ಉಗುರುಗಳ ಬಣ್ಣದಲ್ಲಿ ಏರುಪೇರಾದರೆ, ಆರೋಗ್ಯದಲ್ಲಿ ಸಮಸ್ಯೆಯಿದೆ ಎಂದರ್ಥ!

By: manu
Subscribe to Boldsky

ಆರೋಗ್ಯವನ್ನು ಪರಿಶೀಲಿಸುವ ವೈದ್ಯರು ಗಮನಿಸುವ ಅಂಗಗಳಲ್ಲಿ ಕಣ್ಣು, ನಾಲಿಗೆಗಳಂತೆ ಉಗುರುಗಳೂ ಒಂದು. ಉಗುರುಗಳ ಕೆಲವು ಲಕ್ಷಣಗಳನ್ನು ಕಂಡ ತಕ್ಷಣ ದೇಹದ ಅನಾರೋಗ್ಯಕ್ಕೆ ಕಾರಣವಾಗಿರುವ ಅಂಶವನ್ನು ವೈದ್ಯರು ಸ್ಥೂಲವಾಗಿ ಅನುಮಾನಿಸಲು ಇದು ನೆರವಾಗುತ್ತದೆ.  ಕಾಲ್ಬೆರಳ ಉಗುರು ಶಿಲೀಂಧ್ರಕ್ಕೆ ಫಲಪ್ರದ ಮನೆಮದ್ದು

ಒಂದು ವೇಳೆ ರೋಗಿಗೆ ಗೊತ್ತೇ ಇಲ್ಲದೇ ಆವರಿಸಿರುವ ಕ್ಯಾನ್ಸರ್ ಅಥವಾ ಬೇರಾವುದೋ ಕಾಯಿಲೆಯನ್ನು ಉಗುರುಗಳು ಪ್ರಕಟಿಸುತ್ತವೆ. ಒಟ್ಟಾರೆಯಾಗಿ ನಮ್ಮ ಆರೋಗ್ಯದ ಸ್ಥಿತಿಯನ್ನು ಸ್ಪಷ್ಟಪಡಿಸುವಲ್ಲಿ ಕಣ್ಣು ನಾಲಿಗೆಗಳಂತೆಯೇ ಉಗುರುಗಳೂ ಪ್ರಮುಖ ಪಾತ್ರ ವಹಿಸುತ್ತವೆ.  

 

ಉಗುರುಗಳು ಸಾಮಾನ್ಯ ಆಕಾರದಲ್ಲಿರದೇ ಬಣ್ಣದಲ್ಲಿ ಬದಲಾವಣೆ, ಒಂದೆಡೆ ಅಗತ್ಯಕ್ಕೂ ಹೆಚ್ಚು ದಪ್ಪನಾಗುವುದು, ಸೀಳುವುದು, ಪರೆ ಏಳುವುದು, ಕುಳಿ ಬೀಳುವುದು, ಎದ್ದು ಬರುವುದು ಮೊದಲಾದವು ಯಕೃತ್, ಮೂತ್ರಪಿಂಡಗಳ ವಿಫಲತೆ, ಹೃದಯದ ತೊಂದರೆ, ಶ್ವಾಸಕೋಶದ ತೊಂದರೆ, ರಕ್ತಹೀನತೆ, ಮಧುಮೇಹ ಮೊದಲಾದವುಗಳನ್ನು ಪ್ರಕಟಿಸುತ್ತದೆ ಆರೋಗ್ಯವಂತ ವ್ಯಕ್ತಿಗಳ ಉಗುರುಗಲು ಪ್ರತಿ ತಿಂಗಳೂ ಸುಮಾರು 3.5 ಮಿಲಿಮೀಟರ್ ನಷ್ಟು ಬೆಳೆಯುತ್ತವೆ.  ಉಗುರುಗಳ ಬಣ್ಣ ಹಳದಿಯಾಗಿದೆಯೇ? ಇಲ್ಲಿದೆ ನೋಡಿ ಟಿಪ್ಸ್

ಆದರೆ ಕೆಲವು ಔಷಧಿಗಳ ಅಡ್ಡಪರಿಣಾಮ, ಮಾನಸಿಕ ಆಘಾತ, ಪೋಷಕಾಂಶಗಳ ಕೊರತೆ, ವಯಸ್ಸಿನ ಮಹಿಮೆ ಮೊದಲಾದವು ಈ ಬೆಳವಣಿಗೆಗೆ ಅಡ್ಡಿ ಪಡಿಸುತ್ತವೆ. ಒಂದು ವೇಳೆ ನಿಮ್ಮ ಉಗುರುಗಳ ಗಾತ್ರ, ಬಣ್ಣ, ಆಕಾರಗಳಲ್ಲಿ ಯಾವುದಾದರೂ ಬದಲಾವಣೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಕಂಡು ಸಲಹೆ ಪಡೆಯಬೇಕು. ಬನ್ನಿ, ಉಗುರುಗಳ ಲಕ್ಷಣಗಳನ್ನು ಕಂಡು ಇದು ಯಾವ ತೊಂದರೆಯ ಕಾರಣದಿಂದ ಬಂದಿರಬಹುದು ಎಂಬುದನ್ನು ಕೆಳಗಿನ ಒಂಬತ್ತು ಮಾಹಿತಿಗಳ ಮೂಲಕ ಅರಿಯೋಣ....   

ಹಳದಿ ಉಗುರುಗಳು

ಹಳದಿ ಉಗುರುಗಳು

ಒಂದು ವೇಳೆ ಉಗುರುಗಳ ಬಣ್ಣ ಹಳದಿಯಾಗಿದ್ದರೆ, ಗರಿಗರಿಯಾಗಿದ್ದು ದಪ್ಪನಾಗಿದ್ದರೆ ಇದು ಶಿಲೀಂಧ್ರದ ಸೋಂಕನ್ನು ಪ್ರಕಟಿಸುತ್ತದೆ. ಕೆಲವೊಮ್ಮೆ ಥೈರಾಯ್ಡ್ ಗ್ರಂಥಿಯ ತೊಂದರೆ, ಮಧುಮೇಹ, ಶ್ವಾಸ ಸಂಬಂಧಿ ತೊಂದರೆಗಳು, ಲೈಂಗಿಕ ಕಾಯಿಲೆಯಾದ ಸೋರಿಯಾಸಿ (psoriasis) ನಂತಹ ಕಾಯಿಲೆಗಳೂ ಹಳದಿ ಉಗುರುಗಳಿಗೆ ಕಾರಣವಾಗಬಹುದು.

ಒಣ, ಸೀಳಿದ ಮತ್ತು ಸುಲಭವಾಗಿ ತುಂಡಾಗುವ ಉಗುರುಗಳು

ಒಣ, ಸೀಳಿದ ಮತ್ತು ಸುಲಭವಾಗಿ ತುಂಡಾಗುವ ಉಗುರುಗಳು

ಒಂದು ವೇಳೆ ನೀವು ಸತತವಾಗಿ ಕೃತಕ ರಾಸಾಯನಿಕಗಳಿಗೆ ಒಡ್ಡಿದ್ದರೆ ಅಥವಾ ಆರ್ದ್ರತೆ ಅತಿ ಕಡಿಮೆ ಇರುವ ಒಣ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಈ ತೊಂದರೆ ಸಾಮಾನ್ಯವಾಗಿದೆ. ಇದರ ಹೊರತಾಗಿಯೂ ಉಗುರುಗಳು ಒಣಗಿದ್ದು, ಸೀಳಿದ್ದರೆ ಅಥವಾ ಸುಲಭವಾಗಿ ತುಂಡಾಗುವಂತಿದ್ದರೆ ಇದು ಶಿಲೀಂಧ್ರದ ಸೋಂಕು, ಥೈರಾಯ್ಡ್ ಗ್ರಂಥಿಯ ಅತಿಹೆಚ್ಚಿನ ಚಟುವಟಿಕೆ (hyperthyroidism) ಸಹಾ ಕಾರಣವಾಗಿರಬಹುದು.

ಮುಂದೆ ಬಾಗಿದ ಉಗುರುಗಳು

ಮುಂದೆ ಬಾಗಿದ ಉಗುರುಗಳು

ಉಗುರುಗಳು ಬೆಳೆದ ಬಳಿಕ ಅಂಚುಗಳಲ್ಲಿ ಕೊಂಚವೇ ನೇರವಾಗಿ ಹೊರಬರುವಷ್ಟಿರಬೇಕು. ಇದು ಆರೋಗ್ಯದ ಲಕ್ಷಣ. ಆದರೆ ಕೆಲವೊಮ್ಮೆ ಇದು ಕೆಳಮುಖವಾಗಿ ಬಾಗಿ ಬೆರಳಿನ ತುದಿಯನ್ನು ಆವರಿಸುವಂತೆ ಮುಂದುವರೆಯುತ್ತದೆ. ಇದು ರಕ್ತದಲ್ಲಿ ಆಮ್ಲಜನಕದ ಕೊರತೆಯ ಸ್ಪಷ್ಟ ಲಕ್ಷಣವಾಗಿದೆ. ಕೆಲವೊಮ್ಮೆ ಇದು ಶ್ವಾಸಕೋಶದ ಕಾಯಿಲೆ, ಹೃದ್ರೋಗ, ಕರುಳುಗಳಲ್ಲಿ ಉರಿ (inflammatory bowel disease), ಮೂತ್ರಪಿಂಡಗಳ ಕಾಯಿಲೆ ಹಾಗೂ ಮಾರಣಾಂತಿಕ ಏಡ್ಸ್ ಕಾಯಿಲೆಯ ಲಕ್ಷಣವೂ ಆಗಿರಬಹುದು.

ಉಗುರುಗಳಲ್ಲಿ ಬಿಳಿಚುಕ್ಕೆಗಳು

ಉಗುರುಗಳಲ್ಲಿ ಬಿಳಿಚುಕ್ಕೆಗಳು

ಚಿಕ್ಕಂದಿನಲ್ಲಿ ಆಕಾಶದಲ್ಲಿ ಹಂಸಗಳು ಹಾರಾಡುತ್ತಾ ಹೋದಾದ ನಾವೆಲ್ಲಾ ಬೆರಳುಗಳನ್ನು ಕೈಮೇಲಕ್ಕೆತ್ತಿ ಹರಡಿ ಆಕಾಶಕ್ಕೆ ತೋರಿಸುತ್ತಿದ್ದೆವು. ಹೀಗೆ ಮಾಡುವುದರಿಂದ ಹಂಸ ಉಗುರುಗಳಲ್ಲಿ ಮೊಟ್ಟೆ ನೀಡುತ್ತವೆ ಎಂದು ನಮ್ಮ ನಂಬಿಕೆಯಾಗಿತ್ತು. ಕೆಲ ದಿನಗಳ ಬಳಿಕ ಕೆಲವರ ಉಗುರುಗಳಲ್ಲಿ ಮೊಟ್ಟೆಗಳೂ ಬರುತ್ತಿದ್ದವು. ಹೀಗೆ ಬಂದವರೇ ಅದೃಷ್ಟವಂತರು, ಇವರಿಗೆ ಅತಿ ಹೆಚ್ಚು ಅಂಕಗಳು ದೊರಕುತ್ತವೆ ಎಂದು ಭಾವಿಸಿದ್ದೆವು. ಆದರೆ ವಾಸ್ತವದಲ್ಲಿ ಈ ಚುಕ್ಕೆಗಳು ಅಥವಾ ಮೊಟ್ಟೆಗಳು ಬೆರಳಿಗೆ ಆದ ಪೆಟ್ಟು ಅಥವಾ ಶಿಲೀಂಧ್ರದ ಸೋಂಕಾಗಿದ್ದು ಇದನ್ನು ಸರ್ವಥಾ ನಿರ್ಲಕ್ಷಿಸಬಾರದು.

ಚಮಚದ ಆಕೃತಿ ಪಡೆಯುವುದು

ಚಮಚದ ಆಕೃತಿ ಪಡೆಯುವುದು

ಒಂದು ವೇಳೆ ಉಗುರು ಬೆಳೆಯುತ್ತಾ ಮೇಲ್ಮುಖವಾಗಿ ಎದ್ದುಬಿಟ್ಟರೆ ಇದು ಚಿಕ್ಕ ಚಮಚದ ರೂಪ ಪಡೆಯುತ್ತದೆ. ಇದು ಕಬ್ಬಿಣದ ಕೊರತೆಯ ಸ್ಪಷ್ಟ ಸಂಕೇತವಾಗಿದೆ. ಅಥವಾ ಹೃದಯದ ಕಾಯಿಲೆ ಅಥವಾ ಥೈರಾಯ್ಡ್ ಗ್ರಂಥಿಯ ಅತಿಹೆಚ್ಚಿನ ಚಟುವಟಿಕೆ (hyperthyroidism)ಯ ಲಕ್ಷಣವೂ ಆಗಿರಬಹುದು.

ಉಗುರಿನ ಬಣ್ಣ ಗಾಢವಾಗುವುದು

ಉಗುರಿನ ಬಣ್ಣ ಗಾಢವಾಗುವುದು

ಒಂದು ವೇಳೆ ಬಣ್ಣ ಗಾಢಕಪ್ಪು ಅಥವಾ ಗಾಢಕಂದು ಬಣ್ಣಕ್ಕೆ ತಿರುಗಿದರೆ ಇದು ಮೆಲನೋಮಾ (melanoma) ಎಂಬ ಚರ್ಮದ ಕ್ಯಾನ್ಸರ್ ನ ಸಂಕೇತವಾಗಿರಬಹುದು. ತಡಮಾಡದೇ ವೈದ್ಯರನ್ನು ಕಾಣುವುದು ಅನಿವಾರ್ಯ

ಕುಳಿ ಬೀಳುವುದು

ಕುಳಿ ಬೀಳುವುದು

ಒಂದು ವೇಳೆ ಉಗುರಿನ ಮೇಲ್ಭಾಗ ಕೊಂಚವೇ ಕುಸಿದಂತೆ ಒಂದು ಅಥವಾ ಒಂದಕ್ಕಿಂತಲೂ ಹೆಚ್ಚು ಕುಳಿಗಳು ಬಿದ್ದಿದ್ದರೆ ಇದು ಸೋರಿಯಾಸಿಸ್ (psoriasis) ಎಂಬ ಚರ್ಮವ್ಯಾಧಿಯ ಲಕ್ಷಣವಾಗಿರಬಹುದು. ಅಥವಾ ಚರ್ಮ ಮತ್ತು ಉಗುರನ್ನು ಬೆಸೆಯುವ ಅಂಗಾಂಶದ ತೊಂದರೆಯೂ (connective tissue disorder) ಆಗಿರಬಹುದು.

ನೀಳ ಗೀರುಗಳು

ನೀಳ ಗೀರುಗಳು

ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆಯೇ ಉಗುರುಗಳಲ್ಲಿ ನೇರವಾದ ಗುರುತುಗಳು ಮೂಡುತ್ತವೆ. ಸಾಮಾನ್ಯವಾಗಿ ಇವು ಪೋಷಕಾಂಶಗಳ ಕೊರತೆಯನ್ನು ಪ್ರಕಟಿಸುತ್ತವೆ. ವಿಶೇಷವಾಗಿ ಮೆಗ್ನೀಶಿಯಂ ಅಥವಾ ವಿಟಮಿನ್ B12 ನ ಕೊರತೆಯನ್ನು ತೋರುತ್ತವೆ.

ಅಡ್ಡಗೀರುಗಳು

ಅಡ್ಡಗೀರುಗಳು

ಇದು ಮಧುಮೇಹಿಗಳಲ್ಲಿ ಸಾಮಾನ್ಯವಾಗಿದ್ದು ಮಧುಮೇಹವನ್ನು ನಿಯಂತ್ರಣದಲ್ಲಿಡದ ಸ್ಥಿತಿಯನ್ನು ಪ್ರಕಟಿಸುತ್ತವೆ. ಉಳಿದಂತೆ ಸತುವಿನ ಕೊರತೆ, ರಕ್ತಪರಿಚಲನೆಯ ಕಾಯಿಲೆ ಅಥವಾ ಸೋರಿಯಾಸಿಸ್ ಚರ್ಮವ್ಯಾಧಿಯ ಲಕ್ಷಣವೂ ಆಗಿರಬಹುದು.

 
English summary

Symptoms Of Nails And What They Could Indicate About Your Health

The colour, texture and shape of the nails can all signify something about your health and about the things that happen inside your body, which you should never ignore. Some of the nail symptoms can be a sign of chronic disease or even cancer. Nails are known to reflect the general state of our health.
Story first published: Saturday, March 11, 2017, 23:31 [IST]
Subscribe Newsletter