For Quick Alerts
ALLOW NOTIFICATIONS  
For Daily Alerts

ತುಳಸಿ ಚಹಾ: ಸ್ವಾದದ ಜೊತೆ ಆರೋಗ್ಯದ ಭಾಗ್ಯ

By Arshad
|

ತುಳಸಿಯ ಎಲೆಯ ಪರಿಮಳವನ್ನು ಆಸ್ವಾದಿಸಿದ ತಕ್ಷಣ ಒಹೋ ಇದೊಂದು ಔಷಧೀಯ ಗುಣವುಳ್ಳ ಎಲೆ ಎಂದು ಯಾರಿಗಾದರೂ ಅನ್ನಿಸುತ್ತದೆ. ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದ ಈ ಎಲೆಯನ್ನು ಔಷಧೀಯ ರೂಪದಲ್ಲಿ ಬಳಸುತ್ತಾ ಬಂದಿದೆ. ಆರೋಗ್ಯವೇ ಭಾಗ್ಯ ಎನ್ನುವುದು ಸಾರ್ವಕಾಲಿಕ ಸತ್ಯವಾಗಿದ್ದು ಇಂದಿನ ದಿನದಲ್ಲಿ ಸೌಲಭ್ಯಗಳು ಹೆಚ್ಚಿದಂತೆ ಅನಾರೋಗ್ಯವೂ ಹೆಚ್ಚುತ್ತಿರುವುದು ನಾಗರಿಕತೆಯ ವ್ಯಂಗ್ಯವೂ ಹೌದು. ಗರ್ಭಾವಸ್ಥೆಯ ಸಮಯದಲ್ಲಿ ತುಳಸಿ ಚಹಾ ಏಕೆ ಮಹತ್ವಪೂರ್ಣ?

ಇಂದು ಆರೋಗ್ಯ ಉಳಿಸಿಕೊಳ್ಳುವುದು ಎಂದರೆ ದೊಡ್ಡ ಬಾಬ್ತಿನ ಖರ್ಚು ಎಂದೇ ಅರ್ಥ. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಸರ್ಗದ ಮೊರೆ ಹೋಗುವುದು ಸುರಕ್ಷಿತವೂ, ಅಗ್ಗವೂ ಹೌದು. ಈ ನಿಟ್ಟಿನಲ್ಲಿ ತುಳಸಿ ಟೀ ಪ್ರಮುಖ ಪಾತ್ರ ವಹಿಸುತ್ತದೆ. ದಿನನಿತ್ಯ ತುಳಸಿ ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ

ಇಂದು ತುಳಸಿ ಟೀ ಸಿದ್ಧ ರೂಪದಲ್ಲಿ ಆಯುರ್ವೇದ ಅಂಗಡಿಗಳಲ್ಲೂ, ಇತರ ಪ್ರಮುಖ ಅಂಗಡಿಗಳಲ್ಲಿಯೂ ಲಭ್ಯವಿದೆ. ಈ ಟೀ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ

ತುಳಸಿ ಟೀ ಯನ್ನು ಸಕ್ಕರೆ ಇಲ್ಲದೇ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ಇದರಲ್ಲಿರುವ polyunsaturated ಕೊಬ್ಬಿನ ಆಮ್ಲಗಳು ಈ ಕೆಲಸಕ್ಕೆ ಪೂರಕವಾಗಿವೆ.

ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ

ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ

ತುಳಸಿಯಲ್ಲಿರುವ ಪೊಟ್ಯಾಶಿಯಂ ರಕ್ತದಲ್ಲಿ ಸೆರೋಟೋನಿನ್ ಎಂಬ ಕಿಣ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಮೆದುಳಿಗೆ ತಲುಪಿಸಲು ನೆರವಾಗುವ ಮೂಲಕ ಖಿನ್ನತೆ, ಉದಾಸೀನತೆ ಮೊದಲಾದ ಭಾವಾತ್ಮಕ ತೊಂದರೆಗಳನ್ನು ನಿವಾರಿಸುತ್ತದೆ.

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ತುಳಸಿ ಟೀ ಯನ್ನು ನಿಯಮಿತವಾಗಿ ಕುಡಿಯುತ್ತಾ ಬರುವ ಮೂಲಕ ಚರ್ಮದಲ್ಲಿ ನೆರಿಗೆಗಳು ಮೂಡುವ ಪ್ರಕ್ರಿಯೆಯನ್ನು ಮುಂದೂಡಿ ವೃದ್ಧಾಪ್ಯವನ್ನು ತಡವಾಗಿಸಬಹುದು. ತುಳಸಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವಕೋಶಗಳಿಗೆ ಅಗತ್ಯವಾದ ಪೋಷಣೆಯನ್ನು ನೀಡುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಫ್ಲೂ ಜ್ವರವನ್ನು ಕಡಿಮೆಗೊಳಿಸುತ್ತದೆ

ಫ್ಲೂ ಜ್ವರವನ್ನು ಕಡಿಮೆಗೊಳಿಸುತ್ತದೆ

ತುಳಸಿಯಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ಹಾಲಿನಲ್ಲಿರುವ ಗಾಯವನ್ನು ವಾಸಿಯಾಗಿಸುವ ಗುಣಗಳು ಮೇಳೈಸಿದಾಗ ಫ್ಲೂ ಜ್ವರದ ವೈರಸ್ ಗಳ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುತ್ತದೆ. ಒಂದೇ ದಿನದಲ್ಲಿ ಬಿಸಿಯಾಗಿದ್ದ ದೇಹ ಸಾಮಾನ್ಯ ತಾಪಮಾನಕ್ಕಿಳಿಯುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ತುಳಸಿಯಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ಇವುಗಳಲ್ಲಿ ಯೂಜಿನಾಲ್ (eugenol) ಎಂಬುದು ಹೃದಯವನ್ನು ಬಲಪಡಿಸಲು ಮತ್ತು ಆರೋಗ್ಯಕರವಾಗಿರಿಸಲು ಅತ್ಯಂತ ಸೂಕ್ತವಾಗಿದೆ. ಅಲ್ಲದೇ ಹಾಲಿನಲ್ಲಿರುವ ಪೋಷಕಾಂಶಗಳು ಎಲ್ಲಾ ಅಂಗಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುವ ಮೂಲಕ

ಆರೋಗ್ಯವನ್ನು ವೃದ್ಧಿಸುತ್ತದೆ.

ತುಳಸಿ ಚಹಾವನ್ನು ತಯಾರಿಸುವುದು ಹೇಗೆ

ತುಳಸಿ ಚಹಾವನ್ನು ತಯಾರಿಸುವುದು ಹೇಗೆ

ಒಂದು ಕಪ್‌ನಷ್ಟು ತುಳಸಿ ಚಹಾವನ್ನು ತಯಾರಿಸುವುದು ಕಷ್ಟದ ಕೆಲಸವೇನಲ್ಲ. ಕೆಲವರ ಮನೆಯಲ್ಲಿ ಧಾರ್ಮಿಕ ನಂಬಿಕೆಗಳಿಗಾಗಿ ಪೂಜೆ ಪುನಸ್ಕಾರಕ್ಕಾಗಿ ತುಳಸಿ ಗಿಡವನ್ನು ಬೆಳೆಸಿರುತ್ತಾರೆ. ತುಳಸಿ ಗಿಡವನ್ನು ತಮ್ಮ ಮನೆಗಳಲ್ಲಿ ಹೊಂದಿರದೇ ಇರುವವರು ಪೂರ್ವ ಪ್ಯಾಕೇಜ್ ಮಾಡಿದ ಅಥವಾ ಒಣಗಿದ ತುಳಸಿ ಎಲೆಯನ್ನು ಮಾರುಕಟ್ಟೆಯಿಂದ ಖರೀದಿಸಬೇಕಾಗುತ್ತದೆ. ಈ ಚಹಾವನ್ನು ತಯಾರಿಸಲು, ಒಂದು ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ ಮತ್ತು ತುಳಸಿ ಚಹಾದ ಬ್ಯಾಗ್ ಅನ್ನು ಇದಕ್ಕೆ ಮುಳುಗಿಸಿ. ಐದು ನಿಮಿಷಗಳ ಕಾಲ ಇದನ್ನು ಹಾಗೆಯೇ ಇರಿಸಿ. ಪೂರ್ವವಾಗಿ ಪ್ಯಾಕ್ ಮಾಡಿದ ಚಹಾವನ್ನು ನೀವು ಬಳಸುತ್ತಿಲ್ಲವೆಂದಾದಲ್ಲಿ, ತಾಜಾ ತುಳಸಿ ಎಲೆಗಳನ್ನು ಕಿತ್ತುಕೊಳ್ಳಿ ಮತ್ತು ಇದನ್ನು ಕಪ್‌ನಷ್ಟು ನೀರಿನಲ್ಲಿ ಕವರ್ ಮಾಡಿಕೊಳ್ಳಿ. ಎರಡು ನಿಮಿಷಗಳಷ್ಟು ಕಾಲ ಈ ಎಲೆಗಳು ನೀರಿನಲ್ಲಿರಲಿ.

English summary

Surprising Health Benefits Of Drinking Tulsi Tea

Even in the ancient medicinal system of Ayurveda, tulsi is one of the most commonly used herbs during the preparation of medicines. We all realise how important it is to stay healthy, because, spending our precious time and hard earned money on doctors can be rather painful! So, for ailments that can be treated right at home, naturally, it is best to use natural remedy. Tulsi tea
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more