ನಾಲ್ಕೇ ನಾಲ್ಕು ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರ....

By: manu
Subscribe to Boldsky

ಒಣಫಲಗಳನ್ನು ಊಟದ ಬಳಿಕ ಕೆಲವನ್ನಾದರೂ ತಿನ್ನುವುದು ಉತ್ತಮ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿಯೇ ಇರುತ್ತೀರಿ. ಒಣಫಲಗಳ ಪೋಷಕಾಂಶಗಳು ಅವು ಹಸಿಯಾಗಿದ್ದಾಗ ಗರಿಷ್ಠವಾಗಿದ್ದರೂ ಇವು ಎಲ್ಲೆಡೆ ಸುಲಭವಾಗಿ ಸಿಗದ ಕಾರಣ ಒಣಗಿಸಿ ಕೆಡದಂತೆ ಸಂರಕ್ಷಿಸಿಡಬಹುದಾದುದರಿಂದ ಒಣರೂಪದಲ್ಲಿಯೇ ಹೆಚ್ಚು ಜನಪ್ರಿಯವಾಗಿವೆ. ಬಾದಾಮಿ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು! 

ಪ್ರಸ್ತುತ ಲಭ್ಯವಿರುವ ಒಣಫಲಗಳಲ್ಲಿಯೇ ಅತ್ಯಂತ ಆರೋಗ್ಯಕರ ಮತ್ತು ಅತಿ ಹೆಚ್ಚಿನ ಪೌಷ್ಟಿಕಾಂಶವುಳ್ಳ ಹಾಗೂ ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಒಣಫಲವೆಂದರೆ ಬಾದಾಮಿ. ಈ ಫಲವನ್ನೂ ನೆನೆಸಿಟ್ಟು ಮೆದುವಾದ ಬಳಿಕ ಸೇವಿಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ. ನಾವು ಮೊಳಕೆ ಬರಿಸಲು ಧಾನ್ಯಗಳನ್ನು ನೆನೆಸಿಟ್ಟ ಬಳಿಕ ಆ ಧಾನ್ಯಗಳಲ್ಲಿನ ಪೌಷ್ಟಿಕಾಂಶ ಹೆಚ್ಚುವುದಿಲ್ಲವೇ, ಅದೇ ರೀತಿ ಬಾದಾಮಿಯಲ್ಲಿಯೂ ಪೋಷಕಾಂಶಗಳು ಹೆಚ್ಚುತ್ತವೆ.  ದಿನಕ್ಕೆ ಒಂದೆರಡು 'ನೆನೆಸಿಟ್ಟ ಬಾದಾಮಿ' ಸೇವಿಸಿ-ಆರೋಗ್ಯ ಪಡೆಯಿರಿ

ಅದರಲ್ಲೂ ಬಾದಾಮಿಯ ಗರಿಷ್ಠ ಪ್ರಯೋಜನ ಪಡೆಯಲು ಪ್ರತಿದಿನ ರಾತ್ರಿ ನಾಲ್ಕು ಬಾದಾಮಿಗಳನ್ನು ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಸಿಪ್ಪೆಸಹಿತ ತಿನ್ನುವುದರಿಂದ ಪಡೆಯಬಹುದು... ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ...  

 

ಆರೋಗ್ಯವಂತ ಹೃದಯ

ಆರೋಗ್ಯವಂತ ಹೃದಯ

ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಅಸಂತುಲಿತ ಕೊಬ್ಬು, ಪ್ರೋಟೀನು ಮತ್ತು ಪೊಟ್ಯಾಶಿಯಂ ಇದ್ದು ಇವು ಹೃದಯಕ್ಕೆ ಉತ್ತಮವಾಗಿವೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಇ ಹೃದಯದ ಕಾಯಿಲೆಗಳನ್ನು ದೂರವಿರಿಸುತ್ತದೆ ಹಾಗೂ ಮೆಗ್ನೀಶಿಯಂ ಹೃದಯಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ

ಶಕ್ತಿಯನ್ನು ಹೆಚ್ಚಿಸುತ್ತದೆ

ಪ್ರತಿದಿನ ಬೆಳಿಗ್ಗೆ ನೆನೆಸಿಟ್ಟ ಬಾದಾಮಿಗಳ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಶಕ್ತಿ ಉತ್ಪತ್ತಿಯಾಗಲು ನೆರವಾಗುತ್ತದೆ ಹಾಗೂ ಇದರಲ್ಲಿರುವ ಮ್ಯಾಂಗನೀಸ್, ತಾಮ್ರ ಮತ್ತು ರೈಬೋಫ್ಲೋವಿನ್ ಗಳ ಮೂಲಕ ಜೀವರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಬಾದಾಮಿಯಲ್ಲಿರುವ ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತವೆ.

ಮೆದುಳಿಗೂ ಉತ್ತಮವಾಗಿದೆ

ಮೆದುಳಿಗೂ ಉತ್ತಮವಾಗಿದೆ

ಬಾದಾಮಿಗಳಲ್ಲಿ ಪೋಷಕಾಂಶಗಳ ಭಂಡಾರವೇ ಇರುವ ಕಾರಣ ಇದು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ. ಇದರಲ್ಲಿರುವ ರೈಬೋಫ್ಲೇವಿನ್ ಮತ್ತು ಎಲ್-ಕಾರ್ನೈಟ್ ಎಂಬ ಪೋಷಕಾಂಶಗಳು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ.

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ಬಾದಾಮಿಯಲ್ಲಿರುವ ಪೊಟ್ಯಾಶಿಯಂ ರಕ್ತದ ಒತ್ತಡವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಇದರಲ್ಲಿ ಅತಿ ಕಡಿಮೆ ಪ್ರಮಾಣದ ಸೋಡಿಯಂ ಇದ್ದು ರಕ್ತದ ಒತ್ತಡವನ್ನು ಸಮರ್ಪಕ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ

ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯ೦ತ್ರಿಸುತ್ತದೆ

ಕಡಿಮೆ ಕ್ಯಾಲರಿವುಳ್ಳ ಆಹಾರದೊ೦ದಿಗೆ ನೆನೆಸಿಟ್ಟಿರುವ ಬಾದಾಮಿ ಕಾಳುಗಳನ್ನು ಸೇವಿಸಿದಲ್ಲಿ, ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ೦ಶ, ಇನ್ಸುಲಿನ್ ನ ಅ೦ಶ, ಹಾಗೂ ಸೋಡಿಯ೦ ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ೦ಭಾವ್ಯವನ್ನು ನಿಯ೦ತ್ರಿಸಬಲ್ಲ ಮೆಗ್ನೀಷಿಯ೦ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಅಪರೂಪವಾಗಿರುವ ವಿಟಮಿನ್ B17 ಎಂಬ ಪೋಷಕಾಂಶ ಬಾದಾಮಿಯಲ್ಲಿದ್ದರೂ ನೆನೆಸಿಟ್ಟ ಬಳಿಕವೇ ಲಭ್ಯವಾಗುತ್ತದೆ. ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದ್ದು ಪ್ರತಿದಿನವೂ ನಾಲ್ಕಾರು ನೆನೆಸಿಟ್ಟ ಬಾದಾಮಿಗಳನ್ನು ತಿನ್ನುವ ಮೂಲಕ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷಣೆ ಪಡೆಯಬಹುದು.

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು

ಹುಟ್ಟಿನಿಂದ ಬರುವ ಊನಗಳಿಂದ ರಕ್ಷಣೆ ಪಡೆಯಬಹುದು ನೆನೆಸಿಟ್ಟ ಬಾದಾಮಿಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಫೋಲಿಕ್ ಆಮ್ಲ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ವಿಶೇಷವಾಗಿ ಗರ್ಭಿಣಿಯರಿಗೆ ಅತಿ ಉತ್ತಮವಾಗಿದ್ದು ಇದರಿಂದ ಹುಟ್ಟುವ ಮಗು ಯಾವುದೇ ಊನವಿಲ್ಲದೇ ಆರೋಗ್ಯಕರವಾಗಿ ಜನಿಸಲು ನೆರವಾಗುತ್ತದೆ.

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ ಬಾದಾಮಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣ ನೆನೆಸಿದ ಬಳಿಕ ಇನ್ನಷ್ಟು ಹೆಚ್ಚುವ ಕಾರಣ ದೇಹದಲ್ಲಿ ಕ್ಯಾನ್ಸರ್‪ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಲು ದೇಹ ಹೆಚ್ಚಿನ ಸಾಮರ್ಥ್ಯ ಪಡೆಯುತ್ತದೆ. ಇದು ಚರ್ಮದಲ್ಲಿ ನೆರಿಗೆ ಮೂಡುವುದನ್ನುತಡವಾಗಿಸಿ ವೃದ್ಧಾಪ್ಯವನ್ನೂ ತಡವಾಗಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ

ಕೆಲವು ಸಂಶೋಧನೆಗಳ ಮೂಲಕ ನೆನೆಸಿಟ್ಟ ಬಾದಾಮಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದೆಂಬುದನ್ನು ಕಂಡುಕೊಳ್ಳಲಾಗಿದೆ.

English summary

Soak 4 Almonds Overnight & Eat It The Next Morning

Eat four soaked almonds every morning and experience its abundant health benefits. Read this article to know what are the benefits of eating soaked almonds....
Subscribe Newsletter