For Quick Alerts
ALLOW NOTIFICATIONS  
For Daily Alerts

ನಾಟಿ ಮದ್ದು: ಅಮೃತಬಳ್ಳಿಯ 10 ಆರೋಗ್ಯಕಾರಿ ಪ್ರಯೋಜನಗಳು

By Divya Pandit
|

ಆಯುರ್ವೇದ ಗಿಡಮೂಲಿಕೆಗಳಲ್ಲಿ ವಿಶೇಷವಾದ ಔಷಧೀಯ ಗುಣಗಳಿರುತ್ತವೆ. ಇವುಗಳ ಸೂಕ್ತ ಬಳಕೆ ಹಾಗೂ ಸೇವನೆಯಿಂದ ವಿವಿಧ ವ್ಯಾದಿಗಳನ್ನು ಗುಣಪಡಿಸಬಹುದು. ಅಂತಹ ಒಂದು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಗಿಡಮೂಲಿಕೆಗಳಲ್ಲಿ ಅಮೃತ ಬಳ್ಳಿಯೂ ಒಂದು. ಇದನ್ನು ಗುಡುಚಿ ಎಂತಲೂ ಕರೆಯುತ್ತಾರೆ.

ಇದನ್ನು ನಾವು ವಿವಿಧ ರೂಪದಲ್ಲಿ ಪಡೆದುಕೊಳ್ಳಬಹುದು. ವಿಶಿಷ್ಟವಾದ ಪೊದೆಯ ರೂಪದಲ್ಲಿ ಹಾಗೂ ಮರಕ್ಕೆ ಹಬ್ಬುವುದರ ಮೂಲಕ ಬೆಳೆಯುತ್ತದೆ. ಇದು ಬೂದಿ ಮಿಶ್ರಿತ ತೊಗಟೆಯನ್ನು ಹೊಂದಿರುತ್ತದೆ. ಹಾಲು ಮಿಶ್ರಿತ ಹಳದಿ ಬಣ್ಣದ ಹೂವನ್ನು ಬಿಡುವುದು. ಇದರ ಕಾಯಿ ಹಣ್ಣಾದಾಗ ಗಾಢವಾದ ಕೆಂಪು ಬಣ್ಣವನ್ನು ಹೋಲುವುದು. ಇದರ ಕಾಂಡ, ಎಲೆ ಹಾಗೂ ಬೇರುಗಳಿಂದ ಔಷಧಿಯನ್ನು ತಯಾರಿಸಲಾಗುವುದು.

ಅಮೃತ ಬಳ್ಳಿಯನ್ನು ಜಜ್ಜಿ ನೀರಿನಲ್ಲಿ ನೆನೆಹಾಕಿ. ನಂತರ ನೀರನ್ನು ಸೋಸಿ ಕುಡಿಯುವುದರಿಂದ ಶರೀರದಲ್ಲಿ ಬಲವನ್ನು ಪಡೆದುಕೊಳ್ಳಬಹುದು. ಚೈತನ್ಯ ದೊರೆಯುವುದು. ಹೃದಯಕ್ಕೆ ಹಿತಕರವಾದದ್ದು. ತ್ರಿದೋಷಗಳನ್ನು ಶಮನ ಮಾಡುವಂತಹದ್ದು. ಪಿತ್ತಕೋಶ, ಯಕೃತ್, ದೃಷ್ಟಿದೋಷ, ಮಧುಮೇಹ, ರಕ್ತ ಸಮಸ್ಯೆ ಹಾಗೂ ಶುದ್ಧೀಕರಣಕ್ಕೆ ಸಹಾಯ ಮಾಡುವುದು.

1.ಯಕೃತ್ ಸಮಸ್ಯೆ

1.ಯಕೃತ್ ಸಮಸ್ಯೆ

ಯಕೃತ್ತಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ಗುಣಪಡಿಸುವುದು. ಹೊಟ್ಟೆ ಉಬ್ಬರ, ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಣೆ ಮಾಡುವುದು.

ಸಲಕರಣೆ:

ಅಮೃತ ಬಳ್ಳಿಯ ಒಂದು ಹಸಿ ತುಂಡು, ಬೇವಿನ ಚಿಗುರು ಎಲೆ, ಸ್ವಲ್ಪ ಹಿಪ್ಪಲಿ.

ವಿಧಾನ:

- ಈ ಮೂರು ಸಲಕರಣೆಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಹಾಕಿ.

- ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ.

- ಮುಂಜಾನೆ ಸಾಮಾಗ್ರಿಗಳನ್ನು ನೀರಿನಿಂದ ಕಿವುಚಿ ತೆಗೆಯಿರಿ/ ಸೋಸಿ.

- ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು.

- ನಿತ್ಯ ಮುಂಜಾನೆ ಮತ್ತು ರಾತ್ರಿ ಸೇರಿದಂತೆ ಎರಡು ಬಾರಿ ಸೇವಿಸ ಬೇಕು.

- 10 ರಿಂದ 15 ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಸಿದೆ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹೊಟ್ಟೆಯಲ್ಲಿ ಉಂಟಾಗುವ ಅನೇಕ ತೊಂದರೆಗಳು ನಿವಾರಣೆಯಾಗುವವು.

ದೇಹದ ಲಿವರ್‌ನ ಕಲ್ಮಶಗಳನ್ನು ನಿವಾರಿಸುವ ಅದ್ಭುತ ಆಹಾರಗಳು...

2.ದೃಷ್ಟಿ ದೋಷ

2.ದೃಷ್ಟಿ ದೋಷ

ದೃಷ್ಟಿ ದೋಷ ಅಥವಾ ದೃಷ್ಟಿ ಮಾಂದ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿ ಅತ್ಯುತ್ತಮ ಚಿಕಿತ್ಸೆ ನೀಡುವುದು.

ಸಲಕರಣೆಗಳು:

ಅಮೃತ ಬಳ್ಳಿ ಮತ್ತು ಜೇನು ತುಪ್ಪ.

ವಿಧಾನ:

- ಅಮೃತ ಬಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.

- ಒಂದು ಪಾತ್ರೆಯಲ್ಲಿ 2 ಲೋಟ ನೀರನ್ನು ಸೇರಿಸಿ.

- ನೀರಿನ ಪಾತ್ರೆಗೆ ಅಮೃತ ಬಳ್ಳಿಯ ತುಂಡನ್ನು ಸೇರಿಸಿ, ಚೆನ್ನಾಗಿ ಕುದಿಸಿ.

- ನಂತರ ದ್ರಾವಣವನ್ನು ಸೋಸಿ, ಸ್ವಲ್ಪ ತ್ರಿಫಲ ಚೂರ್ಣ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.

- ಇದನ್ನು 45 ದಿನಗಳ ಕಾಲ ನಿತ್ಯವೂ ಸೇವಿಸುವುದರಿಂದ ದೃಷ್ಟಿ ದೋಷಗಳನ್ನು ನಿವಾರಿಸಬಹುದು.

- ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಇರುವವರು ಈ ಔಷಧವನ್ನು ಸೇವಿಸುವುದಿಂದ ದೃಷ್ಟಿ ದೋಷ ಬಹುಬೇಗ ನಿವಾರಣೆಯಾಗುವುದು.

3. ವಾಕರಿಕೆ/ವಾಂತಿ

3. ವಾಕರಿಕೆ/ವಾಂತಿ

ವಾಂತಿಯನ್ನು ಬಲು ಸುಲಭವಾಗಿ ನಿಯಂತ್ರಿಸುವುದು ಅಮೃತ ಬಳ್ಳಿ.

ಸಲಕರಣೆ:

ಅಮೃತ ಬಳ್ಳಿ.

ವಿಧಾನ:

- ಸ್ವಲ್ಪ ಅಮೃತ ಬಳ್ಳಿ ತುಂಡುಗಳನ್ನು ತೆಗೆದುಕೊಂಡು, ಚೆನ್ನಾಗಿ ಜಜ್ಜಿ.

- ಬಳಿಕ ನೀರಲ್ಲಿ ಹಾಕಿ, ಸ್ವಲ್ಪ ಸಮಯ ನೆನೆಯಿಡಿ.

- ಅಮೃತ ಬಳ್ಳಿಯನ್ನು ಕಿವುಚಿ ತೆಗೆದು, ನೀರನ್ನು ಸೋಸಿ.

- ಬಳಿಕ ಆ ದ್ರಾವಣವನ್ನು ಸೇವಿಸಿ.

4. ಕೂದಲು ಸೊಂಪಾಗಿ ಬೆಳೆಯುವುದು:

4. ಕೂದಲು ಸೊಂಪಾಗಿ ಬೆಳೆಯುವುದು:

ಅಮೃತ ಬಳ್ಳಿ ಈ ಮೊದಲೆ ಹೇಳಿದಂತೆ ದಿವ್ಯ ಔಷಧಿಯ ಗುಣವನ್ನು ಒಳಗೊಂಡಿದೆ. ಮನೆಯಲ್ಲಿ ಜಾಗವಿದ್ದರೆ ಅಲ್ಲಿ ಅಮೃತ ಬಳ್ಳಿಯನ್ನು ಬೆಳೆಸಿ. ಇದಕ್ಕೆ ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ. ಇದನ್ನು ಬಳ್ಳಿಯಂತೆ ಹಬ್ಬಿಸಬಹುದು ಅಥವಾ ಚಪ್ಪರದಂತೆ ಮಾಡಿಕೊಳ್ಳಬಹುದು. ಇದರ ಗಾಳಿ ಸೇವನೆಯಿಂದಲೂ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಮೃತ ಬಳ್ಳಿಯ ಚಪ್ಪರದ ಕೆಳಗೆ ನಿತ್ಯವೂ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸಾಕು ತಲೆಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ಕೂದಲು ಸೊಂಪಾಗಿ ಬೆಳೆಯುವುದು. ಅಮೃತ ಬಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಿಸಿಕೊಳ್ಳಬಹುದು.

ಸಾಮಾಗ್ರಿ:

ಅಮೃತ ಬಳ್ಳಿ, ಎಳ್ಳೆಣ್ಣೆ, ಪಚ್ಚಕರ್ಪೂರ.

ವಿಧಾನ:

-ಅಮೃತ ಬಳ್ಳಿಯನ್ನು ಜಜ್ಜಿ, ನೀರಿಗೆ ಹಾಕಿ ಕುದಿಸಿ.

- ಕಷಾಯವು ಸಾಕಷ್ಟು ಇಂಗಿದ ಮೇಲೆ, ಸಮಪ್ರಮಾಣದಲ್ಲಿ ಎಳ್ಳೆಣ್ಣೆಯನ್ನು ಸೇರಿಸಿ.

- ಪುನಃ ಕುದಿಯಲು ಇಡಿ. ಸ್ವಲ್ಪ ಕುದಿಯಲು ಪ್ರಾರಂಭಿಸಿದ ಬಳಿಕ ಪಚ್ಚ ಕರ್ಪೂರವನ್ನು ಸೇರಿಸಿ.

- ನೀರಿನಂಶ ಹೋಗುವವರೆಗೆ ಕುದಿಸಬೇಕು.

- ಸ್ವಲ್ಪ ಸಮಯ ಆರಲು ಬಿಟ್ಟು, ಸೋಸಿಕೊಳ್ಳಿ.

- ಸೋಸಿದ ಎಣ್ಣೆಯನ್ನು ನಿತ್ಯವೂ ನೆತ್ತಿಗೆ ಅನ್ವಯಿಸಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಣೆಯಾಗುವುದು. ಕಣ್ಣಿಗೆ ತಂಪನ್ನು ನೀಡುವುದು ಹಾಗೂ ಮಿದುಳಿಗೆ ಉತ್ತಮ ಆರೈಕೆ ನೀಡುವುದು.

5. ಹುಳಿ ತೇಗು ಅಥವಾ ಗ್ಯಾಸ್ಟ್ರಿಕ್

5. ಹುಳಿ ತೇಗು ಅಥವಾ ಗ್ಯಾಸ್ಟ್ರಿಕ್

ಸೂಕ್ತ ಆಹಾರ ಸೇವನೆ ಇಲ್ಲದೆ ಅಥವಾ ಅನುಚಿತ ಆಹಾರ ಪದ್ಧತಿಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಸಹಜ. ಅತಿಯಾದ ಹುಳಿ ತೇಗು, ಗಂಟಲು ಉರಿ, ಎದೆ ಉರಿ ಅನುಭವಿಸುವವರಿಗೆ ಈ ಸಮಸ್ಯೆಗೆ ಅಮೃತ ಬಳ್ಳಿ ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದು.

ಸಲಕರಣೆ:

ಒಂದು ತುಂಡು ಅಮೃತ ಬಳ್ಳಿ ಮತ್ತು ತ್ರಿಫಲ ಚೂರ್ಣ

ವಿಧಾನ:

- ಅಮೃತ ಬಳ್ಳಿಯನ್ನು ತುಂಡರಿಸಿಕೊಳ್ಳಿ.

- ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ, ಕುದಿಸಿ.

- ಕುದಿಸಿಕೊಂಡ ಕಷಾಯವನ್ನು ಸೋಸಿ ತೆಗೆದಿಟ್ಟುಕೊಳ್ಳಿ.

- ಗಣನೀಯವಾಗಿ ಈ ಕಷಾಯವನ್ನು ಸೇವಿಸುತ್ತಾ ಬಂದರೆ ಹಿಳಿತೇಗು ಅಥವಾ ಗ್ಯಾಸ್ಟ್ರಿಕ್ ಅಂತಹ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು.

ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ? ಇಲ್ಲಿದೆ ನೋಡಿ ಸರಳ ಪರಿಹಾರಗಳು

6. ಅಧಿಕ ತೂಕ ಹೊಂದಿದವರಿಗೆ:

6. ಅಧಿಕ ತೂಕ ಹೊಂದಿದವರಿಗೆ:

ತೂಕ ಇಳಿಸಲು ಸಾಕಷ್ಟು ಮಂದಿ ವಿವಿಧ ರೀತಿಯ ಔಷಧ ಹಾಗೂ ದೇಹ ದಂಡನೆಯನ್ನು ಮಾಡುತ್ತಾರೆ. ಇಂತಹವರು ಅಮೃತ ಬಳ್ಳಿಯನ್ನು ಬಳಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಏಕೆಂದರೆ ಇದರಲ್ಲಿ ಬೊಜ್ಜನ್ನು ಕರಗಿಸುವ ದಿವ್ಯ ಗುಣವಿದೆ.

ಸಲಕರಣೆ:

ಒಂದು ತುಂಡು ಅಮೃತ ಬಳ್ಳಿ, ತ್ರಿಫಲ ಚೂರ್ಣ, ಲೋಹ ಬಸ್ಮ ಮತ್ತು ಜೇನುತುಪ್ಪ.

ವಿಧಾನ:

- ಅಮೃತ ಬಳ್ಳಿಯನ್ನು ತುಂಡರಿಸಿಕೊಳ್ಳಿ.

- ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ, ಕುದಿಸಿ.

- ಕುದಿಸಿ ಸೋಸಿಕೊಂಡ ಕಷಾಯಕ್ಕೆ ಲೋಹ ಬಸ್ಮ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.

- 45 ದಿನಗಳ ಕಾಲ ಗಣನೀಯವಾಗಿ ಕಷಾಯವನ್ನು ಸೇವಿಸುವುದರಿಂದ ದೇಹದ ತೂಕ ಇಳಿಯುವುದು.

7.ಹೃದಯ ಆರೋಗ್ಯಕ್ಕೆ

7.ಹೃದಯ ಆರೋಗ್ಯಕ್ಕೆ

ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ನಿವಾರಿಸುವುದು. ಅನಿರೀಕ್ಷಿತವಾಗಿ ಹೆಚ್ಚುವ ಹೃದಯ ಬಡಿತ ಹಾಗೂ ಅನಿರೀಕ್ಷಿತವಾಗಿ ಕಡಿಮೆಯಾಗುವ ಹೃದಯ ಬಡಿತದ ಸಮಸ್ಯೆಗಳಿಗೆ ಸೂಕ್ತ ಆರೈಕೆ ಮಾಡುವುದು.

ಸಲಕರಣೆಗಳು:

ಅಮೃತ ಬಳ್ಳಿ

ವಿಧಾನ:

- ಅಮೃತ ಬಳ್ಳಿಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ನೆನೆಹಾಕಿ.

- ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ.

- ಮುಂಜಾನೆ ಚೆನ್ನಾಗಿ ಕಿವುಚಿ ತೆಗೆಯಿರಿ/ ಸೋಸಿ.

- ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು.

- ನಿತ್ಯವು ಇದನ್ನು ಗಣನೀಯವಾಗಿ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುವುದು.

 8.ಮಧುಮೇಹ ಸಮಸ್ಯೆ:

8.ಮಧುಮೇಹ ಸಮಸ್ಯೆ:

ಮಧುಮೇಹ ಇತ್ತೀಚೆಗೆ ಸಾಮಾನ್ಯವಾದ ಕಾಯಿಲೆಯಾಗಿದೆ. ಕೆಲವರು ನಿತ್ಯ ಒಂದು ಅಮೃತ ಬಳ್ಳಿಯ ಎಲೆಯನ್ನು ಸೇವಿಸುವುದರ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಅಮೃತ ಸತ್ಯವವನ್ನು ಬಳಸುವುದರ ಮೂಲಕವು ನಿಯಂತ್ರಿಸಬಹುದು.

ಸಲಕರಣೆ:

ಅಮೃತ ಬಳ್ಳಿಯ ಸತ್ವ, ನೇರಳೆ ಬೀಜದ ಪುಡಿ, ಬಿಲ್ವ ಪತ್ರೆಯ ರಸ.

ವಿಧಾನ:

- ಬಿಲ್ವ ಪತ್ರೆಯನ್ನು ರುಬ್ಬಿ ರಸವನ್ನಾಗಿ ಮಾಡಿಕೊಳ್ಳಿ.

- ಬಿಲ್ವಪತ್ರೆಯ ರಸಕ್ಕೆ ಅಮೃತ ಬಳ್ಳಿಯ ಸತ್ವ ಮತ್ತು ನೇರಳೆ ಬೀಜದ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ, ಮಿಶ್ರಗೊಳಿಸಿ.

- ನಿತ್ಯವೂ ಈ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿ ಇಡುವುದು.

9. ಕಿವಿ ನೋವು

9. ಕಿವಿ ನೋವು

ಕೆಲವರಿಗೆ ಆಗಾಗ ಕಿವಿ ನೋವು ಕಾಣಿಸಿಕೊಳ್ಳುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಬಹುಬೇಗ ಉಪಶಮನ ನೀಡುವುದು ಅಮೃತ ಬಳ್ಳಿ.

ಸಲಕರಣೆ:

ಅಮೃತ ಬಳ್ಳಿ.

ವಿಧಾನ:

- ಅಮೃತ ಬಳ್ಳಿಯನ್ನು ಜಜ್ಜಿ ರಸವನ್ನು ತೆಗೆಯಿರಿ.

- ಸೋಸಿಕೊಂಡ ರಸದ ಒಂದೊಂದು ಹನಿಯನ್ನು ಎರಡು ಕಿವಿಗೆ ಬಿಡಿ.

- ಇದರಿಂದ ಕಿವಿ ನೋವು ಬಹುಬೇಗ ನಿವಾರಣೆಯಾಗುವುದು.

10.ಕುರ/ಕೀವು ತುಂಬಿದ ಗಾಯ:

10.ಕುರ/ಕೀವು ತುಂಬಿದ ಗಾಯ:

ಅಲರ್ಜಿ ಹಾಗೂ ರಕ್ತ ಸಮಸ್ಯೆಯಿಂದ ಕುರ ಹಾಗೂ ಕೀವು ತುಂಬಿದಂತಹ ಗಾಯಗಳಿಗೆ ಅಮೃತ ಬಳ್ಳಿ ಉತ್ತಮ ಆರೈಕೆ ಮಾಡುವುದು.

ಸಲಕರಣೆಗಳು:

ಅಮೃತ ಬಳ್ಳಿ ಮತ್ತು ಸೊಗದೆ ಬೇರು.

ವಿಧಾನ:

- ಅಮೃತ ಬಳ್ಳಿ ಮತ್ತು ಸೊಗದೆ ಬೇರನ್ನು ತೆಗೆದುಕೊಂಡು ಜಜ್ಜಿಕೊಳ್ಳಿ.

- ನಂತರ ನೀರಿಗೆ ಸೇರಿಸಿ, ಚೆನ್ನಾಗಿ ಕುದಿಸಿ ಕಷಾಯ ಮಾಡಿ.

- ಸೋಸಿಕೊಂಡ ಕಷಾಯಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಸೇವಿಸಿ.

- ಗಣನೀಯವಾಗಿ ಈ ಕಷಾಯವನ್ನು ಸೇವಿಸುವುದರಿಂದ ಗಾಯ ಗುಣವಾಗುವುದು. ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು.

English summary

10 Health Benefits of Tinospora Cordifolia (Amrutha Balli)

Tinospora cordifolia or Amrutha Balli has an importance in traditional ayurvedic medicine used for ages in the treatment of fever, jaundice, chronic diarrhea, cancer, dysentery, bone fracture, pain, asthuma, skin disease, poisonous insect, snake bite, eye disorders.
Story first published: Tuesday, August 21, 2018, 17:06 [IST]
X
Desktop Bottom Promotion