For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ತಲೆನೋವೇ? ಒಮ್ಮೆ ಈ ಜ್ಯೂಸ್ ಕುಡಿದು ನೋಡಿ...

By Arshad
|

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಏಕೆ ಬರುತ್ತದೆ ಎಂದು ಇದುವರೆಗೆ ಕಂಡುಕೊಳ್ಳಲು ವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ಆದರೆ ಇದು ಉಲ್ಬಣಗೊಳ್ಳದಂತೆ ಪ್ರಾರಂಭವಾಗುವ ಮೊದಲೇ ಕೆಲವು ಮದ್ದುಗಳಿಗೆ ಸಾಧ್ಯವಿದೆ. ಆದರೆ ಒಂದು ವೇಳೆ ಈ ತಲೆನೋವು ಉಲ್ಬಣಾವಸ್ಥೆಗೆ ತಲುಪಿದರೆ ಇದನ್ನು ಅನುಭವಿಸದೇ ಬೇರೆ ಮಾರ್ಗವಿಲ್ಲ. ಮೈಗ್ರೇನ್ ನಿಂದ ದೂರವುಳಿಯುವುದು ಹೇಗೆ?

ಈ ಸಮಯದಲ್ಲಿ ವಾಕರಿಕೆ, ಬೆಳಕಿಗೂ, ಧ್ವನಿಗೂ ತಲೆಯಲ್ಲಿ ಸೂಜಿ ಚುಚ್ಚಿದಂತೆ ನೋವಾಗುವುದು, ದೃಷ್ಟಿಯ ಕೇಂದ್ರಭಾಗ ಮಾಯವಾಗುವುದು ಮೊದಲಾದ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಇದರ ಆಘಾತದಿಂದ ರೋಗಿ ಪ್ರಜ್ಞೆಯೂ ತಪ್ಪಬಹುದು ಆಗ ಆಸ್ಪತ್ರೆಗೆ ಕರೆದೊಯ್ಯುವುದು ಅನಿವಾರ್ಯವಾಗುತ್ತದೆ. ಇದರೊಂದಿಗೆ ಕುತ್ತಿಗೆ ಮತ್ತು ಮುಖದಲ್ಲಿಯೂ ನೋವು, ಮೂಗು ಕಟ್ಟಿಕೊಳ್ಳುವುದು, ತಲೆಯ ಚರ್ಮ ಬಿಳಿಚಿಕೊಳ್ಳುವುದು ಮೊದಲಾದ ಲಕ್ಷಣಗಳೂ ಕಾಣಿಸಿಕೊಳ್ಳಬಹುದು. ಖತರ್ನಾಕ್ ಮೈಗ್ರೇನ್ ತಲೆ ನೋವಿಗೆ -ಪವರ್ ಫುಲ್ ಮನೆಮದ್ದು

ಈ ತಲೆನೋವು ಇರುವ ವ್ಯಕ್ತಿಗಳು ನೋವು ನಿವಾರಕ ಮಾತ್ರೆ ಅಥವಾ ಬಾಂಗಳನ್ನು ತಮ್ಮೊಂದಿಗೆ ಸದಾ ಇಟ್ಟುಕೊಂಡು ತಲೆನೋವು ಪ್ರಾರಂಭವಾದ ತಕ್ಷಣ ಸೇವಿಸಬೇಕು ಅಥವಾ ಹಚ್ಚಿಕೊಳ್ಳಬೇಕು. ಆದರೆ ಇದರಿಂದ ಅಡ್ಡಪರಿಣಾಮಗಳೇ ಹೆಚ್ಚು.... ಹಾಗಾಗಿ ಈ ನೋವನ್ನು ಸಮರ್ಥವಾಗಿ ಕಡಿಮೆಮಾಡಬಲ್ಲ ಪೇಯ ಅಥವಾ ಜ್ಯೂಸ್ ವೊಂದನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇದರ ಸೇವನೆಯಿಂದ ತಲೆನೋವು ಉಲ್ಬಣಗೊಳ್ಳದಂತೆ ತಡೆಯಬಹುದು....


ಈ ಪೇಯವನ್ನು ಸಿದ್ಧಪಡಿಸುವ ವಿಧಾನ

ಈ ಪೇಯವನ್ನು ಸಿದ್ಧಪಡಿಸುವ ವಿಧಾನ

ಅಗತ್ಯ ಸಾಮಾಗ್ರಿಗಳು

1) ಪಾಲಕ್ ಸೊಪ್ಪಿನ ರಸ: ನಾಲ್ಕು ದೊಡ್ಡ ಚಮಚ

ಈ ಪೇಯವನ್ನು ಸಿದ್ಧಪಡಿಸುವ ವಿಧಾನ

ಈ ಪೇಯವನ್ನು ಸಿದ್ಧಪಡಿಸುವ ವಿಧಾನ

2) ಹಸಿರು ದ್ರಾಕ್ಷಿಯ ತಿರುಳು: ಎರಡು ದೊಡ್ಡ ಚಮಚ (ಬೀಜ ನಿವಾರಿಸಿದ್ದು)

ಈ ಪೇಯವನ್ನು ಸಿದ್ಧಪಡಿಸುವ ವಿಧಾನ

ಈ ಪೇಯವನ್ನು ಸಿದ್ಧಪಡಿಸುವ ವಿಧಾನ

3) ಹಸಿಶುಂಠಿಯ ರಸ: ಎರಡು ದೊಡ್ಡ ಚಮಚ

ಮಾಹಿತಿ #1

ಮಾಹಿತಿ #1

ಈ ಪೇಯವನ್ನು ಅಥವಾ ಜ್ಯಾಸ್ ಅನ್ನು ನಿಯಮಿತವಾಗಿ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಮೈಗ್ರೇನ್ ತಲೆನೋವು ಸಹಾ ನಿಧಾನವಾಗಿ ಕಡಿಮೆಯಾಗುತ್ತಾ ಬಂದು ಕ್ರಮೇಣ ಇಲ್ಲವಾಗುತ್ತದೆ. ಆದರೆ ಬರೆಯ ಜ್ಯೂಸ್ ಕುಡಿದರೆ ಮಾತ್ರ ಸಾಲದು. ಇದರೊಂದಿಗೆ ಉಸಿರಾಟದ ವ್ಯಾಯಾಮಗಳು, ಸಾಕಷ್ಟು ವ್ಯಾಯಾಮ, ಯೋಗಾಭ್ಯಾಸ ಮತ್ತು ಮುಖ್ಯವಾಗಿ ಆರೋಗ್ಯಕರ ಆಹಾರ ಸೇವನೆ, ಮದ್ಯಪಾನ, ಧೂಮಪಾನ, ಎಣ್ಣೆ ಪದಾರ್ಥಗಳ ವರ್ಜನೆ, ಸರಿಯಾದ ಸಮಯದಲ್ಲಿ ಮಲಗುವುದು ಬೆಳಿಗ್ಗೆ ಬೇಗನೇ ಏಳುವುದು ಮೊದಲಾದವೆಲ್ಲಾ ಮುಖ್ಯವಾಗಿದೆ.

ಮಾಹಿತಿ #2

ಮಾಹಿತಿ #2

ಪಾಲಕ್ ಸೊಪ್ಪಿನ ರಸದಲ್ಲಿ ವಿಟಮಿನ್ B6 ಮತ್ತು ಸತು ಹೇರಳವಾಗಿವೆ. ಈ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಹೊತ್ತ ರಕ್ತವನ್ನು ಮೆದುಳಿಗೆ ತಲುಪಿಸಲು ನೆರವಾಗುತ್ತವೆ. ತನ್ಮೂಲಕ ತಲೆನೋವು ಕಡಿಮೆ ಮಾಡುತ್ತದೆ. ಹಸಿರು ದ್ರಾಕ್ಷಿ ಮತ್ತು ಹಸಿಶುಂಠಿಯಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳಿದ್ದು ಮೈಗ್ರೇನ್ ತಲೆನೋವಿಗೆ ಕಾರಣವಾಗುವ ಅಂಶಗಳನ್ನು ನಿವಾರಿಸಿ ಮೆದುಳಿನ

ನರಗಳಲ್ಲಿ ಉರಿಯೂತವಾಗದಂತೆ ತಡೆಯುತ್ತದೆ. ಈ ಉರಿಯೂತ ತಲೆನೋವಿಗೆ ಪ್ರತ್ಯಕ್ಷ ಕಾರಣವಾಗಿದೆ.

ಈ ಅದ್ಭುತ ಪೇಯವನ್ನು ತಯಾರಿಸುವ ವಿಧಾನ

ಈ ಅದ್ಭುತ ಪೇಯವನ್ನು ತಯಾರಿಸುವ ವಿಧಾನ

ಹಂತ 1 : ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಒಂದ್ ಕಪ್ ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನೀರು ಸೇರಿಸಬೇಡಿ, ಅಷ್ಟೇ ಗಾಢವಿರಲಿ. ಈ ಪೇಯ ಈಗ ಸೇವಿಸಲು ಸಿದ್ಧವಾಗಿದೆ. ಇದು ಕೊಂಚ ಕಹಿ, ಮತ್ತು ಖಾರವಾಗಿರುವುದರಿಂದ ಮೊದಮೊದಲು ಕೊಂಚ ಕಷ್ಟವಾಗಬಹುದು.

ಹಂತ 2

ಹಂತ 2

ಈ ಪೇಯವನ್ನು ನಿಮ್ಮ ಬೆಳಗ್ಗಿನ ಉಪಾಹಾರದ ಬಳಿಕ ಸೇವಿಸಿ. ನಂತರ ಮಧ್ಯಾಹ್ನದ ಊಟದವರೆಗೆ ನೀರಿನ ಹೊರತು ಬೇರೇನನ್ನೂ ಸೇವಿಸಬೇಡಿ. ಸತತವಾಗಿ ಹತ್ತು ದಿನಗಳ ಕಾಲ ಈ ಪೇಯವನ್ನು ಕುಡಿಯುತ್ತಾ ಬನ್ನಿ, ಬಳಿಕ ತಲೆನೋವು ಕಡಿಮೆಯಾಗಿರುವುದನ್ನು ಗಮನಿಸಬಹುದು.

English summary

This Homemade Juice Can Reduce Migraine Headaches Fast!

If you are someone who experiences migraine attacks quite frequently, then there is an amazing home remedy that can help you! A migraine headache is a condition in which a person experiences an intense headache, along with other symptoms such as nausea and sensitivity to light and sound. In certain extreme cases, migraine attacks can be so bad that the patient has to be hospitalised! Other common symptoms of migraines include pain in the neck and face, dizziness, blurred vision, nasal congestion, scalp tenderness, etc.
X
Desktop Bottom Promotion