For Quick Alerts
ALLOW NOTIFICATIONS  
For Daily Alerts

ತಲೆನೋವು ಬಂದರೆ, ಹೀಗೆ ಮಾಡಿ -15 ನಿಮಿಷಗಳಲ್ಲಿ ಕಡಿಮೆಯಾಗುತ್ತದೆ!

ತಲೆನೋವು ಬಂದರೆ ಮಾತ್ರೆ ನುಂಗಿ ಸುಮ್ಮೆನಿದ್ದು ಬಿಡುತ್ತೇವೆ. ಮಾತ್ರೆಯ ಪ್ರಭಾವ ಕಮ್ಮಿಯಾದ ನಂತರ ಪುನಃ ತಲೆನೋವು ಕಾಣಿಸಿಕೊಳ್ಳುತ್ತದೆ. ಆದರೆ ಮಾತ್ರೆ ನುಂಗುವುದು ಒಳ್ಳೆಯ ಅಭ್ಯಾಸವಲ್ಲ. ಮಾತ್ರೆಯ ಬದಲು,ಕೆಲವೊಂದು ಟ್ರಿಕ್ಸ್ ಬಳಸಿ, ತಲೆ ನೋವು

By Hemanth
|

ಕಲುಷಿತ ವಾತಾವರಣ, ಒತ್ತಡದ ಜೀವನ ಶೈಲಿ ಹಾಗೂ ಇನ್ನಿತರ ಹಲವಾರು ಕಾರಣಗಳಿಂದಾಗಿ ನಮಗೆ ಆಗಾಗ ತಲೆನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ. ಕೆಲವು ಸಲ ತಲೆನೋವು ಒಂದು ದಿನದಲ್ಲಿ ಕಡಿಮೆಯಾಗುತ್ತದೆ. ಇನ್ನು ಕೆಲವೊಮ್ಮೆ ತಲೆನೋವು ಪದೇ ಪದೇ ಕಾಡುತ್ತಾ ಇದ್ದರೆ ಅದಕ್ಕೆ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ತಲೆನೋವು ಎಂದು ಕಡೆಗಣಿಸಿದರೆ ಅದರಿಂದ ಬೇರೆ ಕೆಟ್ಟ ಪರಿಣಾಮಗಳು ಉಂಟಾಗಬಹುದು. ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!

ಇದರಿಂದ ತಲೆನೋವಿನ ಬಗ್ಗೆಯೂ ನಿರ್ಲಕ್ಷ್ಯ ವಹಿಸದೆ ಪರೀಕ್ಷೆ ಮಾಡಿಸಿಕೊಳ್ಳಿ. ಆದರೆ ಸಣ್ಣ ಮಟ್ಟದ ತಲೆನೋವಿಗೆ ವೈದ್ಯರಲ್ಲಿ ಹೋಗದೆ ಮನೆಯಲ್ಲೇ ಕೆಲವೊಂದು ಚಿಕಿತ್ಸೆಗಳನ್ನು ಮಾಡಬಹುದು. ಒತ್ತಡದ ಜೀವನದಿಂದ ತಲೆನೋವು ಕಾಡುತ್ತದೆ. ಮನೆ ಔಷಧ: ಮಾತ್ರೆ ಇಲ್ಲದೇ ತಲೆನೋವು ಮಾಯ!
ಒತ್ತಡವನ್ನು ಕಡಿಮೆ ಮಾಡಿಕೊಂಡು ಆರಾಮ ಮಾಡಬೇಕು. ತಲೆನೋವಿಗೆ ಮಾತ್ರೆಗಳನ್ನು ಸೇವಿಸಿದರೆ ಅದರಿಂದ ಅಡ್ಡಪರಿಣಾಮ ಖಚಿತ. ಇದರಿಂದ ಆಕ್ಯುಪ್ರೆಷರ್ ನಿಂದ ತಲೆನೋವನ್ನು ಕಡಿಮೆ ಮಾಡಬಹುದು. ಅದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ....

ಟಿಪ್ಸ್ #1

ಟಿಪ್ಸ್ #1

ಕೆಲವೊಂದು ಆಕ್ಯುಪ್ರೆಷರ್ ವಿಧಾನಗಳು ಮಾತ್ರೆಗಳು ಇಲ್ಲದೆ ತಲೆನೋವನ್ನು ಶಮನ ಮಾಡುತ್ತದೆ. ಸೈನಸ್ ಪ್ರದೇಶದಲ್ಲಿ ತಲೆನೋವಿದ್ದರೆ ಬೆರಳ ತುದಿಗೆ ಮಸಾಜ್ ಮಾಡಿ. ಉಗುರು ಇರುವ ಪ್ರದೇಶದಲ್ಲಿ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.

ಟಿಪ್ಸ್ #2

ಟಿಪ್ಸ್ #2

ಹೆಬ್ಬೆರಳನ್ನು ಬಿಟ್ಟು ಎಲ್ಲಾ ಬೆರಳುಗಳ ತುದಿಯನ್ನು ಮಸಾಜ್ ಮಾಡಿ. ಇದರಿಂದ ತಲೆನೋವು ನಿಧಾನವಾಗಿ ಕಡಿಮೆಯಾಗುವುದು.

ಟಿಪ್ಸ್ #3

ಟಿಪ್ಸ್ #3

ತೋರು ಬೆರಳು ಮತ್ತು ಹೆಬ್ಬೆರಳು ನಡುವೆ ಇರುವಂತಹ ಚರ್ಮವನ್ನು ಒತ್ತಿಕೊಳ್ಳಿ. ಹಂತಹಂತವಾಗಿ ಈ ಪ್ರದೇಶದಲ್ಲಿ ಒತ್ತಡವನ್ನು ಹೆಚ್ಚಿಸಿ. ಒತ್ತಡದಿಂದ ಬರುವಂತಹ ಸಣ್ಣಮಟ್ಟದ ತಲೆನೋವನ್ನು ಈ ವಿಧಾನವು ಕಡಿಮೆ ಮಾಡುತ್ತದೆ.

ಟಿಪ್ಸ್ #4

ಟಿಪ್ಸ್ #4

ಅಂಗೈಗೆ ಮಸಾಜ್ ಮಾಡುವುದರಿಂದ ಒತ್ತಡವು ಕಡಿಮೆಯಾಗುವುದು. ಎರಡು ಅಂಗೈಗಳಿಗೆ ಮಸಾಜ್ ಮಾಡಿಕೊಳ್ಳಬೇಕು.

ಟಿಪ್ಸ್ #5

ಟಿಪ್ಸ್ #5

ಯಾವುದೇ ಒತ್ತಡವನ್ನು ಹಾಕುತ್ತಾ ಇದ್ದರೆ ಆ ಪ್ರದೇಶದಲ್ಲಿ ಎರಡು ನಿಮಿಷ ಕಾಲ ಒತ್ತಡ ಹಾಕಿ. ನಿಮಗೆ ಕಿರಿಕಿರಿಯಾಗುವ ತನಕ ಹೀಗೆ ಮಾಡಿ. ಬಳಿಕ ಬಿಟ್ಟುಬಿಡಿ. 2-3 ಸಲ ಹೀಗೆ ಮಾಡಿ.

ಟಿಪ್ಸ್#6

ಟಿಪ್ಸ್#6

ಬೆರಳುಗಳಿಗೆ ಮಸಾಜ್ ಮಾಡಿಕೊಳ್ಳುವಾಗ ತುಂಬಾ ನಿಶ್ಯಬ್ಧವಾಗಿರುವ ಜಾಗದಲ್ಲಿ ನೀವು ಕುಳಿತುಕೊಳ್ಳಬೇಕು. ಒಳ್ಳೆಯ ಫಲಿತಾಂಶಕ್ಕಾಗಿ ಕೋಣೆಯ ಲೈಟ್ ತೆಗೆದು ಕೈಬೆರಳಿಗೆ ಮಸಾಜ್ ಮಾಡಿ. ಇದರಿಂದ ಮಸಾಜ್ ಕಡೆ ಗಮನಹರಿಸಲು ಸಾಧ್ಯವಾಗುತ್ತದೆ.

English summary

Press Here And Get Rid Of Headache!

Though there are many ways to relax, one particular acupressure technique is said to work well in getting rid of such a headache. To try this out, you just need to massage your fingers using the fingers of the other hand.
Story first published: Friday, April 14, 2017, 19:58 [IST]
X
Desktop Bottom Promotion