For Quick Alerts
ALLOW NOTIFICATIONS  
For Daily Alerts

ನಿಮ್ಮ ಹಲ್ಲುಗಳಿಗೆ ಸ್ಪೆಷಲ್ ಟೂತ್ ಪೇಸ್ಟ್ ಬೇಕು ಎಂದು ತಿಳಿಸುವ 4 ಚಿಹ್ನೆಗಳು

By Lekhaka
|

ಹೇಗೆ ನೀವು ನಿಮ್ಮ ಚರ್ಮ ಮತ್ತು ಕೂದಲಿಗೆ ವಿಶೇಷ ಕಾಳಜಿ ತೆಗೆದುಕೊಂಡು ಅದಕ್ಕಾಗಿ ಬೇರೇಬೇರೆ ಪ್ರೊಡಕ್ಟ್ ಗಳನ್ನು ಕೊಂಡುಕೊಳ್ಳುತ್ತೀರೋ ಹಾಗೆ ನೀವು ನಿಮ್ಮ ಹಲ್ಲುಗಳಿಗೂ ಕೂಡ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಈಗಂತೂ ನೂರೆಂಟು ವೆರೈಟಿ ಟೂತ್ ಪೇಸ್ಟ್ ಗಳು ಮಾರ್ಕೆಟ್ ನಲ್ಲಿವೆ. ಒಂದೊಂದು ಟೂತ್ ಪೇಸ್ಟ್ ಒಂದೊಂದು ಅಂಶಗಳನ್ನು ಒಳಗೊಂಡಿರುತ್ತದೆ. ಕೆಲವು ಹಲ್ಲುಗಳ ಹುಳುಕು ನಿವಾರಣೆಗೆ ಸಹಾಯ ಮಾಡಿದ್ರೆ, ಇನ್ನು ಕೆಲವು ಸೆನ್ಸಿಟೀವ್ ಟೂತ್ ಗೆ ಪರಿಹಾರ ನೀಡುತ್ತೆ. ಕೆಲವು ಟೂತ್ ಪೇಸ್ಟ್ ಗಳು ಹಲ್ಲುಗಳನ್ನು ಬಿಳಿಗೊಳಿಸಲು ಸಹಾಯ ಮಾಡುತ್ತೆ. ಕೆಲವು ಟೂತ್ ಪೇಸ್ಟ್ ಗಳು ಬಾಯಿಯ ವಾಸನೆಯನ್ನು ನಿವಾರಿಸುತ್ತದೆ.

ಹಲ್ಲುಗಳಲ್ಲಾಗುವ ಕೆಲವು ಚಿಹ್ನೆಗಳು ನಿಮ್ಮ ನಿತ್ಯದ ಟೂತ್ ಪೇಸ್ಟ್ ಬದಲಿಸಿ ನಿಮ್ಮ ಹಲ್ಲಿಗೆ ಅಗತ್ಯವಿರುವ ಟೂತ್ ಪೇಸ್ಟ್ ಬಳಸುವಂತೆ ಮಾಡಬಹುದು. ಹಾಗಾದ್ರೆ ಆ ಚಿಹ್ನೆಗಳು ಯಾವುದು..

health tips in kannada

ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ಹೆಚ್ಚಳ

ಹಲ್ಲು ಹುಳುಕಾಗುವಿಕೆ ಒಂದು ದೊಡ್ಡ ಸಮಸ್ಯೆ. ಹಲ್ಲು ಹಾಳಾಗಲು ಪ್ರಮುಖ ಕಾರಣ ಬ್ಯಾಕ್ಟೀರಿಯಾಗಳು ಹಲ್ಲುಗಳ ಸಂಧಿಯಲ್ಲಿ ಕುಳಿತು ತನ್ನ ಪ್ರಕ್ರಿಯೆಯನ್ನು ಮುಂದುವರಿಸುವುದು. ಬ್ರಷ್ಶಿಂಗ್ ಸರಿಯಾಗಿ ಆಗದೇ ಇದ್ದಲ್ಲಿ ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ಅಧಿಕವಾಗುತ್ತೆ. ಹಲ್ಲುಗಳ ಮೂಲೆಗಳಲ್ಲಿ ಹಿಡಿದುಕೊಳ್ಳುವ ಕೊಳಕು ಎರಡು ವಿಧದಲ್ಲಿ ಹಲ್ಲುಗಳನ್ನು ಹಾಳು ಮಾಡುತ್ತೆ. ಮೊದಲನೆಯದಾಗಿ ಹಲ್ಲುಗಳ ಸಂಧಿಯಲ್ಲಿ ಕುಳಿತುಕೊಳ್ಳುವ ಸಕ್ಕರೆ ಅಂಶ ಮತ್ತು ಆಹಾರ ಪದಾರ್ಥಗಳ ಚೂರು ಕೊಳೆತು ಹಲ್ಲು ಹುಳುಕಾಗುವಂತೆ ಮಾಡುತ್ತೆ. ಇವು ದಿನದಿಂದ ದಿನಕ್ಕೆ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತೆ ಮತ್ತು ಅವು ಹಲ್ಲು ಹಾಳಾಗುವಂತೆ ಮಾಡುತ್ತೆ. ಎರಡನೆಯದಾಗಿ ಆಸಿಡ್ ಅಂಶ ಕೂಡ ಹಲ್ಲುಗಳಲ್ಲಿ ಕ್ಯಾವಿಟಿ ಹೆಚ್ಚಾಗುವಂತೆ ಮಾಡುತ್ತೆ. ಇಂತಹ ಸಂದರ್ಬದಲ್ಲಿ ನೀವು ಸ್ಪೆಷಲ್ ಟೂತ್ ಪೇಸ್ಟ್ ಬಳಸಬೇಕಾಗುತ್ತೆ.

ಹಲ್ಲುಗಳಲ್ಲಿ ಝುಮ್ ಝುಮ್ ಅನ್ನುವಂತ ಫೀಲಿಂಗ್

ಹಲ್ಲುಗಳಲ್ಲಿ ಸಣ್ಣಗೆ ಝುಮ್ ಝುಮ್ ಅನ್ನುವಂತ ಫೀಲಿಂಗ್ ಆಗುವುದುಂಟು. ಹೆಚ್ಚಾಗಿ ತಣ್ಣನೆಯ ಇಲ್ಲವೆ ಬಿಸಿ ಆಹಾರ ಪದಾರ್ಥಗಳನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ತಣ್ಣನೆಯ ಗಾಳಿಯಿಂದ ಉಸಿರಾಟ ಮಾಡಿದಾಗಲೂ ಕೆಲವರಿಗೆ ಹಲ್ಲು ನೋವು ಬರುವುದುಂಟು.. ಹಲ್ಲುಜ್ಜುವಾಗ, ಬಾಯಿ ಮುಕ್ಕಳಿಸುವಾಗಲೂ ಹೀಗೆ ಹಲ್ಲು ಝುಮ್ ಝುಮ್ ಅನ್ನಿಸಬಹುದು. ಈ ಸಮಸ್ಯೆ ತನ್ನಷ್ಟಕ್ಕೆ ತಾನೆ ವಾಸಿಯಾಗುವುದಿಲ್ಲ. ಇಂತಹ ಸಂದರ್ಬದಲ್ಲಿ ಡಿಸೆನ್ಸಿಟೀವ್ ಟೂತ್ ಪೇಸ್ಟ್ ಗಳನ್ನು ಬಳಸಲು ವೈದ್ಯರು ಸಲಹೆ ನೀಡುತ್ತಾರೆ,. ಈ ಟೂತ್ ಪೇಸ್ಟ್ ನಿಮ್ಮ ಹಲ್ಲಿನ ಯಾವ ನರ ನಿಮಗೆ ಸೆನ್ಸಿಟೀವ್ ಅನುಭವ ನೀಡುತ್ತೋ ಅಂತಹದ್ರ ವಿರುದ್ಧ ಹೋರಾಡಿ ಸಮಸ್ಯೆ ನಿವಾರಿಸುವಲ್ಲಿ ಸಹಾಯ ಮಾಡುತ್ತೆ.

ಹಲ್ಲುಗಳ ಬಣ್ಣ ಬದಲಾಗುವಿಕೆ

ನಿಧಾನವಾಗಿ ಇಲ್ಲವೆ ವೇಗವಾಗಿ ನಿಮ್ಮ ಬಿಳಿಯ ಹಲ್ಲುಗಳು ಕಂದು ಬಣ್ಣಕ್ಕೆ ಬದಲಾಗುತ್ತಿದ್ದರೆ ನೀವು ನಿಮ್ಮ ಟೂತ್ ಪೇಸ್ಟ್ ಬದಲಿಸಬೇಕು ಎಂದರ್ಥ. ಕಾಫಿ, ಟೀ ಸೇವನೆ, ಹೊಗೆಸೊಪ್ಪು ಅಥವಾ ಟೊಬ್ಯಾಕೋ ಸೇವಿಸುವುದರಿಂದ ಹಲ್ಲಿನ ಬಣ್ಣ ಬದಲಾಗುತ್ತೆ. ಕೆಲವು ಮಾತ್ರೆಯನ್ನು ಮತ್ತು ಔಷಧಿ ಸೇವನೆಯಿಂದ ಕೂಡ ಹಲ್ಲಿನ ಬಣ್ಣದಲ್ಲಿ ಬದಲಾಗುತ್ತೆ. ಹಲ್ಲಿನ ಬಣ್ಣ ಬಿಳಿಗೊಳಿಸುವ ಟೂತ್ ಪೇಸ್ಟ್ ಈಗಿನ ಮಾರ್ಕೆಟ್ ನಲ್ಲಿ ಟ್ರೆಂಡ್ ಅನ್ನಿಸಿಕೊಂಡಿವೆ. ಈ ಟೂತ್ ಪೇಸ್ಟ್ ಗಳು ಹಲ್ಲನ್ನು ಸ್ಕ್ರಬ್ ಗೊಳಿಸಿ ಚೆಂದಗೊಳಿಸಲು ಸಹಕಾರಿಯಾಗುತ್ತೆ.

ಬಾಯಿಯ ದುರ್ವಾಸನೆ

ನಿಮ್ಮ ಹಲ್ಲುಗಳನ್ನು ಸರಿಯಾಗಿ ಪ್ರತಿದಿನ ಬ್ರಷ್ ಮಾಡದೇ ಇದ್ದಲ್ಲಿ ಬಾಯಿಯ ದುರ್ವಾಸನೆ ಖಂಡಿತ. ಹಲ್ಲುಗಳ ಮತ್ತು ವಸಡಿನ ನಡುವೆ ಹೆಚ್ಚಾಗುವ ಬ್ಯಾಕ್ಟೀರಿಯಾಗಳು ಕೆಟ್ಟ ವಾಸನೆಗೆ ಕಾರಣವಾಗುತ್ತೆ. ಆದರೆ ಈ ವಾಸನೆ ಬೇರೆಯವರಿಗೆ ಗೊತ್ತಾಗುತ್ತೆ. ವಾಸನೆ ಇರುವವರಿಗೆ ತಿಳಿಯುವುದು ಕಷ್ಟ.. ಹಾಗಾಗಿ ಆದಷ್ಟು ನಿಮ್ಮ ಹಲ್ಲುಗಳನ್ನು ಸ್ವಚ್ಛ ಇಟ್ಟುಕೊಳ್ಳಲು ಪ್ರಯತ್ನಿಸಿ. ಬ್ಯಾಡ್ ಬ್ರೀತಿಂಗ್ ಅನುಭವ ಬಂದಲ್ಲಿ ಕೂಡಲೇ ನಿಮ್ಮ ಟೂತ್ ಪೇಸ್ಟ್ ಬದಲಾಯಿಸಿ.

English summary

4 Signs That Show You Need A Specialized Toothpaste

Here are 4 signs that may encourage you to consider switching from a regular toothpaste to a specialized one, Check them out!
X
Desktop Bottom Promotion