ಹಸಿಶುಂಠಿ ಆರೋಗ್ಯಕರ ಹೌದು, ಆದರೆ ಎಲ್ಲರಿಗೂ ಅಲ್ಲ!!

By: Arshad
Subscribe to Boldsky

ಹಸಿಶುಂಠಿ ಆರೋಗ್ಯಕರವಾದ ಸಾಂಬಾರಪದಾರ್ಥವಾಗಿದ್ದು ಪ್ರತಿ ಮನೆಯಲ್ಲಿಯೂ ಹಲವಾರು ವಿಧದಲ್ಲಿ ಇದರ ಬಳಕೆಯಾಗುತ್ತದೆ. ಅಡುಗೆಗೆ ಉಪಯೋಗಿಸುವ ಹೊರತಾಗಿ ಸಾಮಾನ್ಯ ಕೆಮ್ಮು, ಶೀತ, ಗಂಟಲಬೇನೆ ಮೊದಲಾದ ತೊಂದರೆಗಳ ಶಮನಕ್ಕೂ ಉಪಯೋಗುತ್ತೇವೆ. ಟೀ, ಕಷಾಯಗಳಲ್ಲಿ ಬೆರೆಸಿ ಕುಡಿಯುತ್ತೇವೆ. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

ಪ್ರಯಾಣದ ವೇಳೆಯಲ್ಲಿ ಎದುರಾಗುವ ವಾಕರಿಕೆ, ವಾಂತಿ, ತಲೆನೋವು, ಕಟ್ಟಿಕೊಂಡ ಮೂಗು ಮೊದಲಾದ ತೊಂದರೆಗಳಿಗೆಲ್ಲಾ ಶುಂಠಿಯ ಬಳಿ ಉತ್ತರವಿದೆ. ತೂಕ ಇಳಿಸಲೂ ಇದು ನೆರವಾಗುತ್ತದೆ ಹಾಗೂ ಹೆಚ್ಚು ಕಾಲ ಹಸಿವಾಗದಂತೆ ನೋಡಿಕೊಳ್ಳುವ ಮೂಲಕ ಅನಗತ್ಯವಾಗಿ ತಿನ್ನುವುದರಿಂದ ತಪ್ಪಿಸುತ್ತದೆ. ಬಿರುಬೇಸಿಗೆಯ ಧಗೆಯನ್ನು ತಂಪಾಗಿಸುವ ಶುಂಠಿ ಜ್ಯೂಸ್!

ಜೀರ್ಣಕ್ರಿಯೆ ಉತ್ತಮಗೊಳೋಳುತ್ತದೆ, ಹೊಟ್ಟೆಯುರಿ, ಎದೆಯುರಿ ಮೊದಲಾದ ಹಲವು ಜೀರ್ಣಕ್ರಿಯೆ ಸಂಬಂಧಿತ ತೊಂದರೆಗಳಿಗೆ ಪರಿಹಾರ ನೀಡುತ್ತದೆ. ಆದರೆ ಈ ಎಲ್ಲಾ ಪ್ರಯೋಜನಗಳನ್ನು ಎಲ್ಲರೂ ಏಕಸಮಾನವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಶುಂಠಿಯಲ್ಲಿರುವ ಪೋಷಕಾಂಶಗಳು ಅಮ್ಲೀಯವಾಗಿದ್ದು ಆಮ್ಲೀಯತೆ ಒಗ್ಗದ ವ್ಯಕ್ತಿಗಳಿಗೆ ಇದು ಸಲ್ಲದು. ಶುಂಠಿ ಜಜ್ಜಿ ಹಾಕಿದ ಬಿಸಿ ನೀರು ಕುಡಿದರೆ-ತೂಕ ಇಳಿಕೆ...

ವಿಶೇಷವಾಗಿ ಗರ್ಭಾವಸ್ಥೆ ಮೊದಲಾದ ಕೆಲವು ಸಮಯಗಳಲ್ಲಿಯೂ ಶುಂಠಿಯ ಸೇವನೆ ಸಲ್ಲದು. ಸಾಮಾನ್ಯವಾಗಿ ನಾವೆಲ್ಲರೂ ಶುಂಠಿ, ಬೆಳ್ಳುಳ್ಳಿ, ಲಿಂಬೆಯಂತಹ ಆಹಾರಗಳು ಎಲ್ಲರಿಗೂ ಔಷಧಿಯಂತೆಯೇ ಕೆಲಸ ಮಾಡುತ್ತವೆ ಎಂದು ನಂಬಿದ್ದೇವೆ. ವಾಸ್ತವವಾಗಿ ಪ್ರತಿ ವ್ಯಕ್ತಿಗೆ ಕೆಲವು ಪೋಷಕಾಂಶಗಳು ಅಲರ್ಜಿಕಾರಕವಾಗಿದ್ದು ಇವುಗಳನ್ನು ಅರಿಯದೇ ಸೇವಿಸುವ ಮೂಲಕ ಔಷಧಿಯೇ ವಿಷವಾಗಿ ಬಿಡಬಹುದು.ಬನ್ನಿ, ಶುಂಠಿ ಯಾರು ಯಾರಿಗೆ ಸಲ್ಲದು ಎಂಬುದನ್ನು ನೋಡೋಣ....  

ಗರ್ಭವತಿಯರಿಗೆ

ಗರ್ಭವತಿಯರಿಗೆ

ಗರ್ಭಾವಸ್ಥೆಯ ಅಷ್ಟೂ ದಿನಗಳಲ್ಲಿ ಶುಂಠಿಯ ಸೇವನೆ ಒಳ್ಳೆಯದಲ್ಲ. ಏಕೆಂದರೆ ಶುಂಠಿಯ ಆಮ್ಲೀಯತೆ ಕೆಲವಾರು ರೀತಿಯಿಂದ ಪ್ರಚೋದನೆ ನೀಡುತ್ತದೆ.

ಗರ್ಭವತಿಯರಿಗೆ

ಗರ್ಭವತಿಯರಿಗೆ

ಉಳಿದವರಿಗೆ ಈ ಪ್ರಚೋದನೆಗಳು ಧನಾತ್ಮಕ ಪರಿಣಾಮ ಬೀರಿದರೆ ಗರ್ಭವತಿಯರಲ್ಲಿ ಈ ಪ್ರಚೋದನೆಗಳು ಗರ್ಭಾಪಾತಕ್ಕೆ ಕಾರಣವಾಗಬಹುದು. ಅಥವಾ ನವಮಾಸ ತುಂಬುವ ಮುನ್ನವೇ ಮಗುವಿನ ಜನನವಾಗಬಹುದು. ಆದ್ದರಿಂದ ಗರ್ಭಾವಸ್ಥೆಯ ಅಷ್ಟೂ ದಿನಗಳಲ್ಲಿ ಶುಂಠಿಯ ಹೆಸರನ್ನೂ ಎತ್ತುವುದು ಬೇಡ.

ಅಗತ್ಯಕ್ಕೂ ಕಡಿಮೆ ತೂಕವುಳ್ಳ ವ್ಯಕ್ತಿಗಳಿಗೆ

ಅಗತ್ಯಕ್ಕೂ ಕಡಿಮೆ ತೂಕವುಳ್ಳ ವ್ಯಕ್ತಿಗಳಿಗೆ

ಶುಂಠಿಯ ಸೇವನೆಯಿಂದ ತೂಕ ಇಳಿಯಲು ನೆರವಾಗುತ್ತದೆ. ಇದರ ಸೇವನೆಯಿಂದ ಜೀವರಾಸಾಯನಿಕ ಕ್ರಿಯೆಯಲ್ಲಿ ಹೆಚ್ಚಳ ಹಾಗೂ ಹಸಿವನ್ನು ಹತ್ತಿಕ್ಕಲು ನೆರವಾಗುವ ಮೂಲಕ ತೂಕವನ್ನು ಇಳಿಸಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ಕ್ಯಾಲೋರಿಗಳು ತೀವ್ರಗತಿಯಿಂದ ಬಳಸಲ್ಪಡುತ್ತದೆ. ಆದ್ದರಿಂದ ಈಗಾಗಲೇ ಸಾಮಾನ್ಯ ತೂಕಕ್ಕೂ ಕಡಿಮೆ ತೂಕ ಇರುವ ವ್ಯಕ್ತಿಗಳು ಅಥವಾ ಸಾಮಾನ್ಯ ಮಟ್ಟದ ತೂಕ ಹೊಂದಿದ್ದು ಕೊಂಚ ತೂಕವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಗಳು ಶುಂಠಿಯನ್ನು ಸೇವಿಸಬಾರದು.

ರಕ್ತದ ಪರಿಚಲನೆಯ ತೊಂದರೆ ಇರುವ ವ್ಯಕ್ತಿಗಳು

ರಕ್ತದ ಪರಿಚಲನೆಯ ತೊಂದರೆ ಇರುವ ವ್ಯಕ್ತಿಗಳು

ಶುಂಠಿಯಲ್ಲಿರುವ ಪೋಷಕಾಂಶಗಳು ರಕ್ತದ ಪರಿಚಲನೆಯನ್ನು ಚುರುಕುಗೊಳಿಸಿ ಅಂಗಾಂಗಳ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಶುಂಠಿಯ ಸೇವನೆಯ ಪ್ರಯೋಜನಗಳಲ್ಲಿ ಇದು ಅತ್ಯುತ್ತಮವಾದುದು.

ರಕ್ತದ ಪರಿಚಲನೆಯ ತೊಂದರೆ ಇರುವ ವ್ಯಕ್ತಿಗಳು

ರಕ್ತದ ಪರಿಚಲನೆಯ ತೊಂದರೆ ಇರುವ ವ್ಯಕ್ತಿಗಳು

ಆದರೆ ರಕ್ತ ತೆಳುವಾಗಿರುವ (ಅಂದರೆ ಕೆಂಪುರಕ್ತಕಣಗಳ ಸಂಖ್ಯೆ ಕಡಿಮೆ ಇರುವ) ಅಥವಾ ಸುಲಭವಾಗಿ ಗಡ್ಡೆಕಟ್ಟುವ ಸಂಭವವಿರುವ ವ್ಯಕ್ತಿಗಳಿಗೆ ಅಥವಾ ರಕ್ತಹೆಪ್ಪುಗಟ್ಟಲು ಅಸಮರ್ಥರಾಗಿರುವ (ಹೀಮೋಫೀಲಿಯಾ) ತೊಂದರೆ ಇರುವ ವ್ಯಕ್ತಿಗಳು ಶುಂಠಿಯನ್ನು ಸೇವಿಸಬರದು.

ಕೆಲವು ಔಷಧಿಗಳನ್ನು ನಿಯಮಿತವಾಗಿ ಸೇವಿಸುವ ವ್ಯಕ್ತಿಗಳು

ಕೆಲವು ಔಷಧಿಗಳನ್ನು ನಿಯಮಿತವಾಗಿ ಸೇವಿಸುವ ವ್ಯಕ್ತಿಗಳು

ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಔಷಧಿಯನ್ನು ಸೇವಿಸುತ್ತಿರುವ ವ್ಯಕ್ತಿಗಳೂ ಶುಂಠಿಯಿಂದ ದೂರವಿರುವುದು ಲೇಸು. ಏಕೆಂದರೆ ಶುಂಠಿಯ ಸೇವನೆಯಿಂದ ಒಂದೇ ಈ ಔಷಧಿಗಳ ಪರಿಣಾಮ ಉತ್ತಮಗೊಳ್ಳುತ್ತದೆ ಅಥವಾ ಕಡಿಮೆಯಾಗುತ್ತದೆ. ಅಲ್ಲದೇ ಆಸ್ಪಿರಿನ್ ಮಾತ್ರೆಗಳ ಪ್ರಭಾವವನ್ನು ತೀವ್ರಗೊಳಿಸುತ್ತದೆ ಹಾಗೂ ರಕ್ತದಲ್ಲಿ ಕೆಂಪುರಕ್ತಣಗಳ ಸಂಖ್ಯೆ ಇಳಿಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೇ ರಕ್ತ ಹೆಪ್ಪುಗಟ್ಟುವ ಗತಿಯನ್ನೂ ನಿಧಾನಗೊಳಿಸುತ್ತದೆ.

ಕೆಲವು ಔಷಧಿಗಳನ್ನು ನಿಯಮಿತವಾಗಿ ಸೇವಿಸುವ ವ್ಯಕ್ತಿಗಳು

ಕೆಲವು ಔಷಧಿಗಳನ್ನು ನಿಯಮಿತವಾಗಿ ಸೇವಿಸುವ ವ್ಯಕ್ತಿಗಳು

ಅಲ್ಲದೇ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೀಡುವ (anti-hypertensive drugs)ಜೊತೆಗೆ ಎಂದಿಗೂ ಶುಂಠಿಯನ್ನು ಸೇವಿಸಬಾರದು. ಮಧುಮೇಹಿಗಳು, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವವರು ಮತ್ತು ಮಧುಮೇಹ ಕಡಿಮೆ ಮಾಡಲು ನಿಯಮಿತವಾಗಿ ಔಷಧಿಗಳನ್ನು ಸೇವಿಸುತ್ತಿರುವವರು ಶುಂಠಿಯಿಂದ ದೂರವಿದ್ದಷ್ಟೂ ಉತ್ತಮ.

 
English summary

Types Of People Who Must Avoid Raw Ginger

People usually have the notion that it is a herb and can't do any harm; however, it can be dangerous for certain people. Here, in this article, we have mentioned some of the harmful effects of ginger and the people who must avoid taking it right now.
Subscribe Newsletter