For Quick Alerts
ALLOW NOTIFICATIONS  
For Daily Alerts

ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

By Arshad
|

ನಿಸರ್ಗ ಈ ಜಗತ್ತಿನ ಎಲ್ಲಾ ಜೀವಿಗಳಿಗೆ ಸಂತಾನೋತ್ಪತ್ತಿಯ ಮೂಲಕ ವಂಶಾಭಿವೃದ್ದಿ ಹಾಗೂ ಸಂಕುಲವನ್ನು ಉಳಿಸಿಕೊಳ್ಳಲು ಲೈಂಗಿಕ ಕ್ರಿಯೆಯನ್ನು ಜೀವನದ ಒಂದು ಭಾಗವಾಗಿ ಒದಗಿಸಿದೆ. ಒಂದು ವೇಳೆ ಲೈಂಗಿಕ ಕ್ರಿಯೆಯನ್ನು ಕೇವಲ ಸಂತೋಷಪಡೆಯುವ ಒಂದು ಕ್ರಿಯೆ ಮಾತ್ರವೇ ಎಂದು ತಿಳಿದುಕೊಂಡಿದ್ದವರಿಗೆ ನಿರಾಶೆಯ ಸುದ್ದಿ ಇದೆ. ಲೈಂಗಿಕ ಕ್ರಿಯೆ ಎಲ್ಲಾ ವಯಸ್ಕರಿಗೆ ಉತ್ತಮವಾದದ್ದು ಮಾತ್ರವಲ್ಲ, ನಿತ್ಯದ ಲೈಂಗಿಕ ಕ್ರಿಯೆ ಇನ್ನೂ ಉತ್ತಮ. ಇದರಿಂದ ಗಾಢನಿದ್ದೆ, ಒತ್ತಡದಿಂದ ಮುಕ್ತಿ ಹಾಗೂ ಕ್ಯಾಲೋರಿಗಳನ್ನು ದಹಿಸಿ ತೂಕದಲ್ಲಿ ಹೆಚ್ಚಳವಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಿಲನಕ್ಕೂ ಮುನ್ನ, ಅಪ್ಪಿತಪ್ಪಿಯೂ ಇಂತಹ ಆಹಾರಗಳನ್ನು ಸೇವಿಸಬೇಡಿ

ಇತ್ತೀಚಿನ ಒಂದು ಅಧ್ಯಯನದಲ್ಲಿ ವಾರಕ್ಕೆರಡು ಬಾರಿ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವ ಪುರುಷರಲ್ಲಿ ಹೃದಯಸ್ತಂಭದನ ಸಾಧ್ಯತೆ ತಿಂಗಳಿಗೊಂದಕ್ಕೂ ಕಡಿಮೆ ಬಾರಿ ಭಾಗವಹಿಸುವ ಪುರುಷರಿಗಿಂತ ಕಡಿಮೆ ಇರುತ್ತದೆ. ಅಷ್ಟೇ ಅಲ್ಲ, ಈ ಕ್ರಿಯೆ ನಿಯಮಿತವಾಗಿದ್ದಷ್ಟೂ ದೇಹದಲ್ಲಿ immune-boosting antibody immunoglobulin A (IgA) ಅಥವಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಣಗಳು ಹೆಚ್ಚುತ್ತವೆ ಹಾಗೂ ವೈರಸ್ ಆಧಾರಿತ ಸಾಮಾನ್ಯ ರೋಗಗಳಾದ ಜ್ವರ ಶೀತ ನೆಗಡಿಗಳಿಂದ ರಕ್ಷಿಸಿಕೊಳ್ಳಲು ದೇಹ ಇನ್ನಷ್ಟು ಸಬಲವಾಗುತ್ತದೆ. ಬನ್ನಿ, ಆರೋಗ್ಯಕರ ಲೈಂಗಿಕ ಜೀವನದ ಮಹತ್ವಗಳನ್ನು ಅರಿಯೋಣ....

ಒತ್ತಡ ಕಡಿಮೆಯಾಗಿಸುತ್ತದೆ

ಒತ್ತಡ ಕಡಿಮೆಯಾಗಿಸುತ್ತದೆ

ಸಾಮಾನ್ಯವಾಗಿ ನಾವೆಲ್ಲರೂ ಕೆಲಸದ ಅಥವಾ ಕೌಟುಂಬಿಕ ಕಾರಣಗಳಿಂದ ಕೆಲವು ಒತ್ತಡದಲ್ಲಿ ಇರುತ್ತೇವೆ. ಕೊಂಚ ಮಟ್ಟಿನ ಒತ್ತಡ ಉದ್ಯೋಗದಲ್ಲಿ ಮುನ್ನಡೆಗೆ ಅಗತ್ಯ ಕೂಡಾ! ಆದರೆ ಇದರಿಂದ ನಿಮ್ಮ ಲೈಂಗಿಕ ಜೀವನ ಬಾಧೆಗೊಳಗಾಗಬಾರದು. ನಿಯಮಿತವಾದ ಲೈಂಗಿಕ ಕ್ರಿಯೆಯಿಂದ ಮನೋಭಾವ ಉತ್ತಮಗೊಳ್ಳುವುದು ಮಾತ್ರವಲ್ಲ, ಕೆಲಸ ಹಾಗೂ ಕೌಟುಂಬಿಕ ಒತ್ತಡಗಳನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಬಲ್ಲರು.

ತಲೆನೋವನ್ನು ಕಡಿಮೆಗೊಳಿಸುತ್ತದೆ

ತಲೆನೋವನ್ನು ಕಡಿಮೆಗೊಳಿಸುತ್ತದೆ

ಒಂದು ವೇಳೆ ನಿಮಗೆ ಸತತವಾಗಿ ತಲೆನೋವು ಕಾಡುತ್ತಿದ್ದರೆ ಇದನ್ನೇ ನೆಪವಾಗಿಸಿ ಲೈಂಗಿಕ್ ಕ್ರಿಯೆಗೆ ರಜೆ ಹಾಕುವುದನ್ನು ನಿಲ್ಲಿಸಿ. ಬದಲಿಗೆ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಿ. ಏಕೆಂದರೆ ಕಾಮೋತ್ಕಟತೆಯ ಸಮಯದಲ್ಲಿ ದೇಹದಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಸ್ರವಿಸುವ ಪ್ರಮಾಣ ಐದು ಪಟ್ಟು ಹೆಚ್ಚುತ್ತದೆ. ಇದು ಮನೋಭಾವವನ್ನು ಉತ್ತಮಗೊಳಿಸುತ್ತದೆ ಹಾಗೂ ನರಗಳನ್ನು ಸಡಿಲಿಸಿ ಹೆಚ್ಚಿನ ರಕ್ತಸಂಚಾರ ಹರಿಸುವ ಮೂಲಕ ತಲೆನೋವಿನ ಸಹಿತ ಹಲವಾರು ನೋವುಗಳನ್ನು ಕಡಿಮೆ ಮಾಡುತ್ತದೆ.

ರಕ್ತಸಂಚಾರ ಹೆಚ್ಚಿಸುತ್ತದೆ

ರಕ್ತಸಂಚಾರ ಹೆಚ್ಚಿಸುತ್ತದೆ

ಕಾಮಕೇಳಿಯ ಸಮಯದಲ್ಲಿ ಹೃದಯದ ಬಡಿತ ಹೆಚ್ಚುತ್ತದೆ ಹಾಗೂ ಮೆದುಳು ಮತ್ತು ಜನನಾಂಗಗಳಿಗೆ ತಲುಪುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಅಷ್ಟೇ ಅಲ್ಲ, ಹೊಸರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ತನ್ಮೂಲಕ ಹಳೆಯ ರಕ್ತ ಹಿಂದಿರುಗಿ ಕಲ್ಮಶಗಳನ್ನು ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ಕಲ್ಮಶಗಳು ದೇಹದಿಂದ ನಿವಾರಣೆಯಾಗುತ್ತದೆ. ಈ ಕಲ್ಮಶಗಳ ಹೊರೆಯಿಂದ ದೇಹ ಅನಗತ್ಯವಾಗಿ ಸುಸ್ತು ಅನುಭವಿಸುತ್ತಿರುತ್ತದೆ. ಈಗ ಈ ಕಲ್ಮಶಗಳು ನಿವಾರಣೆಯಾಗಿರುವ ಕಾರಣ ದೇಹ ಹಾಗೂ ಮನಸ್ಸು ಉಲ್ಲಸಿತವಾಗಿರುತ್ತದೆ.

ಗಾಢ ನಿದ್ದೆ ಆವರಿಸುತ್ತದೆ

ಗಾಢ ನಿದ್ದೆ ಆವರಿಸುತ್ತದೆ

ಹೌದು, ನೀವು ಸರಿಯಾಗಿಯೇ ಓದಿದಿರಿ. ನಿದ್ದೆ ಬರದೇ ಇದ್ದರೆ ಇನ್ನು ಮೇಲೆ ನಿದ್ದೆಮಾತ್ರೆ ಸೇವಿಸಬೇಕಾಗಿಲ್ಲ! ಬದಲಿಗೆ ಈ ಕ್ರಿಯೆಯ ಮೂಲಕ ಬಿಡುಗಡೆಯಾಗುವ ಆಕ್ಸಿಟೋಸಿನ್ ಹಾಗೂ ಪ್ರೋಲ್ಯಾಕ್ಟಿನ್ ಎಂಬ ರಸದೂತಗಳು ಮೆದುಳಿಗೆ ಹೆಚ್ಚಿನ ನಿರಾಳತೆ ನೀಡಿ ಗಾಢ ನಿದ್ದೆ ಆವರಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಹೆಚ್ಚಿನ ದಂಪತಿಗಳು ಲೈಂಗಿಕ ಕ್ರಿಯೆಯ ಬಳಿಕ ಗಾಢ ನಿದ್ದೆಗೆ ಜಾರುವುದನ್ನೇ ಹೆಚ್ಚಾಗಿ ಆಯ್ಕೇ ಮಾಡಿಕೊಳ್ಳುತ್ತಾರೆ.

ವೃದ್ಧಾಪ್ಯ ದೂರಾಗುತ್ತದೆ

ವೃದ್ಧಾಪ್ಯ ದೂರಾಗುತ್ತದೆ

ಸುಮಾರು ಹತ್ತು ವರ್ಷಗಳ ಕಾಲ ವಾರದಲ್ಲಿ ಎರಡು ಬಾರಿಯಾದರೂ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ದಂಪತಿಗಳಲ್ಲಿ ಸಾವಿಗೀಡಾಗುವ ಪ್ರಮಾಣ ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ದಂಪತಿಗಳಿಗಿಂತ ಶೇಖಡಾ ಐವತ್ತರಷ್ಟು ಕಡಿಮೆ ಇರುತ್ತದೆ ಎಂದು ಒಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಏಕೆಂದರೆ ಲೈಂಗಿಕ ಕ್ರಿಯೆಯ ಬಳಿಕ ದೇಹದದಲ್ಲಿ ಹೆಚ್ಚಾಗುವ ಟೆಸ್ಟೋಸ್ಟೆರಾನ್ ಹಾಗೂ ಆಮ್ಲಜನಕ ವೃದ್ಧಾಪ್ಯವನ್ನು ತಡವಾಗಿಸುವ ಗುಣ ಹೊಂದಿದೆ.

ಲೈಂಗಿಕ ಕ್ರಿಯೆಯಿಂದ ಪಡೆಯುವ ಆತ್ಮವಿಶ್ವಾಸ ಹೆಚ್ಚು ಹಣ ಸಂಪಾದಿಸಲು ನೆರವಾಗುತ್ತದೆ

ಲೈಂಗಿಕ ಕ್ರಿಯೆಯಿಂದ ಪಡೆಯುವ ಆತ್ಮವಿಶ್ವಾಸ ಹೆಚ್ಚು ಹಣ ಸಂಪಾದಿಸಲು ನೆರವಾಗುತ್ತದೆ

ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಮೆದುಳನ್ನು ಆಧರಿಸಿದ ಕೆಲಸಗಳನ್ನು ಮಾಡಬೇಕಾಗುತ್ತದೆ ಹಾಗೂ ಕೆಲಸದಲ್ಲಿ ನೈಪುಣ್ಯತೆ ಪ್ರಕಟಿಸಿ ವೇತನ ಹೆಚ್ಚಿಸಿಕೊಳ್ಳಲು ಒತ್ತಡವನ್ನು ಎದುರಿಸುವ ಕ್ಷಮತೆಯನ್ನು ಪಡೆಯಬೇಕಾಗುತ್ತದೆ. ಕನಿಷ್ಟ ಹದಿನೈದು ದಿನಕ್ಕೊಂದು ಬಾರಿಯಾದರೂ ಲೈಂಗಿಕ ಕ್ರಿಯೆಯಲ್ಲಿ ಒಳಗೊಂಡ ದಂಪತಿಗಳು ತಮ್ಮ ವೃತ್ತಿಸಂಬಂಧಿತ ಮಾತುಕತೆಗಳಲ್ಲಿ ಇನ್ನಷ್ಟು ಉತ್ತಮವಾಗಿ ತಮ್ಮ ವಿಚಾರಗಳನ್ನು ಮಂಡಿಸಲು ಹಾಗೂ ಒತ್ತಡದ ಸಮಯದಲ್ಲಿ ಶೀಘ್ರವೇ ನಿರಾಳರಾಗುವುದನ್ನು ಅಧ್ಯಯನಗಳು ದೃಢೀಕರಿಸಿವೆ. ಇದರಿಂದ ಹೆಚ್ಚು ಆತ್ಮವಿಶ್ವಾಸದಿಂದ ಮುನ್ನುಗ್ಗಲು ಹಾಗೂ ಹೆಚ್ಚು ಹಣ ಸಂಪಾದಿಸಲು ನೆರವಾಗುತ್ತದೆ.

ಕ್ಯಾನ್ಸರ್ ಗೆ ಗುಡ್ ಬೈ ಹೇಳಲು ಹೆಚ್ಚಿನ ಕಾಮೋತ್ಕಟಯೇ ಸಾಕು

ಕ್ಯಾನ್ಸರ್ ಗೆ ಗುಡ್ ಬೈ ಹೇಳಲು ಹೆಚ್ಚಿನ ಕಾಮೋತ್ಕಟಯೇ ಸಾಕು

ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳ ಸಂಗ್ರಹ ಹೆಚ್ಚಿದಷ್ಟೂ ವಿವಿಧ ಅಂಗಗಳು ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ನಮ್ಮ ದೇಹದಿಂದ ಕಲ್ಮಶಗಳನ್ನು ನಿಯಮಿತವಾಗಿ ಹೊರಹಾಕಿ ದೇಹದ ಒಳಭಾಗವನ್ನು ಸ್ವಚ್ಛಗೊಳಿಸುತ್ತಲೇ ಇರಬೇಕು. the journal of the American Medical Association ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ಪ್ರತಿತಿಂಗಳೂ ಸುಮಾರು ಇಪ್ಪತ್ತೊಂದು ಸ್ಖಲನಗಳ ಸುಖವನ್ನನುಭವಿಸಿದ ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ನಾಲ್ಕರಿಂದ ಏಳು ಸ್ಖಲನಗಳನ್ನು ಪಡೆದ ಪುರುಷರಿಗಿಂತ ಕಡಿಮೆ ಇರುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಲೈಂಗಿಕ ಕ್ರಿಯೆ ಒಂದು ಉತ್ತಮ ವ್ಯಾಯಾಮವೂ ಹೌದು. ಹೊಟ್ಟೆಯ ಕೊಬ್ಬನ್ನು ಇಳಿಸುವ ನಿಮ್ಮ ವ್ಯಾಯಾಮ ಹಾಗೂ ಇತರ ಕ್ರಮಗಳಿಗೆ ಲೈಂಗಿಕ ಕ್ರಿಯೆ ಖಂಡಿತಾ ಬೆಂಬಲ ನೀಡುತ್ತದೆ. ನಿಯಮಿತವಾದ ಲೈಂಗಿಕ ಕ್ರಿಯೆಯಿಂದ ವಿಶೇಷವಾಗಿ ಸೊಂಟದ ಕೊಬ್ಬು ಹೆಚ್ಚುಕರಗುತ್ತದೆ. ಸುಮಾರು ಅರ್ಧ ಘಂಟೆಯ ಲೈಂಗಿಕ ಕ್ರಿಯೆಯಿಂದ ಎಂಭತ್ತಕ್ಕೂ ಹೆಚ್ಚು ಕ್ಯಾಲೋರಿಗಳು ದಹಿಸಲ್ಪಡುತ್ತವೆ. ಇಷ್ಟೇ ಕ್ಯಾಲೋರಿಗಳನ್ನು ದಹಿಸಲು ಸಾಮಾನ್ಯ ವೇಗದಲ್ಲಿ ಸುಮಾರು ಅರ್ಧಘಂಟೆಗೂ ಹೆಚ್ಚು ಕಾಲ ಜಾಗಿಂಗ್ ಮಾಡಬೇಕಾಗುತ್ತದೆ.

ಮನೋಭಾವವನ್ನು ಉತ್ತಮಗೊಳಿಸುತ್ತದೆ

ಮನೋಭಾವವನ್ನು ಉತ್ತಮಗೊಳಿಸುತ್ತದೆ

ಮಹಿಳೆಯರಲ್ಲಿ ಈಸ್ಟ್ರೋಜೆನ್ ಹಾಗೂ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ರಸದೂತಗಳು ಲೈಂಗಿಕ ಕ್ರಿಯೆಯ ಮೂಲಕ ಹೆಚ್ಚು ಸ್ರವಿಸಲ್ಪಡುತ್ತವೆ ಹಾಗೂ ಇವೇ ಮನೋಭಾವವನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಇದರಿಂದ ಲೈಂಗಿಕ ಕ್ರಿಯೆ ಸುಖದಾಯಕ, ಆತ್ಮೀಯವೆನಿಸುವುದು ಮಾತ್ರವಲ್ಲ, ದೇಹದ ಸ್ನಾಯು ಹಾಗೂ ಮೂಳೆಗಳೂ ಹೆಚ್ಚು ಬಲಿಷ್ಟವಾಗುತ್ತವೆ. ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟವೂ ನಿಯಂತ್ರಣದಲ್ಲಿರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈಸ್ಟ್ರೋಜೆನ್ ಮಹಿಳೆಯರ ದೇಹದ ವಾಸನೆಯನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತದೆ ಹಾಗೂ ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ.

English summary

Reasons you should have sex everyday

If you thought that the only benefit of sex was, well, pleasure, here's some news for you. Making love is good for adults. And making love regularly is even better. Not only does it help you sleep well, relieve stress and burn calories, there are also several other reasons why you need to have sex more often. Improves cardiovascular health A recent study says that men who have sex more than twice a week, have a lesser risk of getting a heart attack, than men who had sex less than once a month.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more