For Quick Alerts
ALLOW NOTIFICATIONS  
For Daily Alerts

ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಪವರ್ ಫುಲ್ ಆಹಾರಗಳು

By Arshad
|

ನಮ್ಮ ದೇಹದ ಪ್ರಮುಖ ಅಂಗವಾದ ಮೆದುಳಿಗೆ ಪೆಟ್ಟಾದರೆ ಮಾತ್ರ ಇಡಿಯ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮೆದುಳನ್ನು ಆರೋಗ್ಯಕರವಾಗಿರಿಸುವ ಜೀವನಶೈಲಿಯನ್ನು ಅನುಸರಿಸುವುದು ತುಂಬಾ ಅಗತ್ಯ. ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವಾರು ವಿಧಾನಗಳಿವೆ.

ಆರೋಗ್ಯಕರ ಆಹಾರ ಸೇವನೆ ಹಾಗೂ ನಿಯಮಿತವಾಗಿ ಅನುಸರಿಸುವ ವ್ಯಾಯಾಮ. ಮೆದುಳಿನ ಕ್ಷಮತೆ ಹೆಚ್ಚಿಸಲು ಕೆಲವು ವಿಧಾನಗಳಿದ್ದು ಇಂದು ಒಂದು ನೂತನ ವಿಧಾನವನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇದು ನಿಮ ಅಚ್ಚರಿ ಮೂಡಿಸಬಹುದು, ಏಕೆಂದರೆ ಮೆದುಳನ್ನೂ ತರಬೇತಿಗೊಳಿಸುವ ವಿಧಾನವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದು ಇದಕ್ಕೆ "dual n-back" ಹಾಗೂ "complex span" ಎಂದು ಕರೆದಿದ್ದಾರೆ. ಈ ವಿಧಾನಗಳು ಸ್ಮರಣಶಕ್ತಿಯನ್ನು ಹೆಚ್ಚಿಸುವುದು ಹಾಗೂ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವಂತೆ ಮಾಡುತ್ತವೆ.

ಮಕ್ಕಳ 'ಬುದ್ಧಿ ಶಕ್ತಿ' ಹೆಚ್ಚಿಸಲು, ಇಲ್ಲಿದೆ ನೋಡಿ ಶಕ್ತಿಶಾಲಿ ರೆಸಿಪಿ!

ಈ ವಿಧಾನಗಳನ್ನು ಅನುಸರಿಸುವಾಗ ವಿಜ್ಞಾನಿಗಳು ತರಬೇತಿಗೂ ಮುನ್ನ ಹಾಗೂ ತರಬೇತಿಯ ನಂತರ ಮೆದುಳಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ತರಬೇತಿಯಲ್ಲಿ ಸ್ವಪ್ರೇರಣೆಯಿಂದ ತರಬೇತಿಗೆ ಒಳಗಾಗಲು ಬಂದಿದ್ದ ಯುವಕ ಯುವತಿಯರಿಗೆ ಮೆದುಳಿನ ಚಾಕಚಕ್ಯತೆಯನ್ನು ಬಳಸುವ ಕೆಲವು ಪರೀಕ್ಷೆಗಳನ್ನು ಒಡ್ಡಲಾಗಿತ್ತು. ಈ ಪರೀಕ್ಷೆಯಲ್ಲಿ ಪ್ರತಿಯೊಬ್ಬರ ಪ್ರಾಥಮಿಕ ಸ್ಮರಣೆ, ಗಮನ ನೀಡುವುದು ಹಾಗೂ ಬುದ್ದಿಶಕ್ತಿಯನ್ನು ಅಳೆಯಲು electroencephalogram (EEG) ಉಪಕರಣವನ್ನು ಬಳಸಲಾಗಿತ್ತು.

ಮೆದುಳನ್ನು ಚುರುಕಾಗಿಸುವ ಪ್ರಭಾವಶಾಲಿ ತಂತ್ರಗಳು

ಇವರೆಲ್ಲರನ್ನೂ ತರಬೇತಿಯ ಬಳಿಕ ಮನೆಗೆ ಕಳುಹಿಸಲಾಗಿತ್ತು ಹಾಗೂ ಒಂದು ಕಂಪ್ಯೂಟರ್ ಮೂಲಕ ನಡೆಸಬೇಕಾದ ಅಭ್ಯಾಸವನ್ನು ಒಂದು ತಿಂಗಳ ಕಾಲ ಅನುಸರಿಸಲು ಹೇಳಲಾಗಿತ್ತು. ಒಂದು ಗುಂಪಿಗೆ ಒಂದು ಬಗೆಯ ಅಭ್ಯಾಸ ನೀಡಲಾಗಿದ್ದರೆ ಇನ್ನೊಂದು ಗುಂಪಿಗೆ ಬೇರೆಯೇ ಅಭ್ಯಾಸ ನೀಡಲಾಗಿತ್ತು. ಪ್ರತಿ ಸದಸ್ಯರೂ ವಾರಕ್ಕೈದು ದಿನ, ಪ್ರತಿಬಾರಿ ಮೂವತ್ತು ನಿಮಿಷಗಳ ಕಾಲ ಈ ಅಭ್ಯಾಸ ಮಾಡಬೇಕಾಗಿತ್ತು.

ಬಳಿಕ ಪ್ರಯೋಗಾಲಯಕ್ಕೆ ಬಂದು ಇನ್ನೊಂದು ಸುತ್ತಿನ ತರಬೇತಿಯನ್ನು ನೀಡಲಾಗುತ್ತಿತ್ತು ಹಾಗೂ ಈ ವ್ಯಕ್ತಿಗಳ ಮೆದುಳನ್ನು ಆಧರಿಸಿದ ಚಟುವಟಿಕೆಗಳಲ್ಲಿ ಏನಾದರೂ ಬದಲಾವಣೆಯಾಯಿತೇ ಎಂದು ಗಮನಿಸಿ ವಿವರಗಳನ್ನು ದಾಖಲಿಸಲಾಗುತ್ತಿತ್ತು. ಒಂದು ತಿಂಗಳು ಈ ತರಬೇತಿಯನ್ನು ಅನುಸರಿಸಿದ ಬಳಿಕ "dual n-back" ವಿಧಾನ ಅನುಸರಿಸಿದ್ದ ಮೊದಲ ಗುಂಪಿನ ಸದಸ್ಯರು ಮೆದುಳಿನ ಕ್ಷಮತೆಯಲ್ಲಿ ಮೂವತ್ತು ಶೇಖಡಾ ಸುಧಾರಣೆಯಾಗಿದ್ದುದು ಕಂಡುಬಂದಿತ್ತು. "complex span." ಎಂಬ ಇನ್ನೊಂದು ಗುಂಪು ಸುಮಾರು ಐವತ್ತು ಶೇಖಡಾದಷ್ಟು ಸುಧಾರಣೆಯನ್ನು ಸಾಧಿಸಿತ್ತು. ಬನ್ನಿ, ಈಗ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ನೋಡೋಣ....

ಅಕ್ರೋಟು

ಅಕ್ರೋಟು

ಒಡೆದಾಗ ನೋಡಲು ಮೆದುಳಿನಂತೆಯೇ ಇರುವ ಅಕ್ರೋಟು ಮೆದುಳಿನ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ದೇಹಕ್ಕೆ ಅಗತ್ಯವಾದ ಕೊಬ್ಬು ಹಾಗೂ ಮೆದುಳಿನ ಕ್ಷಮತೆ ಹೆಚ್ಚಿಸುವ ಹಲವಾರು ಪೋಷಕಾಂಶಗಳಿವೆ. ವಿಶೇಷವಾಗಿ ಇದರಲ್ಲಿರುವ ಪಾಲಿಫೆನಾಲುಗಳು ಮೆದುಳಿನಲ್ಲಿರುವ ನ್ಯೂರಾನುಗಳ ನಡುವಣ ಸಂವಹನಶಕ್ತಿಯನ್ನು ಹೆಚ್ಚಿಸುವ ಮೂಲಕ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ನಿತ್ಯವೂ ಕೆಲವು ಅಕ್ರೋಟುಗಳನ್ನು ತಿನ್ನುವುದು ಉತ್ತಮ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ದಟ್ಟ ಹಸಿರಾದ ಪಾಲಕ್ ಹಾಗೂ ಬಸಲೆ ಸೊಪ್ಪಿನ ದಪ್ಪ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ಕರಗದ ನಾರು, ಹಲವಾರು ಖನಿಜಗಳು ಹಾಗೂ ಪೋಷಕಾಂಶಗಳಿವೆ. ಅತಿ ಹೆಚ್ಚು ಕಬ್ಬಿಣವಿರುವ ಕಾರಣ ಪಾಲಕ್ ಹಾಗೂ ಬಸಲೆ ರಕ್ತದ ಉತ್ಪತ್ತಿಗೆ ಅಗತ್ಯವಾಗಿದೆ. ಇದರಲ್ಲಿರುವ ಮಗ್ನೀಶಿಯಂ ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತಸಂಚಾರ ಸುಗಮಗೊಳಿಸಲು ನೆರವಾಗುತ್ತದೆ ಹಾಗೂ ಮೆದುಳಿಗೆ ಹೆಚ್ಚಿನ ರಕ್ತಸಂಚಾರ ಹಾಗೂ ಆಮ್ಲಜನಕವನ್ನು ಪೂರೈಸಲು ನೆರವಾಗುತ್ತದೆ. ಪರಿಣಾಮವಾಗಿ ಮೆದುಳಿನ ಕ್ಷಮತೆ ಹೆಚ್ಚುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆರೊಗ್ಯಕರ ಕೊಬ್ಬನ್ನು ಹೊಂದಿರುವ ಈ ಎಣ್ಣೆ ಬಳಕೆಗೆ ಅತ್ಯುತ್ತಮವಾಗಿದೆ. ಇದರಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು, ಫಾಲಿಫೆನಾಲುಗಳು ಮೂಳೆಸಂಧುಗಳ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೇ ಮೆದುಳಿನ ಜೀವಕೋಶಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಮೂಲಕ ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಮಿತ ಪ್ರಮಾಣದಲ್ಲಿ ಕಪ್ಪು ಚಾಕಲೇಟನ್ನು ನಿಯಮಿತವಾಗಿ ತಿನ್ನುವುದು ಮೆದುಳಿಗೆ ಒಳ್ಳೆಯದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಫ್ಲೇವನಾಲ್ ಮೆದುಳಿಗೆ ತಲುಪುವ ರಕ್ತದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮೆದುಳಿನ ಸ್ಮರಣೆ ಹಾಗೂ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಮೊಟ್ಟೆಯ ಹಳದಿಭಾಗ

ಮೊಟ್ಟೆಯ ಹಳದಿಭಾಗ

ದಿನಕ್ಕೊಂದು ಮೊಟ್ಟೆಯನ್ನು ತಿನ್ನುವ ಮೂಲಕ ಹೊಟ್ಟೆ ತುಂಬುವುದು ಮಾತ್ರವಲ್ಲ, ದೇಹಕ್ಕೆ ಅಗತ್ಯವಾದ ಪ್ರೋಟೀನಿನ ಅಗತ್ಯವನ್ನೂ ಪೂರೈಸುತ್ತದೆ. ಶ್ರಮದಾಯಕ ವ್ಯಾಯಾಮವನ್ನು ಮಾಡುವ ವ್ಯಕ್ತಿಗಳಿಗೆ ಮೊಟ್ಟೆ ಅನಿವಾರ್ಯವಾಗಿದೆ. ಮೊಟ್ಟೆಯ ಹಳದಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕೋಲೈನ್ ಎಂಬ ಪೋಷಕಾಂಶವಿದ್ದು ಇದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ಮೆದುಳಿನ ಜೀವಕೋಶಗಳಿಗೆ ಸೂಚನೆಯನ್ನು ಕಳುಹಿಸುವ ವ್ಯವಸ್ಥೆಯನ್ನು ಚುರುಕುಗೊಳಿಸಲು ನೆರವಾಗುತ್ತದೆ.

ಚೆನ್ನಾಗಿ ಹಸಿರು ಎಲೆಯುಕ್ತ ತರಕಾರಿಗಳನ್ನು ಸೇವಿಸಿರಿ

ಚೆನ್ನಾಗಿ ಹಸಿರು ಎಲೆಯುಕ್ತ ತರಕಾರಿಗಳನ್ನು ಸೇವಿಸಿರಿ

ಅಮೇರಿಕಾದ ಸಂಶೋಧಕರು ಹೇಳುವ ಪ್ರಕಾರ ಬಸಲೆ, ಕೋಸಿನ ಬಗೆಯ ತರಕಾರಿಗಳು ಮತ್ತು ಕೊಲ್ಲಾರ್ಡ್ಸ್ ನಂತಹ ತರಕಾರಿಗಳನ್ನು ನಿಮ್ಮ ಆಹಾರ ಶೈಲಿಯಲ್ಲಿ ಅಳವಡಿಸಿಕೊಂಡರೆ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೇ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ. ಈ ರೀತಿಯ ಹಸಿರು ಎಲೆಯುಕ್ತ ತರಕಾರಿಗಳನ್ನು ಹೆಚ್ಚು ಸೇವಿಸಿದರೆ ಬುದ್ಧಿಮಾಂಧ್ಯತೆಯಿಂದ ದೂರವಿರಬಹುದು.

ಕ್ಯಾಮೊಮೈಲ್ ಚಹಾ ಸೇವಿಸಿ

ಕ್ಯಾಮೊಮೈಲ್ ಚಹಾ ಸೇವಿಸಿ

ಕ್ಯಾಮೊಮೈಲ್ ಎಂಬುದು ಒಂದು ಹೂವಿನ ಜಾತಿಯ ಸಸ್ಯವಾಗಿದ್ದು, ಇದರಲ್ಲಿರುವ ಆಪಿಜೆನಿನ್ ಎಂಬ ಸತ್ವವು ಮೆದುಳಿನ ಜೀವಕೋಶಗಳನ್ನು ಒಂದಕ್ಕೊಂದು ಸೇರುವಂತೆ ಮಾಡಿ ನ್ಯೂರೋನಲ್ ಸೆಲ್ಸ್ ನ ವರ್ಗದ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಇದರಿಂದ ಈ ಚಹಾ ಸೇವನೆ ಮಾಡಿದರೆ ನೆನಪಿನ ಶಕ್ತಿಯು ಅಧಿಕಗೊಂಡು ಓದುವ ಅಭ್ಯಾಸವು ಹೆಚ್ಚುತ್ತದೆ. ಇದರ ಪೂರ್ಣ ಪ್ರತಿಫಲ ಹೊಂದಲು ಪ್ರತಿದಿನ ಎರಡು ಬಾರಿ ಈ ಚಹಾ ಆನ್ನು ಸೇವಿಸಿ ನೋಡಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಪ್ರತಿದಿನ ಓಡುವುದನ್ನು ರೂಢಿಸಿಕೊಳ್ಳಿ

ಪ್ರತಿದಿನ ಓಡುವುದನ್ನು ರೂಢಿಸಿಕೊಳ್ಳಿ

ಪ್ರತಿದಿನ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಾಗುತ್ತವೆ. ಇದು ನಿಮ್ಮ ನೆನಪಿನ ಶಕ್ತಿಯನ್ನು ಮತ್ತು ಅಧ್ಯಯನದ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಓಡುವುದನ್ನು ರೂಢಿಸಿಕೊಂಡರೆ ನಿಮ್ಮ ಮಾನಸಿಕ ಸಾಮರ್ಥ್ಯ ಇಮ್ಮಡಿಯಾಗುತ್ತದೆ. ಇದನ್ನು ಪ್ರೇರೇಪಿಸಲು ಈ ಪ್ರಕ್ರಿಯೆಯಲ್ಲಿ ನಿಮಗಿಷ್ಟವೆನಿಸಿದ ಹಾಡುಗಳನ್ನು ಆಯ್ದು ಕೇಳಬಹುದಾಗಿದೆ

ಕ್ರಮವಾಗಿ 8 ಗಂಟೆಗಳ ಕಾಲ ನಿದ್ರಿಸಿ

ಕ್ರಮವಾಗಿ 8 ಗಂಟೆಗಳ ಕಾಲ ನಿದ್ರಿಸಿ

ಒಳ್ಳೆಯ ನಿದ್ರೆಯು ವಿವಿಧ ಬಗೆಯ ನೆನಪಿನ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಅವರ ಸಂಶೋಧನೆಯಲ್ಲಿ ಭಾಗವಹಿಸಿದವರಿಗೆ 20 ಚಿತ್ರಗಳನ್ನು ನೀಡಿ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹೇಳಲಾಗಿತ್ತು. 12 ಗಂಟೆಗಳ ನಂತರ ಅವರಿಗೆ ಅದೇ ಚಿತ್ರಗಳನ್ನು ಮತ್ತೊಮ್ಮೆ ತೋರಿಸಲಾಯಿತು. ಒಂದು ನಿಯಂತ್ರಿತ ವಾತಾವರಣದಲ್ಲಿ 8 ಗಂಟೆಗಳ ಕಾಲ ನಿದ್ರಿಸಿದ ಸ್ಪರ್ಧಿಗಳು ತೋರಿಸಿದ ಚಿತ್ರಗಳ ಹೆಸರುಗಳನ್ನು ಶೇಖಡಾ 12ರಷ್ಟು ನಿಖರವಾಗಿ ಗುರುತಿಸಿದರು. ಆದ್ದರಿಂದ ನಿದ್ರೆಯನ್ನು ಅಲಕ್ಷ್ಯ ಮಾಡಬೇಡಿ.

English summary

New Way To Boost Brain Power Identified

Your brain is one of the most crucial body part, any damage to the brain can have a serious impact on your entire health. Hence keeping your brain healthy is very important. There might be several ways to keep your brain healthy - like having healthy diet or following certain exercise regime. Well today we will be discussing about the best way to boost your brain power.
X
Desktop Bottom Promotion