For Quick Alerts
ALLOW NOTIFICATIONS  
For Daily Alerts

ಇಂತಹ ಕೆಟ್ಟ ಅಭ್ಯಾಸದಿಂದ ದೂರವಿರಿ-ಇಲ್ಲಾಂದ್ರೆ ಕಿಡ್ನಿ ಸಮಸ್ಯೆ ಬರಬಹುದು!!

|

ಪ್ರತಿವರ್ಷ ಮಾರ್ಚ್ ಎಂಟರಂದು 'ವಿಶ್ವ ಮೂತ್ರಪಿಂಡ ದಿನ'ವನ್ನಾಗಿ (World Kidney Day) ಆಚರಿಸಲಾಗುತ್ತದೆ. ಇದೊಂದು ವಿಶ್ವಮಟ್ಟದಲ್ಲಿ ನಡೆಯುವ ಅಭಿಯಾನವಾಗಿದ್ದು ಮೂತ್ರಪಿಂಡಗಳ ಅಥವಾ ಕಿಡ್ನಿಯ ಆರೋಗ್ಯ ಮತ್ತು ರಕ್ಷಣೆಯ ಬಗ್ಗೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಅರಿವು ಮೂಡಿಸಿ ಮೂತ್ರಪಿಂಡಗಳ ಕಾಯಿಲೆಗಳು ಆವರಿಸುವುದರಿಂದ ರಕ್ಷಿಸುವುದು ಇದರ ಉದ್ದೇಶವಾಗಿದೆ.

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡಗಳೂ ಒಂದಾಗಿದ್ದು ಇದರ ಮುಖ್ಯ ಕೆಲಸವೆಂದರೆ ದೇಹದಿಂದ ಹೆಚ್ಚುವರಿ ನೀರು ಮತ್ತು ಕಲ್ಮಶಗಳನ್ನು ನಿವಾರಿಸುವುದಾಗಿದೆ. ಅಲ್ಲದೇ ದೇಹಕ್ಕೆ ಅಗತ್ಯವಿದ್ದಾಗ ನೀರನ್ನು ಹಿಡಿದಿಟ್ಟುಕೊಳ್ಳುವುದು ಹಾಗೂ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ಮೂತ್ರದ ರೂಪದಲ್ಲಿ ಹೊರಹಾಕುವುದೂ ಆಗಿದೆ.


ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಅಲ್ಲದೇ, ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಖನಿಜಗಳಾದ ಕ್ಯಾಲ್ಸಿಯಂ ಹಾಗೂ ಫಾಸ್ಪೇಟ್ ಗಳನ್ನೂ ಅಗತ್ಯಪ್ರಮಾಣದಲ್ಲಿ ಉಳಿಸಿಕೊಳ್ಳಲು ಮೂತ್ರಪಿಂಡಗಳು ನೆರವಾಗುತ್ತವೆ. ಹಾಗೂ ಆರೋಗ್ಯದ ಪ್ರಮುಖ ಕಾರ್ಯಗಳಾದ ರಕ್ತದೊತ್ತಡ ಹಾಗೂ ಕೆಂಪುರಕ್ತಕಣಗಳ ಉತ್ಪಾದನೆ ಮೊದಲಾದ ಹಲವಾರು ಪ್ರಮುಖ ಕ್ರಿಯೆಗಳನ್ನು ನಿಯಂತ್ರಿಸುವ ರಸದೂತಗಳನ್ನೂ ಮೂತ್ರಪಿಂಡಗಳು ಉತ್ಪಾದಿಸುತ್ತವೆ. ಹಾಗಾಗಿ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಮೂತ್ರಪಿಂಡಗಳನ್ನು ಅಪಾಯಕ್ಕೆ ಒಡ್ಡುವ ನಮ್ಮ ಕೆಲವು ಅಭ್ಯಾಸಗಳ ಬಗ್ಗೆ ಇಂದು ಅಮೂಲ್ಯ ಮಾಹಿತಿಯನ್ನು ಒದಗಿಸಿದ್ದು ವಿಶ್ವ ಮೂತ್ರಪಿಂಡ ದಿನಾಚರಣೆಯಂದು ಈ ಮಾಹಿತಿಗಳು ಎಲ್ಲರೂ ಪಡೆಯವಂತಾಗಲು ಸಹಕರಿಸಿ...

ಅತಿ ಹೆಚ್ಚು ನೋವು ನಿವಾರಕಗಳನ್ನು ಸೇವಿಸುವುದು

ಅತಿ ಹೆಚ್ಚು ನೋವು ನಿವಾರಕಗಳನ್ನು ಸೇವಿಸುವುದು

ಔಷಧಿ ಅಂಗಡಿಗಳಲ್ಲಿ ಮುಕ್ತವಾಗಿ ದೊರಕುವ ನೋವು ನಿವಾರಕಗಳು ತಾತ್ಕಾಲಿಕವಾದ ಶಮನ ನೀಡುತ್ತವೆಯೇ ಹೊರತು ಇವುಗಳ ದೀರ್ಘಕಾಲೀನ ಉಪಯೋಗದಿಂದ ಮೂತ್ರಪಿಂಡಗಳಿಗೆ ಅಪಾಯ ಎದುರಾಗಬಹುದು. ಒಂದು ವೇಳೆ ನಿಮಗೆ ಈಗಾಗಲೇ ಮೂತ್ರಪಿಂಡಗಳ ತೊಂದರೆ ಇದ್ದರೆ ಈ ತೊಂದರೆಗಳು ಇನ್ನಷ್ಟು ಹೆಚ್ಚುತ್ತವೆ. ಆದ್ದರಿಂದ ನೋವು ನಿವಾರಕಗಳನ್ನು ಸೇವಿಸುವ ಅಭ್ಯಾಸವಿದ್ದರೆ ತಕ್ಷಣವೇ ಇದನ್ನು ನಿಲ್ಲಿಸಿ ಅಥವಾ ವೈದ್ಯರ ಸಲಹೆ ಪಡೆದು ಕನಿಷ್ಟ ಪ್ರಮಾಣಕ್ಕಿಳಿಸಿ.

ಸಂಸ್ಕರಿಸಿದ ಆಹಾರ ಸೇವಿಸುವುದು

ಸಂಸ್ಕರಿಸಿದ ಆಹಾರ ಸೇವಿಸುವುದು

ಸಂಸ್ಕರಿಸಿದ ಆಹಾರಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಗಂಧಕ ಹಾಗೂ ಸೋಡಿಯಂ ಇರುತ್ತವೆ. ಈ ಲವಣಗಳು ಸಾಂದ್ರತೆಗೊಂಡರೆ ಹರಳುಗಟ್ಟುವ ಹುಣ ಹೊಂದಿವೆ. ಮೂತ್ರಪಿಂಡಗಳ ತೊಂದರೆ ಇರುವ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಗಂಧಕದ ಪ್ರಮಾಣ ಕನಿಷ್ಟವಿರುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕಂಡುಕೊಂಡಿರುವ ಪ್ರಕಾರ ಗಂಧಕ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಮೂತ್ರಪಿಂಡಗಳ ಕಾಯಿಲೆ ಹೆಚ್ಚು ಸಂಭವ ಅತಿಯಾಗಿ ಹೆಚ್ಚುತ್ತದೆ. ಸಂಸ್ಕರಿಸಿದ ಮತ್ತು ಸಿದ್ದ ಆಹಾರಗಳಲ್ಲಿ ಗಂಧಕ ಮತ್ತು ಸೋಡಿಯಂ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಏಕೆಂದರೆ ಆಹಾರ ಹೆಚ್ಚು ಕಾಲ ಹಾಳಾಗದೇ ಇರಲು ಬಳಸುವ ಸಂರಕ್ಷಕಗಳಲ್ಲಿ ಈ ಲವಣಗಳು ಗರಿಷ್ಠ ಪ್ರಮಾಣದಲ್ಲಿರುತ್ತದೆ.

ಅತಿ ಹೆಚ್ಚಿನ ಉಪ್ಪು ಸೇವಿಸುವುದು

ಅತಿ ಹೆಚ್ಚಿನ ಉಪ್ಪು ಸೇವಿಸುವುದು

ಉಪ್ಪುನಲ್ಲಿ ನೆನೆಸಿದ ಅಥವಾ ಉಪ್ಪಿನ ಪ್ರಮಾಣ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಸೋಡಿಯಂ ಲವಣವೂ ಅತಿ ಹೆಚ್ಚು ಸಂಗ್ರಹಗೊಳ್ಳುತ್ತದೆ. ತನ್ಮೂಲಕ ರಕ್ತದೊತ್ತಡ ಏರುತ್ತದೆ. ಉಪ್ಪು ಹೆಚ್ಚಾದಷ್ಟೂ ಮೂತ್ರಪಿಂಡಗಳು ಅಪಾಯವನ್ನು ಎದುರಿಸುತ್ತವೆ. ಈ ಹೆಚ್ಚುವರಿ ಉಪ್ಪನ್ನು ದೇಹದಿಂದ ಹೊರಹಾಕಲು ಮೂತ್ರಪಿಂಡಗಳು ಅತಿಹೆಚ್ಚು ಶ್ರಮಿಸಬೇಕಾಗುತ್ತದೆ. ಉಪ್ಪನ್ನು ಕರಗಿಸಿಕೊಳ್ಳಲು ಹೆಚ್ಚಿನ ನೀರು ಬೇಕಾಗಿರುವ ಕಾರಣ ಮೂತ್ರಪಿಂಡಗಳು ನೀರನ್ನು ಅನಿವಾರ್ಯವಾಗಿ ದೇಹದಲ್ಲಿಯೇ ಉಳಿಸಿಕೊಳ್ಳಬೇಕಾಗಿ ಬರುತ್ತದೆ. ಇದು ಮೂತ್ರಪಿಂಡಗಳ ಕ್ಷಮತೆ ಉಡುಗಿಸಿ ಕಾಯಿಲೆ ತಗಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅಗತ್ಯಕ್ಕೂ ಕಡಿಮೆ ನೀರಿನ ಸೇವನೆ

ಅಗತ್ಯಕ್ಕೂ ಕಡಿಮೆ ನೀರಿನ ಸೇವನೆ

ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಅಗತ್ಯಕ್ಕೆ ತಕ್ಕಂತಿದ್ದರೆ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಹಾಗೂ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಲು ನೆರವಾಗುತ್ತದೆ. ಅಲ್ಲದೇ ನಿಯಮಿತವಾಗಿ ಸಾಕಷ್ಟು ನಿಯಮಿತವಾಗಿ ನೀರನ್ನು ಸೇವಿಸುವ ಮೂಲಕ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವ ಸಾಧ್ಯತೆಯೂ ಇಲ್ಲವಾಗುತ್ತದೆ. ಆದರೆ ಈಗಾಗಲೇ ಮೂತ್ರಪಿಂಡಗಳಲ್ಲಿ ಕಲ್ಲುಗಳಿರುವ ವ್ಯಕ್ತಿಗಳು ನೀರು ಮತ್ತು ದ್ರವಾಹಾರವನ್ನು ಮಿತವಾಗಿ ಸೇವಿಸಬೇಕು.

ಅತಿ ಹೆಚ್ಚು ಮಾಂಸಾಹಾರ ಸೇವನೆ

ಅತಿ ಹೆಚ್ಚು ಮಾಂಸಾಹಾರ ಸೇವನೆ

ಮಾಂಸಜನ್ಯ ಆಹಾರಗಳನ್ನು ಸೇವಿಸಿದ ಬಳಿಕ ಇದಲ್ಲಿರುವ ಪ್ರೋಟೀನುಗಳು ರಕ್ತದಲ್ಲಿ ಅಧಿಕ ಪ್ರಮಾಣದ ಆಮ್ಲ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಇದು ಮೂತ್ರಪಿಂಡಗಳಿಗೆ ಅತಿ ಭಾರವಾಗಿ ಪರಿಣಮಿಸುತ್ತದೆ. ಈ ಭಾರವನ್ನು ಹೊರಲಾರದೇ ಮೂತ್ರಪಿಂಡಗಳು ಸೋತಾಗ ಅಸಿಡೋಸಿಸ್ ಎಂಬ ಮೂತ್ರಪಿಂಡದ ಕಾಯಿಲೆಗೆ ತುತ್ತಾಗುತ್ತದೆ. ಈ ಸ್ಥಿತಿಯಲ್ಲಿ ರಕ್ತದಿಂದ ಆಮ್ಲವನ್ನು ಬೇಗನೇ ನಿವಾರಿಸಲು ಮೂತ್ರಪಿಂಡಗಳಿಗೆ ಸಾಧ್ಯವಾಗುವುದಿಲ್ಲ. ನಮ್ಮ ಆರೋಗ್ಯಕ್ಕೆ ಮಾಂಸಜನ್ಯ ಪ್ರೋಟೀನ್ ಬೇಕು, ಆದರೆ ಅಧಿಕ ಪ್ರಮಾಣದ ಮಾಂಸಾಹಾರ ಸೇವನೆ ಮೂತ್ರಪಿಂಡಗಳಿಗೆ ಭಾರಿಯಾಗಬಹುದು.

ನಿದ್ದೆಯ ಕೊರತೆ

ನಿದ್ದೆಯ ಕೊರತೆ

ಆರೋಗ್ಯಕ್ಕೆ ನಿದ್ದೆಯೂ ಅತಿ ಅಗತ್ಯವಾಗಿದೆ ಹಾಗೂ ನಿದ್ದೆಯ ಅವಧಿಯಲ್ಲಿ ದೇಹ ಮತ್ತು ಮೆದುಳಿನ ಸ್ನಾಯುಗಳು ವಿಶ್ರಮಿಸಿ ಮುಂದಿನ ದಿನಕ್ಕೆ ದೇಹವನ್ನು ಅಣಿಯಾಗಿಸುತ್ತವೆ. ಒಟ್ಟಾರೆ ಆರೋಗ್ಯಕ್ಕೆ ಸುಮಾರು ಎಂಟು ಗಂಟೆಗಳ ಗಾಢ ನಿದ್ದೆ ಅಗತ್ಯ. ಅಲ್ಲದೇ ಒಂದೇ ಸಮಯದಲ್ಲಿ ಮಲಗಿ ಒಂದೇ ಸಮಯದಲ್ಲಿ ಏಳುವ ಮೂಲಕ ಮೂತ್ರಪಿಂಡಗಳೂ ಆ ಪ್ರಕಾರ ಕಾರ್ಯನಿರ್ವಹಿಸುತ್ತವೆ. ನಿದ್ದೆಯ ಕೊರತೆಯಿಂದಾಗಿ ಎಚ್ಚರವಿದ್ದಷ್ಟೂ ಹೊತ್ತು ಮೂತ್ರಪಿಂಡಗಳೂ ಕೆಲಸ ಮಾಡುತ್ತಿರಬೇಕಾಗಿದ್ದು ಕ್ಷಮತೆ ಕಳೆದುಕೊಳ್ಳುವ ಸಂಭವ ಹೆಚ್ಚುತ್ತದೆ.

ಸಕ್ಕರೆ ಹೆಚ್ಚಿರುವ ಆಹಾರಗಳ ಅತಿಯಾದ ಸೇವನೆ

ಸಕ್ಕರೆ ಹೆಚ್ಚಿರುವ ಆಹಾರಗಳ ಅತಿಯಾದ ಸೇವನೆ

ಸ್ಥೂಲಕಾಯಕ್ಕೆ ಸಕ್ಕರೆಯ ಸೇವನೆಯೇ ಮೂಲವಾಗಿದೆ. ದೇಹದಲ್ಲಿ ಸಕ್ಕರೆ ಹೆಚ್ಚುತ್ತಿದ್ದಂತೆಯೇ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸಾಧ್ಯತೆಯೂ ಹೆಚ್ಚುತ್ತದೆ. ಅತಿಹೆಚ್ಚಿನ ಸಕ್ಕರೆ ಇರುವ ಲಘು ಅಥವಾ ಬುರುಗು ಬರುವ ಪಾನೀಯ, ಆಹಾರಗಳು, ಸಿಹಿವಸ್ತುಗಳು ಮೊದಲಾದವುಗಳು ಮೂತ್ರಪಿಂಡಗಳು ಕಾಯಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿಸುತ್ತವೆ.

ಅತಿಯಾದ ಮದ್ಯಪಾನ

ಅತಿಯಾದ ಮದ್ಯಪಾನ

ಮದ್ಯಪಾನವೇ ಕೆಟ್ಟದ್ದು. ಆದರೆ ಅತಿಯಾಗಿ ಸೇವಿಸಿದರೆ ಮೂತ್ರಪಿಂಡಗಳ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ. ಮದ್ಯವ್ಯಸನಿಗಳು ಸಾಮಾನ್ಯವಾಗಿ ಮೂತ್ರಪಿಂಡಗಳ ಕಾಯಿಲೆಗೆ ಒಳಗಾಗುವವರಲ್ಲಿ ಹೆಚ್ಚಾಗಿದ್ದಾರೆ. ಆದ್ದರಿಂದ ಈ ವ್ಯಸನದಿಂದ ಹೊರಬರುವತ್ತ ದೃಢಮನಸ್ಸು ಮಾಡಬೇಕು ಹಾಗೂ ಸೇವನೆಯ ಪ್ರಮಾಣವನ್ನು ನಿಧಾನವಾಗಿ ಕಡಿಮೆಗೊಳಿಸುತ್ತಾ ಹೋಗಬೇಕು. ಇಲ್ಲದಿದ್ದರೆ ಈ ಪ್ರಮಾಣವನ್ನು ಮಿತಗೊಳಿಸಬೇಕು.

ಸಿಗರೇಟ್ ಸೇವನೆ

ಸಿಗರೇಟ್ ಸೇವನೆ

Centers for Disease Control and Prevention ಎಂಬ ಆರೋಗ್ಯ ಸಂಸ್ಥೆಯ ಪ್ರಕಾರ ಸಿಗರೇಟು ಸೇವನೆಯಿಂದ ದೇಹದ ಪ್ರತಿ ಅಂಗಕ್ಕೂ ಅಪಾಯವಿದೆ. ಇದರಲ್ಲಿ ಮೂತ್ರಪಿಂಡಗಳೂ ಸೇರಿವೆ. ಧೂಮಪಾನದಿಂದ ಅಧಿಕ ರಕ್ತದೊತ್ತಡ ಎದುರಾಗುತ್ತದೆ ಹಾಗೂ ಹೃದಯ ಬಡಿತದ ವೇಗವೂ ಹೆಚ್ಚುತ್ತದೆ ಹಾಗೂ ಮೂತ್ರಪಿಂಡಗಳಿಗೆ ಲಭಿಸುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ.

ಆಗಾಗ ಮೂತ್ರವಿಸರ್ಜಿಸದೇ ಇರುವುದು

ಆಗಾಗ ಮೂತ್ರವಿಸರ್ಜಿಸದೇ ಇರುವುದು

ದೇಹದ ಕಲ್ಮಶಗಳನ್ನು ಮೂತ್ರದ ರೂಪದಲ್ಲಿ ದೇಹದಿಂದ ವಿಸರ್ಜಿಸುವುದು ಮೂತ್ರಪಿಂಡಗಳ ಕೆಲಸವಾಗಿದೆ. ಒಂದು ವೇಳೆ ಆಗಾಗ ವಿಸರ್ಜಿಸದೇ ಇದ್ದರೆ ಇದು ಹೆಚ್ಚು ಹೆಚ್ಚು ಸಾಂದ್ರೀಕೃತಗೊಳ್ಳುತ್ತದೆ ಹಾಗೂ ಇದರಿಂದಲೂ ಮೂತ್ರಪಿಂಡಕ್ಕೆ ಅಪಾಯ ಎದುರಾಗುತ್ತದೆ. ಹೀಗೇ ಸಾಂದ್ರೀಕೃತ ಮೂತ್ರದಲ್ಲಿರುವ ಯಾವುದೋ ಒಂದು ಲವಣ ಹರಳುಗಟ್ಟುತ್ತದೆ ಹಾಗೂ ನಿಧಾನವಾಗಿ ಇನ್ನಶ್ಟು ಕಣಗಳನ್ನು ಅಂಟಿಸಿಕೊಳ್ಳುತ್ತಾ ದೊಡ್ಡ ಗಾತ್ರಕ್ಕೆ ಬೆಳೆಯುತ್ತದೆ. ಇವೇ ಮೂತ್ರಪಿಂಡದ ಕಲ್ಲುಗಳು. ಒಂದು ನಿರ್ದಿಷ್ಟ ಗಾತ್ರದವರೆಗೂ ಇವು ತಮ್ಮ ಇರುವಿಕೆಯನ್ನು ಪ್ರಕಟಿಸುವುದಿಲ್ಲ. ಆದರೆ ಇದಕ್ಕೂ ದೊಡ್ಡದಾದರೆ ಮಾತ್ರ ಸಹಿಸಲಾರದ ನೋವನ್ನು ಅನುಭವಿಸಬೇಕಾಗುತ್ತದೆ. ಈ ಕಲ್ಲುಗಳಿಂದ ಮೂತ್ರಪಿಂಡಗಳೂ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತದೆ.

ಸೋಂಕು ಎದುರಾಗಿದ್ದರೆ ಚಿಕಿತ್ಸೆ ಪಡೆಯದೇ ಇರುವುದು

ಸೋಂಕು ಎದುರಾಗಿದ್ದರೆ ಚಿಕಿತ್ಸೆ ಪಡೆಯದೇ ಇರುವುದು

ಮೂತ್ರನಾಳ ಹಾಗೂ ಮೂತ್ರಕೋಶಗಳ ಸೋಂಕು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಪ್ರತಿಜೀವಕ ಅಥವಾ ಆಂಟಿಬಯೋಟಿಕ್ ಔಷಧಿಗಳೇ ಸಾಕು. ಸೋಂಕು ಎದುರಾದ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಇದನ್ನು ನಿರ್ಲಕ್ಷಿಸಿದರೆ, ಅದರಲ್ಲೂ ಈ ಸೋಂಕು ವೈರಸ್ಸುಗಳಿಂದ ಉಂಟಾಗಿದ್ದರೆ ಇವು ಮೂತ್ರಪಿಂಡಗಳಿಗೆ ಅಪಾಯ ತರಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

ಮನೆ ಔಷಧ: ಕಿಡ್ನಿ ಸ್ಟೋನ್‌ಗೆ ಶಾಶ್ವತ ಪರಿಹಾರ

English summary

10 Bad Habits That Damage Your Kidneys

The World Kidney Day is celebrated on 8th March. It is a global awareness campaign aimed at raising awareness of the importance of your kidneys and kidney health to reduce the frequency of kidney disease. Kidneys are one of the most important organs of the human body. Its primary function is to remove excess water from the body and also help to retain water when the body needs more of it. The kidneys detoxify the blood and filter out waste products through the urine.
X
Desktop Bottom Promotion