For Quick Alerts
ALLOW NOTIFICATIONS  
For Daily Alerts

ಸಂಧಿವಾತ ಬರಬಾರದೆಂದಿದ್ದರೆ ಇಂತಹ ಆಹಾರಗಳನ್ನು ಸೇವಿಸಬೇಡಿ

By Hemanth
|

ದೇಹಕ್ಕೆ ಮುಪ್ಪು ಆವರಿಸುತ್ತಾ ಬಂದಾಗ ಹಲವಾರು ರೀತಿಯ ಕಾಯಿಲೆಗಳು ಆವರಿಸಿಕೊಳ್ಳುವುದು. ಇದರಿಂದಾಗಿ ದೇಹವು ಹಿಂದಿನಂತೆ ಕೆಲಸ ಮಾಡಲು ವಿಫಲವಾಗುತ್ತದೆ. ವ್ಯಕ್ತಿಯೊಬ್ಬನ ಚಟುವಟಿಕೆಗಳು ಕೂಡ ಕಡಿಮೆಯಾಗುವುದು. ಹದಿಹರೆಯದಲ್ಲಿ ದೇಹದಲ್ಲಿ ತುಂಬಾ ಶಕ್ತಿಯಿದ್ದಾಗ ಕಾಯಿಲೆಗಳು ಬೇಗನೆ ಮಾಯವಾಗುತ್ತಿದ್ದವು. ಆದರೆ ವಯಸ್ಸಾಗುತ್ತಾ ಬಂದಂತೆ ಅಂದರೆ 50ರ ಬಳಿಕ ಹಲವಾರು ರೀತಿಯ ಕಾಯಿಲೆಗಳು ಮನುಷ್ಯನನ್ನು ಕಾಡಲು ಆರಂಭವಾಗುವುದು. ಇದರಲ್ಲಿ ನಿಶ್ಯಕ್ತಿ, ಗಂಟುನೋವು, ಮಹಿಳೆಯರಲ್ಲಿ ಮುಟ್ಟು ನಿಲ್ಲುವಿಕೆ, ಅಧಿಕ ರಕ್ತದೊತ್ತಡ, ಸಂಧಿವಾತ, ಮಧುಮೇಹ, ಹೃದಯದ ಕಾಯಿಲೆಗಳು, ಅಲ್ಝೆಮರ್ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ವಯಸ್ಸಾಗುತ್ತಾ ಇರುವಂತೆ ಕಾಯಿಲೆಗಳು ಬರುವ ಕಾರಣ ಈ ಸಮಯವು ಜೀವನದ ಕಠಿಣ ಸಮಯದಲ್ಲಿ ಒಂದಾಗಿರುವುದು. ಆದರೆ ವಯಸ್ಸಿಗೆ ಸಂಬಂಧಿಸಿದಂತಹ ಕಾಯಿಲೆಗಳನ್ನು ತಡೆಯಲು ನಮ್ಮಿಂದಲೂ ಆಗದು. ಆದರೆ ಹದಿಹರೆಯದಲ್ಲಿ ಆರೋಗ್ಯಕಾರಿ ಜೀವನಶೈಲಿ ಪಾಲಿಸಿಕೊಂಡು ಹೋದರೆ ಮುಂದೆ ವಯಸ್ಸಾಗುವಾಗ ಕಾಯಿಲೆಗಳು ದೇಹಕ್ಕೆ ಹೆಚ್ಚಾಗಿ ಭಾದಿಸದು.

ಆರೋಗ್ಯ ಟಿಪ್ಸ್: ಸೆಕ್ಸ್‌ನಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆಯಂತೆ!

ವಯಸ್ಸಾಗುವ ವೇಳೆ ಕಾಡುವಂತಹ ಸಂಧಿವಾತವನ್ನು ನಿವಾರಣೆ ಮಾಡಲು ಹದಿಹರೆಯದ ವೇಳೆ ಕೆಲವೊಂದು ರೀತಿಯ ಆಹಾರ ಕಡೆಗಣಿಸಬೇಕು. ಇದನ್ನು ಇಂದೇ ಪಾಲಿಸಿದರೆ ನಿಮಗೆ ಮುಂದೆ ಸಂಧಿವಾತ ಬರದಂತೆ ತಡೆಯಬಹುದು. ಇದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಸವಿವರವಾಗಿ ಹೇಳಿಕೊಡಲಿದೆ....

ಸಂಧಿವಾತ ಎಂದರೇನು?

ಸಂಧಿವಾತ ಎಂದರೇನು?

ಸಂಧಿವಾತವೆಂದರೆ ನಮ್ಮ ದೇಹದಲ್ಲಿನ ಸ್ನಾಯುಗಳ ಪರಿಸ್ಥಿತಿ. ಗಂಟು, ಬೆನ್ನು, ಮಣಿಗಂಟು, ಬೆರಳುಗಳು ಇತ್ಯಾದಿಗಳಿಗೆ ಉರಿಯೂತ ಉಂಟಾಗುವುದು ಮಾತ್ರವಲ್ಲದೆ ನೋವು ಬಂದು ಚಲನೆಗೆ ಕಷ್ಟವಾಗುವುದು. ಈ ಪರಿಸ್ಥಿತಿಯು ಸಾಮಾನ್ಯವಾಗಿ 60 ದಾಟಿದ ಬಳಿಕ ಕಂಡುಬರುವುದು. ಸಂಧಿವಾತ ತಡೆಯಲು ನೀವು ಕಡೆಗಣಿಸಬೇಕಾದ ಕೆಲವು ಆಹಾರಗಳು.

ಕರಿದ ಮಾಂಸ

ಕರಿದ ಮಾಂಸ

ಕರಿದ ಆಹಾರಗಳು ತುಂಬಾ ರುಚಿಯಾಗಿರುವುದು. ಅದರಲ್ಲೂ ಚಿಪ್ಸ್, ಫ್ರೈಸ್, ಸಮೋಸ, ಕರಿದ ಕೋಳಿ ಇತ್ಯಾದಿ ತುಂಬಾ ರುಚಿಕರವಾಗಿರುವುದು. ಆದರೆ ಕರಿದಿರುವ ಆಹಾರ, ಅದರಲ್ಲೂ ಕರಿದ ಮಾಂಸ ಸೇವನೆ ಮಾಡಿದರೆ ಅದರಿಂದ ತೂಕ ಹೆಚ್ಚಳವಾಗುವುದು ಮತ್ತು ಅಧಿಕ ಕೊಲೆಸ್ಟ್ರಾಲ್ ನಿಂದ ಕಾಯಿಲೆಗಳು ಬರುವುದು. ಇದು ಸಂಧಿವಾತದ ಅಪಾಯ ವೃದ್ಧಿಸುವುದು. ಮಾಂಸದಲ್ಲಿ ಇರುವಂತಹ ಅನಾರೋಗ್ಯಕಾರಿ ಕೊಬ್ಬು ಗಂಟುಗಳ ಮೇಲೆ ಪರಿಣಾಮ ಬೀರುವುದು.

ಅಂಟಿನ ಪದಾರ್ಥಗಳು

ಅಂಟಿನ ಪದಾರ್ಥಗಳು

ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಅಂಟಿನ ಪದಾರ್ಥಗಳು ಇಲ್ಲದೆ ಇರುವಂತಹ ಆಹಾರ ಸೇವನೆ ಮಾಡುವರು. ಅಂಟು ಪದಾರ್ಥಗಳು ಯಾವುದೆಂದರೆ ಬ್ರೆಡ್, ಚಪಾತಿ, ಬಿಸ್ಕಟ್ ಇತ್ಯಾದಿಗಳು. ಅಂಟು ಪದಾರ್ಥಗಳು ಮಾನವ ದೇಹಕ್ಕೆ ವಿಷವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಜೀರ್ಣಕ್ರಿಯೆ ಸಮಸ್ಯೆಗಳು, ಚರ್ಮದ ಅಲರ್ಜಿ ಮತ್ತು ಸಂಧಿವಾತ ಸಮಸ್ಯೆಗಳು ವಯಸ್ಸಾಗುತ್ತಾ ಇರುವಂತೆ ಕಾಡುವುದು.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳಲ್ಲಿ ಮೊಸರು ಮತ್ತು ಹಾಲನ್ನು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಒಂದು ಹಂತದ ತನಕ ಆರೋಗ್ಯಕಾರಿ. ಆದರೆ ದಿನಿನಿತ್ಯ ಇದರ ಸೇವನೆ ಮಾಡಿದರೆ ಅದರಿಂದ ಸಂಧಿವಾತದ ಅಪಾಯವಿದೆ. ಇದು ನಿಮಗೆ ಅಚ್ಚರಿ ಮೂಡಿಸಬಹುದು. ಆದರೆ ಹಾಲಿನ ಉತ್ಪನ್ನಗಳಲ್ಲಿ ಇರುವಂತಹ ಪ್ರೋಟೀನ್ ಗಂಟುಗಳ ಸುತ್ತಲಿನ ಸ್ನಾಯುಗಳಲ್ಲಿ ಕಿರಿಕಿರಿ ಮತ್ತು ಉರಿಯೂತ ಉಂಟು ಮಾಡುವುದು. ಇದರಿಂದಾಗಿ ಸಂಧಿವಾತ ಬರುವುದು. ಸಂಧಿವಾತ ಬರದಂತೆ ತಡೆಯಲು ಇದರ ಸೇವನೆ ಮಿತವಾಗಿರಲಿ.

ಜೋಳದ ಎಣ್ಣೆ

ಜೋಳದ ಎಣ್ಣೆ

ಇಂದಿನ ದಿನಗಳಲ್ಲಿ ಹೆಚ್ಚಿನ ಆಹಾರವನ್ನು ಜೋಳದ ಎಣ್ಣೆ ಬಳಸಿಕೊಂಡು ತಯಾರಿಸಲಾಗುತ್ತದೆ. ಇದರಲ್ಲಿ ಮಾಂಸ ಹಾಗೂ ತರಕಾರಿ ಪದಾರ್ಥಗಳನ್ನು ಕರಿಯಲಾಗುತ್ತದೆ. ಜೋಳದ ಎಣ್ಣೆಯು ತಿಂಡಿಯ ವಿನ್ಯಾಸವನ್ನು ಉತ್ತಮವಾಗಿಡುವುದು ಎನ್ನಲಾಗುತ್ತದೆ. ಆದರೆ ಜೋಳದ ಎಣ್ಣೆಯಲ್ಲಿ ಒಮೆಗಾ-6 ಕೊಬ್ಬನಾಮ್ಲವಿದೆ. ಇದು ಮಾನವ ದೇಹಕ್ಕೆ ಒಳ್ಳೆಯದಲ್ಲ. ಈ ಕೊಬ್ಬಿನಾಮ್ಲವುದ ಗಂಟುಗಳ ಸುತ್ತಲು ಉರಿಯೂತ ಉಂಟುಮಾಡುವುದು.

ಸಂಸ್ಕರಿತ ಆಹಾರಗಳು

ಸಂಸ್ಕರಿತ ಆಹಾರಗಳು

ಸಂಸ್ಕರಿತ ಆಹಾರಗಳು ನಮ್ಮ ದೇಹಕ್ಕೆ ಎಷ್ಟು ಮಾರಕವೆಂದು ನಾವು ತಿಳಿಯುತ್ತಲೇ ಇದ್ದೇವೆ. ತಯಾರಿಸಿಟ್ಟಿರುವ ಆಹಾರ, ಸಂಸ್ಕರಿತ ಫಿಜ್ಜಾ, ಡಬ್ಬದಲ್ಲಿರುವ ಟೊಮೆಟೋ, ಉಪ್ಪಿನಕಾಯಿ ಇತ್ಯಾದಿಗಳಿಂದ ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬೊಜ್ಜು ಬರುವುದು. ಇದು ವಯಸ್ಸಾಗುತ್ತಾ ಇರುವಂತೆ ಸಂಧಿವಾತಕ್ಕೆ ಕಾರಣವಾಗುವುದು. ಈ ಆಹಾರಗಳು ಗಂಟುಗಳ ಸುತ್ತಲು ಉರಿಯೂತ ಉಂಟು ಮಾಡುವುದು.

ಬದನೆಕಾಯಿ

ಬದನೆಕಾಯಿ

ತರಕಾರಿಗಳ ರಾಜನೆಂದು ಕರೆಯಲ್ಪಡುವ ಬದನೆಕಾಯಿಯಲ್ಲಿ ಅತ್ಯಧಿಕ ಪೋಷಕಾಂಶಗಳಿಗೆ ಮತ್ತು ಇದು ಆರೋಗ್ಯಕ್ಕೂ ಒಳ್ಳೆಯದು. ಆದರೆ ಸಂಧಿವಾತದಂತಹ ಸಮಸ್ಯೆ ಬಂದಾಗ ಈ ತರಕಾರಿ ತುಂಬಾ ಕೆಟ್ಟದು. ಬದನೆಯು ಉರಿಯೂತ ಉಂಟು ಮಾಡುವಂತಹ ತರಕಾರಿಯಾಗಿರುವ ಕಾರಣ ನಿಯಮಿತವಾಗಿ ಇದರ ಸೇವನೆ ಸಂಧಿವಾತ ಉಂಟು ಮಾಡುವುದು.

ಸಕ್ಕರೆ ಅಧಿಕವಿರುವ ಆಹಾರಗಳು

ಸಕ್ಕರೆ ಅಧಿಕವಿರುವ ಆಹಾರಗಳು

ಸಿಹಿ, ಚಾಕಲೇಟ್, ಮಿಲ್ಕ್ ಶೇಕ್, ತಂಪುಪಾನೀಯಗಳು, ಹಣ್ಣಿನ ಜ್ಯೂಸ್ ಇತ್ಯಾದಿಗಳಲ್ಲಿ ಅಧಿಕ ಸಕ್ಕರೆ ಅಂಶವಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಬೊಜ್ಜು, ಮಧುಮೇಹ ಮತ್ತು ಹಲ್ಲಿನಲ್ಲಿ ಹುಳುಕು ಕಾಣಿಸಬಹುದು. ಹೆಚ್ಚಿನವರಿಗೆ ಸಕ್ಕರೆಯಿಂದ ಸಂಧಿವಾತ ಬರುವುದೆಂದು ತಿಳಿದಿಲ್ಲ. ಆದರೆ ಅಧ್ಯಯನಗಳ ಪ್ರಕಾರ ಅತಿಯಾದ ಸಕ್ಕರೆಯಿಂದ ಗಂಟುಗಳ ಸುತ್ತಲಿನ ಸ್ನಾಯುಗಳಲ್ಲಿ ಉರಿಯೂತ ಉಂಟು ಮಾಡುವುದು.

ಆಲ್ಕೋಹಾಲ್

ಆಲ್ಕೋಹಾಲ್

ಆಲ್ಕೋಹಾಲ್ ದೇಹಕ್ಕೆ ಹಾನಿಕಾರಕ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಇದು ಒಂದು ರೀತಿಯ ಪಾನೀಯ. ಸಂಧಿವಾತ ತಪ್ಪಿಸಲು ಇದನ್ನು ನೀವು ಕಡೆಗಣಿಸಬೇಕು. ಆಲ್ಕೋಹಾಲ್ ನಿಂದ ಮಾನಸಿಕ ಮತ್ತು ದೈಹಿಕವಾಗಿ ಹಲವಾರು ರೀತಿಯ ಕಾಯಿಲೆಗಳೂ ಬರುವುದು. ಆಲ್ಕೋಹಾಲ್ ಉರಿಯೂತ ಉಂಟು ಮಾಡುವುದು ಮತ್ತು ಆಲ್ಕೋಹಾಲ್ ಸೇವನೆ ಅಧಿಕವಾದರೆ ಗಂಟುನೋವಿನ ಸಮಸ್ಯೆಯು ಅತಿಯಾಗುವುದು.

English summary

8 Foods To Avoid For Arthritis

While growing up, we would have been told that ageing is a part of life and one must accept it gracefully, right? However, as much as we want to accept the natural ageing process of our body with open arms, it can sometimes be very hard because of the diseases associated with ageing! When we are younger, we have more energy and diseases that we get, which go away faster because our immune system and metabolic systems are strong.
X
Desktop Bottom Promotion