For Quick Alerts
ALLOW NOTIFICATIONS  
For Daily Alerts

ನೋಡಿ ಈ ಆಹಾರಗಳು ಮೆದುಳಿಗೆ ಬಹಳ ಒಳ್ಳೆಯದು..ತಪ್ಪದೇ ಸೇವಿಸಿ

By Hemanth
|

ಹಸಿ ತರಕಾರಿ ಹಾಗೂ ಹಣ್ಣುಗಳನ್ನು ತಿಂದರೆ ಅದು ಆರೋಗ್ಯಕ್ಕೆ ತುಂಬಾ ಸಹಕಾರಿ ಎಂದು ಹಿಂದಿನಿಂದಲೂ ಹೇಳಲಾಗುತ್ತಿದೆ. ಅದೇ ರೀತಿ ನ್ಯೂಜಿಲೆಂಡ್ ನ ಒಟಾಗೋ ಯೂನಿವರ್ಸಿಟಿ ನಡೆಸಿರುವಂತಹ ಸಂಶೋಧನೆಯೊಂದರ ಪ್ರಕಾರ ಹಸಿ ಹಣ್ಣುಗಳು ಹಾಗೂ ತರಕಾರಿ ಸೇವನೆ ಮಾಡಿದರೆ ಅದರಿಂದ ಮಾನಸಿಕ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಕಂಡುಕೊಂಡಿದೆ. ಯಾವ ರೀತಿಯಲ್ಲಿ ಹಸಿ ಹಣ್ಣುಗಳನ್ನು ತಿನ್ನಬೇಕು ಮತ್ತು ತಿನ್ನಬಾರದು ಎನ್ನುವ ಬಗ್ಗೆಯೂ ಅಧ್ಯಯನವು ವಿವರವಾಗಿ ಹೇಳಿದೆ.

ಹಣ್ಣು ಹಾಗೂ ತರಕಾರಿಗಳನ್ನು ತುಂಬಾ ಕಡಿಮೆ ಸೇವನೆ ಮಾಡುವಂತಹ, ಮಾನಸಿಕ ಆರೋಗ್ಯದ ಸಮಸ್ಯೆಗೆ ಬೇಗನೆ ಸಿಲುಕುವ ಯುವ ಸಮುದಾಯದ ಮೇಲೆ ಈ ಅಧ್ಯಯನ ನಡೆಸಲಾಯಿತು. ಹಸಿ ಹಣ್ಣುಗಳು ಹಾಗೂ ತರಕಾರಿಗಳು, ಬೇಯಿಸಿದ ತರಕಾರಿಗಳು, ಅವರ ಜೀವನಶೈಲಿ, ಬೌಗೋಳಿಕ ಪರಿಸ್ಥಿತಿಗಳನ್ನು ಗಮನಹರಿಸಲಾಯಿತು.

ಇವುಗಳು ಮಾನಸಿಕ ಆರೋಗ್ಯಗಳಾದ ನಿದ್ರೆ, ವ್ಯಾಯಾಮ ಮತ್ತು ಅನಾರೋಗ್ಯ ಆಹಾರ ಕ್ರಮ, ಇತ್ಯಾದಿಗಳ ಮೇಲೆ ಪರಿಣಾಮ ಬೀರುವುದು. ಹಸಿ ತರಕಾರಿ ಹಾಗೂ ಹಣ್ಣುಗಳ ಸೇವನೆ ಮಾಡುವುದರಿಂದ ಖಿನ್ನತೆ ಲಕ್ಷಣಗಳು ಕುಗ್ಗುವುದು, ಜೀವನ ಸಂತೃಪ್ತಿ ಹೆಚ್ಚುವುದು, ಧನಾತ್ಮಕ ಮನಸ್ಥಿತಿ ಮತ್ತು ಕೆಲಸ ಹಾಗೂ ದೈನಂದಿಕ ಕಾರ್ಯಗಳಲ್ಲಿ ವ್ಯಸ್ತವಾಗಿರುವ ಭಾವನೆ ಉಂಟುಮಾಡಲು ನೆರವಾಗುವುದು. ಮಾನಸಿಕ ಆರೋಗ್ಯಕ್ಕೆ ಇರುವ ಹತ್ತು ಆಹಾರಗಳ ಬಗ್ಗೆ ನೀವು ಇಲ್ಲಿ ತಿಳಿಯಿರಿ....

ಬಾಳೆಹಣ್ಣು

ಬಾಳೆಹಣ್ಣು

ಮಾನಸಿಕ ಆರೋಗ್ಯಕ್ಕೆ ಬೇಕಾಗಿರುವಂತಹ ರಾಸಾಯನಿಕಗಳನ್ನು ಬಾಳೆಹಣ್ಣು ಉತ್ಪತ್ತಿ ಮಾಡುವ ಕಾರಣದಿಂದ ಇದು ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೊಟಾಶಿಯಂ ಅಧಿಕವಾಗಿರುವಂತಹ ಬಾಳೆಹಣ್ಣು ಮೆದುಳಿಗೆ ಸಂದೇಶ ಕಳುಹಿಸಲು ಪ್ರಮುಖ ಪಾತ್ರ ವಹಿಸುವುದು. ನರಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುವಂತಗಾಗಲು ಇರುಂತಹ ವಿಶ್ವದ ಪ್ರಮುಖ ಹಣ್ಣುಗಳಲ್ಲಿ ಬಾಳೆಹಣ್ಣು ಒಂದಾಗಿದೆ. ಮನಸ್ಥಿತಿ ಹಾಗೂ ಹಸಿವಿಗೆ ಬಾಳೆಹಣ್ಣು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಮನಸ್ಸು ಕೇಂದ್ರೀಕರಿಸಲು ಹಾಗೂ ಜ್ಞಾಪಕಶಕ್ತಿಗೆ ಇದು ನೆರವಾಗುವುದು.

ಸೇಬು

ಸೇಬು

ಸೇಬಿನ ತಿರುಳು ಹಾಗೂ ಅದರ ಸಿಪ್ಪೆಯು ಮಾನಸಿಕ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿರುವಂತದ್ದಾಗಿದೆ. ವಯಸ್ಸಾದಂತೆ ಜ್ಞಾಪಕ ಶಕ್ತಿ ಕಡಿಮೆಯಾಗುವುದಕ್ಕೆ ಸೇಬಿನ ಜ್ಯೂಸ್ ಒಳ್ಳೆಯ ಪರಿಹಾರ. ಇದು ಮೆದುಳಿನ ಕೋಶದಲ್ಲಿ ಇರುವಂತಹ ಹಾನಿಕಾರಕ ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳನ್ನು ಕಡಿಮೆ ಮಾಡಲು ನೆರವಾಗುವುದು ಮತ್ತು ಮಾನಸಿಕ ಆರೋಗ್ಯ ಉತ್ತಮಪಡಿಸುವುದು. ಸೇಬಿನಲ್ಲಿ ಅಸೆಟೈಲ್ಕೋಲಿನ್ ಎನ್ನುವ ಅಂಶವಿದ್ದು, ಇದು ವಯಸ್ಸಾದಂತೆ ಕಂಡುಬರುವಂತಹ ಅಲ್ಝೈಮೆರ್ ನ ಅಪಾಯ ಕಡಿಮೆಗೊಳಿಸುವುದು.

ಪಾಲಕ್

ಪಾಲಕ್

ಹಸಿರು ತರಕಾರಿಯಾಗಿರುವಂತಹ ಪಾಲಕದಲ್ಲಿ ಹೆಚ್ಚಿನ ಫಾಲೆಟ್ ಅಂಶವಿದೆ. ಇದು ಮಾನಸಿಕ ಆರೋಗ್ಯ ಸುಧಾರಿಸುವುದು ಮತ್ತು ನೆನಪಿನ ಶಕ್ತಿ ಹೆಚ್ಚಿಸುವುದು. ಫಾಲೆಟ್ ಅಂಶವು ಕಡಿಮೆಯಾದರೆ ಖಿನ್ನತೆ, ನಿಶ್ಯಕ್ತಿ ಮತ್ತು ರಕ್ತಹೀನತೆ ಸಮಸ್ಯೆ ಕಾಡುವುದು. ಬೇಯಿಸಿದ ಪಾಲಕ ತಿನ್ನುವುದರಿಂದ ವೇಗವಾಗಿ ಸಂದೇಶ ಪಡೆಯಬಹುದು ಮತ್ತು ಮೆದುಳಿನ ಶಕ್ತಿ ಸುದಾರಿಸುವುದು. ಒಂದು ಕಪ್ ಪಾಲಕ ಸೇವನೆ ಮಾಡಿ.

ದ್ರಾಕ್ಷಿ

ದ್ರಾಕ್ಷಿ

ಸಿಟ್ರಸ್ ಒಳಗೊಂಡಿರುವಂತಹ ಹಣ್ಣುಗಳು ಸ್ವಲ್ಪ ಹುಳಿ ಹಾಗೂ ಸಿಹಿಯಾಗಿರುವುದು. ಇದು ಪೋಷಕಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವುದು. ಇದು ಮಾನಸಿಕ ಆರೋಗ್ಯ ಕಾಪಾಡುವುದು. ದ್ರಾಕ್ಷಿಯಲ್ಲಿ ಫಾಲಟೆ ಅಥವಾ ವಿಟಮಿನ್ ಬಿ9 ಇದೆ. ಇದು ಮೆದುಳಿನ ಕಾರ್ಯಚಟುವಟಿಕೆಗೆ ಅತೀ ಅಗತ್ಯ ಮತ್ತು ಇದು ಡಿಎಎನ್ ಮತ್ತು ಆರ್ ಎನ್ ಎ ಯನ್ನು ಇದು ಒದಗಿಸುವುದು.

ಲೆಟಸ್

ಲೆಟಸ್

ಹಸಿರು ಎಲೆ ತರಕಾರಿಯಾಗಿರುವ ಲೆಟಸ್ ನಿಮ್ಮ ಮೆದುಳಿಗೆ ತುಂಬಾ ಒಳ್ಳೆಯದು. ಇದು ಮಾನಸಿಕ ಸಾಮರ್ಥ್ಯ ಕುಸಿಯುವುದನ್ನು ಕಡಿಮೆ ಮಾಡುವುದು. ವಯಸ್ಸಾದಂತೆ ಮೆದುಳಿನ ಕೋಶಗಳು ಉರಿಯೂತಕ್ಕೆ ಒಳಗಾಗಿ ಒಂದಕ್ಕೊಂದು ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ. ಲೆಟಸ್ ಸೇವನೆ ಮಾಡುವುದರಿಂದ ಇದು ನಿಮ್ಮನ್ನು ಹನ್ನೊಂದು ವರ್ಷ ಯುವಕರನ್ನಾಗಿಸುವುದು. ಲೆಟಸ್ ನಲ್ಲಿ ಸೋಡಿಯಂ, ಪರ್ಯಾಪ್ತ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇದೆ. ಥೈಮೆನ್, ವಿಟಮಿನ್ ಬಿ6, ಕಬ್ಬಿನಾಂಶ, ಪೊಟಾಶಿಯಂ ಇತ್ಯಾದಿಗಳಿವೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಲಿಂಬೆ, ದ್ರಾಕ್ಷಿ ಇತ್ಯಾದಿಗಳು ನಿಮ್ಮ ಮಾನಸಿಕ ಆರೋಗ್ಯ ಸುಧಾರಣೆ ಮಾಡಲು ತುಂಬಾ ಒಳ್ಳೆಯದು. ಸಿಟ್ರಸ್ ಹಣ್ಣುಗಳಲ್ಲಿ ಇರುವ ಫ್ಲಾವನಾಯ್ಡ್ ಅಂಶಗಳು ನರಕಾಯಿಲೆಗಳಾದ ಪರ್ಕಿನ್ಸನ್ ಮತ್ತು ಅಲ್ಝೆಮರ್ ನ್ನು ಕಡಿಮೆ ಮಾಡುವುದು. ಫ್ಲಾವನಾಯ್ಡ್ ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ನರಕೋಶಗಳನ್ನು ರಕ್ಷಣೆ ಮಾಡುವುದು. ಇದರಿಂದ ಮೆದುಳಿನ ಕ್ರಿಯೆ ಉತ್ತಮವಾಗುವುದು ಮತ್ತು ಇದರಿಂದ ಮೆದುಳಿಗೆ ಬರುವಂತಹ ಕಾಯಿಲೆಗಳನ್ನು ತಡೆಯುವುದು.

ಬೆರ್ರಿಗಳು

ಬೆರ್ರಿಗಳು

ನೇರಳೆಹಣ್ಣು, ಸ್ಟ್ರಾಬೆರಿ, ಕಪ್ಪುಬೆರ್ರಿ, ರಸ್ಬೆರ್ರಿಯಂತಹ ಹಣ್ಣುಗಳು ಮಾನಸಿಕ ಆರೋಗ್ಯ ಉತ್ತಮವಾಗಿಡುವುದು. ಇದರಲ್ಲೂ ನೇರಳೆ ಹಣ್ಣು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ವಯಸ್ಸಾಗುವಂತಹ ಬರುವಂತಹ ರೋಗಗಳನ್ನು ತಡೆಯುವುದು. ಇದು ನರದ ಕ್ರಿಯೆಯನ್ನು ಸರಾಗವಾಗಿಸಿ, ಮೆದುಳಿನ ಶಕ್ತಿ ಹೆಚ್ಚಿಸುವುದು. ಪ್ರತಿನಿತ್ಯ ನೇರಳೆ ಹಣ್ಣೂ ತಿಂದರೆ ಅದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದು ಎಂದು ಹಿಂದಿನಿಂದಲೂ ಹೇಳಲಾಗುತ್ತಿದೆ.

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿ ಒಳ್ಳೆಯ ಬೇಸಿಗೆಯ ಹಣ್ಣು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಫಿಸೆಟಿನ್ ಎನ್ನುವ ಫ್ಲಾವೊನಾಲ್ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೌತೆಕಾಯಿ ಮೆದುಳಿನ ಶಕ್ತಿ ವೃದ್ಧಿಸುವುದು ಮಾತ್ರವಲ್ಲದೆ, ವಯಸ್ಸಾದಾಗ ಬರುವ ಕಾಯಿಲೆಗಳನ್ನು ತಡೆಯುವುದು. ಇದರಿಂದ ಮೆದುಳಿನ ಕ್ರಿಯೆ ಉತ್ತಮವಾಗುವುದು ಮತ್ತು ಜ್ಞಾನ ಶಕ್ತಿ ಹೆಚ್ಚಾಗುವುದು.

ಕಿವಿ ಹಣ್ಣು

ಕಿವಿ ಹಣ್ಣು

ಕಿವಿ ಹಣ್ಣಿನಲ್ಲಿ ತಾಮ್ರದ ಸಾಂದ್ರತೆಯು ಅಧಿಕವಾಗಿದೆ. ಇದು ಮಕ್ಕಳಿಗೆ ತುಂಬಾ ಒಳ್ಳೆಯದು. ಯಾಕೆಂದರೆ ಇದು ಮಕ್ಕಳಲ್ಲಿ ಮೆದುಳಿನ ಕೋಶ ಬೆಳವಣಿಗೆಗೆ ನೆರವಾಗುವುದು. ಇದು ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆ ಮತ್ತು ಹದಿಹರೆಯದವರಲ್ಲಿ ಮೆದುಳಿನ ಬೆಳವಣಿಗೆಗೆ ನೆರವಾಗುವುದು. ಇದು ಕೆಂಪುರಕ್ತ ಕಣಗಳನ್ನು ಎಹಚ್ಚಿಸುವುದು ಮತ್ತು ಪ್ರತಿರೋಧಕ ಶಕ್ತಿ ಬಲಗೊಳಿಸುವುದು. ಈ ಲೇಖನ ನಿಮಗೆ ಇಷ್ಟವಾಗಿದ್ದರೆ ಅದನ್ನು ಶೇರ್ ಮಾಡಿ....

English summary

Foods To Boost Your Mental Health

Eating raw fruits and vegetables could boost your mental health, suggests new research finding carried out by the University of Otago, New Zealand. The raw produce could be more beneficial than cooked, canned and processed foods. In this article, you will learn about the raw fruits and vegetables best for mental health. The research also suggests that in what way the raw produce was prepared and consumed, the benefits should also be taken into consideration, which is especially true for mental health.
X
Desktop Bottom Promotion