For Quick Alerts
ALLOW NOTIFICATIONS  
For Daily Alerts

ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸುವ ನೈಸರ್ಗಿಕ ಆಹಾರಗಳು

By Hemanth
|

ವೇಗದ ಜೀವನದಲ್ಲಿ ತಮ್ಮ ಆಸೆ, ಆಕಾಂಕ್ಷೆಗಳನ್ನು ಪೂರೈಸುವಷ್ಟು ಸಮಯ ಕೂಡ ಸಿಗುತ್ತಿಲ್ಲ. ವರ್ಷ ಕಳೆದಂತೆ ಜೀವನ ಕೂಡ ತುಂಬಾ ವೇಗ ಪಡೆಯುತ್ತಾ ಸಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ವೈವಾಹಿಕ ಜೀವನದಲ್ಲಿ ಕಾಮಾಸಕ್ತಿಯೇ ಕಡಿಮೆಯಾಗುತ್ತಲಿದೆ. ಇದರ ಪರಿಣಾಮ ಸಂಬಂಧದ ಮೇಲಾಗುತ್ತಿದೆ. ಒತ್ತಡ ಹಾಗೂ ಇತರ ಕೆಲವೊಂದು ಅಂಶಗಳು ಇದಕ್ಕೆ ಕಾರಣವಾಗಿರಬಹುದು. ನಾವು ತಿನ್ನುವಂತಹ ಆಹಾರ ಕೂಡ ಕಾಮಾಸಕ್ತಿ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಆಹಾರವು ನಿಮ್ಮ ಲೈಂಗಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ನಂಬಲು ಸ್ವಲ್ಪ ಕಷ್ಟವಾದರೂ ಇದು ಸತ್ಯ.

ಕಾಮೋತ್ತೇಜಕವಾಗಿರುವ ಕೆಲವೊಂದು ಆಹಾರ ಸೇವನೆಯಿಂದ ಜನನಾಂಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುವಂತೆ ಮಾಡುವುದು. ಇದರಿಂದ ನೈಸರ್ಗಿಕ ರಾಸಾಯನಿಕಗಳು ದೇಹದಲ್ಲಿ ಉತ್ಪತ್ತಿಯಾಗುವುದು. ಇದರಿಂದ ನಿಮ್ಮಲ್ಲಿ ಕಾಮಾಸಕ್ತಿಯು ಹೆಚ್ಚಾಗುವುದು, ನಿಮಗೆ ತುಂಬಾ ಆರಾಮದ ಭಾವನೆಯಾಗಿ ಜನನೇಂದ್ರಿಯಗಳ ಆಹಾರವು ಉತ್ತಮವಾಗುವುದು. ಸಂಪೂರ್ಣವಾಗಿ ನಿಮ್ಮ ಲೈಂಗಿಕ ಆಸಕ್ತಿಯು ಹೆಚ್ಚಾಗುವುದು. ಮಹಿಳೆಯರು ಸೇವಿಸಬಹುದಾದ ಕಾಮೋತ್ತೇಜಕವಾದ ಆಹಾರಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಇಂದು ತಿಳಿಸಿಕೊಡಲಿದೆ....

ಕೋಕೋ ಬೀಜ

ಕೋಕೋ ಬೀಜ

ಇದರಲ್ಲಿ ಕಾಮೋತ್ತೇಜಕದ ಸಹಿತ ಹಲವಾರು ರೀತಿಯ ಆರೋಗ್ಯ ಗುಣಗಳು ಅಡಗಿವೆ. ಕೋಕೋ ಬೀಜದಲ್ಲಿ ಮೆಗ್ನಿಶಿಯಂ, ಫೋಸ್ಪರಸ್, ಆ್ಯಂಟಿಆಕ್ಸಿಡೆಂಟ್, ಅರ್ಜಿನೈನ್ ಮತ್ತು ಮಿಥೈಲ್ಯಾಂಥೈನ್ ಇದೆ. ಇದು ಕಾಮಾಸಕ್ತಿ ಹೆಚ್ಚಿಸುವುದು. ಕೋಕಾದ ಬೀಜದಲ್ಲಿರುವ `ಫೀನಲೆಥೈಲಮೈನ್' ನ್ನು `ಪ್ರೀತಿಯ ರಾಸಾಯನಿಕ'ವೆಂದು ಕರೆಯಲಾಗುತ್ತದೆ. ಇದು ಲೈಂಗಿಕ ಕ್ರಿಯೆ ವೇಳೆ ಮೆದುಳಿನಲ್ಲಿ ಡೊಪಮೈನ್ ಎನ್ನುವ ರಾಸಾಯನಿಕ ಸ್ತವಿಸುವಿಕೆ ಹೆಚ್ಚಿಸುವುದು.ರಾತ್ರಿ ಊಟದ ಬಳಿಕ ಚಾಕಲೇಟ್ ಕೇಕ್ ಸೇವಿಸುವ ಬದಲು ಸ್ಟ್ರಾಬೆರಿಯೊಂದಿಗೆ ಚಾಕಲೇಟ್ ಸೇವನೆ ಮಾಡಿದರೆ ನಿಮ್ಮ ಕಾಮಾಸಕ್ತಿ ಹೆಚ್ಚಾಗುವುದು.

ಮೆಂತೆಯ ಬೀಜಗಳು

ಮೆಂತೆಯ ಬೀಜಗಳು

ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸುವ ಮತ್ತೊಂದು ಆಹಾರವೆಂದರೆ ಮೆಂತೆಯ ಬೀಜಗಳು. ಹಿಂದಿನ ಕಾಲದಲ್ಲಿ ರೋಮ್, ಗ್ರೀಕ್ ಮತ್ತು ಈಜಿಪ್ಟ್ ನ ಜನರು ಮೆಂತ್ಯೆ ಕಾಳುಗಳನ್ನು ಕಾಮೋತ್ತೇಜಕವಾಗಿ ಬಳಸಿಕೊಳ್ಳುತ್ತಿದ್ದರು. ಮೆಂತೆ ಕಾಳುಗಳು ಮೇಪಲ್ ಸೀರಪ್ ಮತ್ತು ಕ್ಯಾರಮೆಲ್ ನಂತೆ ರುಚಿ ನೀಡುವುದು ಮತ್ತು ಇದನ್ನು ಆಹಾರದ ರುಚಿ ಹೆಚ್ಚು ಮಾಡಲು ಬಳಸಲಾಗುವುದು. ಮೆಂತೆ ಕಾಳುಗಳಿಂದ ಸ್ತನದ ಕೋಶಗಳು ಬೆಳವಣಿಗೆಯಾಗುವುದು ಮತ್ತು ಇದರಿಂದ ಸ್ತನದಲ್ಲಿ ಹಾಲು ಉತ್ಪತ್ತಿಯು ಹೆಚ್ಚುವುದು.ಒಂದು ವಾರ ಕಾಲ ಮೆಂತೆಕಾಳಿನ ಆಹಾರ ಸೇವನೆ ಮಾಡಿದರೆ ಕಾಮಾಸಕ್ತಿ ಹೆಚ್ಚಾಗುವುದು.

ಖರ್ಜೂರ

ಖರ್ಜೂರ

ಆಹಾರಕ್ಕೆ ಸಿಹಿ ಹಾಗೂ ರುಚಿ ಹೆಚ್ಚಿಸುವಂತಹ ಖರ್ಜೂರವು ಕಾಮಾಸಕ್ತಿ ಹೆಚ್ಚಿಸುವಂತಹ ಆಹಾರ. ಇದು ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುವುದು. ಅರೇಬಿಯನ್ ಸಂಪ್ರದಾಯದ ಪ್ರಕಾರ ಖರ್ಜೂರವನ್ನು ಹಾಲು ಮತ್ತು ದಾಲ್ಚಿನಿ ಜತೆಗೆ ಸೇವನೆ ಮಾಡಿದರೆ ಅದರಿಂದ ಕಾಮಾಸಕ್ತಿ ವೃದ್ಧಿಯಾಗುವುದು. ಖರ್ಜೂರವು ಕಾಮಾಸಕ್ತಿಯನ್ನು ಉತ್ತಮಗೊಳಿಸುವುದರೊಂದಿಗೆ ಇದರಲ್ಲಿ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಇತರ ಕೆಲವೊಂದು ಪೋಷಕಾಂಶಗಳು ಇದ್ದು, ದೇಹದ ಸಂಪೂರ್ಣ ಆರೋಗ್ಯಕ್ಕೆ ನೆರವಾಗುವುದು.

ಗಿಡಮೂಲಿಕೆಗಳು

ಗಿಡಮೂಲಿಕೆಗಳು

ಗಿಡಮೂಲಿಕೆಗಳೂ ನಿಮ್ಮ ದೇಹದಲ್ಲಿನ ಉಷ್ಣತೆ ಹೆಚ್ಚು ಮಾಡುವುದು. ಇದರಲ್ಲೂ ಪ್ರಮುಖವಾಗಿ ಕೇಸರಿಯು ಆಹಾರಕ್ಕೆ ಬಣ್ಣ, ರುಚಿ ನೀಡುವುದು ಮಾತ್ರವಲ್ಲದೆ, ನಿಮ್ಮಲ್ಲಿ ಕಾಮಾಸಕ್ತಿ ಹೆಚ್ಚು ಮಾಡುವುದು. ಇದು ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸಲು ಒಳ್ಳೆಯ ಗಿಡಮೂಲಿಕೆ. ಜಾಯಿಕಾಯಿಯು ಲೈಂಗಿಕ ಕ್ರಿಯೆಗಳನ್ನು ಸುಧಾರಿಸುವುದು. ಲವಂಗ ಕೂಡ ಮಹಿಳೆಯರಿಗೆ ಕಾಮಾಸಕ್ತಿಯಾಗಿ ಕೆಲಸ ಮಾಡುವುದು. ಕಾಮಾಸಕ್ತಿ ಕಳೆದುಕೊಂಡಿರುವಂತಹ ಮಹಿಳೆಯರು ಇವುಗಳ ಸೇವನೆ ಮಾಡಿದರೆ ಆಸಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ಆಕಾಂಕ್ಷೆಯು ಬರುವುದು.

ಸಿಂಪಿ

ಸಿಂಪಿ

ಸತು ಅಧಿಕವಾಗಿರುವಂತಹ ಸಿಂಪಿಯು ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನುಗಳನ್ನು ವೃದ್ಧಿಸುವುದು. ಮಹಿಳೆಯರು ಹಾಗೂ ಪುರುಷರಲ್ಲಿ ಕಾಮಾಸಕ್ತಿ ಹಾಗೂ ಲೈಂಗಿಕ ಕ್ರಿಯೆಗಳನ್ನು ನಿಯಂತ್ರಿಸುವಂತಹ ಟೆಸ್ಟೋಸ್ಟೆರಾನ್ ನ್ನು ಬಿಡುಗಡೆ ಮಾಡಲು ಸತು ದೇಹಕ್ಕೆ ನೆರವಾಗುವುದು. ಸಿಂಪಿಯು ಡೊಪಮೈನ್ ಮಟ್ಟ ಹೆಚ್ಚಿಸುವುದು. ಇದು ಮಹಿಳೆಯರಲ್ಲಿ ಕಾಮಾಸಕ್ತಿ ವೃದ್ಧಿಸುವುದು. ಅಧ್ಯಯನಗಳ ಪ್ರಕಾರ ಸಿಂಪಿಯು ಮಹಿಳೆಯರಲ್ಲಿ ಲೈಂಗಿಕ ಆಕಾಂಕ್ಷೆ ಹೆಚ್ಚಿಸುವುದು.

ಕೆಂಪು ವೈನ್

ಕೆಂಪು ವೈನ್

ಸ್ವಲ್ಪ ಪ್ರಮಾಣದಲ್ಲಿ ಕೆಂಪು ವೈನ್ ಸೇವನೆ ಮಾಡಿದರೆ ಅಗ ಅಪಧಮನಿಗಳು ದೇಹದಲ್ಲಿ ಸಂಪೂರ್ಣವಾಗಿ ರಕ್ತ ಪರಿಚಲನೆ ಹೆಚ್ಚು ಮಾಡುವುದು. ಇದರಿಂದ ಮಹಿಳೆಯರಲ್ಲಿ ಕಾಮಾಸಕ್ತಿಯು ಅತಿಯಾಗುವುದು. ಒಂದು ಪ್ರಮಾಣದಲ್ಲಿ ಕೆಂಪು ವೈನ್ ಸೇವನೆ ಮಾಡಿ. ಅತಿಯಾಗಿ ಸೇವನೆ ಮಾಡಿದರೆ ಅದರಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು.

ಜೇನುತುಪ್ಪ

ಜೇನುತುಪ್ಪ

ಹಿಂದಿನ ಕಾಲದಲ್ಲಿ ಪುರುಷರು ಹಾಗೂ ಮಹಿಳೆಯರು ರಾತ್ರಿ ಊಟದ ವೇಳೆ ಜೇನುತುಪ್ಪ ಸೇವನೆ ಮಾಡುತ್ತಲಿದ್ದರು. ಇದರಿಂದ ಅವರ ಲೈಂಗಿಕ ಜೀವನವು ಪರಿಣಾಮಕಾರಿಯಾಗಿ ಹೆಚ್ಚಾಗುತ್ತಿತ್ತು. ಜೇನುತುಪ್ಪದಲ್ಲಿ ಇರುವಂತಹ ಖನಿಜಾಂಶಗಳು ದೇಹದಲ್ಲಿ ಹಾರ್ಮೋನು ಮಟ್ಟ ಅಧಿಕವಾಗಿಸುವುದು. ಗ್ರೀನ್ ಟೀ ಅಥವಾ ಹಾಲಿಗೆ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸೇವನೆ ಮಾಡಿದರೆ ಅದರಿಂದ ನಿಮ್ಮ ಕಾಮಾಸಕ್ತಿ ಹೆಚ್ಚಾಗುವುದು.

ಬೆರ್ರಿಗಳು

ಬೆರ್ರಿಗಳು

ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಾಗಲು ಸೇವಿಸಬೇಕಾದ ಪ್ರಮುಖ ಆಹಾರವೆಂದರೆ ಅದು ಬೆರ್ರಿಗಳು. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇದ್ದು, ಮಹಿಳೆಯರಲ್ಲಿ ಕಾಮ ಕೆರಳಲು ನೆರಾಗುವುದು. ನೇರಳೆ ಹಣ್ಣು, ಕಪ್ಪು ನೇರಳೆ ಮತ್ತು ಸ್ಟ್ರಾಬೆರ್ರಿ ಸೇವನೆ ಮೇಡಿದರೆ ಅದರಿಂದ ರಕ್ತನಾಳಗಳು ಆರಾಮವಾಗಿ ರಕ್ತದ ಪರಿಚಲನೆಯು ಉತ್ತಮವಾಗುವುದು. ಜನನಾಂಗ ಸಹಿತ ದೇಹದ ಎಲ್ಲಾ ಭಾಗಗಳಿಗೆ ರಕ್ತವು ಸರಿಯಾಗಿ ಸರಬರಾಜು ಆಗುವುದು. ಉತ್ತಮ ಭಾವನೆ ಮೂಡಿಸುವಂತಹ ಡೊಪೆಮೈನ್ ನ ಮಟ್ಟವನ್ನು ಇದು ಉತ್ತೇಜಿಸುವುದು.

ಕಲ್ಲಂಗಡಿ

ಕಲ್ಲಂಗಡಿ

ಕಲ್ಲಂಗಡಿಯನ್ನು ಪ್ರತಿನಿತ್ಯ ಸೇವನೆ ಮಾಡಿದರೆ ಅದರಿಂದ ರಕ್ತ ಪರಿಚಲನೆಯು ಉತ್ತಮವಾಗುವುದು. ಕಲ್ಲಂಗಡಿಯಲ್ಲಿರುವಂತಹ ಪ್ರಮುಖ ಅಂಶವೆಂದರೆ ಸಿಟ್ರುಲ್ಲೈನ್ ಎಂದು ಕರೆಯಲ್ಪಡುವ ಅಮಿನೋ ಆಮ್ಲ. ಇದು ದೇಹವು ಅರ್ಜಿನೈನ್ ಬಿಡುಗಡೆ ಮಾಡುವಂತೆ ಸಂದೇಶ ರವಾಣೆ ಮಾಡುವುದು. ಇದು ನೈಟ್ರಿಕ್ ಆಕ್ಸೈಡ್ ಆಗುವುದು. ಇದರಿಂದ ರಕ್ತನಾಳಗಳು ಆರಾಮವಾಗಿ ರಕ್ತ ಸಂಚಾರವು ಉತ್ತಮವಾಗುವುದು. ಇದರಿಂದ ಮಹಿಳೆಯರ ಜನನಾಂಗಕ್ಕೆ ಹೆಚ್ಚಿನ ರಕ್ತ ಸಂಚಾರವಾಗುವುದು. ಇದರಿಂದ ಲೈಂಗಿಕ ಆಸಕ್ತಿ ಹೆಚ್ಚಾಗುವುದು.

ಖಾರದ ಆಹಾರಗಳು

ಖಾರದ ಆಹಾರಗಳು

ಖಾರದ ಆಹಾರಗಳು, ಅದರಲ್ಲೂ ಮೆಣಸು ಲೈಂಗಿಕ ಆಸಕ್ತಿ ಕೆರಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ವಾಸಾಡಿಲೇಟರ್(ಇದು ರಕ್ತನಾಳಗಳನ್ನು ತೆರೆದು ರಕ್ತಸಂಚಾರ ಸರಾಗವಾಗುವಂತೆ ಮಾಡುವುದು) ಗಳಾಗಿ ಕೆಲಸ ಮಾಡುವುದು. ಹೆಚ್ಚು ಖಾರದ ಆಹಾರ ತಿಂದರೆ ಮಹಿಳೆಯರಲ್ಲಿ ಕಾಮಾಸಕ್ತಿಯು ಹೆಚ್ಚಾಗುವುದು. ಮೆಣಸಿನಲ್ಲಿರುವ ಕ್ಯಾಪಿಸಿಯನ್ ಅಂಶವು ಇದಕ್ಕೆ ಕಾರಣವಾಗಿದೆ.ನಿಮಗೆ ಈ ಲೇಖನವು ಇಷ್ಟವಾಗಿದ್ದರೆ ಇದನ್ನು ಶೇರ್ ಮಾಡಿ. ಇದನ್ನು ಯಾರ ಜತೆಗೆ ಶೇರ್ ಮಾಡಿಕೊಳ್ಳಬೇಕು ಎಂದು ನಿಮಗೆ ತಿಳಿದಿದೆ ತಾನೇ?

English summary

10 Aphrodisiac Foods For Women

Aphrodisiacs are termed as foods, beverages or medications that stimulate sexual desire. But do you know that there are natural aphrodisiacs for women which have been used for thousands of years in ayurvedic practices? In today's stressful and fast-paced world, a decrease in libido can occur. People have become so busy that they start developing poor eating habits. This brings in reduced sexual desires. This is where foods play a major role in increasing your sex drive.
X
Desktop Bottom Promotion