ಗಿಡಮೂಲಿಕೆಗಳ ರಾಣಿ 'ತುಳಸಿ'- ಆರೋಗ್ಯದ ಸಂಜೀವಿನಿ

By: manu
Subscribe to Boldsky

ಭಾರತೀಯರು ಅದರಲ್ಲೂ ಹಿಂದೂ ಧರ್ಮಿಯರಿಗೆ ತುಳಸಿ ಎಂದರೆ ತುಂಬಾ ಪೂಜ್ಯನೀಯ. ತುಳಸಿ ಗಿಡದಲ್ಲಿ ಲಕ್ಷ್ಮೀನಾರಾಯಣ ವಾಸವಾಗಿದ್ದಾನೆ ಎನ್ನುವ ನಂಬಿಕೆ. ಇದರಿಂದಾಗಿಯೇ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆ ಮನೆಅಂಗಳದಲ್ಲಿರುವ ತುಳಸಿ ಕಟ್ಟೆಗೆ ಪೂಜೆ ಮಾಡಲಾಗುತ್ತದೆ. ತುಳಸಿ ಪೂಜ್ಯನೀಯ ಮಾತ್ರವಲ್ಲ, ಇದರಲ್ಲಿ ಹಲವಾರು ಔಷಧಿಯ ಗುಣಗಳು ಇವೆ. ಬೆಳ್ಳಂಬೆಳಗ್ಗೆ ತುಳಸಿ ಎಲೆ ಜಗಿಯಿರಿ, ಆರೋಗ್ಯ ಪಡೆಯಿರಿ

ಸಾವಿರಾರು ವರ್ಷಗಳಿಂದಲೂ ತುಳಸಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಾ ಇದೆ. ಈಗಲೂ ಕೆಲವೊಂದು ಹಳ್ಳಿಗಳಲ್ಲಿ ಸಾಮಾನ್ಯ ಕೆಮ್ಮು, ಜ್ವರ ಮತ್ತು ಶೀತಕ್ಕೆ ತುಳಸಿ ರಸದ ಮನೆಮದ್ದನ್ನು ಮಾಡಿಕೊಡುತ್ತಾರೆ. ತುಳಸಿಯು ಕೆಲವೊಂದು ಸಾಮಾನ್ಯ ರೋಗಗಳನ್ನು ಗುಣಪಡಿಸಬಲ್ಲದು ಎಂದು ಆಯುರ್ವೇದವು ಹೇಳುತ್ತದೆ.  ತುಳಸಿ ಚಹಾ: ಸ್ವಾದದ ಜೊತೆ ಆರೋಗ್ಯದ ಭಾಗ್ಯ

ತುಳಸಿಯು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಹೋರಾಡುತ್ತದೆ. ಇದು ಕೂದಲು ಹಾಗೂ ಚರ್ಮದ ಸಮಸ್ಯೆಗಳಿಗೂ ಪರಿಣಾಮಕಾರಿಯಾಗಿದೆ. ತುಳಸಿ ಎಲೆಗಳಿಂದ ಯಾವೆಲ್ಲಾ ಆರೋಗ್ಯ ಲಾಭಗಳು ನಿಮಗೆ ಸಿಗಲಿದೆ ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ... 

ಕಿಡ್ನಿಯ ಕಲ್ಲುಗಳ ತೆಗೆಯಲು

ಕಿಡ್ನಿಯ ಕಲ್ಲುಗಳ ತೆಗೆಯಲು

ತುಳಸಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್‪ಗಳು ಕಿಡ್ನಿಯನ್ನು ಬಲಗೊಳಿಸಿ ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ತಡೆಯುತ್ತದೆ. ತುಳಸಿ ರಸಕ್ಕೆ ಜೇನುತುಪ್ಪವನ್ನು ಹಾಕಿಕೊಂಡು ಪ್ರತಿದಿನ ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ ಎಂದು ಆಯುರ್ವೇದವು ಹೇಳುತ್ತದೆ. ತುಳಸಿಯಲ್ಲಿ ನಿರ್ವಿಷಕಾರಿ ಗುಣಗಳು ಇರುವುದರಿಂದ ದೇಹದಲ್ಲಿರುವ ಯುರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಿಡ್ನಿಯಲ್ಲಿ ಉಂಟಾಗುವ ಕಲ್ಲುಗಳಿಗೆ ದೇಹದಲ್ಲಿರುವ ಯುರಿಕ್ ಆಮ್ಲವೇ ಕಾರಣವಾಗಿದೆ.

ಹೃದಯದ ರಕ್ಷಣೆಗೆ

ಹೃದಯದ ರಕ್ಷಣೆಗೆ

ತುಳಸಿ ಎಲೆಗಳಲ್ಲಿ ಇರುವಂತಹ ಯುಗೆನೊಲ್ ಎನ್ನುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ಹೃದಯವನ್ನು ರಕ್ಷಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ನಿಮಗೆ ಹೃದಯದ ಸಮಸ್ಯೆಯಿದ್ದರೆ ಪ್ರತೀದಿನ ಖಾಲಿ ಹೊಟ್ಟೆಯಲ್ಲಿ ಕೆಲವು ತುಳಸಿ ಎಲೆಗಳನ್ನು ಸರಿಯಾಗಿ ಜಗಿದುಕೊಂಡು ತಿನ್ನಿ.

ಕ್ಯಾನ್ಸರ್ ನಿಂದ ರಕ್ಷಣೆಗೆ

ಕ್ಯಾನ್ಸರ್ ನಿಂದ ರಕ್ಷಣೆಗೆ

ಕ್ಯಾನ್ಸರ್ ವಿರೋಧಿ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶಗಳು ತುಳಸಿಯಲ್ಲಿ ಸಮೃದ್ಧವಾಗಿರುವ ಕಾರಣದಿಂದ ಕ್ಯಾನ್ಸರ್‌ನ್ನು ತುಳಸಿಯಿಂದ ನಿವಾರಣೆ ಮಾಡಬಹುದಾಗಿದೆ. ತಂಬಾಕಿನಿಂದ ಬರುವಂತಹ ಬಾಯಿಯ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಇರುವಂತವರು ತುಳಸಿ ಎಲೆಗಳನ್ನು ನಿಯಮಿತವಾಗಿ ತಿಂದಾಗ ಹೆಚ್ಚಿನ ಪರಿಣಾಮ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ. ತುಳಸಿಯಲ್ಲಿರುವಂತಹ ಅಂಶಗಳು ಫ್ರೀ ರ್ಯಾಡಿಕಲ್ ನ್ನು ತಡೆದು ದೇಹವನ್ನು ಆರೋಗ್ಯವಾಗಿಡುತ್ತವೆ. ದೇಹವನ್ನು ಆರೋಗ್ಯ ಹಾಗೂ ಬಲಿಷ್ಠವಾಗಿಡಲು ಪ್ರತೀ ದಿನ ಒಂದು ಲೋಟ ತುಳಸಿ ಜ್ಯೂಸ್ ಕುಡಿಯಿರಿ.

ಹೊಟ್ಟೆ ಸಂಬಂಧಿ ಕಾಯಿಲೆಗಳಿಗೆ

ಹೊಟ್ಟೆ ಸಂಬಂಧಿ ಕಾಯಿಲೆಗಳಿಗೆ

ಇಂದಿನ ದಿನಗಳಲ್ಲಿ ಹೆಚ್ಚಿನವರು ಗ್ಯಾಸ್ಟ್ರಿಕ್, ಹೊಟ್ಟೆಯ ಅಲ್ಸರ್, ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾರೆ. ತುಳಸಿ ಎಲೆಗಳಿಂದ ಹೊಟ್ಟೆಯುಬ್ಬರ, ಹೊಟ್ಟೆಯ ಅಲ್ಸರ್ ಮತ್ತು ಮಲಬದ್ಧತೆ ಇತ್ಯಾದಿಯನ್ನು ನಿವಾರಣೆ ಮಾಡಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಬಲಗೊಳಿಸಲಿದೆ. ಒಂದು ಚಮಚ ತುಳಸಿ ರಸಕ್ಕೆ ಜೇನುತುಪ್ಪ ಸೇರಿಸಿಕೊಂಡು ಪ್ರತೀದಿನ ಸೇವಿಸಿ.

ಜ್ವರವನ್ನು ಕಡಿಮೆಗೊಳಿಸುತ್ತದೆ

ಜ್ವರವನ್ನು ಕಡಿಮೆಗೊಳಿಸುತ್ತದೆ

ಒಂದು ವೇಳೆ ಯಾವುದೋ ಕಾರಣಕ್ಕೆ ಜ್ವರ ಬಂದಿದ್ದು ಸಾಮಾನ್ಯ ಔಷಧಿಗಳಿಗೆ ಬಗ್ಗದೇ ಇದ್ದಾಗ ತುಳಸಿ ಎಲೆಗಳ ಸೇವನೆಯನ್ನು ದಿನಕ್ಕೆ ಮೂರು ಎಲೆಗಳಿಗೆ ವಿಸ್ತರಿಸಿ ದಿನಕ್ಕೆ ಮೂರು ಹೊತ್ತು ಸೇವಿಸುವುದರಿಂದ ಜ್ವರ ಇಳಿಯಲು ನೆರವಾಗುತ್ತದೆ.

ಒಣ ಕೆಮ್ಮಿಗೆ

ಒಣ ಕೆಮ್ಮಿಗೆ

ಒಂದು ವೇಳೆ ನಿಮ್ಮನ್ನು ಕೆಮ್ಮು ಬಾಧಿಸುತ್ತಿದ್ದು ಕಫವಿಲ್ಲದೇ ಗಂಟಲು ಒಣದಾಗಿದ್ದರೆ ತುಳಸಿ ಎಲೆಯನ್ನು ನೀರಿನೊಂದಿಗೆ ಸೇವಿಸಿದ ಬಳಿಕ ಉತ್ತಮ ಪರಿಣಾಮ ದೊರಕುತ್ತದೆ. ಏಕೆಂದರೆ ತುಳಸಿ ಎಲೆಗಳಲ್ಲಿರುವ ಕೆಮ್ಮು ನಿವಾರಕ ಗುಣ (antitussive property) ಕೆಮ್ಮಿಗೆ ಕಾರಣವಾಗಿರುವ ಕೀಟಾಣುಗಳನ್ನು ಹೊಡೆದೋಡಿಸುತ್ತದೆ ಹಾಗೂ ಇದರ ಕಫಹಾರಿ ಗುಣ ಗಂಟಲಿನಲ್ಲಿನ ಕಫವನ್ನು ನಿವಾರಿಸಲು ನೆರವಾಗುತ್ತದೆ.

 
English summary

This One Ancient Herb Helps Cure Health Problems

According to Ayurveda, tulsi can help to treat common ailments, it can strengthen the immune system, fight against bacterial infection in the body and also help to combat skin and hair problems. So, here are some of the health benefits of tulsi leaves.
Story first published: Thursday, February 16, 2017, 23:50 [IST]
Subscribe Newsletter