ಮನೆ ಔಷಧ: ಮಾಸಿಕ ಋತುಚಕ್ರದ ನೋವಿಗೆ ಶೀಘ್ರ ಪರಿಹಾರ...

By: manu
Subscribe to Boldsky

ಮಾಸಿನ ದಿನಗಳಲ್ಲಿ ಕೆಲವು ಮಹಿಳೆಯರಿಗೆ ಅತಿಹೆಚ್ಚಿನ ದಿನಗಳ ಕಾಲ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ದೈಹಿಕವಾಗಿಯೂ ಮಾನಸಿಕವಾಗಿಯೂ ಇವರು ನಿತ್ರಾಣರಾಗಿ ಉತ್ಸಾಹವನ್ನೇ ಕಳೆದುಕೊಂಡಿರುತ್ತಾರೆ. ಋತುಮತಿ ಆದ ದಿನದಿಂದ ಹಿಡಿದು ರಜೋನಿವೃತ್ತಿಯವರೆಗೆ ನಡೆಯುವ ಈ ಪ್ರಕೃತಿನಿಯಮದಲ್ಲಿ ಫಲಿತಗೊಳ್ಳದ ಅಂಡಾಣು ದೇಹದಿಂದ ಹೊರದಬ್ಬಲ್ಪಡುವುದೇ ಈ ಕ್ರಿಯೆಯಾಗಿದೆ.

ಈ ಅವಧಿಯಲ್ಲಿ ಗರ್ಭಕೋಶದ ಒಳಭಾಗದ ಪದರಗಳು ವಿಸರ್ಜಿಸಲ್ಪಟ್ಟು ಹೊಸ ಜೀವಕೋಶಗಳು ಇವುಗಳನ್ನು ಬದಲಿಸಿ ಹೊಸ ಅಂಡಾಣುವಿಗೆ ಸ್ಥಳವನ್ನು ಸಿದ್ಧಪಡಿಸುತ್ತದೆ. ಮುಟ್ಟಿನ ನೋವಿಗೆ ಸಾಂತ್ವನ ನೀಡುವ ನುಗ್ಗೆ ಸೊಪ್ಪಿನ ಜ್ಯೂಸ್ 

ಈ ಕೆಲಸ ಸಾಮಾನ್ಯವಾಗಿ ಪ್ರತಿ ಇಪ್ಪತ್ತೆಂಟರಿಂದ ಮೂವತ್ತಾರು ದಿನಗಳಿಗೊಂದು ಬಾರಿ ಸಂಭವಿಸುತ್ತಿದ್ದು ಕೆಲವರಲ್ಲಿ ಇದು ಹೆಚ್ಚೂ ಕಡಿಮೆಯಾಗುತ್ತದೆ. ಈ ಹಳೆಯ ಜೋವಕೋಶಗಳು ಹೊರಹರಿಯಲು ಹೆಚ್ಚಿನ ರಕ್ತಸ್ರಾವದ ಅಗತ್ಯವಿದ್ದು ಸುಮಾರು ಮೂರರಿಂದ ಐದು ದಿನಗಳ ಕಾಲ ಈ ಕ್ರಿಯೆ ನಡೆಯುತ್ತದೆ.  

periods pain women

ಈ ಅವಧಿಯಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ನೋವು, ರಸದೂತಗಳ ಸ್ರಾವದ ಕಾರಣ ಮನೋಭಾವದಲ್ಲಿ ಬದಲಾವಣೆ, ಸಿಟ್ಟು, ಸಿಡುಕು ಮೊದಲಾದವು ಕಾಣಿಸಿಕೊಳ್ಳುತ್ತವೆ.  ಕೆಲವು ಮಹಿಳೆಯರಿಗೆ ಈ ನೋವು ವಿಪರೀತವಾಗಿ ಕಾಡುತ್ತದೆ ಹಾಗೂ ಈ ನೋವಿನಿಂದ ಬಿಡುಗಡೆ ಪಡೆಯಲು ನೋವು ನಿವಾರಕ ಗುಳಿಗೆಗಳಿಗೆ ಮೊರೆ ಹೋಗುತ್ತಾರೆ.

ಆದರೆ ಇದು ತಾತ್ಕಾಲಿಕವಾಗಿ ನೋವಿಗೆ ಶಮನ ನೀಡಿದರೂ ಸತತ ಬಳಕೆಯಿಂದ ಹಾನಿಯನ್ನು ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ನಿಸರ್ಗ ನೀಡಿರುವ ಈ ನೋವಿಗೆ ನಿಸರ್ಗವೇ ನೀಡಿರುವ ಪರಿಹಾರವನ್ನು ಪಡೆಯುವುದೇ ಜಾಣತನದ ಕ್ರಮವಾಗಿದೆ. ಬನ್ನಿ, ನಿಸರ್ಗ ನೀಡಿರುವ ಒಂದು ಪರಿಹಾರವನ್ನು ಅನುಸರಿಸುವ ಬಗೆಯನ್ನು ನೋಡೋಣ: ಮುಟ್ಟಿನ ಹೊಟ್ಟೆ ನೋವಿನಿಂದ ಮುಕ್ತಿ ಹೇಗೆ?    

beetroot juice
 

ಅಗತ್ಯವಿರುವ ಸಾಮಾಗ್ರಿಗಳು

*ಬೀಟ್ರೂಟ್ ರಸ: ಅರ್ಧ ಕಪ್

*ಜೀರಿಗೆ ಪುಡಿ: ಒಂದು ಚಿಕ್ಕ ಚಮಚ

*ಬೀಟ್ರೂಟಿನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಆಂಟಿ ಆಕ್ಸಿಡೆಂಟುಗಳು ಉತ್ತಮ ಪ್ರಮಾಣದಲ್ಲಿದ್ದು ಇದು ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಿ ಈ ರಕ್ತವನ್ನು ಗರ್ಭಾಶಯಕ್ಕೆ ತಲುಪುವಂತೆ ಮಾಡುವ ಮೂಲಕ ಉರಿಯೂತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಉರಿಯೂತ ಮತ್ತು ಸೋಂಕು ಕಡಿಮೆಯಾದರೆ ನೋವು ಸಹಾ ಕಡಿಮೆಯಾಗುತ್ತದೆ.  

jeera powder
 

*ಜೀರಿಗೆಯಲ್ಲಿರುವ ಕ್ಯೂಮೀನಿಯಂ ಎಂಬ ಪೋಷಕಾಂಶಕ್ಕೆ ಉರಿಯೂತ ನಿವಾರಣೆಯ ಗುಣವನ್ನು ಹೊಂದಿದ್ದು ಇದರ ಸೇವನೆಯಿಂದ ಶ್ವಾಸಕೋಶದ ಉರಿಯೂತವನ್ನು ಕಡಿಮೆಗೊಳಿಸುತ್ತದೆ.

ತಯಾರಿಕಾ ವಿಧಾನ

*ಇವೆರಡೂ ಸಾಮಾಗ್ರಿಗಳನ್ನು ಒಂದು ಲೋಟದಲ್ಲಿ ಹಾಕಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.  

Periods pain

*ಈ ಪೇಯವನ್ನು ನೋವಿರುವ ದಿನಗಳಲ್ಲಿ ಪ್ರತಿದಿನ ಬೆಳಗ್ಗಿನ ಉಪಾಹಾರದ ಬಳಿಕ ಕುಡಿಯಿರಿ.

ಬರೆಯ ಈ ದಿನಗಳಲ್ಲಿ ಮಾತ್ರವಲ್ಲ, ಮುಂದಿನ ಬಾರಿಯ ಮುಟ್ಟಿನಲ್ಲಿಯೂ ನೋವು ಕಡಿಮೆ ಇರಲು ಈ ಪೇಯವನ್ನು ನಿತ್ಯವೂ ಉಪಾಹಾರದ ಬಳಿಕ ಕುಡಿಯಬಹುದು.

English summary

Say Goodbye To Menstrual Pain With This Beetroot Remedy!

A lot of women experience unbearable pain during periods and resort to taking painkillers, which can damage their health in the long run. It is always best to try natural remedies to ease menstrual pain, so here is an exceptional home remedy that can help you!
Story first published: Saturday, March 18, 2017, 23:31 [IST]
Subscribe Newsletter