For Quick Alerts
ALLOW NOTIFICATIONS  
For Daily Alerts

ಇದೇ ನೋಡಿ ಥೈರಾಯ್ಡ್ ಗ್ರಂಥಿಯ ಅಪಾಯದ ಲಕ್ಷಣಗಳು, ಎಚ್ಚರವಾಗಿರಿ!

By Hemanth
|

ದೇಹದಲ್ಲಿರುವ ಪ್ರತಿಯೊಂದು ಗ್ರಂಥಿ ಹಾಗೂ ಅಂಗಾಂಗಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಅದರಲ್ಲೂ ಥೈರಾಯ್ಡ್ ಗ್ರಂಥಿಗಳು ಹಾರ್ಮೊನನ್ನು ಬಿಡುಗಡೆ ಮಾಡುವುದರಿಂದ ಚಯಾಪಚಾಯ, ದೇಹದ ಉಷ್ಣತೆ ಮತ್ತು ನಾಡಿಬಡಿತ ಕ್ರಿಯೆಯು ನಿಯಂತ್ರಣದಲ್ಲಿರುತ್ತದೆ. ಈ ಮೂರರಲ್ಲಿ ಯಾವುದೇ ರೀತಿಯ ಏರುಪೇರು ಆದರೂ ಅದರಿಂದ ಯಕೃತ್, ಕರುಳು, ಕಿಡ್ನಿ ಮತ್ತು ಸಂತಾನೋತ್ಪತ್ತಿಯ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುವುದು.

ಥೈರಾಯ್ಡ್ ನ ಈ ಲಕ್ಷಣಗಳನ್ನು ನಿರ್ಲಕ್ಷ್ಯಮಾಡಬೇಡಿ

ನಿಶ್ಯಕ್ತಿ ಮತ್ತು ಕಿರಿಕಿರಿ

ನಿಶ್ಯಕ್ತಿ ಮತ್ತು ಕಿರಿಕಿರಿ

ಥೈರಾಯ್ಡ್‌ ನಿಂದ ನಮ್ಮ ಭಾವನೆಗಳು ಮತ್ತು ದೇಹದ ಶಕ್ತಿಯ ಮೇಲೆ ಪರಿಣಾಮ ಉಂಟಾಗುವುದು. ಹೈಪೋಥೈರಾಯ್ಡಿಸಮ್ ನಿಂದ ಆಯಾಸ ಮತ್ತು ದೇಹದ ಶಕ್ತಿಯಲ್ಲಿ ಕೊರತೆ ಕಾಣಿಸಿಕೊಳ್ಳುವುದು. ಇದರಿಂದ ಯಾವಾಗಲೂ ಮನಸ್ಸಿಗೆ ಕಿರಿಕಿರಿ ಮತ್ತು ನಿದ್ರೆಯ ಸಮಸ್ಯೆ ಉಂಟಾಗಬಹುದು.

ಹೃದಯಬಡಿತದಲ್ಲಿ ಬದಲಾವಣೆ

ಹೃದಯಬಡಿತದಲ್ಲಿ ಬದಲಾವಣೆ

ಥೈರಾಯ್ಡ್ ನ ಹಾರ್ಮೋನುಗಳು ದೇಹದಲ್ಲಿರುವ ಪ್ರತಿಯೊಂದು ಅಂಗಾಂಗಗಳ ಮೇಲೆ ಪರಿಣಾಮ ಬೀರುವುದು ಮತ್ತು ಇದು ಹೃದಯಬಡಿತದ ಮೇಲೂ ಪರಿಣಾಮ ಉಂಟು ಮಾಡಬಹುದು. ಥೈರಾಯ್ಡ್ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳು ಯಾವಾಗಲೂ ತಮ್ಮ ಹೃದಯಬಡಿತವು ಸಾಮಾನ್ಯಕ್ಕಿಂತ ಕಡಿಮೆಯಾಗಿರುವ ಅನುಭವವಾಗಬಹುದು.

ಅನಿಯಮಿತ ತೂಕ ಹೆಚ್ಚಳ ಅಥವಾ ಕಡಿಮೆಯಾಗುವುದು

ಅನಿಯಮಿತ ತೂಕ ಹೆಚ್ಚಳ ಅಥವಾ ಕಡಿಮೆಯಾಗುವುದು

ದೇಹದ ತೂಕದಲ್ಲಿ ಬದಲಾವಣೆಯಾಗುವುದು ಥೈರಾಯ್ಡ್ ನಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಯಾಗಿದೆ. ದೇಹದ ತೂಕದಲ್ಲಿ ಅತೀ ಕಡಿಮೆ ಸಮಯದಲ್ಲಿ ತೂಕ ಅತಿಯಾಗಿ ಕಡಿಮೆಯಾಗುವುದು ಅಥವಾ ಹೆಚ್ಚಳವಾಗುವುದು ಥೈರಾಯ್ಡ್‌ನ ಲಕ್ಷಣವಾಗಿದೆ. ಇದು ಥೈರಾಯ್ಡ್ ಹಾರ್ಮೋನ್ ತುಂಬಾ ಕಡಿಮೆ ಅಥವಾ ಹೆಚ್ಚಾಗಿರುವ ಸೂಚನೆಯಾಗಿದೆ. ಇದು ಥೈರಾಯ್ಡ್ ನ ಲಕ್ಷಣಗಳಲ್ಲಿ ಒಂದಾಗಿದೆ.

ಥೈರಾಯ್ಡ್ ನಿಂದ ಹೆಚ್ಚಿದ ತೂಕ ಕಮ್ಮಿ ಮಾಡಲು ಟಿಪ್ಸ್

ಒಣ ಚರ್ಮ ಮತ್ತು ಒಡೆದ ಉಗುರು

ಒಣ ಚರ್ಮ ಮತ್ತು ಒಡೆದ ಉಗುರು

ಒಣ ಹಾಗೂ ತುರಿಕೆ ಉಂಟು ಮಾಡುವ ಚರ್ಮವು ಥೈರಾಯ್ಡ್ ಗ್ರಂಥಿಯ ಸಮಸ್ಯೆಯ ಪ್ರಮುಖ ಲಕ್ಷಣವಾಗಿದೆ. ಉಗುರು ಉದ್ದಗಿನ ಗೆರೆಯಂತೆ ಒಡೆದುಹೋಗಿದ್ದರೆ ಇದರ ಬಗ್ಗೆ ನೀವು ಚಿಂತಿಸಬೇಕು. ಇದು ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

ದೇಹದ ಉಷ್ಣತೆಯಲ್ಲಿ ಸಮಸ್ಯೆ

ದೇಹದ ಉಷ್ಣತೆಯಲ್ಲಿ ಸಮಸ್ಯೆ

ಥೈರಾಯ್ಡ್ ಸಮಸ್ಯೆಯಿದ್ದರೆ ದೇಹವು ತನ್ನ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಸಮಸ್ಯೆಯಾಗಬಹುದು. ನಿಮಗೆ ತುಂಬಾ ಚಳಿಯಾಗಬಹುದು, ಅತಿಯಾಗಿ ಬೆವರು ಬರಬಹುದು ಅಥವಾ ಸೆಕೆಯಾಗಬಹುದು.

ಕುತ್ತಿಗೆ ಊದಿಕೊಳ್ಳುವುದು

ಕುತ್ತಿಗೆ ಊದಿಕೊಳ್ಳುವುದು

ಕುತ್ತಿಗೆ ಊದಿಕೊಳ್ಳುವುದು ಅಥವಾ ದೊಡ್ಡದಾಗುವುದು ಥೈರಾಯ್ಡ್ ಸಮಸ್ಯೆಯ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಇದರ ಬಗ್ಗೆ ತಕ್ಷಣ ಗಮನಹರಿಸಬೇಕು. ಇದು ಥೈರಾಯ್ಡ್ ಸಮಸ್ಯೆಯ ಲಕ್ಷಣವಾಗಿದೆ.

ಸ್ನಾಯು ನೋವು

ಸ್ನಾಯು ನೋವು

ಹೈಪೋಥೈರಾಯ್ಡಿಸಮ್ ದೇಹದ ವಿವಿಧ ಭಾಗಗಳಲ್ಲಿ ನೋವು ಉಂಟು ಮಾಡಬಹುದು. ದೇಹದ ವಿವಿಧ ಭಾಗದಲ್ಲಿನ ಸ್ನಾಯುಗಳು ಊದಿಕೊಳ್ಳುವುದು ಮತ್ತು ನರಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು. ಇದು ಥೈರಾಯ್ಡ್ ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.

English summary

Symptoms Of Thyroid Disease That You Must Never Ignore

The thyroid gland is responsible for producing hormones that regulate the metabolism, body temperature and pulse rate. If its work is disrupted by any means, it can lead to severe consequences for your liver, intestines, kidneys and reproductive systems. This gland is tucked away at the front of your neck. Iodine is an essential mineral that is necessary for the synthesis of thyroid hormones and for the normal functioning of the gland. In this article, we'll let you know what are the symptoms of thyroid.
X
Desktop Bottom Promotion