For Quick Alerts
ALLOW NOTIFICATIONS  
For Daily Alerts

ಮನೆಯ ಮೂಲೆ ಸೇರಿದ ತಾಮ್ರದ ಪಾತ್ರೆಯನ್ನು ಮತ್ತೆ ಬಳಸಿ...

ತಾಮ್ರದ ಚೊಂಬಿನಲ್ಲಿ ನೀರನ್ನು ಕುಡಿಯುವುದರ ಆಯುರ್ವೇದದ ಹಿನ್ನೆಲೆಯಿಂದ ಬಂದಿರುವ ಆಚರಣೆಯಾಗಿದೆ. ಆಯುರ್ವೇದದ ಪ್ರಕಾರ ದೇಹದಲ್ಲಿರುವ ಕಫ, ಪಿತ್ತ ಮತ್ತು ವಾತ ಈ ಮೂರು ಬಗೆಯ ದೋಷಗಳನ್ನು ತಾಮ್ರವು ಸಮತೋಲನದಲ್ಲಿಡುವ ಗುಣವನ್ನು ಒಳಗೊಂಡಿದೆಯಂತೆ

By Arshad
|

ತುಂಬಾ ಹಿಂದಿನಿಂದಲೂ ಅಡುಗೆಯಲ್ಲಿ ತಾಮ್ರದ ಪಾತ್ರೆಗಳನ್ನು ಭಾರತದಲ್ಲಿ ಬಳಸಲಾಗುತ್ತಿತ್ತು ಎಂಬುದನ್ನು ಉತ್ಖತನದಲ್ಲಿ ದೊರೆತಿರುವ ಪಾತ್ರೆಗಳು ಸಾಬೀತುಪಡಿಸಿವೆ. ಹಿಂದಿನವರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯದಲ್ಲಿ ಬೆಳಿಗ್ಗೆದ್ದ ತಕ್ಷಣ ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ಕುಡಿಯುವುದನ್ನು ಕೆಲವು ಮನೆಗಳಲ್ಲಿ ಇಂದಿಗೂ ಕಾಣಬಹುದು.

ಇದಕ್ಕಾಗಿ ರಾತ್ರಿ ಮಲಗುವ ಮುನ್ನ ತಾಮ್ರದ ಪಾತ್ರೆಯಲ್ಲಿ ಕುಡಿಯುವ ನೀರನ್ನಿಟ್ಟು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಲಾಗುತ್ತದೆ. ತಾಮ್ರದ ಬಗ್ಗೆ ಗೊತ್ತಿಲ್ಲದವರು ಇದನ್ನೊಂದು ವಿಚಿತ್ರ ಸಂಪ್ರದಾಯದಂತೆ ನೋಡಬಹುದು. ಆದರೆ ಈ ನೀರಿಗೆ ಕೆಲವು ಔಷಧೀಯ ಗುಣಗಳಿವೆ. ಮೂಲೆ ಸೇರಿದ ತಾಮ್ರದ ಪಾತ್ರೆಯ ಆರೋಗ್ಯದ ಮಹಾತ್ಮೆ

ಇದೇ ಕಾರಣಕ್ಕೆ ನಮ್ಮ ಹಿರಿಯರು ನೂರಾರು ವರ್ಷಗಳಿಂದ ಸೇವಿಸುತ್ತಾ ಬಂದಿದ್ದಾರೆ. ಆದರೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುದಿಸುವುದು ಅಥವಾ ಅಡುಗೆ ಮಾಡುವುದು ಮಾತ್ರ ಅಪಾಯಕಾರಿಯಾಗಿದ್ದು ಇದನ್ನು ತಡೆಯಲು ತವರದ ಲೇಪನವನ್ನು ನೀಡುವ 'ಕಲಾಯಿ' ಮಾಡಲಾಗುತ್ತದೆ. ಈ ಕೆಲಸ ಮಾಡುವವರನ್ನು ಕಲಾಯದ ಕೆಲಸದವರು ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಈ ಕಲೆ ಹೆಚ್ಚೂ ಕಡಿಮೆ ನೇಪಥ್ಯಕ್ಕೆ ಸರಿದಿದೆ. ಬನ್ನಿ, ಈ ನೀರನ್ನು ಕುಡಿಯುವ ಆರೋಗ್ಯಕರ ಗುಣಗಳನ್ನು ನೋಡೋಣ....

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಈ ನೀರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಕೊಬ್ಬನ್ನು ಇನ್ನೂ ಹೆಚ್ಚಾಗಿ ಕರಗಲು ಸಹಾಯ ಮಾಡುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ನಮ್ಮ ಕರುಳುಗಳು ಕೊಂಚ ಸಂಕುಚಿತಗೊಳ್ಳಬೇಕು. ಈ ಶಕ್ತಿಯನ್ನು ತಾಮ್ರ ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಲಭಗೊಳಿಸಬಹುದು. ಅಲ್ಲದೇ ಹೊಟ್ಟೆಯಲ್ಲಿನ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಮೂಲಕ ಎದುರಾಗಬಹುದಾಗಿದ್ದ ಉರಿಯೂತವನ್ನೂ ತಡೆಯುತ್ತದೆ. ಇದರ ಉತ್ತಮ ಪರಿಣಾಮ ಪಡೆಯಲು ನಿತ್ಯ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸಬೇಕು.

ಹೃದಯದ ಕ್ಷಮತೆ

ಹೃದಯದ ಕ್ಷಮತೆ

ಈ ನೀರಿನ ಕುಡಿಯುವಿಕೆಯಿಂದ ಹೃದಯದ ಕ್ಷಮತೆಯೂ ಹೆಚ್ಚುತ್ತದೆ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತನಾಳಗಳ ಒಳಗಿ ಜಿಡ್ಡು ಉಂಟಾಗದಂತೆ ತಡೆದು ರಕ್ತದೊತ್ತಡ ಹೆಚ್ಚದಂತೆ ತಡೆಯುತ್ತದೆ.

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ನಮ್ಮ ದೇಹದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಮೂಲಕ ಹಲವು ರೀತಿಯಲ್ಲಿ ಆರೋಗ್ಯವನ್ನು ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದಲ್ಲಿ ನೆರಿಗೆ ಬೀಳುವ ಪ್ರಕ್ರಿಯೆಯನ್ನು ತಡವಾಗಿಸಿ ವೃದ್ಧಾಪ್ಯವನ್ನು ದೂರಾಗಿಸುತ್ತದೆ.

ಥೈರಾಯ್ಡ್ ಗ್ರಂಥಿ

ಥೈರಾಯ್ಡ್ ಗ್ರಂಥಿ

ನಮ್ಮ ಥೈರಾಯ್ಡ್ ಗ್ರಂಥಿಗೆ ತಾಮ್ರದ ಅವಶ್ಯಕತೆ ಹೆಚ್ಚು. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವ ಮೂಲಕ ಈ ಕೊರತೆಯನ್ನು ನೀಗಿಸಬಹುದು.

ಮೆದುಳಿನ ಕ್ಷಮತೆಗೆ....

ಮೆದುಳಿನ ಕ್ಷಮತೆಗೆ....

ಮೆದುಳಿನಿಂದ ಹೊರಡುವ ಸಂಕೇತಗಳು ದೇಹದ ಇತರ ಕಡೆ ತಲುಪಲು ತಾಮ್ರದ ಅವಶ್ಯಕತೆ ಹೆಚ್ಚು. ಇದರಿಂದ ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ.

ಮಾರಕ ಬ್ಯಾಕ್ಟೀರಿಯಾ.....

ಮಾರಕ ಬ್ಯಾಕ್ಟೀರಿಯಾ.....

ಇ ಕೊಲೈ ಎಂಬ ಮಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ತಾಮ್ರದ ಕಣಗಳಿಗೆ ಸಾಮರ್ಥ್ಯವಿದೆ. ಸಾಮಾನ್ಯವಾಗಿ ನಾವು ನೀರಿನ ಮೂಲಕ ದೇಹ ಪ್ರವೇಶಿಸುವ ಬ್ಯಾಕ್ಟೀರಿಯಾಗಳಿಗೆ ಸುಲಭವಾಗಿ ತುತ್ತಾಗುತ್ತೇವೆ. ತಾಮ್ರದ ಪಾತ್ರೆಯ ನೀರು ಈ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಹಲವು ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ.

ಸಂಧಿವಾತ ತಡೆಯುತ್ತದೆ....

ಸಂಧಿವಾತ ತಡೆಯುತ್ತದೆ....

ಇದರ ಉರಿಯೂತ ನಿವಾರಕ ಗುಣ ಸಂಧಿವಾತ ಆವರಿಸುವ ಸಾಧ್ಯತೆಯಿಂದ ದೇಹವನ್ನು ರಕ್ಷಿಸುತ್ತದೆ.

ವೈರಸ್ ನಿರೋಧಕ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣವಿದೆ

ವೈರಸ್ ನಿರೋಧಕ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣವಿದೆ

ತಾಮ್ರದಲ್ಲಿ ವೈರಸ್ ನಿರೋಧಕ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣವಿದೆ. ಹಾಗೂ ಇದರಲ್ಲಿ ಉರಿಯೂತ ನಿವಾರಕ ಗುಣಗಳೂ ಇವೆ. ಇದರಿಂದ ಗಾಯಗಳು ಮತ್ತು ರೋಗಗಳು ಶೀಘ್ರವಾಗಿ ವಾಸಿಯಾಗಲು ಸಾಧ್ಯವಾಗುತ್ತದೆ. ಅಲ್ಲದೇ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವ ಮೂಲಕ ರೋಗವನ್ನು ಬರದಂತೆ ತಡೆಗಟ್ಟಲು ಹಾಗೂ ಹೊಸ ಜೀವಕೋಶಗಳು ಹುಟ್ಟುವಂತೆ ಮಾಡುವ ಮೂಲಕ ಆರೋಗ್ಯವನ್ನು ವೃದ್ದಿಸುತ್ತದೆ.

ವೈರಸ್ ನಿರೋಧಕ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣವಿದೆ

ವೈರಸ್ ನಿರೋಧಕ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣವಿದೆ

ನಮ್ಮ ಆಹಾರದಲ್ಲಿ ಕಬ್ಬಿಣದ ಅಂಶವಿದ್ದರೂ ಇದನ್ನು ಹೀರಿಕೊಳ್ಳಲು ತಾಮ್ರದ ಅಗತ್ಯವಿದೆ. ಆದ್ದರಿಂದ ಈ ನೀರಿನ ಸೇವನೆಯಿಂದ ಕಬ್ಬಿಣದ ಕೊರತೆ ಕಡಿಮೆಯಾಗಿ ರಕ್ತಹೀನತೆಯ ತೊಂದರೆಗಳು ನಿವಾರಣೆಯಾಗುತ್ತವೆ.

English summary

Why Drink Water From Copper Containers?

Why is drinking water in copper vessel in morning considered healthy? Well, read on to know about the benefits of water storage in copper vessel...
X
Desktop Bottom Promotion