For Quick Alerts
ALLOW NOTIFICATIONS  
For Daily Alerts

'ದಾಳಿಂಬೆ ಸಿಪ್ಪೆಯ' ಗುಣ ಗೊತ್ತಾದರೆ, ಬಿಸಾಡಲು ಮನಸ್ಸು ಬರಲ್ಲ!

By Hemanth
|

ನಮ್ಮ ಕವಿಗಳು ಸುಂದರವಾದ ಹಲ್ಲುಗಳನ್ನು ದಾಳಿಂಬೆ ಹಣ್ಣಿನ ಕಾಳುಗಳಿಗೆ ಹೋಲಿಸಿ ಕಾವ್ಯದ ಸೊಗಸನ್ನು ಹೆಚ್ಚಿಸುತ್ತಾರೆ. ಇಲ್ಲಿ ಕಾಳುಗಳ ಹೊಳಪು ಹಲ್ಲುಗಳಿಗೆ ಉಪಮೇಯವಾಗಿದೆಯೇ ಹೊರತು ಕಾಳಿನ ಇತರ ಆರೋಗ್ಯಕರ ಗುಣಗಳಲ್ಲ. ದಾಳಿಂಬೆಯನ್ನು ಸ್ವರ್ಗಲೋಕದ ಹಣ್ಣು ಎಂದು ಕುರಾನ್ ನಲ್ಲಿಯೂ ಪ್ರಸ್ತಾಪಿಸಲಾಗಿದೆ. ದಾಳಿಂಬೆ ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿಯೂ ಉಪಕಾರಿಯಾಗಿದೆ. ಚರ್ಮದ ಕಾಂತಿ, ಕೋಮಲತೆಗಾಗಿ - ದಾಳಿಂಬೆ ಜ್ಯೂಸ್

ಸಾಮಾನ್ಯವಾಗಿ ದಾಳಿಂಬೆಯ ಸಿಪ್ಪಿ ಮತ್ತು ಕಾಳುಗಳು ಕುಳಿತಿರುವ ತಿರುಳು ಕಹಿಯಾಗಿರುವುದರಿಂದ ನಾವು ಅದನ್ನು ಬಳಸದೇ ತ್ಯಾಜ್ಯದಲ್ಲಿ ಎಸೆಯುತ್ತೇವೆ. ಆದರೆ ಹಣ್ಣಿನಂತೆಯೇ ಈ ಸಿಪ್ಪೆ ಮತ್ತು ತಿರುಳಿನಲ್ಲಿಯೂ ಹಲವು ಔಷಧೀಯ ಗುಣಗಳಿರುವುದು ನಿಮಗೆ ಗೊತ್ತಿತ್ತೇ? ಸರ್ವತೋಮುಖ ಆರೋಗ್ಯಕ್ಕಾಗಿ ದಾಳಿಂಬೆ ಸೇವಿಸಿ ನೋಡಿ!

ಹೌದು, ಈ ಸಿಪ್ಪೆ ನಮ್ಮ ನಾಲಿಗೆಗೆ ರುಚಿಯಾಗಿಲ್ಲದಿದ್ದರೂ, ಚರ್ಮ, ಕೂದಲುಗಳಿಗೆ ಅತ್ಯುತ್ತಮವಾಗಿದೆ. ಮುಂದಿನ ದಾಳಿಂಬೆಯ ಸಿಪ್ಪೆಯನ್ನು ಎಸೆಯುವ ಮುನ್ನ ಕೊಂಚ ಯೋಚಿಸಲು ಇಲ್ಲಿ ನೀಡಿರುವ ಮಾಹಿತಿಗಳು ನಿಮ್ಮ ನೆರವಿಗೆ ಬರುತ್ತವೆ.... ಮುಂದೆ ಓದಿ...

ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯಕ್ಕೆ

ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿರುವ ಪ್ರಮುಖ ಆರೋಗ್ಯ ಲಾಭವೆಂದರೆ ಇದು ಹೃದಯದ ಕಾಯಿಲೆ ವಿರುದ್ಧ ಹೋರಾಡುತ್ತದೆ. ದಾಳಿಂಬೆ ಸಿಪ್ಪೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್, ಫ್ರೀ ರ್ಯಾಡಿಕಲ್ ನ್ನುಕಿತ್ತು ಹಾಕಿ ಹೃದಯವನ್ನು ರಕ್ಷಿಸುವುದು. ಹೃದಯದ ಆರೋಗ್ಯಕ್ಕೆ, ನಿತ್ಯ 'ದಾಳಿಂಬೆ ಜ್ಯೂಸ್' ಕುಡಿಯಿರಿ

'ದಾಳಿಂಬೆ ಜ್ಯೂಸ್' ಕುಡಿಯಿರಿ

ದಂತ ಸ್ವಚ್ಛತೆ

ದಂತ ಸ್ವಚ್ಛತೆ

ಬಾಯಿಯಿಂದ ಕೆಟ್ಟ ವಾಸನೆ ಬರುತ್ತಾ ಇದ್ದರೆ ದಾಳಿಂಬೆ ಸಿಪ್ಪೆಯು ಇದನ್ನು ಹೋಗಲಾಡಿಸುತ್ತದೆ. ದಾಳಿಂಬೆ ಸಿಪ್ಪೆಯ ಹುಡಿ ಮಾಡಿಕೊಂಡು ಅದನ್ನು ನೀರಿಗೆ ಹಾಕಿಕೊಂಡು ಮಿಶ್ರಣ ಮಾಡಿ ಹಲ್ಲುಗಳಿಗೆ ತಿಕ್ಕಿಕೊಳ್ಳಿ. ಹಲ್ಲುಗಳು ಕೆಡುವುದು ಮತ್ತು ಬಾಯಿಯ ಹುಣ್ಣನ್ನು ಇದರಿಂದ ತಡೆಯಬಹುದು. ಒಮ್ಮೆ ದಾಳಿಂಬೆ ಸಿಪ್ಪೆಯ 'ಮೌತ್‌ವಾಶ್' ಬಳಸಿ ನೋಡಿ...

ಮುಖದ ಮೇಲಿನ ಕಲೆ-ಮೊಡವೆ ಹೋಗಲಾಡಿಸುತ್ತದೆ

ಮುಖದ ಮೇಲಿನ ಕಲೆ-ಮೊಡವೆ ಹೋಗಲಾಡಿಸುತ್ತದೆ

ದಾಳಿಂಬೆಯ ಸಿಪ್ಪೆಯ ಭಾಗಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ. ಒಂದು ಹಿಡಿಯಷ್ಟು ಒಣ ಸಿಪ್ಪೆಗಳನ್ನು ಚಿಕ್ಕದಾಗಿ ಪುಡಿ ಮಾಡಿಕೊಂಡು ದಪ್ಪತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕಂದುಬಣ್ಣ ಬಂದ ಬಳಿಕ ಪಾತ್ರೆಯ ಮುಚ್ಚಳದ ಮೇಲೆ ಹರಡಿ ತಣಿಯಲು ಬಿಡಿ. ತಣಿದ ಪುಡಿಯನ್ನು ನೀರಿಲ್ಲದೇ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ. ಈ ಪುಡಿಯನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಸಮಪ್ರಮಾಣದ ಲಿಂಬೆರಸ ಅಥವಾ ಗುಲಾಬಿನೀರಿನಲ್ಲಿ ಮಿಶ್ರಣಮಾಡಿ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ಮೊಡವೆಗಳ ಮೇಲೆ ದಪ್ಪನಾಗಿಯೂ, ಇತರೆಡೆ ತೆಳುವಾಗಿಯೂ ಲೇಪಿಸಿ. ಸುಮಾರು ಅರ್ಧಗಂಟೆಯಿಂದ ಒಂದು ಗಂಟೆಯವರೆಗೆ ಹಾಗೇ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ (ಸೋಪು ಉಪಯೋಗಿಸದಿರಿ). ಒಂದು ವೇಳೆ ಮೊಡವೆಗಳು ತುಂಬಾ ಹೆಚ್ಚಿದ್ದರೆ ಲಿಂಬೆರಸದ ಪ್ರಮಾಣ ಕಡಿಮೆ ಮಾಡಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಲೇಪನವನ್ನು ತೆಳುವಾಗಿ ಹಚ್ಚಿ ಇಡಿಯ ರಾತ್ರಿ ಬಿಡಿ, ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಮೂಳೆಗಳ ಆರೋಗ್ಯಕ್ಕಾಗಿ

ಮೂಳೆಗಳ ಆರೋಗ್ಯಕ್ಕಾಗಿ

ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಸಮೃದ್ಧವಾಗಿದೆ. ಇದು ಮುಟ್ಟು ನಿಂತಿರುವಂತಹ ಮಹಿಳೆಯರ ಮೂಳೆಯ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದಾಳಿಂಬೆ ಹುಡಿಯನ್ನು ಚಹಾದಂತೆ ಮಾಡಿ ಕುಡಿಯಿರಿ. ಇದರಿಂದ ಅಸ್ಥಿರಂಧ್ರತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುವುದು.

ಕಫ ಮತ್ತು ಗಂಟಲು ನೋವಿಗೆ

ಕಫ ಮತ್ತು ಗಂಟಲು ನೋವಿಗೆ

ಗಂಟಲು ನೋವು ಮತ್ತು ಒಣ ಕೆಮ್ಮಿಗೆ ದಾಳಿಂಬೆ ಸಿಪ್ಪೆಯು ಒಳ್ಳೆಯ ಮನೆಮದ್ದು. ಸ್ವಲ್ಪ ದಾಳಿಂಬೆ ಹುಡಿಯನ್ನು ನೀರಿಗೆ ಹಾಕಿಕೊಂಡು ಅದನ್ನು ಕುದಿಸಿ. ಈ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದರಿಂದ ಗಂಟಲಿನ ಸೋಂಕು ನಿವಾರಣೆಯಾಗುವುದು.

ತಲೆಹೊಟ್ಟು ನಿವಾರಣೆ

ತಲೆಹೊಟ್ಟು ನಿವಾರಣೆ

ದಾಳಿಂಬೆ ಸಿಪ್ಪೆಯನ್ನು ಬಳಸಿಕೊಂಡರೆ ತಲೆಹೊಟ್ಟನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು. ದಾಳಿಂಬೆ ಸಿಪ್ಪೆಯ ಹುಡಿ ಮತ್ತು ಬಿಸಿ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಗೆ ಹಚ್ಚಿಕೊಳ್ಳಿ. 15 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

ಗಂಟಲ ಕೆರೆತವನ್ನು ನಿವಾರಿಸುತ್ತದೆ

ಗಂಟಲ ಕೆರೆತವನ್ನು ನಿವಾರಿಸುತ್ತದೆ

ಕೆಲವೊಮ್ಮೆ ಗಂಟಲಲ್ಲಿ ಗಂಟು ಮೂಡಿ ಸತತ ಕೆರೆತ ಉಂಟಾಗುತ್ತದೆ. ಗಂಟಲಗ್ರಂಥಿ (tonsil)ಯ ಊತದ ಕಾರಣ ಈ ಕೆರೆತ ಉಂಟಾಗುತ್ತದೆ. ಇದಕ್ಕೆ ನೈಸರ್ಗಿಕವಾದ ಶಮನವನ್ನು ದಾಳಿಂಬೆ ಸಿಪ್ಪೆ ನೀಡುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಮೇಲಿನ ವಿಧಾನದಲ್ಲಿ ತಯಾರಿಸಿದ ದಾಳಿಂಬೆಪುಡಿಯನ್ನು ಒಂದು ಲೋಟಕ್ಕೆ ಒಂದು ಚಿಕ್ಕ ಪ್ರಮಾಣದಷ್ಟು ಬೆರೆಸಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಒಲೆಯಿಂದ ಕೆಳಗಿಳಿಸಿ ತಣಿಯಲು ಬಿಡಿ. ತಣಿದ ಬಳಿಕ ಈ ನೀರನ್ನು ನೋಸಿ ಈ ನೀರಿನಿಂದ ಆಗಾಗ್ಯೆ ಬಾಯಿಮುಕ್ಕಳಿಸಿ. ತಲೆಯನ್ನು ಸಾಧ್ಯವಾದಷ್ಟು ಹಿಂದೆ ಬಾಗಿಸಿ ಗಳಗಳ ಮಾಡುವುದು ಹೆಚ್ಚು ಪರಿಣಾಮಕಾರಿ. ಇದರಿಂದ ನಿಧಾನವಾಗಿ ಗಂಟಲ ಕೆರೆತ ಮತ್ತು ನೋವು ಕಡಿಮೆಯಾಗುತ್ತದೆ.

English summary

Pomegranate Peel Too Has These Health Benefits

The bright red tangy tiny seeds of pomegranate are popular for their amazing health as well as beauty benefits. After peeling the skin of the pomegranate, usually the tough red skin is thrown into the trash. But do you know that the discarded peel is loaded with lots of health benefits? Yes, if you surf on the net, you will find many studies that reveal the health benefits of pomegranate peel.
Story first published: Tuesday, April 11, 2017, 23:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more