ದಿನಂಪ್ರತಿ ಸಿಹಿಸಿಹಿ ಖರ್ಜೂರ ಸೇವಿಸಿದರೆ, ಅಪಾರ ಲಾಭ!

Posted By: Arshad
Subscribe to Boldsky

ಖರ್ಜೂರ, ಅತಿ ಸಿಹಿಯಾದ, ಎಲ್ಲರ ಮೆಚ್ಚಿನ ಒಣಫಲವಾಗಿದ್ದು ವಿಶ್ವದೆಲ್ಲೆಡೆ ಬಳಕೆಯಲ್ಲಿದ್ದರೂ ಇದನ್ನು ಬೆಳೆಯುವುದು ಮಧ್ಯಪ್ರಾಚ್ಯ ದೇಶಗಳ ಮರುಭೂಮಿಯಲ್ಲಿ ಹಾಗೂ ಭಾರತದ ಉಷ್ಣವಲಯದ ಪ್ರದೇಶದಲ್ಲಿ ಮಾತ್ರ. ಖರ್ಜೂರವನ್ನು ಕೇವಲ ರುಚಿ ಎಂಬ ಕಾರಣಕ್ಕೆ ಮಾತ್ರವಲ್ಲ ಆರೋಗ್ಯಕರ ಎಂಬ ಕಾರಣಕ್ಕೇ ಶತಮಾನಗಳಿಂದಲೂ ಸೇವಿಸುತ್ತಾ ಬರಲಾಗಿದೆ. ಮರುಭೂಮಿಯ ಜನತೆಗೆ ಹಿಂದಿನ ದಿನಗಳಲ್ಲಿ ಹಸಿ ಖರ್ಜೂರವೇ ಜೀವನಾಧಾರವಾದ ಆಹಾರವಾಗಿತ್ತು. ಇಂದು ಖರ್ಜೂರವನ್ನು ಶುಚಿಗೊಳಿಸಿ, ಸಂಸ್ಕರಿಸಿ, ವಿವಿಧ ರೂಪಗಳಲ್ಲಿ ವಿಶ್ವದಾದ್ಯಂತ ವಿತರಿಸಲಾಗುತ್ತಿದೆ. ತೂಕ ಮತ್ತು ಆರೋಗ್ಯದ ಕಾಳಜಿಯುಳ್ಳವರೂ ಖರ್ಜೂರದ ಸೇವನೆಯ ಮೂಲಕ ಪಡೆಯಬಹುದಾದ ಪ್ರಯೋಜನಗಳನ್ನು ಮನಗಂಡು ಈ ಆಹಾರದ ಪ್ರಮಾಣಕ್ಕೆ ಕಡಿವಾಣ ಹಾಕುವುದಿಲ್ಲ.

ಹಸಿಯಾಗಿ ಸೇವಿಸುವ ಜೊತೆಗೇ ಖರ್ಜೂರವನ್ನು ಅಡುಗೆಯಲ್ಲಿ ಬಳಸುವ ಮೂಲಕ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ವಿಶೇಷವಾಗಿ ಸಿಹಿತಿನಿಸುಗಳು. ಖರ್ಜೂರವನ್ನು ಒಣಫಲವೆಂದು ಕರೆದರೂ, ಇವು ವಾಸ್ತವವಾಗಿ ಕೊಯ್ಲಿನ ಬಳಿಕ ನೀರಿನಂಶ ಇರುವ ಮೃದುವಾದ ಹಣ್ಣುಗಳಾಗಿವೆ. ಕ್ರಮೇಣ ಇದರ ನೀರಿನಂಶ ಕಡಿಮೆಯಾಗುತ್ತಾ ನೀರಿನಂಶ ಇಲ್ಲವಾದಾಗ ಉತ್ತುತ್ತೆಯಾಗುತ್ತದೆ. ಖರ್ಜೂರಗಳಲ್ಲಿ ಹಲವಾರು ವಿಧಗಳಿವೆ. ಗಾತ್ರ, ಬಣ್ಣ, ಸಿಹಿ, ಹೊರಮೈ ರಚನೆ ಮೊದಲಾದವುಗಳನ್ನು ಪರಿಗಣಿಸಿ ಇವುಗಳ ಗುಣಮಟ್ಟ ಹಾಗೂ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಖರ್ಜೂರವನ್ನು ಅತಿ ಹೆಚ್ಚೂ ಅಲ್ಲದೇ ಹಸಿಯೂ ಅಲ್ಲದಂತೆ ಒಣಗಿಸಿ ಗಾಳಿಯಾಡದ ಪೊಟ್ಟಣಗಳಲ್ಲಿ ಬಂಧಿಸಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಬನ್ನಿ, ಈ ಸಿಹಿಯಾದ ಖರ್ಜೂರವನ್ನು ನಿತ್ಯವೂ ಸೇವಿಸುವ ಮೂಲಕ ಪಡೆಯುವ ಆರೋಗ್ಯಕರ ಪ್ರಯೋಜನಗಳನ್ನು ನೋಡೋಣ:

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ:

ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ:

ಖರ್ಜೂರಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇದರಲ್ಲಿರುವ ಪೋಷಕಾಂಶಗಳು ರಕ್ತನಾಳಗಳ ಒಳಗೆ ಜಿಡ್ಡು ಕಟ್ಟಿಕೊಳ್ಳುವುದನ್ನು ತಡೆಯುವ ಮೂಲಕ ರಕ್ತಸಂಚಾರ ಸುಲಭವಾಗಿಸುತ್ತದೆ. ಈ ಮೂಲಕ ಎದುರಾಗಬಹುದಾಗಿದ್ದ ಗಂಭೀರ ತರನಾದ ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ. ಅಲ್ಲದೇ ಖರ್ಜೂರದಲ್ಲಿರುವ ಐಸೋಫ್ಲೇವೋನ್ ಹಾಗೂ ಫೈಟೋ ಈಸ್ಟ್ರೋಜೆನ್ ಎಂಬ ಪೋಷಕಾಂಶಗಳು ಹೃದಯದ ಆರೋಗ್ಯ ಮತ್ತು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ಜೀರ್ಣಕ್ರಿಯೆಗೆ ಸಹಕರಿಸುತ್ತವೆ

ಜೀರ್ಣಕ್ರಿಯೆಗೆ ಸಹಕರಿಸುತ್ತವೆ

ಖರ್ಜೂರದಲ್ಲಿ ಹೆಚ್ಚಿನ ಪ್ರಮಾಣದ ಖನಿಜಗಳು ಹಾಗೂ ಕರಗುವ ನಾರು ಇದ್ದು ಜೀರ್ಣಕ್ರಿಯೆಯನ್ನು ಉತ್ತ್ಮಗೊಳಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ಕರಗುವ ನಾರು ಮಲಬದ್ದತೆಯಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಅತಿಸಾರದಿಂದ ಬಳಲುವ ರೋಗಿಗಳಿಗೆ ವರದಾನವಾಗಿದೆ. ಅಲ್ಲದೇ ನಿತ್ಯದ ಖರ್ಜೂರದ ಸೇವನೆಯಿಂದ ಕರುಳುಗಳ ಒಳಗೆ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚುವ ಮೂಲಕ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಅಪಾರವಾಗಿ ತಗ್ಗುತ್ತದೆ.

ಮೂಳೆಗಳನ್ನು ದೃಢಪಡಿಸುತ್ತದೆ

ಮೂಳೆಗಳನ್ನು ದೃಢಪಡಿಸುತ್ತದೆ

ಮೂಳೆಗಳನ್ನು ದೃಢಪಡಿಸಲು ಬೇಕಾದ ಎಲ್ಲಾ ಖನಿಜಗಳು ಖರ್ಜೂರದಲ್ಲಿವೆ. ಪ್ರಮುಖವಾದ ಖನಿಜಗಳಾದ ಮ್ಯಾಂಗನೀಸ್, ಮೆಗ್ನೀಶಿಯಂ, ಸೆಲೆನಿಯಂ ಹಾಗೂ ತಾಮ್ರ ಮೂಳೆಗಳ ಕಣಗಳ ದೃಢತೆ ಹೆಚ್ಚಿಸುತ್ತವೆ ಹಾಗೂ ವಯಸ್ಸಾದಂತೆ ಮೂಳೆಗಳು ಶಿಥಿಲವಾಗುವುದರಿಂದ ತಡೆಯುತ್ತದೆ. ಅಲ್ಲದೇ ನಿತ್ಯದ ಖರ್ಜೂರ ಸೇವನೆಯಿಂದ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ osteoporosis ಹಾಗೂ ಇದೇ ಮಾದರಿಯ ಇತರ ಮೂಳೆಗಳ ತೊಂದರೆಗಳಿಂದ ರಕ್ಷಿಸುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:

ಖರ್ಜೂರದಲ್ಲಿ ಕೊಬ್ಬಿನಂಶ ಇಲ್ಲದೇ ಇರುವ ಕಾರಣ ಖರ್ಜೂರದ ನಿತ್ಯದ ಸೇವನೆಯಿಂದ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ, ಬದಲಿಗೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಖರ್ಜೂರದಲ್ಲಿರುವ ಉತ್ತಮ ಪ್ರಮಾಣದ ಕಬ್ಬಿಣ ಹಾಗೂ ಕರಗುವ ನಾರು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿರಿಸುವಲ್ಲಿ ಸಹಕರಿಸುತ್ತವೆ.

ರಕ್ತದೊತ್ತಡವನ್ನು ಸೂಕ್ತ ಮಟ್ಟದಲ್ಲಿರಿಸುತ್ತದೆ

ರಕ್ತದೊತ್ತಡವನ್ನು ಸೂಕ್ತ ಮಟ್ಟದಲ್ಲಿರಿಸುತ್ತದೆ

ಖರ್ಜೂರಗಳಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇರುವ ಕಾರಣ ಖರ್ಜೂರದ ಸೇವನೆಯಿಂದ ರಕ್ತದ ಒತ್ತಡ ಆರೋಗ್ಯಕರ ಮಟ್ಟದಲ್ಲಿರಲು ನೆರವಾಗುತ್ತದೆ. ಅಲ್ಲದೇ ಪೊಟ್ಯಾಶಿಯಂ ನಮ್ಮ ಆಹಾರದ ಮೂಲಕ ಸೇವಿಸುವ ಉಪ್ಪಿನಲ್ಲಿರುವ ಸೋಡಿಯಂ ಲವಣದ ಪ್ರಭಾವವನ್ನು ಕಡಿಮೆಯಾಗಿಸಲೂ ನೆರವಾಗುತ್ತದೆ. ಸೋಡಿಯಂ ಪ್ರಮಾಣ ಹೆಚ್ಚಿದ್ದಷ್ಟೂ ರಕ್ತದ ಒತ್ತಡವೂ ಹೆಚ್ಚಿರುತ್ತದೆ. ಜೊತೆಗೇ ಖರ್ಜೂರದಲ್ಲಿರುವ ಉತ್ತಮ ಪ್ರಮಾಣದ ಇತರ ಖನಿಜಗಳೂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಕಡಿಮೆಯಾಗಲು ತಮ್ಮ ಪಾಲಿನ ನೆರವನ್ನು ನೀಡುತ್ತವೆ. ತನ್ಮೂಲಕ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.

ಅರಿವಿನ ಶಕ್ತಿ ಹೆಚ್ಚಿಸುತ್ತದೆ

ಅರಿವಿನ ಶಕ್ತಿ ಹೆಚ್ಚಿಸುತ್ತದೆ

ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ಖರ್ಜೂರದ ಸೇವನೆಯಿಂದ ಮಾನಸಿಕ ಒತ್ತಡ ಮೂಲಕ ಎದುರಾಗುವ ಉತ್ಕರ್ಷಣಶೀಲ ಒತ್ತಡ (oxidative stress) ಹಾಗೂ ಇತರ ಬಗೆಯ ಉರಿಯೂತಗಳ ಮೂಲಕ ಮೆದುಳಿನ ಜೀವಕೋಶಗಳು ನಷ್ಟವಾಗದಂತೆ ತಡೆಯುತ್ತದೆ. ತನ್ಮೂಲಕ ವಯಸ್ಸಾದಂತೆಯೇ ಎದುರಾಗುವ ನ್ಯೂರಾನ್ ಗಳ ನಷ್ಟವನ್ನು ತಡೆಯುತ್ತದೆ. ವಯಸ್ಸಾದಂತೆ ಮರೆವು ಹೆಚ್ಚಲಿಕ್ಕೆ ನ್ಯೂರಾನ್ ಗಳ ಸಂಖ್ಯೆ ಕ್ಷೀಣಿಸುವುದೇ ಆಗಿದೆ. ನಿತ್ಯದ ಖರ್ಜೂರ ಸೇವನೆ ಈ ಗತಿಯನ್ನು ಅತಿ ನಿಧಾನಗೊಳಿಸಿ ಅರಿವಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ

ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ

ಖರ್ಜೂರದಲ್ಲಿ ಸುಕ್ರೋಸ್, ಫ್ರುಕ್ಟೋಸ್ ಹಾಗೂ ಗ್ಲೂಕೋಸ್ ಎಂಬ ನೈಸರ್ಗಿಕ ಸಕ್ಕರೆಗಳು ಹೆಚ್ಚಿನ ಪ್ರಮಾಣದಲ್ಲಿದೆ. ಈ ಮೂರೂ ಸಕ್ಕರೆಗಳೇ ಖರ್ಜೂರ ಸಿಹಿಯಾಗಿರಲು ಕಾರಣ. ಈ ನೈಸರ್ಗಿಕ ಸಕ್ಕರೆಗಳು ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು ಬಿಡುಗಡೆ ಮಾಡ್ತುತವೆ ಹಾಗೂ ತನ್ಮೂಲಕ ಅಪಾರವಾದ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಖರ್ಜೂರದಲ್ಲಿರುವ ಖನಿಜಗಳು ಜೀವರಾಸಾಯನಿಕ ಕ್ರಿಯೆಗೆ ಹೆಚ್ಚಿನ ಪ್ರಚೋದನೆ ನೀಡುತ್ತದೆ ಹಾಗೂ ದಿನದ ಚಟುವಟಿಕೆಗಳಿಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.

ರಾತ್ರಿಯ ಕುರುಡುತನದಿಂದ ರಕ್ಷಿಸುತ್ತದೆ

ರಾತ್ರಿಯ ಕುರುಡುತನದಿಂದ ರಕ್ಷಿಸುತ್ತದೆ

ಖರ್ಜೂರದಲ್ಲಿ ವಿಟಮಿನ್ ಎ ಕಣ್ಣಿನ ಆರೋಗ್ಯವನನ್ನು ವೃದ್ದಿಸುತ್ತದೆ. ಜೊತೆಗೇ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ ಹಾಗೂ ರಾತ್ರಿಯ ಕುರುಡುತನದಿಂದ ರಕ್ಷಿಸುತ್ತದೆ. ವಿಟಮಿನ್ ಎ ಕೊರತೆಯಿಂದ ಎದುರಾಗುವ ಕುರುಡುತನ, ವಿಶೇಷವಾಗಿ ಮಕ್ಕಳಲ್ಲಿ ಎದುರಾಗುವ ರಾತ್ರಿಯ ಕುರುಡುತನ ಎದುರಾಗುತ್ತದೆ. ಆದ್ದರಿಂದ ಈ ಕಾರಣಕ್ಕಾಗಿಯಾದರೂ ನಿತ್ಯವೂ ಖರ್ಜೂರಗಳನ್ನು ಸೇವಿಸುವುದು ಅಗತ್ಯ.

ಗರ್ಭಿಣಿಯರಿಗೆ ಉತ್ತಮ ಆಹಾರವಾಗಿದೆ

ಗರ್ಭಿಣಿಯರಿಗೆ ಉತ್ತಮ ಆಹಾರವಾಗಿದೆ

ಗರ್ಭಾವಸ್ಥೆಯಲ್ಲಿ ಗರ್ಭಾಶಯದಲ್ಲಿ ಕಾಣಿಸಿಕೊಳ್ಳುವ ದ್ರಾಕ್ಷಿಗೊಂಚಲಿನಂತಹ ಗಡ್ಡೆಗಳು ಹೆಚ್ಚಿನ ಅಪಾಯ ಒಡ್ಡಬಹುದು. ಖರ್ಜೂರದಲ್ಲಿರುವ ಹೆಚ್ಚಿನ ಪ್ರಮಾಣದ ಕರಗುವ ನಾರು ಗರ್ಭಿಣಿಯ ದೇಹದಲ್ಲಿ ಈ ಗಡ್ಡೆಗಳಾಗದಿರಲು ಸಹಕರಿಸುತ್ತದೆ. ಅಲ್ಲದೇ ನಿತ್ಯದ ಖರ್ಜೂರದ ಸೇವನೆಯಿಂದ ಗರ್ಭಾವಸ್ಥೆಗೆ ಅಗತ್ಯವಿರುವ ಪೋಷಕಾಂಶ ಹಾಗೂ ಖನಿಜಗಳನ್ನು ಪಡೆಯುವ ಮೂಲಕ ಗರ್ಭಿಣಿ ಇಡಿಯ ದಿನ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಹಾಗೂ ಗರ್ಭಾವಸ್ಥೆಯನ್ನು ಆರಾಮದಾಯಕವಾಗಿ ಕಳೆಯಲು ನೆರವಾಗುತ್ತದೆ.

ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.

ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.

ಖರ್ಜೂರದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಹಾಗೂ ವಿಟಮಿನ್ ಡಿ ಇವೆ. ಇವು ತ್ವಚೆಯ ನೈಸರ್ಗಿಕ ಸೆಳೆತವನ್ನು ಅಗತ್ಯವಿದ್ದಷ್ಟೇ ಇರುವಂತೆ ನೋಡಿಕೊಳ್ಳುವ ಮೂಲಕ ತ್ವಚೆ ಕಾಂತಿಯುಕ್ತ, ಕಲೆಯಿಲ್ಲದ ಹಾಗೂ ಆರೋಗ್ಯಕರವಾಗಿರಲು ನೆರವಾಗುತ್ತದೆ.

ಈ ಲೇಖನ ನಿಮಗೆ ಉಪಯುಕ್ತವೆಂದು ಕಂಡುಬಂದರೆ ಇದರ ಕೊಂಡಿಯನ್ನು ನಿಮ್ಮ ಆಪ್ತರು, ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಇದರ ಪ್ರಯೋಜನವನ್ನು ಅವರೂ ಪಡೆಯುವಂತಾಗಲು ಸಹಕರಿಸಿ.

English summary

10 Reasons Why Eating Dates Daily Can Do Wonders For Your Body!

The date is a very popular sweet fruit that is widely cultivated all over the Middle East and the Indian subcontinent. But this fruit is consumed by the people all over the world due to its wonderful taste and many health benefits. It is an ancient fruit that was consumed even centuries ago in its unprocessed form. So, it is widely exported to many other countries, where even the health-conscious people prefer to eat the dates for the best interests of their health.
Story first published: Wednesday, January 10, 2018, 10:00 [IST]