For Quick Alerts
ALLOW NOTIFICATIONS  
For Daily Alerts

ನೆಲ್ಲಿಕಾಯಿ ಜ್ಯೂಸ್‌+ಮೆಂತೆ ಹುಡಿ-ಬರೋಬ್ಬರಿ 7 ಕಾಯಿಲೆಗೆ ರಾಮಬಾಣ!

By Hemanth
|

ಹವಾಮಾನ ಬದಲಾವಣೆ, ಕಲುಷಿತ ವಾತಾವರಣದಿಂದಾಗಿ ಇಂದಿನ ದಿನಗಳಲ್ಲಿ ಆಗಾಗ ಅನಾರೋಗ್ಯ ಕಾಡುವುದು. ಕೆಲವರ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿರುವ ಕಾರಣದಿಂದ ಅವರು ಆರೋಗ್ಯವಂತರಾಗಿರುತ್ತಾರೆ. ಪ್ರತಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸಣ್ಣ ರೋಗ ಕೂಡ ದೊಡ್ಡ ಸಮಸ್ಯೆಯಾಗಿ ಕಾಡುವುದು. ಇದಕ್ಕಾಗಿ ಆಗಾಗ ವೈದ್ಯರಲ್ಲಿಗೆ ತೆರಳಿ ಔಷಧಿ ತರುತ್ತೇವೆ.

ಅನಾರೋಗ್ಯ ಆಗಾಗ ಕಾಡಿದಾಗ ಹಣ ಕೂಡ ವೆಚ್ಚವೆಚ್ಚವಾಗುವುದು. ಇದು ನಿಮ್ಮ ಸಂಪಾದನೆ ಹಾಗೂ ಕೂಡಿಕೆಯಲ್ಲಿ ಭಾರೀ ಪಾಲನ್ನು ಪಡೆಯುತ್ತದೆ. ಇದಕ್ಕಾಗಿ ಆಯುರ್ವೇದ ಪಾನೀಯದಿಂದ ಆರೋಗ್ಯವನ್ನು ಕಾಪಾಡಿಕೊಂಡು ಹೋಗಿ ಯಾವುದೇ ಕಾಯಿಲೆಯು ನಿಮ್ಮ ದೇಹದೊಳಗೆ ಬರದಂತೆ ರಕ್ಷಿಸುತ್ತದೆ. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ

ನೈಸರ್ಗಿಕ ರೀತಿಯಲ್ಲಿ ಆರೋಗ್ಯವನ್ನುಕಾಪಾಡಿಕೊಳ್ಳಬೇಕಾದರೆ ನೆಲ್ಲಿಕಾಯಿ ಜ್ಯೂಸ್ ಮತ್ತು ಮೆಂತೆಯ ಹುಡಿಯನ್ನು ಹಾಕಿಕೊಂಡು ಮಾಡುವ ಪಾನೀಯದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಮೂರು ಚಮಚ ನೆಲ್ಲಿಕಾಯಿ ಜ್ಯೂಸ್‌ಗೆ ಒಂದು ಚಮಚ ಮೆಂತೆ ಹುಡಿಯನ್ನು ಹಾಕಿಕೊಂಡು ಪ್ರತೀದಿನ ಸೇವನೆ ಮಾಡಿದರೆ ಒಳ್ಳೆಯ ಆರೋಗ್ಯವು ನಿಮ್ಮದಾಗುವುದು...

ಮಧುಮೇಹಿಗಳಿಗೆ

ಮಧುಮೇಹಿಗಳಿಗೆ

ಈ ನೈಸರ್ಗಿಕ ಪಾನೀಯದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಮಧುಮೇಹದ ಲಕ್ಷಣಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದು.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಈ ನೈಸರ್ಗಿಕ ಪಾನೀಯವು ದೇಹವು ಹೆಚ್ಚಿನ ಮಟ್ಟದಲ್ಲಿ ಪ್ರೋಟೀನ್ ಹೀರಿಕೊಳ್ಳಲು ನೆರವಾಗುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗಿ ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಬಹುದು.

ಹೃದಯದ ಕಾಯಿಲೆ ನಿವಾರಣೆ

ಹೃದಯದ ಕಾಯಿಲೆ ನಿವಾರಣೆ

ನೆಲ್ಲಿಕಾಯಿ ಮತ್ತು ಮೆಂತೆಯಲ್ಲಿ ಇರುವಂತಹ ಶಕ್ತಿಶಾಲಿ ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಹೃದಯದ ಸ್ನಾಯುಗಳನ್ನು ಬಲಗೊಳಿಸಿ ಹಲವಾರು ರೀತಿಯ ಹೃದಯದ ಕಾಯಿಲೆಯನ್ನು ತಡೆಯುತ್ತದೆ.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ಈ ನೈಸರ್ಗಿಕ ಪಾನೀಯದಲ್ಲಿ ವಿಟಮಿನ್ ಸಿ ಇರುವ ಕಾರಣದಿಂದ ಇದು ದೇಹದಲ್ಲಿನ ಎಲ್ಲಾ ಕೋಶಗಳನ್ನು ಬಲಗೊಳಿಸುವುದು ಮತ್ತು ಪ್ರತಿರೋಧಕ ವ್ಯವಸ್ಥೆಗೆ ಬಲ ನೀಡುವುದು. ಇದರಿಂದ ಸಾಮಾನ್ಯ ಕಾಯಿಲೆಗಳು ದೂರವಿರುತ್ತದೆ.

ಮೂತ್ರನಾಳದಲ್ಲಿ ಕಲ್ಲಾಗುವುದನ್ನು ತಡೆಯುವುದು

ಮೂತ್ರನಾಳದಲ್ಲಿ ಕಲ್ಲಾಗುವುದನ್ನು ತಡೆಯುವುದು

ನೆಲ್ಲಿಕಾಯಿ ಜ್ಯೂಸ್ ಮತ್ತು ಮೆಂತ್ಯೆಯ ಮಿಶ್ರಣದಲ್ಲಿರುವ ವಿಟಮಿನ್ ಸಿ ಮೂತ್ರನಾಳ ಹಾಗೂ ಯಕೃತ್ ನಲ್ಲಿ ಇರುವಂತಹ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂತ್ರನಾಳದಲ್ಲಿ ಕಲ್ಲಾಗುವುದು ತಪ್ಪುತ್ತದೆ.

ಅಲ್ಸರ್(ಹುಣ್ಣು) ಗುಣಪಡಿಸುವುದು

ಅಲ್ಸರ್(ಹುಣ್ಣು) ಗುಣಪಡಿಸುವುದು

ಈ ಪಾನೀಯದಲ್ಲಿ ಇರುವಂತಹ ವಿಟಮಿನ್ ಸಿ ಉರಿಯೂತ ಕಡಿಮೆ ಮಾಡಿ ಬಾಯಿ ಹಾಗೂ ಹೊಟ್ಟೆಯ ಹುಣ್ಣನ್ನು ನೈಸರ್ಗಿಕವಾಗಿ ಶಮನ ಮಾಡುವುದು.

ದೃಷ್ಟಿ ಸುಧಾರಣೆ

ದೃಷ್ಟಿ ಸುಧಾರಣೆ

ನೆಲ್ಲಿಕಾಯಿ ಜ್ಯೂಸ್ ಹಾಗೂ ಮೆಂತೆಯಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಕಣ್ಣಿನ ನರಗಳಿಗೆ ಬಲವನ್ನು ನೀಡಿ ಕಣ್ಣಿನ ದೃಷ್ಟಿಯನ್ನು ಸುಧಾರಿಸುವುದು.

English summary

What Happens When You Drink Amla Juice With Methi?

If you wish to be on your way to health, then consider making natural health drinks a part of your diet! Did you know that the mixture of amla (gooseberry) juice and methi has over 7 health benefits? Just add 1 teaspoon of methi powder to 3 tablespoons of amla juice and consume this mixture, every morning before breakfast. Have a look at some of its benefits, here.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more