For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರದ ಜೊತೆ, ಒಂದು ಕಪ್ 'ಗ್ರೀನ್ ಟೀ' ಸೇವಿಸಿ...

By Manu
|

ಇತ್ತೀಚಿನವರೆಗೂ ಭಾರತದಲ್ಲಿ ಹಸಿರು ಚಹಾ ಅಥವಾ ಗ್ರೀನ್ ಟೀ ಎಂಬ ಪೇಯವಿದೆ ಎಂದೇ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಇತ್ತೀಚೆಗೆ ಹೆಚ್ಚಿನ ಬಳಕೆಗೆ ಬಂದ ಟೀ ಆರೋಗ್ಯಕರ ಎಂದು ಪ್ರಚಾರ ಪಡೆದುಕೊಳ್ಳುತ್ತಿದೆ. ಸುಖಾಸುಮ್ಮನೇ ಜಾಹೀರಾತಿನಲ್ಲಿ ಹೇಳುವುದನ್ನು ನಂಬದ ವಿಜ್ಞಾನಿಗಳು ಈ ಟೀ ಸೇವನೆ ನಿಜವಾಗಿಯೂ ಆರೋಗ್ಯಕರವೇ ಎಂಬ ವಿಷಯದ ಮೇಲೆ ಹಲವು ಸಂಶೋಧನೆಗಳನ್ನು ನಡೆಸಿ ಈ ವಿಷಯಗಳೆಲ್ಲಾ ಸತ್ಯ ಎಂದು ಒಂದೊಂದಾಗಿ ಸಾಬೀತುಗೊಳುಸುತ್ತಾ ಬಂದಿದ್ದಾರೆ. ನಿಯಮಿತವಾಗಿ ಗ್ರೀನ್ ಟೀ ಸೇವನೆ-ಆರೋಗ್ಯಕ್ಕೆ ಬಹಳ ಒಳ್ಳೆಯದು

ಇನ್ನೂ ಈ ಸಂಶೋಧನೆಗಳು ಮುಂದುವರೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಷಯಗಳು ತಿಳಿಯಲಿವೆ. ಇದುವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಈ ಪೇಯವನ್ನು ನಿತ್ಯದ ಉಪಹಾರದ ಅಂಗವಾಗಿಸಿದರೆ ಖಂಡಿತವಾಗಿಯೂ ಹಲವಾರು ಪ್ರಯೋಜನಗಳಿವೆ. ಹಸಿರು ಟೀ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬ ವಿಷಯದ ಮೇಲೆ ಇಂದಿನ ಲೇಖನವನ್ನು ಸಿದ್ಧಪಡಿಸಲಾಗಿದೆ. ಆರೋಗ್ಯದ ವಿಷಯದಲ್ಲಿ ಗ್ರೀನ್ ಟೀ ಎಂದಿಗೂ ಎವರ್ ಗ್ರೀನ್!

ಹಸಿರು ಟೀ ಯಲ್ಲಿರುವ ಫ್ಲೇವನಾಯ್ಡುಗಳು ಹಸಿರು ಸಸ್ಯಗಳಲ್ಲಿ ಹೇರಳವಾಗಿದ್ದು ಸಸ್ಯಗಳನ್ನು ಹಲವು ರೀತಿಯಲ್ಲಿ ಕಾಪಾಡುತ್ತವೆ. ಇವು ಒಂದು ರೀತಿಯಲ್ಲಿ ನಮ್ಮ ದೇಹಕ್ಕೆ ಆಂಟಿ ಆಕ್ಸಿಡೆಂಟುಗಳ ರೂಪದಲ್ಲಿ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ. ಬನ್ನಿ, ಹೆಚ್ಚಿನ ವಿವರಗಳನ್ನು ಈಗ ನೋಡೋಣ....

ಕೊಬ್ಬನ್ನು ಕರಗಿಸುತ್ತದೆ

ಕೊಬ್ಬನ್ನು ಕರಗಿಸುತ್ತದೆ

ಹಸಿರು ಟೀ ಸೇವನೆಯ ಪ್ರಮುಖ ಪ್ರಯೋಜನವೆಂದರೆ ಕೊಬ್ಬಿನ ಕರಗಿಸುವಿಕೆ. ಹಸಿರು ಟೀ ಯಲ್ಲಿರುವ ಕೆಲವು ಪೋಷಕಾಂಶಗಳು ಜೀವರಾಸಾಯನಿಕ ಕ್ರಿಯೆಯನ್ನು ತೀವ್ರಗೊಳಿಸುವ ಮೂಲಕ ಇದಕ್ಕೆ ಅಗತ್ಯವಿರುವ ಕೊಬ್ಬನ್ನು ಹೆಚ್ಚು ದಹಿಸುವ ಮೂಲಕ ನೈಸರ್ಗಿಕವಾಗಿ ಕರಗಿಸುತ್ತದೆ ಎಂದು ಸಂಶೋಧನೆಗಳೇ ತಿಳಿಸುತ್ತಿವೆ.

ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಲು!

ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಲು!

ಹಸಿರು ಟೀ ಯಲ್ಲಿರುವ ಕ್ಯಾಟೆಚಿನ್ ಎಂಬ ಪೋಷಕಾಂಶ ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಮರ್ಥವಾಗಿದೆ.

ದೇಹದಾರ್ಢ್ಯತೆ ಹೆಚ್ಚಿಸುತ್ತದೆ

ದೇಹದಾರ್ಢ್ಯತೆ ಹೆಚ್ಚಿಸುತ್ತದೆ

ನಿಯಮಿತವಾಗಿ ಹಸಿರು ಟೀ ಕುಡಿಯುವ ಅಭ್ಯಾಸ ಹೊಂದಿರುವ ವ್ಯಕ್ತಿಗಳ ದೇಹದಾರ್ಢ್ಯತೆ ಮತ್ತು ಆರೋಗ್ಯ ಉತ್ತಮವಾಗಿರುವುದನ್ನು ಗಮನಿಸಬಹುದು. ಮುಂಜಾವಿನ ಉಪಾಹಾರದೊಂದಿಗೆ ಒಂದು ಹಸಿರು ಟೀ ಸೇವಿಸಿ ದಿನದ ಇತರ ಹೊತ್ತಿನಲ್ಲಿ ಹಲವು ಕಪ್ ಹಸಿರು ಟೀ ಸೇವಿಸುವ ಮೂಲಕ ದಿನದ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿ ದೊರಕುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ನಿಮಗೆ ಸದಾ ಅಲರ್ಜಿಗಳು ಅಥವಾ ಶೀತ ಮೊದಲಾದ ಚಿಕ್ಕಪುಟ್ಟ ತೊಂದರೆಗಳು ಸದಾ ಕಾಡುತ್ತಿರುತ್ತವೆಯೇ? ಸಾಮಾನ್ಯವಾಗಿ ಧೂಳು, ಹೂವಿನ ಪರಾಗ ಮೊದಲಾದವುಗಳಿಗೆ ಅಲರ್ಜಿ ಹೊಂದಿರುವ ವ್ಯಕ್ತಿಗಳು ಹಸಿರು ಟೀ ಸೇವಿಸುವ ಮೂಲಕ ಇದರ ತೊಂದರೆಗಳಿಂದ ಮುಕ್ತಿ ಪಡೆದಿರುವುದನ್ನು ಸಂಶೋಧನೆಗಳು ಪ್ರಕಟಿಸಿವೆ. ಹಸಿರು ಟೀ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿರುವುದನ್ನು ಈ ಸಂಶೋಧನೆಗಳು ಸ್ಪಷ್ಟಪಡಿಸಿವೆ.

ಸ್ಮರಣಶಕ್ತಿ ಹೆಚ್ಚಿಸುತ್ತದೆ

ಸ್ಮರಣಶಕ್ತಿ ಹೆಚ್ಚಿಸುತ್ತದೆ

ಸಂಶೋಧನೆಗಳಲ್ಲಿ ಕಂಡುಕೊಂಡ ಪ್ರಕಾರ ಹಸಿರು ಟೀ ಸೇವನೆಯಿಂದ ಸ್ಮರಣಶಕ್ತಿ ಮತ್ತು ಜಾಗೃತ ಶಕ್ತಿಯೂ ಹೆಚ್ಚುತ್ತರೆ.

ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ

ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ

ಹಸಿರು ಟೀಯಲ್ಲಿರುವ EGCG (Epigallocatechin gallate (EGCG), ಅಥವಾ epigallocatechin-3-gallate) ಎಂಬ ಪೋಷಕಾಂಶಗಳು ದೇಹದಲ್ಲಿ ಕ್ಯಾನ್ಸರ್ ಗೆ ತುತ್ತಾಗಿರುವ ಜೀವಕೋಶಗಳ ಬೆಳವಣಿಗೆಯನ್ನು ಉಳಿದ ಜೀವಕೋಶಗಳ ಮೇಲೆ ಪ್ರಭಾವ ಬೀಳದಂತೆ ಕುಂಠಿತಗೊಳಿಸುತ್ತದೆ ಹಾಗೂ ಕ್ಯಾನ್ಸರ್‌ಗೆ ತುತ್ತಾದ ಜೀವಕೋಶಗಳನ್ನು ನಷ್ಟಗೊಳಿಸಿ ಮಾರಕ ಕಾಯಿಲೆಯಿಂದ ರಕ್ಷಿಸುತ್ತದೆ.

ತಲೆನೋವನ್ನು ನಿವಾರಿಸಲು

ತಲೆನೋವನ್ನು ನಿವಾರಿಸಲು

ಹಸಿರು ಚಹಾ ಹಸಿರು ಚಹಾ (ಗ್ರೀನ್ ಟೀ) ಯಲ್ಲಿ ಒಂದು ನಿರ್ಧಾರಿತ ಪ್ರಮಾಣದ ಕೆಫೀನ್ ಇದ್ದು ಇದು ಎಲ್ಲಾ ತರಹದ ತಲೆನೋವುಗಳನ್ನು ನಿವಾರಿಸಲು ಅತ್ಯಂತ ಸೂಕ್ತವಾದ ಪ್ರಮಾಣವಾಗಿದೆ. ಹಸಿರು ಟೀಯಲ್ಲಿ ಹಾಲಿಲ್ಲದೇ ಕೊಂಚವೇ ಸಕ್ಕರೆ ಸೇರಿಸಿ ಕುಡಿಯಬಹುದು ಅಥವಾ ಕೊಂಚ ಲಿಂಬೆರಸ ಸೇರಿಸುವುದರಿಂದ ರುಚಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆಯೂ ಹೆಚ್ಚುತ್ತದೆ.

ಹೊಟ್ಟೆ ನೋವಿನ ಶಮನಕ್ಕಾಗಿ

ಹೊಟ್ಟೆ ನೋವಿನ ಶಮನಕ್ಕಾಗಿ

ಹೊಟ್ಟೆ ನೋವಿನ ಶಮನಕ್ಕಾಗಿ ಹೊಟ್ಟೆ ನೋವಿಗಾಗಿ ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಅಷ್ಟೇ ಅಲ್ಲದೆ ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ನಮ್ಮ ದೇಹದಲ್ಲಿ ಯಾವುದೋ ಮಾಯೆಯಿಂದ ಒಳಪ್ರವೇಶಿಸಿ ವಿಶೇಷವಾಗಿ ಹಲ್ಲು ಮತ್ತು ಗಂಟಲಿನೊಳಗೆ ಮನೆ ಮಾಡಿಕೊಂಡು ಹಬ್ಬ ಆಚರಿಸುತ್ತಿರುವ ವಿವಿಧ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿಯೂ ಹಸಿರು ಟೀ ಮಹತ್ವದ ಪಾತ್ರ ವಹಿಸುತ್ತದೆ.

English summary

Reasons You Should Drink Green Tea At Breakfast

Here are a number of evidences that exemplify the health edge of green tea. The health edge of green tea is mainly due to the large quantity of flavonoids, a kind of compound found in all plants which help protect them from harm. Flavonoids are considered as antioxidants, the important factor why green tea extract excels in delivering health advantages. have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more