಮತ್ತೆ ಮೂತ್ರಪಿಂಡಗಳು ಹಿಂದಿನ ಆರೋಗ್ಯವನ್ನು ಪಡೆಯಬಹುದು. ಇಂದಿನಿಂದಲೇ ಈ ಆಹಾರಗಳನ್ನು ನಿತ್ಯದ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಿ...

ಕಲ್ಲಂಗಡಿ

ಕಲ್ಲಂಗಡಿ

ಕಲ್ಲಂಗಡಿ ಹಣ್ಣಿನಲ್ಲಿ 91% ರಷ್ಟು ಅಪ್ಪಟ ನೀರೇ ಇದೆ. ಉಳಿದಂತೆ ಆರೋಗ್ಯಕರ, ಕರಗದ ನಾರು ಹಾಗೂ ಹಲವಾರು ಪೋಷಕಾಂಶಗಳಿವೆ. ಒಂದು ವೇಳೆ ಕಾರಣಾಂತರಗಳಿಂದ ಸಾಕಷ್ಟು ನೀರನ್ನು ಸೇವಿಸಲು ಸಾಧ್ಯವಾಗದೇ ಇದ್ದರೆ ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಇದರಿಂದ ನಿಮ್ಮ ಮೂತ್ರಪಿಂಡಗಳಿಗೆ ಗರಿಷ್ಟ ಪ್ರಯೋಜನ ಲಭಿಸುತ್ತದೆ.

ಹೂಕೋಸು

ಹೂಕೋಸು

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ತಮ್ಮ ಆಹಾರದಲ್ಲಿ ಸೋಡಿಯಂ, ಪೊಟ್ಯಾಶಿಯಂ ಹಾಗೂ ಗಂಧಕದ ಪ್ರಮಾಣವನ್ನು ಕಡಿಮೆಗೊಳಿಸಲು ಸಲಹೆ ಮಾಡಲಾಗುತ್ತದೆ. ಏಕೆಂದರೆ ಈ ಖನಿಜಗಳು ಮೂತ್ರಪಿಂಡಗಳ ಕಾಯಿಲೆಯನ್ನು ಉಲ್ಬಣಿಸುತ್ತವೆ. ಹೂಕೋಸಿನಲ್ಲಿ ಹಲವಾರು ಪೋಷಕಾಂಶಗಳಿವೆ ಹಾಗೂ ಈ ಖನಿಜಗಳು ಅತ್ಯಲ್ಪ ಪ್ರಮಾಣದಲ್ಲಿವೆ. ನಿಮ್ಮ ಆಹಾರದಲ್ಲಿ ಆಲುಗಡ್ಡೆಯನ್ನು ಬಳಸುವಲ್ಲೆಲ್ಲಾ ಹೂಕೋಸನ್ನು ಬಳಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸಬಹುದು.

ಬ್ಲೂಬೆರಿಗಳು

ಬ್ಲೂಬೆರಿಗಳು

ಬ್ಲೂಬೆರಿಗಳಲ್ಲಿ ಅತಿ ಕಡಿಮೆ ಸೋಡಿಯಂ, ಪೊಟ್ಯಾಶಿಯಂ ಹಾಗೂ ಗಂಧಕಗಳಿವೆ. ಆದರೆ ಇದರಲ್ಲಿ ಆಂಥೋಸೈಯಾನಿನ್ ಎಂಬ ಸಂಯುಕ್ತಗಳು ಹೆಚ್ಚಿನ ಪ್ರಮಾಣದಲ್ಲಿವೆ ಹಾಗೂ ಇದರಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಆದ್ದರಿಂದ ಈ ಹಣ್ಣುಗಳನ್ನು ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕೇವಲ ಮೂತ್ರಪಿಂಡಗಳು ಮಾತ್ರವಲ್ಲ, ದೇಹದ ಎಲ್ಲಾ ಪ್ರಮುಖ ಅಂಗಗಳ ಆರೋಗ್ಯ ವೃದ್ಧಿಸುತ್ತದೆ

ಸೌತೆಕಾಯಿ

ಸೌತೆಕಾಯಿ

ಈ ತರಕಾರಿಯಲ್ಲಿಯೂ ಗರಿಷ್ಟ ಮಟ್ಟದ ನೀರಿದೆ, ಅಂದರೆ ಬರೋಬ್ಬರಿ 96%ರಷ್ಟು. ಇದೇ ಕಾರಣಕ್ಕೆ ಸೌತೆಕಾಯಿಯನ್ನು ಹೆಚ್ಚಿನ ಎಲ್ಲಾ ಸಾಲಾಡ್ ಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಸೌತೆಕಾಯಿಯ ಸೇವನೆಯಿಂದ ಮೂತ್ರಪಿಂಡಗಳ ಆರೋಗ್ಯ ಉತ್ತಮಗೊಳ್ಳುತ್ತಾ ಹೋಗುತ್ತದೆ.

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ

ಒಂದು ವೇಳೆ ನಿಮಗೆ ಮೂತ್ರಪಿಂಡದ ಕಾಯಿಲೆ ಇದ್ದು ಮೊಟ್ಟೆ ನಿಮ್ಮ ಇಷ್ಟದ ಆಹಾರವಾಗಿದ್ದರೆ ನೀವು ಮೊಟ್ಟೆಯ ಹಳದಿ ಭಾಗವನ್ನು ತ್ಯಜಿಸಿ ಕೇವಲ ಬಿಳಿಭಾಗವನ್ನು ಮಾತ್ರವೇ ಸೇವಿಸಬೇಕು. ಏಕೆಂದರೆ ಮೊಟ್ಟೆಯ ಹಳದಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಗಂಧಕವಿರುತ್ತದೆ ಹಾಗೂ ಬಿಳಿಭಾಗದಲ್ಲಿ ಅತ್ಯಂತ ಕಡಿಮೆ ಇರುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಮೂತ್ರಪಿಂಡಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಪ್ಪಿನ ಸೇವನೆ ನಿಷಿದ್ಧವಾದುದರಿಂದ ಇವರಿಗೆ ಉಪ್ಪಿಲ್ಲದ ಆಹಾರವೇ ಗತಿಯಾಗಿರುತ್ತದೆ. ಇವರಿಗೆ ಉಪ್ಪಿನ ಬದಲು ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳುವ ಮೂಲಕ ರುಚಿಯನ್ನು ಕಡಿಮೆ ಮಾಡದೇ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಈರುಳ್ಳಿ

ಈರುಳ್ಳಿ

ಬೆಳ್ಳುಳ್ಳಿಯಂತೆಯೇ ಈರುಳ್ಳಿಯೂ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಪ್ಪಿನ ಬದಲಿಗೆ ಸೇವಿಸಬಹುದಾದ ಆಹಾರವಾಗಿದೆ. ಅಲ್ಲದೇ ನೀರುಳ್ಳಿಯಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳು, ವಿಟಮಿನ್ ಸಿ ಹಾಗೂ ಮ್ಯಾಂಗನೀಸ್ ಉತ್ತಮ ಪ್ರಮಾಣದಲ್ಲಿದ್ದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಮೂಲಂಗಿ

ಮೂಲಂಗಿ

ಗರಿಮುರಿಯಾದ ಈ ತರಕಾರಿಯಲ್ಲಿ ಆಂಟಿ ಆಕ್ಸಿಡೆಂಟುಗಳು ಹಾಗೂ ಪೋಷಕಾಂಶಗಳು ಹೆಚ್ಚಾಗಿರುತ್ತವೆ ಹಾಗೂ ಪೊಟ್ಯಾಶಿಯಂ, ಗಂಧಕ ಅತಿ ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣಕ್ಕೆ ಈ ಆಹಾರ ಮೂತ್ರಪಿಂಡಗಳಿಗೆ ಸೂಕ್ತವಾಆಹಾರವಾಗಿದೆ. ಮೂಲಂಗಿ ಹಸಿಯಾಗಿ ಸೇವಿಸಲು ನವಿರು ಖಾರವಾಗಿದ್ದು ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿರುವವರಿಗೆ ನೀಡುವ ಉಪ್ಪಿಲ್ಲದ ಆಹಾರದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾಗಿದೆ.

ಕ್ರ್ಯಾನ್ಬೆರಿ

ಕ್ರ್ಯಾನ್ಬೆರಿ

ಈ ಹಣ್ಣುಗಳಲ್ಲಿ ಪ್ರೋ ಆಂಥೋಸಯಾನಿನ್ ಎಂಬ ಫೈಟೋನ್ಯೂಟ್ರಿಯೆಂಟ್ ಮೂತ್ರಕೋಶ ಹಾಗೂ ಮೂತ್ರನಾಳಗಳ ಒಳಭಾಗದಲ್ಲಿ ಬ್ಯಾಕ್ಟೀರಿಯಾಗಳಿಂದ ಎದುರಾಗುವ ಸೋಂಕಿನಿಂದ ರಕ್ಷಿಸುತ್ತದೆ. ಮೂತ್ರಪಿಂಡದ ಕಾಯಿಲೆಗಳಿದ್ದವರಿಗೆ ಈ ಸೋಂಕು ಆವರಿಸುವ ಸಾಧ್ಯತೆ ಅತಿ ಹೆಚ್ಚಾಗಿರುವ ಕಾರಣ ಈ ಹಣ್ಣುಗಳನ್ನು ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಸೋಂಕು ಎದುರಾಗದಂತೆ ನೋಡಿಕೊಳ್ಳಬಹುದು.

English summary

9 Best Foods For Healthy Kidneys

Your kidneys are vital because without them your body would become a cesspool of toxic wastes and would wither and die soon. So here are the 9 best foods for healthy kidneys that you should add to your diet if you tend to drink too little water or are already suffering from kidney disease.
X
Desktop Bottom Promotion