For Quick Alerts
ALLOW NOTIFICATIONS  
For Daily Alerts

ಮಲೇರಿಯಾ ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಮೊದಲ ಆದ್ಯತೆ ನೀಡಿ...

By Hemanth
|

ಸಾಮಾನ್ಯವಾಗಿ ಬೇಸಿಗೆ ಕಾಲ ಹೋಗಿ ಮಳೆಗಾಲ ಬರುವ ಸಮಯದಲ್ಲಿ ಹೆಚ್ಚಿನ ಜನರನ್ನು ಕಾಡುವಂತಹ ಸಮಸ್ಯೆಯೆಂದರೆ ಅದು ಮಲೇರಿಯಾ. ಈ ಜ್ವರದ ಬಗ್ಗೆ ಆರಂಭದಲ್ಲೇ ಎಚ್ಚರಿಕೆ ವಹಿಸದೆ ಇದ್ದರೆ ಪ್ರಾಣಾಪಾಯವಾಗುವ ಸಾಧ್ಯತೆಯೂ ಇದೆ. ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಮಲೇರಿಯಾದಂತಹ ಹಲವಾರು ಕಾಯಿಲೆಗಳು ಬರುತ್ತದೆ. ಮಲೇರಿಯಾ ರೋಗದ ವಿರುದ್ಧ ಹೋರಾಡುವ 'ಆಯುರ್ವೇದ ಚಿಕಿತ್ಸೆ'

ಅದರಲ್ಲೂ ಮಳೆಗಾಲದಲ್ಲಿ ನೀರು ನಿಲ್ಲುವಂತಹ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಇರುವ ಕಾರಣದಿಂದಾಗಿ ಮಲೇರಿಯಾ ಹರಡುವುದು ಸಹಜವಾಗಿದೆ. ಪ್ರತೀ ವರ್ಷ ಮಲೇರಿಯಾದಿಂದಾಗಿ ಬಳಲುವವರ ಸಂಖ್ಯೆ ಅಧಿಕವಾಗುತ್ತಾ ಇದೆ. ಮಲೇರಿಯಾ ನಿಯಂತ್ರಣದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದೇವೆ...ಇದನ್ನು ತಿಳಿದುಕೊಂಡು ಮಲೇರಿಯಾ ಹತ್ತಿರವೂ ಬರದಂತೆ ನೋಡಿಕೊಳ್ಳಿ....

ಹೆಣ್ಣು ಅನಾಫಿಲೀಸ್ ಸೊಳ್ಳೆ

ಹೆಣ್ಣು ಅನಾಫಿಲೀಸ್ ಸೊಳ್ಳೆ

ಪ್ಲಾಸ್ಮೋಡಿಯಂ ಪ್ಯಾರಸಿಟ್ ಇರುವ ಸೊಳ್ಳೆಯು ಕಚ್ಚಿದಾಗ ಮಲೇರಿಯಾವು ಹರಡುವುದು. ಪ್ಲಾಸ್ಮೋಡಿಯಂನ್ನು ಸರಬರಾಜು ಮಾಡುವಂತಹ ಕೆಲಸವನ್ನು ಸೊಳ್ಳೆಗಳು ಮಾಡುತ್ತದೆ. ಈ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ಪ್ಯಾರಸಿಟ್ ಪ್ರಸಾರವಾಗುವ ಸಾಧ್ಯತೆ ಕೂಡ ಹೆಚ್ಚಿದೆ.

ಗರ್ಭಿಣಿ ಮಹಿಳೆಯರೇ ಎಚ್ಚರವಾಗಿರಿ

ಗರ್ಭಿಣಿ ಮಹಿಳೆಯರೇ ಎಚ್ಚರವಾಗಿರಿ

ಗರ್ಭಿಣಿ ಮಹಿಳೆಯರಿಗೆ ಮಲೇರಿಯಾ ಬಂದರೆ ಅದು ತುಂಬಾ ಅಪಾಯಕಾರಿ. ಯಾಕೆಂದರೆ ಪ್ಯಾರಸಿಟ್ ಗರ್ಭದಲ್ಲಿರುವ ಮಗುವಿಗೂ ಹರಡಬಹುದು. ಗರ್ಭದಲ್ಲಿರುವ ಮಗುವಿಗೆ ಮಲೇರಿಯಾ ಬಂದರೆ ಜನನದ ವೇಳೆ ಮಗುವಿನ ತೂಕ ತುಂಬಾ ಕಡಿಮೆಯಿರಬಹುದು ಮತ್ತು ಕೆಲವು ಸಲ ಇದು ಸಾವಿಗೆ ಕಾರಣವಾಗಬಹುದು.

ಹೆಣ್ಣು ಅನಾಫಿಲೀಸ್ ಸೊಳ್ಳೆ

ಹೆಣ್ಣು ಅನಾಫಿಲೀಸ್ ಸೊಳ್ಳೆ

ಹೆಣ್ಣು ಅನಾಫಿಲೀಸ್ ಸೊಳ್ಳೆಯು ಪ್ಯಾರಾಸಿಟ್ ಅನ್ನು ಹರಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಲೇರಿಯಾ ಇರುವ ವ್ಯಕ್ತಿಗೆ ಹೆಣ್ಣು ಅನಾಫಿಲೀಸ್ ಸೊಳ್ಳೆಯು ಕಚ್ಚಿ ಅದು ಮತ್ತೆ ಆರೋಗ್ಯವಂತ ವ್ಯಕ್ತಿಗೆ ಕಚ್ಚಿದರೆ ಮಲೇರಿಯಾ ಹರುಡುವುದು. ಈ ಸೊಳ್ಳೆಗಳು ತುಂಬಾ ಚಿಕ್ಕ ಹಾಗೂ ಮಧ್ಯಮ ಗಾತ್ರದ್ದಾಗಿರುತ್ತದೆ. ಮಳೆಗಾಲದಲ್ಲಿ ಹೆಚ್ಚಾಗಿ ಇವು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಕೊಳಚೆ ಗುಂಡಿಗಳು, ರಸ್ತೆ ಬದಿಯ ಚರಂಡಿ, ಹೂವಿನ ಕುಂಡ, ಕುಡಿದು ಬಿಸಾಡಿದ ಸೀಯಾಳದಲ್ಲಿ ಇವು ಸಂತಾನೋತ್ಪತ್ತಿ ಮಾಡುತ್ತವೆ.

ಸಾಧ್ಯವಾದಷ್ಟು ಮಂದ ಬಣ್ಣದ ಉಡುಗೆಗಳನ್ನು ಧರಿಸಿ

ಸಾಧ್ಯವಾದಷ್ಟು ಮಂದ ಬಣ್ಣದ ಉಡುಗೆಗಳನ್ನು ಧರಿಸಿ

ಮಂದ ಬಣ್ಣದ ಉಡುಗೆಗಳನ್ನು ಧರಿಸುವುದರಿಂದ ಸೊಳ್ಳೆಗಳನ್ನು ನಿಮ್ಮಿಂದ ದೂರ ಇರಿಸಬಹುದಾಗಿದೆ. ಇದು ಮಲೇರಿಯಾದಿಂದ ನಿಮ್ಮನ್ನು ಕಾಪಾಡಿಕೊಳ್ಳುವ ಸ್ವಾಭಾವಿಕ ಮಾರ್ಗವಾಗಿದೆ. ನೀವು ಗಾಢ ವರ್ಣದ ದಿರಿಸುಗಳನ್ನು ಧರಿಸಿದಾಗ ಸೊಳ್ಳೆಯು ಆಕರ್ಷಿತಗೊಂಡು ನಿಮ್ಮನ್ನು ಸಮೀಪಿಸುತ್ತದೆ ಆದ್ದರಿಂದ ಆದಷ್ಟು ಗಾಢ ವರ್ಣದ ಬಟ್ಟೆಗಳನ್ನು ಬಳಸದಿರಿ.

ಸಿಟ್ರೋನಲ್ಲಾ ಎಣ್ಣೆಯುಕ್ತ ಕ್ರೀಮ್‌ಗಳು

ಸಿಟ್ರೋನಲ್ಲಾ ಎಣ್ಣೆಯುಕ್ತ ಕ್ರೀಮ್‌ಗಳು

ಪೂರ್ಣವಾಗಿ ನಿಮ್ಮ ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದು ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ದೇಹಕ್ಕೆ ಸಿಟ್ರೋನಲ್ಲಾ ಇರುವ ಎಣ್ಣೆ ಅಂಶದ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಇದನ್ನು ನೀರಿಗೆ ಬೆರೆಸಿಕೊಂಡು ಮನೆಯ ನೆಲವನ್ನು ಒರೆಸಿ ಇದರಿಂದ ಸೊಳ್ಳೆಗಳು ದೂರ ಇರುತ್ತವೆ. ಸಂಜೆಯ ಸಮಯದಲ್ಲಿ ಸೊಳ್ಳೆಯ ಕಡಿತ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಆದಷ್ಟು ದೇಹವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಿ.

ಸೊಳ್ಳೆ ಪರದೆಗಳನ್ನು ಬಳಸಿ

ಸೊಳ್ಳೆ ಪರದೆಗಳನ್ನು ಬಳಸಿ

ಸೊಳ್ಳೆಗಳನ್ನು ಸ್ವಾಭಾವಿಕವಾಗಿ ದೂರಮಾಡಲು ಇರುವ ಒಂದು ವಿಧಾನವೆಂದರೆ ಸೊಳ್ಳೆ ಪರದೆಗಳಾಗಿವೆ. ನಿಮ್ಮ ಮನೆಯ ಕಿಟಕಿಗಳಿಗೆ ನೆಟ್, ಫೈಬರ್ ಗ್ಲಾಸ್‌ಗಳು ಅಥವಾ ಮೆಶ್ ಅನ್ನು ಅಳವಡಿಸಿ. ಅಯಸ್ಕಾಂತದ ಅಂಶವಿರುವ ಪರದೆಗಳನ್ನು ನಿಮ್ಮ ಮನೆಯ ಕಿಟಕಿಗಳಿಗೆ ಅಳವಡಿಸುವ ಮೂಲಕ ಕೂಡ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ. ನಿಮ್ಮ ಹಾಸಿಗೆಯ ಸುತ್ತಲೂ ಸೊಳ್ಳೆ ಪರದೆಯನ್ನು ಬಳಸುವುದೂ ಕೂಡ ಸೂಕ್ತ ಉಪಾಯವಾಗಿದೆ.

English summary

Top facts you should know about malaria

There has been a significant increase in the number of people suffering from malaria every year due to lack of proper awareness. So to help you out, we provide such facts about malaria you should be aware of.
Story first published: Tuesday, April 25, 2017, 20:00 [IST]
X
Desktop Bottom Promotion