For Quick Alerts
ALLOW NOTIFICATIONS  
For Daily Alerts

ಒಂದೆರಡು ವಾರದಲ್ಲಿಯೇ ಬೊಜ್ಜು ಹೊಟ್ಟೆ ಕರಗಿಸುವ ಗಿಡಮೂಲಿಕೆಗಳು

By Hemanth
|

ಬೊಜ್ಜು ದೇಹವೆಂದರೆ ಅವರನ್ನು ಗೇಲಿ ಮಾಡುವವರೇ ಹೆಚ್ಚಾಗಿರುವರು. ಬೊಜ್ಜು ದೇಹ ಬೆಳೆಸಿಕೊಂಡವರಿಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೊಟ್ಟೆಯಲ್ಲಿನ ಬೊಜ್ಜು ಬೆಳೆದಿರುವ ಕಾರಣ ಬೊಜ್ಜು ದೇಹವಿಡಿ ಆವರಿಸುವುದು. ಹೊಟ್ಟೆಯ ಸುತ್ತಲು ಬೆಳೆದಿರುವ ಬೊಜ್ಜನ್ನು ಹೋಗಲಾಡಿಸಲು ಹಲವಾರು ರೀತಿಯ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಮಾಡಿಕೊಳ್ಳಬೇಕು. ಯಾಕೆಂದರೆ ಬೊಜ್ಜು ದೇಹದಿಂದ ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಮಧುಮೇಹ ಇತ್ಯಾದಿ ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ತಾಜಾ ಆಹಾರ ಸೇವನೆ, ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ ಇತ್ಯಾದಿಗಳಿಂದಾಗಿ ತೂಕ ಕಳೆದುಕೊಳ್ಳುಲು ನಿಮಗೆ ನೆರವಾಗುವುದು. ಇದಕ್ಕಾಗಿ ನಿಮ್ಮ ಆಹಾರ ಕ್ರಮದಲ್ಲಿ ಕೆಲವು ಗಿಡಮೂಲಿಕೆಗಳನ್ನು ಸೇರಿಸಿಕೊಳ್ಳಬೇಕು. ಇದರಿಂದ ಹೊಟ್ಟೆಯ ಬೊಜ್ಜು ಬೇಗನೆ ಕರಗುವುದು. ಹೊಟ್ಟೆಯ ಬೊಜ್ಜು ಬೇಗನೆ ಕರಗಿಸುವಂತಹ ಗಿಡಮೂಲಿಕೆಗಳು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ....

ಜಿನ್ಸೆಂಗ್

ಜಿನ್ಸೆಂಗ್

ತೂಕ ಕಳೆದುಕೊಳ್ಳಲು ಈ ಜಿನ್ಸೆಂಗ್ ತುಂಬಾ ಪರಿಣಾಮಕಾರಿ ಗಿಡಮೂಲಿಕೆ. ಇದರಲ್ಲಿ ಇರುವಂತಹ ಕೆಫಿನ್, ಚಯಾಪಚಯ ಕ್ರಿಯೆ ಹೆಚ್ಚಿಸಿ, ದಿನವಿಡಿ ಶಕ್ತಿ ಹೆಚ್ಚಿಸುವುದು. ಜಿನ್ಸೆಂಗ್ ಚಹಾ ಕುಡಿದರೆ ಹೊಟ್ಟೆಯ ಬೊಜ್ಜು ಕರಗುವುದು.

ದಾಸವಾಳದ ಚಹಾ

ದಾಸವಾಳದ ಚಹಾ

ದಾಸವಾಳದ ಹೂಗಳಿಂದ ಮಾಡಿದಂತಹ ಚಹಾ ತೂಕ ಕಳೆದುಕೊಳ್ಳಲು ನೆರವಾಗುವುದು. ಇದು ದೇಹದಲ್ಲಿರುವ ಹೆಚ್ಚುವರಿ ನೀರು ತೆಗೆಯುವುದು. ಒಣಗಿಸಿದ ದಾಸವಾಳದ ಹೂವುಗಳಲ್ಲಿ ಮೂತ್ರವರ್ಧಕ ಗುಣಗಳು ಇವೆ ಮತ್ತು ಇದು ಹೊಟ್ಟೆ ಉಬ್ಬರ ತಡೆಯುವುದು. ಇದು ಜಮೆಯಾಗಿರುವ ಕೊಬ್ಬನ್ನು ವಿಘಟಿಸುವುದು ಮತ್ತು ದೇಹವು ಕಾರ್ಬ್ರೋಹೈಡ್ರೇಟ್ಸ್ ಹೀರಿಕೊಳ್ಳುವಿಕೆಯನ್ನು ಕುಗ್ಗಿಸುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು *ಚೆನ್ನಾಗಿ ಒಣಗಿಸಿದ ದಾಸವಾಳ ಹೂವಿನ ದಳಗಳು

*ಎರಡು ಚಮಚ ಸಕ್ಕರೆ

*ನೀರು - 1 ಕಪ್

*ಲಿಂಬೆಹಣ್ಣಿನ ರಸ - 2 ಟೀ.ಚಮಚ

*ಶುಂಠಿ - ಸಣ್ಣಕ್ಕೆ ಹೆಚ್ಚಿರುವುದು

ಮಾಡುವ ವಿಧಾನ

1. ತಳ ಆಳವಿರುವ ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಶುಂಠಿಯ ತುಂಡು ಮತ್ತು ದಾಸವಾಳ ದಳಗಳನ್ನು ಸೇರಿಸಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. (ದಾಸವಾಳ ದಳಗಳು ಚೆನ್ನಾಗಿ ಕುದಿದಾಗ ಕೆಂಬಣ್ಣಕ್ಕೆ ತಿರುಗುತ್ತದೆ)

2. ಇದು ಚೆನ್ನಾಗಿ ಕುದಿದ ನಂತರ ಸೋಸಿಕೊಂಡು ಇದಕ್ಕೆ 2 ಚಮಚದಷ್ಟು ಸಕ್ಕರೆ ಮತ್ತು ಎರಡು ಟೀ ಚಮಚದಷ್ಟು ಲಿಂಬೆಯ ರಸವನ್ನು ಸೇರಿಸಿ

3. ಅರೋಗ್ಯಕರವಾದ ದಾಸವಾಳ ದಳಗಳ ಚಹಾವನ್ನು ಸವಿಯಿರಿ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿಯಾಗಿರುವುದು. ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಚಯಾಪಚಯ ಕ್ರಿಯೆ ಹೆಚ್ಚು ಮಾಡಿ ಬೇಗನೆ ತೂಕ ಕಳೆದುಕೊಳ್ಳಲು ನೆರವಾಗುವುದು. ಹೊಟ್ಟೆಯ ಕೊಬ್ಬನ್ನು ಬೇಗನೆ ಕರಗಿಸುವುದು ಮಾತ್ರವಲ್ಲದೆ ಕ್ಯಾನ್ಸರ್ ಮತ್ತು ಮಧುಮೇಹ ತಡೆಯುವುದು.

ಪುದೀನಾ

ಪುದೀನಾ

ಪುದೀನಾವು ತನ್ನ ಸುವಾಸನೆಯಿಂದಾಗಿ ಆಹಾರದಲ್ಲಿನ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇದು ಹೊಟ್ಟೆಯ ಕೊಬ್ಬು ಕರಗಿಸುವುದು. ಇದು ದೇಹದಲ್ಲಿರುವ ಕಲ್ಮಷ ಮತ್ತು ವಿಷಕಾರಿ ಅಂಶಗಳನ್ನು ಕಿತ್ತುಹಾಕುವುದು. ಹೊಟ್ಟೆ ಉಬ್ಬರ ಕಡಿಮೆ ಮಾಡಿ ಜೀರ್ಣಕ್ರಿಯೆ ವೃದ್ಧಿಸುವುದು. ಆಹಾರದಲ್ಲಿ ಪುದೀನಾ ಬಳಸಬಹುದು ಅಥವಾ ಪುದೀನಾ ಚಹಾ ಕುಡಿಯಬಹುದು.

ರೋಸ್ಮರಿ

ರೋಸ್ಮರಿ

ರೋಸ್ಮರಿಯನ್ನು ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಲಿಪಸೆ ಎನ್ನುವ ಕಿಣ್ವವಿದ್ದು, ಇದು ದೇಹದಲ್ಲಿರುವ ಕೊಬ್ಬನ್ನು ವಿಘಟಿಸುವುದು. ರೋಸ್ಮರಿಯಲ್ಲಿ ನಾರಿನಾಂಶವಿರುವ ಕಾರಣದಿಂದ ಇದು ಕೊಬ್ಬು ಹೀರಿಕೊಳ್ಳದಂತೆ ತಡೆಯುವುದು ಮತ್ತು ದೀರ್ಘ ಕಾಲ ತನಕ ಹೊಟ್ಟೆ ತುಂಬಿದಂತೆ ಇಡುವ ಕಾರಣದಿಂದ ಹೊಟ್ಟೆಯ ಬೊಜ್ಜು ಕರಗುವುದು.

ಅಲೋವೆರಾ

ಅಲೋವೆರಾ

ಅಲೋವೆರಾದಲ್ಲಿ ಇರುವಂತಹ ಹಲವಾರು ರೀತಿಯ ಆರೋಗ್ಯ ಲಾಭಗಳಿಂದ ಇದು ತುಂಬಾ ಜನಪ್ರಿಯವಾಗಿದೆ. ಇದನ್ನು ಚರ್ಮ ಹಾಗೂ ಕೂದಲಿನ ಆರೈಕೆಯ ಜತೆಜತೆಗೆ ತೂಕ ಕಳೆದುಕೊಳ್ಳಲು ಬಳಸಲಾಗುವುದು. ಅಲೋವೆರಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ ದೇಹವನ್ನು ನಿರ್ವಿಷಗೊಳಿಸುವುದು. ಇದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗಿ ಹೊಟ್ಟೆಯ ಕೊಬ್ಬು ಕರಗುವುದು. ಪ್ರತಿನಿತ್ಯ ಬೆಳಗ್ಗೆ ಅಲೋವೆರಾ ಜ್ಯೂಸ್ ಕುಡಿದರೆ ಅದರಿಂದ ಬೇಗನೆ ತೂಕ ಕಡಿಮೆಯಾಗುವುದು.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ಅಲಂಕಾರಕ್ಕೆ ಹೆಚ್ಚಾಗಿ ಬಳಸುವಂತಹ ಕೊತ್ತಂಬರಿ ಸೊಪ್ಪು ಹೊಟ್ಟೆಯ ಕೊಬ್ಬು ಕರಗಿಸಲು ಒಳ್ಳೆಯ ಗಿಡಮೂಲಿಕೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವ ಕೊತ್ತಂಬರಿಯು ಹಸಿವನ್ನು ನಿಯಂತ್ರಿಸಲು ನೆರವಾಗುವುದು. ಇದರಿಂದ ಆಹಾರವು ಕೊಬ್ಬಾಗಿ ಪರಿವರ್ತನೆಯಾಗುವ ಬದಲು ಶಕ್ತಿಯಾಗಿ ಕೆಲಸ ಮಾಡುವುದು.

ಡಾಂಡಲೀಯನ್(ಕಾಡುಸೇವಂತಿಗೆ)

ಡಾಂಡಲೀಯನ್(ಕಾಡುಸೇವಂತಿಗೆ)

ಡಾಂಡಲೀಯನ್ ತೂಕ ಕಳೆದುಕೊಳ್ಳಲು ತುಂಬಾ ಪರಿಣಾಮಕಾರಿ ಗಿಡಮೂಲಿಕೆ. ಡಾಂಡಲೀಯನ್ ನ ಪ್ರತಿಯೊಂದು ಭಾಗವನ್ನು ತಿನ್ನಬಹುದಾಗಿದೆ. ಇದು ದೇಹದಲ್ಲಿ ವಿಷವನ್ನು ತಟಸ್ಥಗೊಳಿಸುವುದು ಮತ್ತು ಉರಿಯೂತ ತಗ್ಗಿಸಲು ನೆರವಾಗುವುದು. ಡಾಂಡಲೀಯನ್ ನ ಎಲೆಗಳು ಹೊಟ್ಟೆಯ ಕೊಬ್ಬು ಕರಗಿಸುವುದು. ಇದನ್ನು ಚಹಾ ರೂಪದಲ್ಲಿ ಸೇವಿಸಬಹುದು ಅಥವಾ ಸಲಾಡ್ ಮೂಲಕ ತಿನ್ನಬಹುದು.

ಮಿಲ್ಕ್ ಥಿಸಲ್

ಮಿಲ್ಕ್ ಥಿಸಲ್

ಮಿಲ್ಕ್ ಥಿಸಲ್ ಗಿಡಮೂಲಿಕೆಯು ಯಕೃತ್ ನ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಎಂದು ತಿಳಿಯಲಾಗಿತ್ತು. ಆದರೆ ಇದು ಕೊಬ್ಬು ಕರಗಿಸುವಲ್ಲಿಯೂ ತುಂಬಾ ಪರಿಣಾಮಕಾರಿ. ಮಿಲ್ಕ್ ಥಿಸಲ್ ನಲ್ಲಿ ಇರುವ ಕೆಲವು ಅಂಶಗಳು ಯಕೃತ್ ನಲ್ಲಿ ಇರುವಂತಹ ವಿಷಗಳನ್ನು ಶುದ್ಧೀಕರಿಸುವುದು. ಇದರಿಂದ ದೇಹವು ಕೊಬ್ಬಾಗಿ ಶೇಖರಣೆಯಾಗುವ ಗ್ಲೂಕೋಸ್ ಮತ್ತು ಸಕ್ಕರೆ ಸರಿಯಾಗಿ ಬಳಸಿಕೊಳ್ಳಲು ನೆರವಾಗುವುದು.

ತುಳಸಿ

ತುಳಸಿ

ತುಳಸಿಯು ತೂಕ ಕಳೆದುಕೊಳ್ಳುವವರಿಗೆ ತುಂಬಾ ಪರಿಣಾಮಕಾರಿ ಗಿಡಮೂಲಿಕೆ. ಇದು ಕೊರ್ಟಿಸಾಲ್ ಮಟ್ಟವನ್ನು ಕಡಿಮೆ ಮಾಡುವುದು. ಕೊರ್ಟಿಸಾಲ್ ಮಟ್ಟವು ಅತಿಯಾಗಿದ್ದರೆ ನಿಮ್ಮ ಸೊಂಟದ ಸುತ್ತಲು ಕೊಬ್ಬು ಶೇಖರಣೆಯಾಗುವುದು. ಆಯುರ್ವೇದದ ಪ್ರಕಾರ ತುಳಸಿ ಗಿಡದಲ್ಲಿ ಕೊಬ್ಬನ್ನು ಕರಗಿಸುವಂತಹ ಗುಣಗಳು ಇವೆ.

ತುಳಸಿ ಚಹಾ ತಯಾರಿಸುವ ವಿಧಾನ

ತುಳಸಿ ಚಹಾ ತಯಾರಿಸುವ ವಿಧಾನ

*ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು 5-7 ತುಳಸಿ ಎಲೆಯನ್ನು ಸೇರಿಸಿ.

*ಪಾತ್ರೆಗೆ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ.

*ನಂತರ ಉರಿಯನ್ನು ಆರಿಸಿ, ಚಹಾವನ್ನು ತಣಿಯಲು ಬಿಡಿ.

*ಉಗುರು ಬೆಚ್ಚಗಿರುವಾಗಲೇ ಸೇವಿಸಬಹುದು.

*ಬೇಕಿದ್ದರೆ ಆರೋಗ್ಯ ಉತ್ಪನ್ನಗಳಾದ ಶುಂಠಿ, ಏಲಕ್ಕಿ, ಕರಿಮೆಣಸು, ಲವಂಗ ಹಾಗೂ ಕೆಲವು ಮಸಾಲೆ ಗಿಡಮೂಲಿಕೆಗಳನ್ನು ಸೇರಿಸಬಹುದು.

*ಇದನ್ನು ನಿತ್ಯವೂ ಸೇವಿಸಬಹುದು. ಇಲ್ಲವೇ ಅಗತ್ಯವಿದ್ದಾಗ ಸೇವಿಸಬಹುದು.

ಜೇನುತುಪ್ಪ ಸೇವಿಸಿ

ಜೇನುತುಪ್ಪ ಸೇವಿಸಿ

ಜೇನುತುಪ್ಪದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ ಒಂದು ಚಹಾಚಮಚದಷ್ಟು ಜೇನನ್ನು ಬಿಸಿನೀರಿನಲ್ಲಿ ಮಿಶ್ರಣಮಾಡಿ ಇದಕ್ಕೆ ಒಂದು ಚಹಾ ಚಮಚದಷ್ಟು ನಿಂಬೆ ರಸವನ್ನು ಸೇರಿಸಿ. ಇದನ್ನು ಬೆಳಗ್ಗೆ ಇದ್ದಿದ ತಕ್ಷಣ ಬರಿಹೊಟ್ಟೆಯಲ್ಲಿ ಸೇವಿಸಿ. ಪರಿಣಾಮಕಾರಿಯಾಗಿ ತೂಕ ತಗ್ಗಿಸಲು ಪ್ರತಿದಿನ ಎರಡು ಮೂರು ತಿಂಗಳವರೆಗೂ ಸೇವಿಸಿ.

English summary

10 Amazing Herbs That Burn Belly Fat Fast

Making a few lifestyle changes such as eating fresh, healthy home-cooked meals and exercising on a regular basis to lose weight can be a slow process. In order to get fast and effective results that will help increase your weight loss, you can include certain herbs in your diet plan. Herbs can cut off belly fat because they contain potent compounds such as polyphenol antioxidants found in green tea. These natural compounds of the herbs help to get rid of the belly fat fast. So, read to know more about the 10 herbs that help burn belly fat fast.
X
Desktop Bottom Promotion