ಎಚ್ಚರ, ಅಪ್ಪಿತಪ್ಪಿಯೂ ದೇಹದ ಕೊಬ್ಬನ್ನು ನಿರ್ಲಕ್ಷಿಸಬೇಡಿ!

By: manu
Subscribe to Boldsky

ನಿಮ್ಮ ಶರೀರದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ತುಂಬಿಕೊಂಡು ತೂಕ ಹೆಚ್ಚಿದೆಯೇ? ವಿಶೇಷವಾಗಿ ಸೊಂಟದ ಸುತ್ತಳತೆ ಹೆಚ್ಚುವ ಮೂಲಕ ಶರೀರದ ಸೌಂದರ್ಯವೂ ಕುಂದುತ್ತದೆ. ಆದರೆ ಶರೀರದ ಸೌಂದರ್ಯ ಕುಂದುವುದಕ್ಕಿಂತಲೂ ಹೆಚ್ಚಾಗಿ ಇದು ಹಲವು ಕಾಯಿಲೆಗಳಿಗೆ ನೇರವಾಗಿ ನೀಡುವ ಆಹ್ವಾನವಾಗಿದೆ...! ನಿಮಗೂ ಇಂತಹ ಹೊಟ್ಟೆಯ ಬೊಜ್ಜಿನ ಸಮಸ್ಯೆಗಳಿವೆಯೇ?

ಒಂದು ವೇಳೆ ಇದನ್ನು ನಿಯಂತ್ರಿಸದೇ ಹೋದರೆ ಒಂದಕ್ಕಿಂತ ಹೆಚ್ಚು ಕಾಯಿಲೆಗಳು ಆವರಿಸಿ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸಲಿವೆ. ಬನ್ನಿ, ಸ್ಥೂಲಕಾಯದಿಂದ ಯಾವ ರೋಗಗಳು ಆವರಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ನೋಡೋಣ....

ಹೃದಯದ ಕಾಯಿಲೆಗಳು

ಹೃದಯದ ಕಾಯಿಲೆಗಳು

ದೇಹದಲ್ಲಿ ಕೊಬ್ಬು ಹೆಚ್ಚಿದಷ್ಟೂ ದೇಹದ ತೂಕ ಹೆಚ್ಚುತ್ತದೆ. ಈ ತೂಕವನ್ನು ಹೊರಲು ಸ್ನಾಯುಗಳನ್ನು ಬೆಳೆಸುವುದು ಅಗತ್ಯವಾಗುತ್ತದೆ. ಈ ಹೆಚ್ಚುವರಿ ಸ್ನಾಯುಗಳಿಗೆ ರಕ್ತ ಒದಗಿಸಲು ಹೆಚ್ಚಿನ ರಕ್ತನಾಳಗಳು ಮತ್ತು ಹೆಚ್ಚಿನ ಒತ್ತಡದಲ್ಲಿ ರಕ್ತದ ಅಗತ್ಯವಿದೆ. ಈ ಅಗತ್ಯ ಹೃದಯದ ಮೇಲೆ ಹೆಚ್ಚಿನ ಹೊರ ಹೇರುವ ಮೂಲಕ ಹೃದಯ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ.ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ದೇಹದಲ್ಲಿ ಕೊಬ್ಬು ಹೆಚ್ಚಿದಷ್ಟೂ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ದೂಡಲು ಹೆಚ್ಚಿನ ಒತ್ತಡದ ಅಗತ್ಯ ಬೀಳುತ್ತದೆ. ದೇಹದಲ್ಲಿ ಕೊಬ್ಬು ಹೆಚ್ಚಿದಂತೆಯೇ ರಕ್ತನಾಳಗಳ ಒಳಗೂ ಜಿಡ್ಡು ಸೇರಿಕೊಳ್ಳುತ್ತದೆ. ಪರಿಣಾಮವಾಗಿ ರಕ್ತದ ಒತ್ತಡ ಹೆಚ್ಚುತ್ತದೆ.ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಏಳು ಪವರ್‌ಫುಲ್ ಜ್ಯೂಸ್

ಮಧುಮೇಹ

ಮಧುಮೇಹ

ದೇಹದಲ್ಲಿ ಕೊಬ್ಬು, ವಿಶೇಷವಾಗಿ ಸೊಂಟದಲ್ಲಿ ಹೆಚ್ಚು ಸಂಗ್ರಹವಾದಷ್ಟೂ ದೇಹದಲ್ಲಿ ಇನ್ಸುಲಿನ್ ಬಳಸಿಕೊಳ್ಳುವ ಕ್ಷಮತೆ ಕಡಿಮೆಯಾಗುತ್ತದೆ. ಇದು ನೇರವಾಗಿ ಮಧುಮೇಹಕ್ಕೆ ಆಹ್ವಾನ ನೀಡುತ್ತದೆ.ಏನೇ ಹೇಳಿ ಮಧುಮೇಹ ನಿಯಂತ್ರಣಕ್ಕೆ ಮನೆಮದ್ದೇ ಸೂಕ್ತ

ಕ್ಯಾನ್ಸರ್

ಕ್ಯಾನ್ಸರ್

ಸೊಂಟದ ಸುತ್ತಳತೆ ಹೆಚ್ಚಿದಷ್ಟೂ ದೇಹದಲ್ಲಿ ಕೆಲವಾರು ಹಾರ್ಮೋನುಗಳು ಹೆಚ್ಚು ಹೆಚ್ಚಾಗಿ

ಉತ್ಪತ್ತಿಯಾಗುತ್ತವೆ. ಈ ಹಾರ್ಮೋನುಗಳು ಕೆಲವು ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ.

ಕ್ಯಾನ್ಸರ್

ಕ್ಯಾನ್ಸರ್

ಕೆಲವೊಮ್ಮೆ ಈ ಜೀವಕೋಶಗಳು ನಿಯಂತ್ರಣಕ್ಕೂ ಸಿಗದೇ ಬೆಳೆಯುತ್ತಾ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಸ್ತನ, ಕರುಳು ಮೊದಲಾದ ಅಂಗಗಳಿಗೆ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚುತ್ತದೆ.

ಯಕೃತ್‌ನಲ್ಲಿ ಕೊಬ್ಬು

ಯಕೃತ್‌ನಲ್ಲಿ ಕೊಬ್ಬು

ಒಂದು ವೇಳೆ ಯಕೃತ್‌ನ (ದೇಹದ ಲಿವರ್) ಸುತ್ತ ಮುತ್ತ ಕೊಬ್ಬು ತುಂಬಿಕೊಳ್ಳತೊಡಗಿದರೆ ಇದು fatty liver disease ಎಂಬ ಕಾಯಿಲೆಗೆ ಕಾರಣವಾಗಬಹುದು. ಇದು ಯಕೃತ್‌ನ ಕ್ಷಮತೆಯನ್ನೇ ಉಡುಗಿಸುತ್ತದೆ. ಇದರ ಪರಿಣಾಮದಿಂದ ಹಲವು ಪರೋಕ್ಷ ತೊಂದರೆಗಳು ಎದುರಾಗಬಹುದು.

ಉಸಿರಾಟದಲ್ಲಿ ತೊಂದರೆ

ಉಸಿರಾಟದಲ್ಲಿ ತೊಂದರೆ

ಹೊಟ್ಟೆಯ ಸುತ್ತಮುತ್ತ ಕೊಬ್ಬಿ ತುಂಬಿಕೊಂಡಷ್ಟೂ ಹೊಟ್ಟೆಯ ಸುತ್ತಮುತ್ತಲ ಅಂಗಗಳಾದ ವಪೆ, ಶ್ವಾಸಕೋಶಗಳಿಗೆ ಹಿಗ್ಗಲು ಸ್ಥಳಾವಕಾಶ ಕಡಿಮೆಯಾಗುತ್ತದೆ. ಇದು ಪೂರ್ಣವಾಗಿ ಉಸಿರೆಳೆದುಕೊಳ್ಳಲು ಕಷ್ಟವಾಗಿಸುತ್ತದೆ.

ಮೊಣಕಾಲಿನ ಗಂಟು ಮತ್ತು ಇತರ ಸಂಧಿಗಳಲ್ಲಿ ನೋವು

ಮೊಣಕಾಲಿನ ಗಂಟು ಮತ್ತು ಇತರ ಸಂಧಿಗಳಲ್ಲಿ ನೋವು

ಸೊಂಟದ ಸುತ್ತಳತೆ ಹೆಚ್ಚಿದಷ್ಟೂ ದೇಹದ ಭಾರವೂ ಹೆಚ್ಚುತ್ತಾ ಹೋಗುತ್ತದೆ. ವಿಶೇಷವಾಗಿ ಬಗ್ಗುವ ಸಮಯದಲ್ಲಿ ಮೊಣಕಾಲುಗಳ ಮೇಲೆ ಹೆಚ್ಚಿನ ಭಾರ ಬೀಳುವ ಮೂಲಕ ಸವೆತವೂ ಹೆಚ್ಚುತ್ತದೆ.

ಮೊಣಕಾಲಿನ ಗಂಟು ಮತ್ತು ಇತರ ಸಂಧಿಗಳಲ್ಲಿ ನೋವು

ಮೊಣಕಾಲಿನ ಗಂಟು ಮತ್ತು ಇತರ ಸಂಧಿಗಳಲ್ಲಿ ನೋವು

ಹೀಗೇ ಹೆಚ್ಚು ಹೆಚ್ಚಾಗಿ ಸವೆಯುತ್ತಾ ಹೋದಂತೆ ನೋವು ಹೆಚ್ಚುತ್ತದೆ. ಪಾದಗಳು ಮತ್ತು ಇತರ ಸಂಧಿಗಳಿಗೂ ಹೆಚ್ಚು ಹೆಚ್ಚಾಗಿ ಭಾರ ಬಿದ್ದು ನೋವು ಆವರಿಸುವ ಸಾಧ್ಯತೆ ಹೆಚ್ಚುತ್ತದೆ.ಯಮಯಾತನೆ ನೀಡುವ ಮೊಣಕಾಲು ನೋವಿಗೆ ಪರಿಹಾರವೇನು?

 
English summary

Your Body Fat Increases The Risk Of These Diseases

Today in this article we will be discussing how body fat can increase your risk of developing various diseases. It isn't just the fat that accumulates in the body but along with this a lot of toxins also get deposited in the body. This increases the risk of heart disease, diabetes and high blood pressure, just to name a few. Here is a list of a few diseases that excess body fat can cause. Take a look.
Subscribe Newsletter