For Quick Alerts
ALLOW NOTIFICATIONS  
For Daily Alerts

ಬಾಯಿ ದುರ್ವಾಸನೆಗೆ ಇಲ್ಲಿದೆ ನೋಡಿ 12 ಸರಳ ಮನೆಮದ್ದುಗಳು

By Hemanth
|

ಬಾಯಿಯಿಂದ ದುರ್ನಾತ ಬೀರುತ್ತಲಿದ್ದರೆ ಆಗ ಜನರೊಂದಿಗೆ ಬೆರೆಯಲು ನಮಗೆ ಮುಜುಗರವಾಗುವುದು ಮಾತ್ರವಲ್ಲದೆ ಬೇರೆಯವರು ಕೂಡ ನಮ್ಮೊಂದಿಗೆ ಮಾತನಾಡದೆ ದೂರವಾಗುವರು. ಇಂತಹ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಾ ಇರುವುದು. ಬಾಯಿಯ ವಾಸನೆ ಬರಲು ಹಲವಾರು ರೀತಿಯ ಕಾರಣಗಳು ಇವೆ. ಇದರಲ್ಲಿ ಪ್ರಮುಖವಾಗಿ ಘಾಟು ಬರುವ ಆಹಾರ ಸೇವನೆ, ವೈದ್ಯಕೀಯ ಸ್ಥಿತಿ, ಒಸಡಿನ ಕಾಯಿಲೆ, ಧೂಮಪಾನ ಮತ್ತು ಒಣಗಿದ ಬಾಯಿ. ಇದು ಬಾಯಿ ವಾಸನೆಗೆ ಕೆಲವೊಂದು ಪ್ರಮುಖ ಕಾರಣಗಳಾಗಿವೆ.

ಹಲ್ಲುಗಳು ಮತ್ತು ನಾಲಗೆಯ ಕೆಳಗಡೆ ಬ್ಯಾಕ್ಟೀರಿಯಾ ಜಮೆಯಾಗುವುದೇ ಬಾಯಿ ವಾಸನೆ ಬರಲು ಪ್ರಮುಖ ಕಾರಣವಾಗಿದೆ. ಬಾಯಿಯ ಆರೋಗ್ಯ ಕಾಪಾಡಿದರೆ ಆಗ ವಾಸನೆ ತಡೆಗಟ್ಟಬಹುದು. ಇಲ್ಲಿ ಬಾಯಿ ವಾಸನೆ ತಡೆಯಲು ಕೆಲವೊಂದು ಮನೆಮದ್ದುಗಳನ್ನು ಸೂಚಿಸಲಾಗಿದೆ. ಇದರಿಂದ ಬಾಯಿ ವಾಸನೆ ಕಡಿಮೆಯಾಗುವುದು....

1. ಜೀರಿಗೆ

1. ಜೀರಿಗೆ

ಜೀರಿಗೆಯು ಬಾಯಿ ವಾಸನೆ ಬರದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು. ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುವುದು. ಒಂದು ಕಪ್ ಜೀರಿಗೆ ಚಹಾ ಕೂಡ ಕುಡಿಯಬಹುದು.

2. ಮೆಂತೆ ಕಾಳುಗಳು

2. ಮೆಂತೆ ಕಾಳುಗಳು

ಬಾಯಿಯಿಂದ ದುರ್ವಾಸನೆ ನಿವಾರಣೆ ಮಾಡುವಲ್ಲಿ ಮೆಂತ್ಯೆ ಕಾಳುಗಳು ತುಂಬಾ ಪರಿಣಾಮಕಾರಿ. ಬಾಯಿ ವಾಸನೆ ನಿವಾರಣೆಗೆ ಮೆಂತೆ ಚಹಾ ಕುಡಿಯಬೇಕು. ಕುದಿಯುವ ನೀರಿಗೆ ಒಂದು ಚಮಚ ಮೆಂತೆ ಕಾಳುಗಳನ್ನು ಹಾಕಿ. ಇದನ್ನು ಸೋಸಿಕೊಂಡ ಬಳಿಕ ನೀರನ್ನು ದಿನದಲ್ಲಿ ಒಂದು ಸಲ ಕುಡಿಯಿರಿ.

3. ಲವಂಗ

3. ಲವಂಗ

ಲವಂಗವು ಬಾಯಿಗೆ ತಾಜಾತನ ನೀಡುವುದು ಮತ್ತು ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಬಾಯಿಯ ವಾಸನೆ ನಿವಾರಣೆ ಮಾಡಲು ಪರಿಣಾಮಕಾರಿ. ಊಟದ ಬಳಿಕ ಕೆಲವು ಎಸಲು ಲವಂಗ ಜಗಿಯಿರಿ. ಲವಂಗ ಚಹಾ ಕುಡಿಯಬಹುದು.

4. ಲಿಂಬೆ ಜ್ಯೂಸ್

4. ಲಿಂಬೆ ಜ್ಯೂಸ್

ಲಿಂಬೆಯಲ್ಲಿ ಇರುವಂತಹ ಆಮ್ಲೀಯ ಗುಣಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗದಂತೆ ತಡೆಯುತ್ತದೆ. ಒಂದು ಚಮಚ ಲಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿಕೊಂಡು ಅದರಿಂದ ಬಾಯಿ ಮುಕ್ಕಳಿಸಿ.

5. ಆ್ಯಪಲ್ ಸೀಡರ್ ವಿನೇಗರ್

5. ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ಬಾಯಿಯಿಂದ ಬರುವ ದುರ್ಗಂಧಕ್ಕೆ ಒಳ್ಳೆಯ ಪರಿಣಾಮಕಾರಿ ಔಷಧಿ. ಇದು ಪಿಎಚ್ ಸಮತೋಲನವನ್ನು ಕಾಪಾಡುವ ಕಾರಣದಿಂದಾಗಿ ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ನೆರವಾಗುವುದು. ಒಂದು ಲೋಟ ನೀರಿಗೆ ಆ್ಯಪಲ್ ಸೀಡರ್ ವಿನೇಗರ್ ಹಾಕಿಕೊಂಡು ಬಾಯಿ ಮುಕ್ಕಳಿಸಿದರೆ ದುರ್ಗಂಧ ಮಾಯವಾಗುವುದು.

6. ದಾಲ್ಚಿನ್ನಿ

6. ದಾಲ್ಚಿನ್ನಿ

ದಾಲ್ಚಿನ್ನಿಯು ಬಾಯಿಯ ವಾಸನೆ ತಡೆಯುವುದು. ಯಾಕೆಂದರೆ ಇದರಲ್ಲಿ ಸಿನ್ನಾಮಿಕ್ ಅಲ್ಡಿಹೈಡ್ ಇದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಇದು ಕಡಿಮೆ ಮಾಡುವುದು. ಒಂದು ಚಮಚ ದಾಲ್ಚಿನಿಯ ಹುಡಿಯನ್ನು ಕುದಿಯುವ ನೀರಿಗೆ ಹಾಕಿ. ಇದಕ್ಕೆ ಕರಿಬೇವಿನ ಸೊಪ್ಪು ಮತ್ತು ಏಲಕ್ಕಿ ಹಾಕಿ.ನೀರನ್ನು ಸೋಸಿಕೊಂಡು ಬಾಯಿ ಮುಕ್ಕಳಿಸಿಕೊಳ್ಳಲು ಈ ನೀರು ಬಳಸಿ.

7. ಚಹಾ ಮರದ ಎಣ್ಣೆ

7. ಚಹಾ ಮರದ ಎಣ್ಣೆ

ಚಹಾ ಮರದ ಎಣ್ಣೆಯಲ್ಲಿ ನಂಜುನಿರೋಧಕ ಗುಣವು ಸಮೃದ್ಧವಾಗಿದೆ. ಇದು ಬಾಯಿಯಲ್ಲಿ ಸೋಂಕು ನಿವಾರಕವಾಗಿ ಕೆಲಸ ಮಾಡುವುದು. ಕೆಲವು ಹನಿ ಚಹಾ ಮರದ ಎಣ್ಣೆಯನ್ನು ಪುದೀನಾ ಎಣ್ಣೆ ಮತ್ತು ಲಿಂಬೆ ಎಣ್ಣೆ ಜತೆಗೆ ಒಂದು ಲೋಟ ನೀರಿಗೆ ಹಾಕಿ. ಈ ಮಿಶ್ರಣವನ್ನು ಮೌಥ್ ವಾಶ್ ಹಾಗೆ ಬಳಸಿಕೊಳ್ಳಿ.

8. ಚೂಯಿಂಗ್ ಗಮ್

8. ಚೂಯಿಂಗ್ ಗಮ್

ಸಕ್ಕರೆ ಇಲ್ಲದೆ ಇರುವ ಚೂಯಿಂಗ್ ಗಮ್ ಕೆಟ್ಟ ವಾಸನೆ ನಿವಾರಣೆ ಮಾಡುವುದು. ಇದು ಬಾಯಿಯಲ್ಲಿ ಜೊಲ್ಲುರಸವು ಆರೋಗ್ಯಕಾರಿಯಾಗಿ ಹರಿಯಲು ನೆರವಾಗುವುದು. ಪುದೀನಾ ಇರುವಂತಹ ಚೂಯಿಂಗ್ ಗಮ್ ಬಳಸಿಕೊಳ್ಳಿ.

9. ಪಾರ್ಸ್ಲಿ

9. ಪಾರ್ಸ್ಲಿ

ಪಾರ್ಸ್ಲಿ ಬಾಯಿಯ ದುರ್ಗಂಧ ನಿವಾರಣೆಗೆ ಒಳ್ಳೆಯ ಮನೆಮದ್ದು. ಇದರಲ್ಲಿ ಇರುವ ಕ್ಲೋರೊಫಿಲ್ ಬ್ಯಾಕ್ಟೀರಿಯಾ ವಿರೋಧಿಯಂತೆ ಕೆಲಸ ಮಾಡುವುದು ಮತ್ತು ಬಾಯಿಯ ವಾಸನೆ ನಿವಾರಿಸಲು ನೆರವಾಗುವುದು. ಪಾರ್ಸ್ಲಿಯ ತಾಜಾ ಎಲೆಗಳನ್ನು ಜಗಿಯಿರಿ.

10. ಉಪ್ಪು ನೀರು

10. ಉಪ್ಪು ನೀರು

ಉಪ್ಪು ನೀರು ಬಾಯಿಯ ಪಿಎಚ್ ಸಮತೋಲನ ತಟಸ್ಥಗೊಳಿಸುವುದು ಮತ್ತು ಶುದ್ಧೀಕರಿಸುವುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಒಂದು ಚಮಚ ಉಪ್ಪನ್ನು ಉಗುರುಬೆಚ್ಚಗಿನ ನೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ಬೆಳಗ್ಗೆ ಬಾಯಿ ಮುಕ್ಕಳಿಸಿ.

11. ಅರಿಶಿನ

11. ಅರಿಶಿನ

ಬಾಯಿ ದುರ್ವಾಸನೆ ಬೀರುವ ಸಮಸ್ಯೆ ಇರುವವರು ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಕುಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ.

12. ಸೋಂಪು ಕಾಳುಗಳು

12. ಸೋಂಪು ಕಾಳುಗಳು

ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳನ್ನು ಹೊಂದಿರುವ ಸೋಂಪು ಕಾಳುಗಳು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಸ್ವಲ್ಪ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯಿರಿ. ಇದು ಜೊಲ್ಲುರಸವನ್ನು ಉತ್ಪತ್ತಿ ಮಾಡಿ ಬಾಯಿ ವಾಸನೆ ಕಡಿಮೆ ಮಾಡುವುದು.

English summary

12 Home Remedies For Bad Breath

How often do you come across a person whose mouth smells bad? Or do people refrain from talking to you because of your bad breath? This surely causes an embarrassment among many people. To let you know, bad breath is also known as halitosis and it can be due to a number of reasons such as eating odourous foods, medical conditions, gum disease, smoking and dry mouth. So, here's what you need to do to prevent bad breath. Have a look at the best home remedies for bad breath, here.
X
Desktop Bottom Promotion