For Quick Alerts
ALLOW NOTIFICATIONS  
For Daily Alerts

ಕಂಪ್ಯೂಟರ್‌ನಿಂದ ಕಣ್ಣು ಕಾಪಾಡಿ! ಈ ಮನೆಮದ್ದು ತಪ್ಪದೇ ಸೇವಿಸಿ..

By Arshad
|

ಇಂದಿನ ಹೆಚ್ಚಿನ ಉದ್ಯೋಗಗಳು ಕಂಪ್ಯೂಟರ್‌ನಲ್ಲಿ ಹೆಚ್ಚಿನ ಸಮಯ ಕಳೆಯುವಂತೆ ಮಾಡುತ್ತವೆ. ಒಂದು ವೇಳೆ ನೀವು ದಿನಕ್ಕೆ ಆರು ಗಂಟೆಗಳಿಗೂ ಹೆಚ್ಚು ಕಾಲ ಕಂಪ್ಯೂಟರ್ ಪರದೆಯನ್ನು ನೋಡುವ ಅನಿವಾರ್ಯತೆ ಹೊಂದಿದ್ದರೆ ನಿಮ್ಮ ಕಣ್ಣುಗಳು ಖಂಡಿತವಾಗಿಯೂ ಬಳಲಿರುತ್ತವೆ.

ಹೆಚ್ಚಿನ ಕೆಲಸದ ಒತ್ತಡವೆಂದರೆ ಕಂಪ್ಯೂಟರ್ ಪರದೆಯ ಮೇಲೆ ಹೆಚ್ಚಿನ ಸಮಯ ಕಣ್ಣು ಕೀಲಿಸುವುದಾಗಿದೆ. ಇದರ ಪರಿಣಾಮದಿಂದ ನಿಮ್ಮ ಕಣ್ಣುಗಳು ಉತ್ತಮ ಆರೋಗ್ಯ ಹೊಂದಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದರೊಂದಿಗೆ ಸತತವಾಗಿ ಫೋನ್ ಕರೆಗಳನ್ನು ಮಾಡುವುದು, ಸ್ವೀಕರಿಸುವುದು, ಮೊಬೈಲ್ ಸ್ಕ್ರೀನ್‌ನ್ನು (ಪರದೆಯನ್ನು) ವೀಕ್ಷಿಸುವುದು, ಸಿನಿಮಾ, ಟೀವಿ ವೀಕ್ಷಣೆ ಮೊದಲಾದವು ಕಣ್ಣುಗಳ ಬಳಲಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಅಲಕ್ಷ್ಯ ಮಾಡಬೇಡಿ, ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು

ಪುಸ್ತಕ ಓದುವುದಕ್ಕೂ ಕಂಪ್ಯೂಟರ್ ಪರದೆ ವೀಕ್ಷಿಸುವುದಕ್ಕೂ ಪ್ರಮುಖ ವ್ಯತ್ಯಾಸವೆಂದರೆ ಪುಸ್ತಕದಲ್ಲಿ ಪ್ರತಿಫಲಿತ ಬೆಳಕಿನ ಕಿರಣಗಳು ಕಣ್ಣನ್ನು ಪ್ರವೇಶಿಸಿದರೆ ಕಂಪ್ಯೂಟರ್, ಮೊಬೈಲ್ ಪರದೆಗಳಿಂದಲೇ ಬೆಳಕಿನ ಕಿರಣಗಳು ನೇರವಾಗಿ ಕಣ್ಣನ್ನು ಪ್ರವೇಶಿಸುತ್ತವೆ. ಇದೇ ಕಣ್ಣುಗಳು ಬಳಲಿಕೆಗೆ ಪ್ರಮುಖ ಕಾರಣವಾಗಿದೆ. ದಣಿದ ಕಣ್ಣುಗಳಿಗೆ, ತ್ವರಿತ ಸಾಂತ್ವನ ನೀಡುವ ಮನೆಮದ್ದು

ಈ ಕಿರಣಗಳಿಗೆ ಹೆಚ್ಚು ಒಡ್ಡಿದರೆ ಸೂಕ್ಷ್ಮ ದೃಷ್ಟಿನರ ಸಮಯ ಕಳೆದಂತೆ ಶಿಥಿಲವಾಗುತ್ತಾ ಹೋಗುತ್ತದೆ ತನ್ಮೂಲಕ ಕಣ್ಣುಗಳ ನೋವು, ಕಣ್ಣುಗಳಲ್ಲಿ ಉರಿ, ಒಣಗಿದ ಕಣ್ಣುಗಳು ಮೊದಲಾದವುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈಗಲೇ ಕಣ್ಣುಗಳ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳದೇ ಇದ್ದರೆ ಕಾಲಕಳೆದಂತೆ ಕಣ್ಣುಗಳು ಹಿಂದೆ ಬರಲಾರದಷ್ಟು ಘಾಸಿಗೊಳ್ಳಬಹುದು. ಕಣ್ಣುಗಳ ಆರೈಕೆಯನ್ನು ಹೆಚ್ಚಿಸಲು ಈ ವಿಧಾನ ನೆರವಾಗಲಿದೆ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಕ್ಯಾರೆಟ್ ರಸ - ½ ಲೋಟ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಜೇನು- 1 ದೊಡ್ಡಚಮಚ

ಕ್ಯಾರೆಟ್‌ನ ಆರೋಗ್ಯಕಾರಿ ಗುಣ....

ಕ್ಯಾರೆಟ್‌ನ ಆರೋಗ್ಯಕಾರಿ ಗುಣ....

ಕ್ಯಾರೆಟ್‌ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಎಂದು ಪ್ರತಿಯೊಬ್ಬರಿಗೂ ತಿಳಿದ ವಿಚಾರವಾಗಿದೆ. ಕ್ಯಾರೆಟ್‌ನಲ್ಲಿರುವ ಬೆಟಾ ಕ್ಯಾರೊಟಿನ್ ಎನ್ನುವ ಅಂಶವು ದೇಹದಲ್ಲಿ ವಿಟಮಿನ್ ಎ ಯನ್ನು ಉತ್ಪತ್ತಿ ಮಾಡುತ್ತದೆ. ವಿಟಮಿನ್ ಎ ಕಣ್ಣಿನ ದೃಷ್ಟಿಗೆ ಒಳ್ಳೆಯದು ಮತ್ತು ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ.

ಜೇನಿನ ಆರೋಗ್ಯಕಾರಿ ಗುಣ....

ಜೇನಿನ ಆರೋಗ್ಯಕಾರಿ ಗುಣ....

ಕೊಂಚ ಜೇನನ್ನು ಸ್ವಚ್ಛವಾದ, ಉಗುರುಬೆಚ್ಚನೆಯ ಕುಡಿಯುವ ನೀರಿನಲ್ಲಿ ಬೆರೆಸಿ. ರಾತ್ರಿ ಮಲಗುವ ಮುನ್ನ ಈ ನೀರಿನಿಂದ ಕಣ್ಣುಗಳನ್ನು ತೊಳೆದುಕೊಂಡು ಮಲಗಿದರೆ ಕಣ್ಣುಗಳು ಒಣಗಿರುವ ಮತ್ತು ತುರಿಕೆಯಿಂದ ಪರಿಹಾರ ಒದಗುತ್ತದೆ.ಜೇನು ಕಣ್ಣಿನ ಆರೋಗ್ಯಕ್ಕೂ ಉತ್ತಮ ಎಂದರೆ ಅಚ್ಚರಿ ಅಲ್ಲವೇ?

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಒಂದು ಲೋಟದಲ್ಲಿ ಇವೆರಡನ್ನೂ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ

*ಈ ಮಿಶ್ರಣವನ್ನು ಪ್ರತಿದಿನವೂ ಬೆಳಗ್ಗಿನ ಉಪಹಾರಕ್ಕೂ ಮುನ್ನ ಕನಿಷ್ಠ ಎರಡು ತಿಂಗಳ ಕಾಲ ಸೇವಿಸಿ.

English summary

Ways to Reduce Eye Strain From Computer

Are you someone who works on a computer for more than 6 hours? If yes, then your eyes could definitely be strained, right? Well, with today's demanding jobs that require you to spend hours and hours with your eyes glued onto the computer screen, you cannot really expect to have healthy eyes.
X
Desktop Bottom Promotion