For Quick Alerts
ALLOW NOTIFICATIONS  
For Daily Alerts

ಸಿಕ್ಕಾಪಟ್ಟೆ ಗೊರಕೆ ಹೊಡೆಯುತ್ತೀರಾ? ಇಲ್ಲಿದೆ ನೋಡಿ ಮನೆಮದ್ದುಗಳು

|

ಗೊರಕೆಯ ತೊಂದರೆ ಇಂದು ನಿನ್ನೆಯದಲ್ಲ, ಅನಾದಿಕಾಲದಿಂದಲೂ ಇದೆ. ಕುಂಭಕರ್ಣನ ಗೊರಕೆ ಮೈಲುಗಟ್ಟಲೆ ದೂರ ಕೇಳಿಸುತ್ತಿತ್ತು ಎಂದು ರಾಮಾಯಣದಲ್ಲಿಯೇ ಹೇಳಲಾಗಿದೆ. ಒಬ್ಬರ ಸುಖನಿದ್ದೆಗೆ ಕಾರಣವಾಗುವ ಗೊರಕೆ ಇನ್ನೊಬ್ಬರ ನಿದ್ದೆಯನ್ನು ಕೆಡಿಸಬಲ್ಲುದು. ಅಷ್ಟೇ ಏಕೆ, ಗೊರಕೆಯನ್ನೇ ನೆಪವಾಗಿಸಿ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೇಳಿಕೊಂಡು ಬರುವ ಮಹಿಳೆಯರ ಸಂಖ್ಯೆಯೂ ದೊಡ್ಡದೇ..! ವೈದ್ಯಕೀಯ ಸಮೀಕ್ಷೆಯ ಪ್ರಕಾರ ಶೇಖಡಾ ಐವತ್ತರಷ್ಟು ವಯಸ್ಕರು ಗೊರಕೆ ಹೊಡೆಯುತ್ತಾರೆ. ಆದರೆ ಇದರ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ. ಆದರೆ ಕೆಲವರ ಗೊರಕೆಯಂತೂ ಬಸ್ಸಿನ ಇಂಜಿನ್ನಿನ ಶಬ್ದಕ್ಕಿಂತಲೂ ಭೀಕರವಾಗಿದ್ದು, ಪಕ್ಕದಲ್ಲಿ ಮಲಗಿದ್ದವರಿಗೂ ಇದರಿಂದ ಕಿರಿಕಿರಿ ಬಂದು ಬಿಡುತ್ತದೆ.

ಈ ಟ್ರಿಕ್ಸ್ ಅನುಸರಿಸಿ, ಗೊರಕೆ ಕಡಿಮೆಯಾಗಿ ಕಣ್ತುಂಬ ನಿದ್ದೆ ಬರುತ್ತೆ!

ಸಾಮಾನ್ಯವಾಗಿ ನಮ್ಮ ಮೂಗಿನ ಹಿಂದೆ ಮತ್ತು ಗಂಟಲ ಮೇಲ್ಭಾಗದ ರಚನೆಗಳು ತೆಳುವಾದ ಪಟ್ಟಿಯಂತಿರುತ್ತವೆ. ಎಚ್ಚರಿದ್ದಷ್ಟೂ ಹೊತ್ತು ಇವು ಸೆಳೆತದಲ್ಲಿದ್ದು ವಾಯುಮಾರ್ಗವನ್ನು ಸರಾಗವಾಗಿರಿಸಲು ನೆರವಾಗುತ್ತವೆ. ಗೊರಕೆ ಹೊಡೆಯೋದನ್ನ ನಿಲ್ಲಿಸೋದು ಹೇಗೆ? ಆದರೆ ನಿದ್ದೆ ಬಂದ ಬಳಿಕ ಈ ರಚನೆಗಳು ನಿಯಂತ್ರಣಗಳನ್ನು ಕಳೆದುಕೊಂಡು ಸಡಿಲವಾಗುತ್ತದೆ. ಉಸಿರಾಟದ ಗಾಳಿ ಈ ಪಟ್ಟಿಗಳನ್ನು ಹಾದು ಹೋಗುವಾಗ ಸಡಿಲವಾಗಿದ್ದ ಇವು ಕಂಪಿಸುತ್ತವೆ. ಇದೇ ಗೊರಕೆ! ಹಾಗಾದರೆ ಈ ಕರ್ಕಶ ಧ್ವನಿಯ ಗೊರಕೆಯನ್ನು ನಿಯಂತ್ರಿಸವುದು ಹೇಗಪ್ಪಾ ಎಂದು ಆಲೋಚಿಸುತ್ತಿರುವಿರಾ? ಚಿಂತಿಸದಿರಿ, ಅದಕ್ಕೆಂದೇ ನಾವು ನೀಡಿರುವ ಕೆಲವೊಂದು ಸೂಕ್ತ ಮನೆಮದ್ದುಗಳನ್ನು ಪ್ರಯತ್ನಿಸಿ, ಸೂಕ್ತ ಫಲಿತಾಂಶ ಪಡೆಯಿರಿ...

 ಏಲಕ್ಕಿ

ಏಲಕ್ಕಿ

ಏಲಕ್ಕಿಯ ಪರಿಮಳವನ್ನು ಹೀರುವುದರಿಂದ ಮೂಗಿನ ಹೊಳ್ಳೆ ಕಟ್ಟಿಕೊಂಡಿರುವುದು, ಉಸಿರಾಟವನ್ನು ಸರಾಗಗೊಳಿಸುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ.

ಜೇನು ತುಪ್ಪ

ಜೇನು ತುಪ್ಪ

ಜೇನು ಗಂಟಲ ಒಳಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದು ಗೊರಕೆಯನ್ನು ಕಡಿಮೆಯಾಗಿಸಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಜೇನನ್ನು ಸೇರಿಸಿ ಮಲಗುವ ಮುನ್ನ ಕುಡಿಯಿರಿ.

ಕ್ಯಾಮೋಮೈಲ್ ಹೂವು

ಕ್ಯಾಮೋಮೈಲ್ ಹೂವು

ಕ್ಯಾಮೋಮೈಲ್ ಹೂವಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಗಂಟಲ ಹಿಂಭಾಗದ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ದೆಗೆ ಜಾರಲು ನೆರವಾಗುತ್ತದೆ. ಇದಕ್ಕಾಗಿ ಒಂದು ಲೋಟ ಬಿಸಿನೀರಿನಲ್ಲಿ ಕೆಲವು ಹನಿ ಕ್ಯಾಮೋಮೈಲ್ ಹೂವಿನ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ.

ಸೋಯಾ ಹಾಲು

ಸೋಯಾ ಹಾಲು

ನಿಮ್ಮ ನಿತ್ಯದ ಆಹಾರದಲ್ಲಿ ಹಸುವಿನ ಹಾಲಿನ ಬದಲು ಸೋಯಾ ಅವರೆಯ ಬಳಕೆಯಿಂದ ಗೊರಕೆ ಕಡಿಮೆಯಾಗುತ್ತದೆ. ಹಸುವಿನ ಹಾಲಿನಲ್ಲಿರುವ ಒಂದು ವಿಶೇಷ ಕಿಣ್ವ ಮೂಗಿನ ಒಳಭಾಗದ ಕೊಳವೆಗಳನ್ನು ಸಂಕುಚಿಸಲು ಕಾರಣವಾಗಿದ್ದು ಇದರಿಂದ ಗೊರಕೆಯುಂಟಾಗುತ್ತಿದೆ. ಈ ಹಾಲನ್ನು ಬದಲಿಸುವ ಮೂಲಕ ಗೊರಕೆಯೂ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಒಂದು ವೇಳೆ ಬೆಳ್ಳುಳ್ಳಿಯಲ್ಲಿ ವಾಸನೆ ಇಲ್ಲದೇ ಇದ್ದರೆ ಇದು ಚಿನ್ನದಂತೆ ಮಾರಾಟವಾಗುತ್ತಿತ್ತು ಎಂದು ಈಗಲೂ ಹಳ್ಳಿಗಳಲ್ಲಿ ಹೇಳುತ್ತಿರುತ್ತಾರೆ.ಏಕೆಂದರೆ ಬೆಳ್ಳುಳ್ಳಿಯ ಉತ್ತಮ ಗುಣಗಳು ಆರೋಗ್ಯದ ಮಟ್ಟಿಗೆ ಚಿನ್ನದಂತೆಯೇ ಕೆಲಸ ಮಾಡುತ್ತದೆ. Allium sativum ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಸಾಂಬಾರ ಪದಾರ್ಥ ಅತ್ಯುತ್ತಮವಾದ ಆಹಾರವಾಗಿದೆ. ಹಾಗಾಗಿ ದಿನನಿತ್ಯ ಹಸಿಬೆಳ್ಳುಳ್ಳಿಗಳನ್ನು ರಾತ್ರಿಯ ಊಟದ ಅನ್ನದೊಡನೆ ಕಲಸಿ ಸೇವಿಸಿದರೆ, ಕಾಲಕ್ರಮೇಣ ಗೊರಕೆಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು

ಅರಿಶಿನ ಹಾಲು

ಅರಿಶಿನ ಹಾಲು

ಅರಿಶಿನದಲ್ಲಿ ಪ್ರತಿಜೀವಕ ಗುಣಗಳಿದ್ದು ದೇಹಕ್ಕೆ ಇತರ ರೀತಿಯಲ್ಲಿ ಉಪಕಾರಿಯಾಗಿರುವಂತೆಯೇ ಗೊರಕೆಗೂ ಉತ್ತಮವಾಗಿದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ, ಪ್ರತಿ ದಿನ ನೀವು ಮಲಗುವ ಮುನ್ನ ಇದಕ್ಕಾಗಿ ಒಂದು ಲೋಟ ಬಿಸಿಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನ ಕದಡಿ ಕುಡಿದು ಮಲಗಿ. ನಿಧಾನವಾಗಿ ಮೂಗು ಕಟ್ಟಿಕೊಂಡಿದ್ದುದು ತೆರೆದಂತೆ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

 ಗೊರಕೆಯಿಂದ ಮುಕ್ತರಾಗಲು ಒಂದಿಷ್ಟು ಸಿಂಪಲ್ ಟಿಪ್ಸ್

ಗೊರಕೆಯಿಂದ ಮುಕ್ತರಾಗಲು ಒಂದಿಷ್ಟು ಸಿಂಪಲ್ ಟಿಪ್ಸ್

ವಾಸ್ತವವಾಗಿ ಈ ತೊಂದರೆಯಿಂದ ಸಂಪೂರ್ಣವಾಗಿ ಮುಕ್ತರಾಗಲು ಸಾಧ್ಯವಿಲ್ಲ. ಏಕೆಂದರೆ ಒಮ್ಮೆ ಸಡಿಲಗೊಂಡ ಮೂಗಿನೊಳಗಣ ಸ್ನಾಯುಗಳು ಒಂದು ಹಂತದಷ್ಟು ಮಾತ್ರ ಸೆಳೆತಗೊಳ್ಳಬಹುದೇ ವಿನಃ ಯೌವನದಲ್ಲಿರುವಾಗ ಇದ್ದ ಸೆಳೆತ ಬರುವುದು ಸಾಧ್ಯವಿಲ್ಲ. ವಿಪರೀತವಾದ ಗೊರಕೆಗೆ ಶಸ್ತ್ರಚಿಕಿತ್ಸೆಯಿಂದ ವಾಯುಮಾರ್ಗವನ್ನು ಹಿರಿದುಗೊಳಿಸುವ ಉಪಾಯವಿದೆಯಾದರೂ ಇವು ದುಬಾರಿ ಹಾಗೂ ಅತಿಸೂಕ್ಷ್ಮವಾಗಿ ನುರಿತ ಶಸ್ತ್ರವೈದ್ಯರಿಂದಲೇ ನಡೆಸಬೇಕು. ಈ ತೊಂದರೆಯನ್ನು ಕಡಿಮೆಗೊಳಿಸಲು ಕೆಲವು ಉಪಾಯಗಳನ್ನು ಅನುಸರಿಸುವುದರಿಂದ ಸಾಕಷ್ಟು ಸುಧಾರಣೆಯನ್ನು ಪಡೆಯಬಹುದು.

ತಲೆದಿಂಬನ್ನು ಕೊಂಚ ಏರಿಸಿ

ತಲೆದಿಂಬನ್ನು ಕೊಂಚ ಏರಿಸಿ

ಶೀತವಾದಾಗ ಒಂದು ಹೆಚ್ಚುವರಿ ದಿಂಬನ್ನು ತಲೆಯಡಿ ಇರಿಸಿ ಮಲಗುವುದರಿಂದ ಬೆಳಿಗ್ಗೆದ್ದಾಗ ಶೀತ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಏಕೆಂದರೆ ತಲೆಯನ್ನು ಸ್ವಲ್ಪ ಏರಿಸುವುದರಿಂದ ವಾಯುಮಾರ್ಗದ ವಿಸ್ತಾರ ಹೆಚ್ಚಿ ಉಸಿರಾಟ ಸರಾಗವಾಗಲು ಅನುಕೂಲವಾಗುತ್ತದೆ. ಗೊರಕೆಯ ವಿಷಯದಲ್ಲೂ ಅಷ್ಟೇ, ವಿಸ್ತಾರವಾದ ವಾಯುಮಾರ್ಗ ಗೊರಕೆ ಕಡಿಮೆಗೊಳಿಸಲೂ ನೆರವಾಗುತ್ತದೆ. ನಿಮ್ಮ ದಿಂಬನ್ನು ಪ್ರತಿದಿನದ ಎತ್ತರಕ್ಕಿಂತಲೂ ಸುಮಾರು ನಾಲ್ಕು ಇಂಚು ಎತ್ತರಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ಒಂದು ಪಕ್ಕಕ್ಕೆ ವಾಲಿ ಮಲಗಿ

ಒಂದು ಪಕ್ಕಕ್ಕೆ ವಾಲಿ ಮಲಗಿ

ಕಿವಿಮಾತುಗಳಲ್ಲಿ ಕಂಡುಬರುವ ಸಲಹೆಯಂತೆ ಗೊರಕೆಯಿಂದ ಮುಕ್ತವಾಗಲು ಒಂದು ಪಕ್ಕಕ್ಕೆ ವಾಲಿ ಮಲಗುವುದು ಉತ್ತಮವಾಗಿದೆ. ಇದೊಂದು ಸುಲಭವಾದ ಮತ್ತು ಸಫಲವಾದ ಕ್ರಮವಾಗಿದೆ.

ಧೂಮಪಾನ, ಮದ್ಯಪಾನಗಳನ್ನು ತ್ಯಜಿಸಿ

ಧೂಮಪಾನ, ಮದ್ಯಪಾನಗಳನ್ನು ತ್ಯಜಿಸಿ

ಹೇಳುವುದು ಸುಲಭ, ಅನುಸರಿಸುವುದು ಕಷ್ಟವಾದರೂ ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವತ್ತ ಒಲವು ತೋರಿಸಿ. ಈಗಾಗಲೇ ವ್ಯಸನಿಯಾಗಿದ್ದರೆ ಇಂದು ಧೂಮಪಾನ ಮತ್ತು ಮದ್ಯಪಾನದಿಂದ ವೈಜ್ಞಾನಿಕವಾಗಿ ಹೊರಬರುವ ವಿಧಾನಗಳು ಲಭ್ಯವಿವೆ. ನಿಮ್ಮ ವೈದ್ಯರು ಮತ್ತು ವ್ಯಸನದಿಂದ ಹೊರಬರಲು ಸಲಹಾ ಕೇಂದ್ರಗಳು ನಿಮ್ಮ ನೆರವಿಗೆ ಬರುತ್ತಾರೆ. ಇವುಗಳ ಪ್ರಯೋಜನ ಪಡೆದುಕೊಳ್ಳಿ. ಈ ವ್ಯಸನಗಳಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು ಮುಕ್ತವಾಗಿ ನಿಮ್ಮ ಸ್ನೇಹವೃಂದದಲ್ಲಿ ಹೇಳಿಕೊಳ್ಳಿ, ಅದರಂತೆಯೇ ನಡೆದುಕೊಳ್ಳಿ. ದಿನಗಳು ಬದಲಾಗಿವೆ, ಇಂದು ಈ ವ್ಯಸನದಿಂದ ಹೊರಬರುವವರನ್ನು ಸಮಾಜ ಮುಕ್ತವಾಗಿ ಸ್ವಾಗತಿಸುತ್ತದೆ ಮತ್ತು ಸಹಕರಿಸುತ್ತದೆ. ತನ್ಮೂಲಕ ಗೊರಕೆಯೂ ಕಡಿಮೆಯಾಗಿ ನಿಮ್ಮ ಜೀವನ ಸಂತೋಷಮಯವಾಗುತ್ತದೆ.

ಧೂಮಪಾನ, ಮದ್ಯಪಾನಗಳನ್ನು ತ್ಯಜಿಸಿ

ಧೂಮಪಾನ, ಮದ್ಯಪಾನಗಳನ್ನು ತ್ಯಜಿಸಿ

ನಿಮ್ಮ ಅಭ್ಯಾಸಗಳನ್ನು ಕೊಂಚ ಗಮನಿಸಿ. ರಾತ್ರಿ ತಡವಾಗಿ ಮಲಗಿದ್ದು ತಡವಾಗಿ ಏಳುವ ಅಭ್ಯಾಸವಿದ್ದರೆ ನಿಮಗೆ ಗೊರಕೆ ಅನೂಚಾನವಾಗಿ ಬಂದಿದೆ ಎಂದೇ ತಿಳಿಯಿರಿ. ಪ್ರತಿದಿನ ಬೇಗನೇ ಮಲಗಿ ಬೇಗನೇ ಏಳುವುದರಿಂದ (ರಜಾದಿನಗಳನ್ನೂ ಸೇರಿಸಿ) ಗಾಢನಿದ್ದೆ ಆವರಿಸಿ ಆರೋಗ್ಯ ಉತ್ತಮಗೊಳ್ಳುವುದು. ನಮಗೆಲ್ಲರಿಗೂ ಪ್ರತಿದಿನ ಸುಮಾರು ಎಂಟು ಘಂಟೆಯ ಗಾಢನಿದ್ದೆಯ ಅವಶ್ಯಕತೆಯಿದೆ. ರಾತ್ರಿ ಹತ್ತರಿಂದ ಬೆಳಿಗ್ಗೆ ಆರರವರೆಗಿನ ನಿದ್ದೆ ಅತ್ಯುತ್ತಮ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ. ಅವರ ಅಭಿಪ್ರಾಯವನ್ನು ಮನ್ನಿಸಿ ಹತ್ತು ಗಂಟೆಗೇ ಮಲಗಲು ಪ್ರಾಮುಖ್ಯತೆ ನೀಡಿ. ಗೊರಕೆಗೆ ಒಂದಕ್ಕಿಂತ ಹೆಚ್ಚು ಕಾರಣವಿರಬಹುದು.ಇದಕ್ಕೆ ಕಾರಣಗಳನ್ನು ಹುಡುಕಿದಂತೆ ಗೊರಕೆಯಿಂದ ಮುಕ್ತರಾಗಲು ನಿಮಗೆ ಸೂಕ್ತ ಎನಿಸುವ ಉಪಾಯಗಳನ್ನೂ ಪಡೆಯಬಹುದು.

ಸಾಧ್ಯವಾದಷ್ಟು ಹಾಲಿನ ಉತ್ಪನ್ನಗಳನ್ನು ದೂರವಿಡಿ

ಸಾಧ್ಯವಾದಷ್ಟು ಹಾಲಿನ ಉತ್ಪನ್ನಗಳನ್ನು ದೂರವಿಡಿ

ನಿಮ್ಮ ಆಹಾರ ಕ್ರಮದಲ್ಲಿರುವ ಹಾಲಿನ ಉತ್ಪನ್ನಗಳನ್ನು ಆದಷ್ಟು ಕಡಿಮೆ ಮಾಡಿದರೆ ಗೊರಕೆಯ ಪ್ರಮಾಣ ಬಹಳ ಕಡಿಮೆಯಾಗುತ್ತದೆ. ನಿಮಗೆ ಅಷ್ಟು ಇಷ್ಟವಾದರೆ ಹಾಲಿನ ಉತ್ಪನ್ನಗಳನ್ನು ಸೇವಿಸಿದ ನಾಲ್ಕು ತಾಸಿನ ನಂತರ ಮಲಗುವ ಅಭ್ಯಾಸ ಮಾಡಿ.

English summary

tips and remedies to prevent snoring at night

Just about everyone snores occasionally, but if snoring happens frequently it can affect the quantity and quality of your sleep and that of your family members and roommates. Have a look of such kind of home remedies for snoring
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more