For Quick Alerts
ALLOW NOTIFICATIONS  
For Daily Alerts

ಹೃದಯಾಘಾತದ ನಂತರ, ಹೃದಯವನ್ನು ಮಗುವಿನಂತೆ ನೋಡಿಕೊಳ್ಳಿ

By Jaya Subramanya
|

ಮಾನವ ಜೀವನ ಹೆಚ್ಚು ಅಮೂಲ್ಯವಾದುದು. ಆದರೆ ಇತ್ತೀಚೆಗೆ ಕಾಡುತ್ತಿರುವ ಕೆಲವೊಂದು ರೋಗಗಳಿಂದ ನಿತ್ಯವೂ ಉಳಿವಿಗಾಗಿ ಹೋರಾಟ ನಡೆಯುತ್ತಿದೆ. ಎಷ್ಟೊಂದು ಕಾಳಜಿಯನ್ನು ನಾವು ನಮ್ಮ ಬಗ್ಗೆ ತೆಗೆದುಕೊಂಡರೂ ಒಂದಿಲ್ಲೊಂದು ಸಣ್ಣ ತಪ್ಪಿನಿಂದ ನಾವು ರೋಗಗ್ರಸ್ಥರಾಗುತ್ತೇವೆ. ಮೊದಲೆಲ್ಲಾ ಅಪರೂಪಕ್ಕೆ ಬರುತ್ತಿದ್ದ ಕೆಲವು ಕಾಯಿಲೆಗಳು ಈಗ ದಿನನಿತ್ಯ ಕಾಡಿ ನಮ್ಮನ್ನು ಗೋಳಾಡಿಸುತ್ತಿದೆ. ಅದರಲ್ಲೂ ನಮ್ಮ ಬದಲಾಗುತ್ತಿರುವ ಜೀವನ ಶೈಲಿಯಿಂದ ನಾವು ಇಂದಿಗೂ ಕೇಳರಿಯದೇ ಇರುವ ಕೆಲವೊಂದು ರೋಗಗಳಿಗೆ ದಾಸರಾಗುತ್ತಿದ್ದೇವೆ.

ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರನ್ನು ಕಾಡುತ್ತಿರುವ ಕಾಯಿಲೆಯಾಗಿದೆ ಹೃದಯಾಘಾತ. ಹೃದಯಸ್ತಂಭನದಂತಹ ಈ ಭಯಾನಕ ರೋಗವು ಮೃತ್ಯುಕೂಪವಾಗಿಯೇ ಪರಿಣಮಿಸಿದೆ. ನೀವು ಸೂಕ್ತ ಕಾಳಜಿಯನ್ನು ವಹಿಸದೇ ಇದ್ದಲ್ಲಿ ಈ ರೋಗವು ನಿಮ್ಮನ್ನು ಮರಣಕೂಪಕ್ಕೆ ತಳ್ಳಿಬಿಡುತ್ತದೆ. ಒಂದು ಬಾರಿಯ ಹೃದಯಾಘಾತದ ಸಂದರ್ಭದಲ್ಲಿಯೇ ವೈದ್ಯರು ರೋಗಿಗೆ ಮತ್ತು ಮನೆಯವರಿಗೆ ಹೆಚ್ಚು ಕಾಳಜಿ ವಹಿಸುವಂತೆ ಸಲಹೆಯನ್ನು ನೀಡುತ್ತಾರೆ. ಇವರುಗಳು ವೈದ್ಯರ ನಿರ್ದೇಶನವಿಲ್ಲದೆ ಏನನ್ನೂ ಮಾಡುವ ಹಾಗಿಲ್ಲ.

ಥಟ್ಟನೇ ಕಾಡುವ 'ಹೃದಯಾಘಾತ'! ತಿಳಿಯಲೇಬೇಕಾದ ಸತ್ಯ ಸಂಗತಿ

ವ್ಯಾಯಾಮವನ್ನು ಮಾಡಿದರೂ ಅದಕ್ಕೆ ವೈದ್ಯರು ಸಲಹೆಯನ್ನು ನೀಡಬೇಕಾಗುತ್ತದೆ. ನೀವು ಮೊದಲಿನಂತೆ ಇರುವುದಕ್ಕೆ ಕೆಲವೊಂದು ಜೀವನ ಶೈಲಿಗಳನ್ನು ಬದಲಾಯಿಸಿಕೊಂಡರೆ ಈ ರೋಗವಿದ್ದರೂ ನೀವು ಸಾಮಾನ್ಯವಾಗಿಯೇ ಜೀವನ ನಡೆಸಬಹುದಾಗಿದೆ. ನಿಮ್ಮ ಹೃದಯಕ್ಕೆ ಒತ್ತಡವನ್ನು ನೀಡುವ ಕೆಲಸಗಳನ್ನು ನೀವು ಮಾಡಬಾರದು. ನೀವು ಮಾಡುತ್ತಿರುವ ಉದ್ಯೋಗದಿಂದ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳುತ್ತಿದ್ದರೆ ಆ ಉದ್ಯೋಗವನ್ನು ಬಿಟ್ಟು ಬಿಡಿ. ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಸಲಹೆಗಳನ್ನು ನಾವು ನೀಡಿದ್ದು, ನಿಮ್ಮ ಹೃದಯವನ್ನು ಮಗುವಿನಂತೆ ಜೋಪಾನ ಮಾಡುವ ಸಮಯ ಬಂದಿದೆ ಎಂದೇ ಇದರ ಅರ್ಥವಾಗಿದೆ...

ಆತಂಕವನ್ನು ನಿರೀಕ್ಷಿಸಬಹುದು

ಆತಂಕವನ್ನು ನಿರೀಕ್ಷಿಸಬಹುದು

ನೀವು ಆತಂಕ, ನೋವು ಮತ್ತು ಗೊಂದಲದ ಕಾರಣದಿಂದ ವಿಶೇಷವಾಗಿ ಕಷ್ಟಕರ ಸಮಯವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ರಕ್ತವನ್ನು ತೆಳುಮಾಡಲು ಮತ್ತು ರಕ್ತದೊತ್ತಡ ಔಷಧಿಗಳನ್ನು ಸರಿಯಾದ ರಕ್ತದ ಹರಿವನ್ನು ಪುನಃಸ್ಥಾಪಿಸಲು ತಕ್ಷಣವೇ ನಿರ್ವಹಿಸಲಾಗುವುದು. ಹೃದಯಾಘಾತದಿಂದ ನೀವು ನಿರೀಕ್ಷಿಸಬಹುದು ಸಾಮಾನ್ಯ ವಿಷಯ ಇದಾಗಿದೆ.

ನಿಮ್ಮ ಡಿಸ್‌ಚಾರ್ಜ್ ಸಮ್ಮರಿಯನ್ನು ಓದಿಕೊಳ್ಳಿ

ನಿಮ್ಮ ಡಿಸ್‌ಚಾರ್ಜ್ ಸಮ್ಮರಿಯನ್ನು ಓದಿಕೊಳ್ಳಿ

ಆಸ್ಪತ್ರೆಯಿಂದ ಮನೆಗೆ ಬರುವಂತಹ ಸಂದರ್ಭದಲ್ಲಿ ನಿಮ್ಮ ಡಿಸ್‌ಚಾರ್ಜ್ ಸಮ್ಮರಿಯ ಕುರಿತು ವೈದ್ಯರು ಮತ್ತು ದಾದಿಯೊಂದಿಗೆ ಚರ್ಚಿಸಿ. ಮುಂದಿನ ಸಲದ ಚೆಕಪ್, ನೀವು ತೆಗೆದುಕೊಳ್ಳಬೇಕಾದ ಔಷಧಿ, ಅನುಸರಿಸಬೇಕಾದ ವಿಧಾನಗಳನ್ನು ನೀವು ಅವರನ್ನು ಕೇಳಿ ತಿಳಿದುಕೊಳ್ಳಬೇಕು.

 ಹೆಚ್ಚಿನ ಚಿಕಿತ್ಸೆಯ ಬಗ್ಗೆ ಆಲೋಚಿಸಿ

ಹೆಚ್ಚಿನ ಚಿಕಿತ್ಸೆಯ ಬಗ್ಗೆ ಆಲೋಚಿಸಿ

ಕಾರ್ಡಿಯಾಕ್ ಮರುಸ್ಥಾಪನೆಯ ಬಗ್ಗೆ ನೀವು ಯೋಚಿಸಬೇಕು. ಮೇಲ್ವೀಚಾರಣೆಯ ಕೌನ್ಸಲಿಂಗ್ ಮತ್ತು ತರಬೇತಿ ಕಾರ್ಯಕ್ರಮವು ನಿಮ್ಮ ಆರೋಗ್ಯವನ್ನು ವರ್ಧಿಸಲು ನೆರವನ್ನೀಯುತ್ತದೆ ಮತ್ತು ಚೇತರಿಕೆಯನ್ನು ಪಡೆಯುವ ಸಂದರ್ಭದಲ್ಲಿ ಇದು ನೆರವು ನೀಡುತ್ತದೆ.

ಡಯೆಟ್ ಮತ್ತು ವ್ಯಾಯಾಮ ಮುಖ್ಯವಾಗಿದೆ

ಡಯೆಟ್ ಮತ್ತು ವ್ಯಾಯಾಮ ಮುಖ್ಯವಾಗಿದೆ

ಕಾರ್ಡಿಯಾಕ್ ರಿಹಾಬ್ ಕಾರ್ಯಕ್ರಮಗಳು ನಿಮಗೆ ಕೆಲವೊಂದು ಸೂಚನೆಗಳನ್ನು ಪಡೆದುಕೊಳ್ಳಲು ನೆರವನ್ನೀಯುತ್ತದೆ. ನೀವು ಈ ಕಾರ್ಯಕ್ರಮದ ಭಾಗವಾಗಿ ನ್ಯೂಟ್ರಿಶಿಯನಿಸ್ಟ್‌ ಜೊತೆ ಮಾತನಾಡಬಹುದು

 ಸಾಮಾನ್ಯ ಚಟುವಟಿಕೆಗಳತ್ತ ಯಾವಾಗ ಗಮನ ಹರಿಸಬೇಕು

ಸಾಮಾನ್ಯ ಚಟುವಟಿಕೆಗಳತ್ತ ಯಾವಾಗ ಗಮನ ಹರಿಸಬೇಕು

ನಿಮ್ಮ ಸಾಮಾನ್ಯ ಚಟುವಟಿಕೆಗಳಾದ ನಡಿಗೆ, ಪ್ರಯಾಣ ಇಲ್ಲವೇ ಲೈಂಗಿಕ ಕ್ರಿಯೆಗಳನ್ನು ಯಾವಾಗ ನಡೆಸಬೇಕು ಎಂಬುದರ ಬಗ್ಗೆ ವೈದ್ಯರಲ್ಲಿ ಸಮಾಲೋಚಿಸಿ. ಸಹಾಯಕ್ಕಾಗಿ ನಿಮ್ಮನ್ನು ನೋಡಿಕೊಳ್ಳುವವರೊಂದಿಗೆ ಸಮಾಲೋಚಿಸಿ.

ಮನಸ್ಸಿನ ಸ್ವಾಸ್ಥ್ಯ ಮುಖ್ಯ

ಮನಸ್ಸಿನ ಸ್ವಾಸ್ಥ್ಯ ಮುಖ್ಯ

ಹೃದಯಾಘಾತದ ನಂತರ ನಿಮ್ಮ ಮನಸ್ಸಿಗೂ ನೀವು ಗಮನ ಹರಿಸಬೇಕು. ನೀವು ಮನಃಶಾಸ್ತ್ರಜ್ಞರನ್ನು ಸಂಪರ್ಕಿಸಿ ಅವರೊಂದಿಗೆ ಸಮಾಲೋಚನೆಯನ್ನು ನಡೆಸಬೇಕು. ಇದರಿಂದ ಹೃದಯಾಘಾತದ ನಂತರವೂ ನಿಮ್ಮ ಜೀವನವನ್ನು ಹೇಗೆ ಎದುರಿಸಬೇಕು ಎಂಬ ಧೈರ್ಯ ನಿಮ್ಮಲ್ಲಿ ಮೂಡುತ್ತದೆ.

ಔಷಧಿಗಳನ್ನು ನಿಯಮಿತವಾಗಿ ಸೇವಿಸಿ

ಔಷಧಿಗಳನ್ನು ನಿಯಮಿತವಾಗಿ ಸೇವಿಸಿ

ನಿಮಗೆ ಔಷಧಗಳು ಮತ್ತು ಸೂಚನೆಗಳನ್ನು ಒಳಗೊಂಡಿರುವ ದೊಡ್ಡ ಪಟ್ಟಿಯನ್ನೇ ನೀಡಿರಬಹುದು. ಆದರೆ ಇವುಗಳನ್ನು ನೀವು ಪಾಲಿಸಬೇಕು. ಔಷಧ ಸೇವನೆ ಕಷ್ಟಕರವಾಗಿರಬಹುದು. ಆದರೆ ನಿಮ್ಮ ಹೃದಯವನ್ನು ಆರೈಕೆ ಮಾಡುವ ಅಂಶಗಳನ್ನು ಈ ಔಷಧಗಳು ಒಳಗೊಂಡಿವೆ ಎಂಬುದನ್ನು ಮರೆಯಬೇಡಿ. ನಿಮ್ಮ ಕೊಲೆಸ್ಟ್ರಾಲ್ ಮಟ್ಟ, ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಮಾಪನ ಮಾಡುವ ಅಂಶ ಇದರಲ್ಲಿದೆ. ನಿಮ್ಮನ್ನು ಬೇಗನೇ ಚೇತರಿಸುವ ಗುಣ ಈ ಔಷಧಗಳಲ್ಲಿವೆ.

English summary

Things You Should Be Careful Of After A Heart Attack

If you have had a heart attack, it is certain that you'll feel worried and overwhelmed. You may obviously have a lot of questions in your mind, regarding the post recovery steps that you must take. It is important to take care of yourself and you need to go to the doctor for a specific advice. After a heart attack, you willwant to go back to your regular life.The answer to this depends on your normal routine and also the condition of your heart. It is very important to start slowly and give your heart a chance to heal.
Story first published: Saturday, July 22, 2017, 10:11 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more