For Quick Alerts
ALLOW NOTIFICATIONS  
For Daily Alerts

ಅತಿಯಾಗಿ ಟೊಮೆಟೋ ಸೇವಿಸುವುದರಿಂದ ಏನಾಗುತ್ತೇ ಗೊತ್ತಾ?

|

ಅತ್ತ ಹಣ್ಣು ಅಲ್ಲದ, ಇತ್ತ ತರಕಾರಿ ಪ್ರಜಾತಿಗೆ ಸೇರದೆ ಇರುವುದೇ ಟೊಮೆಟೋ. ಇದನ್ನು ನೀವು ಹಾಗೆ ಹಣ್ಣಿನಂತೆ ಕೂಡ ತಿನ್ನಬಹುದು ಅಥವಾ ಬೇರೆ ಪದಾರ್ಥಗಳಿಗೆ ತರಕಾರಿಯಾಗಿಯೂ ಬಳಕೆ ಮಾಡಬಹುದು. ಟೊಮೆಟೋದಲ್ಲಿ ಕೂಡ ಹಲವಾರು ರೀತಿಯ ಪೋಷಕಾಂಶಗಳು ಇವೆ.

ಕೆಲವೊಂದು ಸಲ ಅತಿಯಾಗಿ ಸೇವನೆ ಮಾಡಿದರೆ ಅಮೃತ ಕೂಡ ವಿಷವಾಗುವುದು. ಅದೇ ರೀತಿ ಟೊಮೆಟೋವನ್ನು ಅತಿಯಾಗಿ ಸೇವಿಸಿದರೆ ಅದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ನಿಮ್ಮ ದೇಹಕ್ಕೆ ಆಗಬಹುದು. ಅತಿಯಾಗಿ ಟೊಮೆಟೋ ತಿಂದರೆ ಅದರಿಂದ ಹೊಟ್ಟೆಯಲ್ಲಿ ತಳಮಳ, ಎದೆಯುರಿ, ಕಿಡ್ನಿ ಕಲ್ಲು ಮತ್ತು ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಅಲರ್ಜಿಗಳು, ಮೂತ್ರಕೋಶದ ಸಮಸ್ಯೆಗಳು, ಸ್ನಾಯುಗಳ ಸೆಳೆತ, ಮೈಗ್ರೇನ್ ಮತ್ತು ಸಕ್ಕರೆ ಮಟ್ಟ ಕಡಿಮೆಯಾಗುವ ಸಮಸ್ಯೆ ಕಂಡುಬರುವುದು.

ಟೊಮೆಟೋ ಸೇವಿಸುವುದರ ಅಡ್ಡ ಪರಿಣಾಮ

ಟೊಮೆಟೋ ಅತಿಯಾಗಿ ಸೇವನೆ ಮಾಡಿದರೆ ಅದು ಗರ್ಭಿಣಿ ಮಹಿಳೆಯರಿಗೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಮಾರಕ. ಪ್ರತಿನಿತ್ಯವು ನಾವು ಹೆಚ್ಚಿನ ಅಡುಗೆಗಳಲ್ಲಿ ಬಳಸುವಂತಹ ಕೆಂಪು ಹಣ್ಣನ್ನು ಅತಿಯಾಗಿ ಸೇವಿಸಿದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳಾಗುವುದು ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇದನ್ನು ನಂಬುವುದು ಸ್ವಲ್ಪ ಕಷ್ಟ. ಇದನ್ನು ತಿಳಿಯಲು ಮತ್ತಷ್ಟು ಓದಿ.

1.ಹೊಟ್ಟೆಯಲ್ಲಿ ತಳಮಳ

1.ಹೊಟ್ಟೆಯಲ್ಲಿ ತಳಮಳ

ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಟೊಮೆಟೋವು ಜೀರ್ಣಕ್ರಿಯೆ ವ್ಯವಸ್ಥೆಯ ಆರೋಗ್ಯ ಕಾಪಾಡುವುದು. ಆದರೆ ಇದು ಅತಿಯಾದರೆ ಪರಿಣಾಮ ವ್ಯತಿರಿಕ್ತವಾಗಿರುವುದು. ಹೊಟ್ಟೆಯ ಕಿರಿಕಿರಿ ಸಮಸ್ಯೆಯಿರುವವರಿಗೆ ಟೊಮೆಟೋ ಮತ್ತಷ್ಟು ಸಮಸ್ಯೆ ಉಂಟು ಮಾಡಬಹುದು. ಇದರಿಂದ ಹೊಟ್ಟೆ ಉಬ್ಬರ ಉಂಟಾಗಬಹುದು. ಅತಿಯಾಗಿ ಟೊಮೆಟೋ ಸೇವನೆ ಮಾಡಿದರೆ ಭೇದಿ ಉಂಟಾಗಬಹುದು. ಟೊಮೆಟೋದಲ್ಲಿರುವ ಸಲ್ಮೊನೆಲ್ಲಾ ಅಂಶವೇ ಇದಕ್ಕೆ ಕಾರಣ.

2. ಆಮ್ಲ ಹಿಮ್ಮುಖ ಹರಿವು

2. ಆಮ್ಲ ಹಿಮ್ಮುಖ ಹರಿವು

ನಿಮಗೆ ಆಮ್ಲ ಹಿಮ್ಮುಕ ಹರಿವು ಮತ್ತು ಎದೆಯುರಿ ಸಮಸ್ಯೆಯಿದ್ದರೆ ಆಗ ನೀವು ಟೊಮೆಟೋವನ್ನು ಕಡೆಗಣಿಸಿದರೆ ತುಂಬಾ ಒಳ್ಳೆಯದು. ಆಮ್ಲೀಯ ಗುಣ ಹೊಂದಿರುವ ಟೊಮೆಟೋವು ಹೆಚ್ಚಿನ ಆಮ್ಲವನ್ನು ಉತ್ಪತ್ತಿ ಮಾಡುವುದು. ಇದರಿಂದ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗುವುದು. ಟೊಮೆಟೋದಲ್ಲಿ ಇರುವ ಮೆಲಿಕ್ ಮತ್ತು ಸಿಟ್ರಿಕ್ ಆಮ್ಲವು ಅತಿಯಾಗಿ ಆಮ್ಲ ಉತ್ಪತ್ತಿ ಮಾಡುವುದು. ಇದರಿಂದ ಆಮ್ಲವು ಹಿಮ್ಮುಖವಾಗಿ ಹರಿಯುವುದು. ಜಠರ ಹಿಮ್ಮುಕ ಹರಿವು ರೋಗ(ಜಿಇಆರ್ ಡಿ)ದ ಸಮಸ್ಯೆಯಿರುವವರಿಗೆ ಇದು ಮತ್ತಷ್ಟು ಕೆಟ್ಟ ಪರಿಣಾಮ ಬೀರುವುದು.

3. ಕಿಡ್ನಿ ಕಲ್ಲುಗಳು/ಕಿಡ್ನಿ ಸಮಸ್ಯೆಗಳು

3. ಕಿಡ್ನಿ ಕಲ್ಲುಗಳು/ಕಿಡ್ನಿ ಸಮಸ್ಯೆಗಳು

ಕಿಡ್ನಿ ಸಮಸ್ಯೆಯ ಆರಂಭಿಕ ಹಂತದಲ್ಲಿ ಇರುವಂತಹ ಜನರಿಗೆ ಪೊಟಾಶಿಯಂ ಸೇವನೆ ಕಡಿಮೆ ಮಾಡುವಂತೆ ಸೂಚಿಸಲಾಗುತ್ತದೆ. ಟೊಮೆಟೋದಲ್ಲಿ ಹೆಚ್ಚಿನ ಮಟ್ಟದ ಪೊಟಾಶಿಯಂ ಇದ್ದು, ಇದು ರೋಗಿಗಳಿಗೆ ಸಮಸ್ಯೆಯಾಗಬಹುದು. ಟೊಮೆಟೋವು ಆಕ್ಸಲೇಟ್ ಗರಿಷ್ಠ ಮಟ್ಟದಲ್ಲಿದ್ದು, ಇದು ಕಿಡ್ನಿ ಕಲ್ಲುಗಳಿಗೆ ಕಾರಣವಾಗಬಹುದು. ಕಿಡ್ನಿ ಕಲ್ಲುಗಳ ಸಮಸ್ಯೆ ಇರುವಂತಹ ಜನರು ಟೊಮೆಟೋದಿಂದ ದೂರವಿರಿ. ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎಂದು ವೈದ್ಯರ ಸಲಹೆ ಪಡೆಯಿರಿ.

4. ರಕ್ತದೊತ್ತಡ ಹೆಚ್ಚಳ

4. ರಕ್ತದೊತ್ತಡ ಹೆಚ್ಚಳ

ಹಸಿ ಟೊಮೆಟೋ ತಿಂದಾಗ ಅದರಲ್ಲಿ ಇರುವ ಸೋಡಿಯಂ ಪ್ರಮಾಣ ಕೇವಲ ಐದು ಮಿಲಿ ಗ್ರಾಂ ಮಾತ್ರ ಮತ್ತು ಇದು ರಕ್ತದೊತ್ತಡ ಮೇಲೆ ಪರಿಣಾಮ ಬೀರದು. ಇದು ರಕ್ತದೊತ್ತಡ ಕಡಿಮೆ ಮಾಡಬಹುದು. ಆದರೆ ಟೊಮೆಟೋ ಸೂಪ್ ಅಥವಾ ಟೊಮೆಟೋ ಕೆಚಪ್ ಇತ್ಯಾದಿ ಸೇವನೆ ಮಾಡಿದಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರುವುದು. ಇದು ಯಾರಿಗೂ ಒಳ್ಳೆಯದಲ್ಲ. ರಕ್ತದೊತ್ತಡ ಸಮಸ್ಯೆ ಇರುವಂತಹವರು ಸೇವಿಸಲೇಬಾರದು.

5. ಅಲರ್ಜಿ

5. ಅಲರ್ಜಿ

ಹಿಸ್ಟಮೈನ್ ಎನ್ನುವ ಅಂಶದಿಂದ ಅಲರ್ಜಿಗೆ ಒಳಗಾಗುವವರಿಗೆ ಟೊಮೆಟೋದಿಂದ ಅಲರ್ಜಿಯಾಗಬಹುದು. ಅಲರ್ಜಿಯಿಂದಾಗಿ ಇಸುಬು, ಬೊಕ್ಕೆಗಳು, ತುರಿಕೆ, ಊತ ಕಾಣಿಸಿಕೊಳ್ಳಬಹುದು. ಟೊಮೆಟೋ ಕೆಲವೊಂದು ಜನರಲ್ಲಿ ಅಲರ್ಜಿ ಉಂಟು ಮಾಡುತ್ತದೆ ಎಂದು ನಂಬಲಾಗಿದೆ. ಎಲ್ಲಾ ಅಲರ್ಜಿ ಸಮಸ್ಯೆಯಿಂದಾಗಿ ಉಸಿರಾಟದ ಸಮಸ್ಯೆಯಾಗಬಹುದು.

6.ಕ್ಯಾನ್ಸರ್ ರೋಗಿಗಳಲ್ಲಿ ಸಮಸ್ಯೆ ಹೆಚ್ಚುವುದು

6.ಕ್ಯಾನ್ಸರ್ ರೋಗಿಗಳಲ್ಲಿ ಸಮಸ್ಯೆ ಹೆಚ್ಚುವುದು

ಹಿತಮಿತವಾಗಿ ಟೊಮೆಟೋ ಸೇವನೆ ಮಾಡಿದರೆ ಅದರಲ್ಲಿರುವ ಲೈಕೊಪೆನೆ ಎನ್ನುವ ಅಂಶವು ನಮ್ಮ ದೇಹಕ್ಕೆ ಒಳ್ಳೆಯದು. ಆದರೆ ಅಧ್ಯಯನ ಪ್ರಕಾರ ಲೈಕೊಪೆನೆ ಅಂಶವು ಜನನೇಂದ್ರಿಯ ಗ್ರಂಥಿ ಕ್ಯಾನ್ಸರ್ ಸಾಧ್ಯತೆ ಹೆಚ್ಚಿಸುವುದು. ಲೈಕೊಪೆನೆ ಕೆಲವೊಂದು ಕಿಮೋಥೆರಪಿಗಳಲ್ಲಿ ಕೂಡ ಕಂಡುಬರುವುದು. ಇದರಿಂದ ಕ್ಯಾನ್ಸರ್ ರೋಗಿಗಳು ಟೊಮೆಟೋ ಸೇವನೆ ಬಗ್ಗೆ ಗಮನಹರಿಸಬೇಕು.

7.ಮೂತ್ರಕೋಶದ ಸಮಸ್ಯೆ

7.ಮೂತ್ರಕೋಶದ ಸಮಸ್ಯೆ

ಆಮ್ಲೀಯ ಗುಣ ಹೊಂದಿರುವಂತಹ ಟೊಮೆಟೋ ಮೂತ್ರನಾಳದ ಕಿರಿಕಿರಿಗೆ ಕಾರಣವಾಗುವುದು ಮತ್ತು ಇದು ಕೆಲವೊಮ್ಮೆ ಹಾಗೆ ಮುಂದುವರಿಯುವುದು. ನಿಮಗೆ ಪದೇ ಪದೇ ಇಂತಹ ಸಮಸ್ಯೆಯಾಗುತ್ತಲಿದ್ದರೆ ಆಗ ನೀವು ಅತಿಯಾಗಿ ಟೊಮೆಟೋ ಸೇವನೆ ಮಾಡಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುವುದು.

8.ಸ್ನಾಯುಗಳ ಸೆಳೆತ

8.ಸ್ನಾಯುಗಳ ಸೆಳೆತ

ಟೊಮೆಟೋದಲ್ಲಿ ಇರುವಂತಹ ಪ್ರೋಟೀನ್ ನ್ನು ಪಡೆಯಲು ದೇಹದ ಪ್ರತಿರೋಧಕ ವ್ಯವಸ್ಥೆಯು ಪ್ರತಿಕ್ರಿಯಿಸಿದಾಗ, ಹಿಸ್ಟಮೈನ್ ಎನ್ನುವ ಅಂಶವು ದೇಹ ಹಾಗೂ ಗಂಟುಗಳಲ್ಲಿ ಉರಿಯೂತ ಉಂಟು ಮಾಡಬಹುದು. ಸೊಲಾನಿನೆ ಎನ್ನುವ ಅಂಶ ಕೂಡ ಉರಿಯೂತಕ್ಕೆ ಕಾರಣವಾಗಬಹುದು. ಅತಿಯಾಗಿ ಟೊಮೆಟೋ ಸೇವನೆ ಮಾಡಿದರೆ ಅದರಿಂದ ಸಂಧಿವಾತ ಉಂಟಾಗಬಹುದು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಬಹುದು.

9.ಮೈಗ್ರೇನ್

9.ಮೈಗ್ರೇನ್

ತಜ್ಞರ ಪ್ರಕಾರ ಟೊಮೆಟೋದಿಂದ ಮೈಗ್ರೇನ್ ಉಂಟಾಗಬಹುದು. ಇರಾನ್ ನ ಅಧ್ಯಯನವೊಂದರ ಪ್ರಕಾರ ಇದು ಸಾಬೀತಾಗಿದೆ. ಆದರೆ ಕೆಲವೊಂದು ಆಹಾರ ಕ್ರಮದಲ್ಲಿನ ಬದಲಾವಣೆ ಮಾಡಿದರೆ ಮೈಗ್ರೇನ್ ನ್ನು ಶೇ. 40ರಷ್ಟು ತಡೆಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೀವು ಮೈಗ್ರೇನ್ ಅಥವಾ ತಲೆನೋವಿನಿಂದ ಬಳಲುತ್ತಿದ್ದರೆ ಟೊಮೆಟೋ ಸೇವನೆ ಮೇಲೆ ನಿಗಾವಿರಲಿ.

10.ಅತಿ ಲೈಕೊಪೆನೆ ಆರೋಗ್ಯ ಸಮಸ್ಯೆಗೆ ಕಾರಣ

10.ಅತಿ ಲೈಕೊಪೆನೆ ಆರೋಗ್ಯ ಸಮಸ್ಯೆಗೆ ಕಾರಣ

ಟೊಮೆಟೋದಲ್ಲಿ ಇರುವಂತಹ ಲೈಕೊಪೆನೆ ಎನ್ನುವ ಅಂಶವು ಕೆಲವೊಂದು ಸಮಸ್ಯೆಗೆ ಕಾರಣವಾಗುವುದು. ಇದರಿಂದ ಹೊಟ್ಟೆಯ ಅಲ್ಸರ್ ಇರುವಂತಹವರು ಇದರ ಸೇವನೆ ಕಡಿಮೆ ಮಾಡಬೇಕು. ರಕ್ತದೊತ್ತಡ ಕಡಿಮೆ ಮಾಡುವಂತಹ ಕೆಲವರಿಗೆ ಇದು ಒಳ್ಳೆಯದು. ರಕ್ತಸ್ರಾವದ ಸಮಸ್ಯೆ ಇರುವಂತಹ ಜನರು ಟೊಮೆಟೋ ಸೇವನೆ ಕಡೆಗಣಿಸಬೇಕು. ಯಾಕೆಂದರೆ ಲೈಕೊಪೆನೆ ರಕ್ತಸ್ರಾವ ಉಂಟು ಮಾಡುವುದು.

11. ಸಕ್ಕರೆ ಅಂಶ ಕಡಿಮೆ ಮಾಡುವುದು

11. ಸಕ್ಕರೆ ಅಂಶ ಕಡಿಮೆ ಮಾಡುವುದು

ಟೊಮೆಟೋದಲ್ಲಿ ಗ್ಲೈಸೆಮಿಕ್ ಅಂಶವು ಕಡಿಮೆ ಇರುವ ಕಾರಣದಿಂದಾಗಿ ಅದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದು ರಕ್ತಕಣಗಳಿಗೆ ತುಂಬಾ ನಿಧಾನವಾಗಿ ಸಕ್ಕರೆ ಅಂಶ ಬಿಡುಗಡೆ ಮಾಡುವುದು. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು ತಪ್ಪುವುದು. ಆದರೆ ಇದನ್ನು ಮಿತಿಯಲ್ಲಿ ಸೇವನೆ ಮಾಡಬೇಕು. ಅತಿಯಾದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಮತ್ತಷ್ಟು ಕುಸಿಯಬಹುದು. ಇದರಿಂದ ದೃಷ್ಟಿ ಮಂದ, ಎದೆಯುರಿ, ಆಯಾಸ, ಬೆವರುವಿಕೆ ಇತ್ಯಾದಿ ಉಂಟಾಗಬಹುದು. ನೀವು ಮಧುಮೇಹಕ್ಕೆ ಮಾತ್ರೆ ತೆಗೆದುಕೊಳ್ಳುತ್ತಾ ಇದ್ದರೆ ವೈದ್ಯರ ಸಲಹೆ ಪಡೆಯಿರಿ.

12.ಗರ್ಭಧಾರಣೆ ವೇಳೆ ಸಮಸ್ಯೆಯಾಗಬಹುದು

12.ಗರ್ಭಧಾರಣೆ ವೇಳೆ ಸಮಸ್ಯೆಯಾಗಬಹುದು

ಟೊಮೆಟೋದಲ್ಲಿ ಇರುವಂತಹ ಪೋಷಕಾಂಶಗಳು ಹಾಗೂ ಆ್ಯಂಟಿಆಕ್ಸಿಡೆಂಟ್ ಗಳಿಂದಾಗಿ ಇದನ್ನು ನೀವು ಗರ್ಭಧಾರಣೆ ವೇಳೆ ಸೇವನೆ ಮಾಡಬಹುದು. ಆದರೆ ಅತಿಯಾಗಿ ಸೇವನೆ ಮಾಡಿದರೆ ಗರ್ಭಧಾರಣೆ ಮತ್ತು ಪ್ರಸವದ ಬಳಿಕ ಸಮಸ್ಯೆಯಾಗಬಹುದು. ವೈದ್ಯರೊಂದಿಗೆ ಸಮಲೋಚನೆ ಒಳ್ಳೆಯ ವಿಧಾನ.

ಸೂಚನೆ: ಟೊಮೆಟೋವನ್ನು ಅತಿಯಾಗಿ ಸೇವನೆ ಮಾಡಿದರೆ ಮಾತ್ರ ಈ ಮೇಲಿನ ಅಡ್ಡಪರಿಣಾಮಗಳು ಉಂಟಾಗುವುದು ಎಂದು ಹೇಳಲಾಗಿದೆ. ಆರೋಗ್ಯ ಸಮಸ್ಯೆಯಿದ್ದರೆ ವೈದ್ಯರೊಂದಿಗೆ ಮಾತನಾಡಿ ಸಲಹೆ ಪಡೆಯಿರಿ.

English summary

12 Disadvantages Of Eating Tomatoes In Excess

Tomatoes have numerous health benefits; but consuming them in excess can affect you negatively. Eating tomatoes in excess can cause stomach upset, heartburn, kidney stones and ailments, high BP, allergies, urinary issues, muscle cramps, migraines and lower sugar levels. Also, overeating tomatoes is harmful for pregnant women and cancer patients.
X
Desktop Bottom Promotion