For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ರೋಗ ನಿಯಂತ್ರಿಸುವ ಶಕ್ತಿ 'ಬೇವಿನ ಎಲೆ' ಗಳಲ್ಲಿದೆ!

By Arshad
|

ಡೆಂಗ್ಯೂ ಜ್ವರ (ಸಾಮಾನ್ಯವಾಗಿ ನಾವೆಲ್ಲರೂ ಇದನ್ನು ಡೆಂಗ್ಯೂ ಎಂದು ಉಚ್ಛರಿಸುತ್ತೇವೆ, ಆದರೆ ವೈದ್ಯರ ಪ್ರಕಾರ ಇದರ ಸರಿಯಾದ ಉಚ್ಛಾರಣೆ ಡೆಂಘಿ ಅಥವ ಡೆಂಗಿ). ಒಂದು ವೈರಸ್ ಮೂಲಕ ತಗಲುವ ಜ್ವರವಾಗಿದ್ದು ಒಬ್ಬರಿಂದ ಒಬ್ಬರಿಗೆ ಒಂದು ಮಾಧ್ಯಮದ ಮೂಲಕ ಹರಡುವ ಜ್ವರವಾಗಿದೆ. ನೋಡಲಿಕ್ಕೆ ಪಟ್ಟೆಪಟ್ಟೆ ಇರುವ ಏಡಿಸ್ ಈಜಿಪ್ತಿ (Aedes aegypti) ಎಂಬ ಸೊಳ್ಳೆಯೇ ಈ ಮಾಧ್ಯಮವಾಗಿದ್ದು ಈ ಭಯಾನಕ ವೈರಸ್ ಅನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.

ಡೆಂಗ್ಯೂ ಜ್ವರವನ್ನು ಹತೋಟಿಯಲ್ಲಿಡುವ ಟಾಪ್ ಫುಡ್

ಈ ಸೊಳ್ಳೆಗಳಲ್ಲಿ ನಾಲ್ಕು ವಿಧಗಳಿವೆ. ಡೆಂಗ್ಯೂ ಜ್ವರದ ಲಕ್ಷಣಗಳೆಂದರೆ ವಿಪರೀತ ಜ್ವರ, ತಲೆನೋವು, ಸ್ನಾಯು ಮತ್ತು ಮೂಳೆ ಸಂಧುಗಳಲ್ಲಿ ವಿಪರೀತ ನೋವು ಮತ್ತು ಚರ್ಮ ಕೆಂಪಗಾಗುವುದು ಮೊದಲಾಗಿವೆ. ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ಕಾಲ ಸುಸ್ತು ಆವರಿಸಿರುತ್ತದೆ.

ಒಂದು ವೇಳೆ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ತಡವಾದರೆ ರಕ್ತದಲ್ಲಿ ಪ್ಲೇಟ್ಲೆಟ್ ಎಂಬ ಕಣಗಳು ವಿಪರೀತವಾಗಿ ಕಡಿಮೆಯಾಗಿ ಪ್ರಾಣಾಪಾಯವೂ ಉಂಟಾಗಬಹುದು. ಆದ್ದರಿಂದ ಡೆಂಗ್ಯೂ ಜ್ವರ ಬಂದ ಬಳಿಕ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ ಈ ಜ್ವರ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಜಾಣತನದ ಕ್ರಮವಾಗಿದೆ.

ಪ್ಲೇಟ್ಲೆಟ್ ಸಂಖ್ಯೆ'ಯನ್ನು ಹೆಚ್ಚಿಸಲು ಬಲ ನೀಡುವ ಆಹಾರಗಳಿವು...

ಮುಂಗಾರು ಮಳೆ ಆರಂಭಗೊಂಡಾಗ ಬದಲಾದ ವಾತಾವರಣ ಮನಸ್ಸಿಗೆ ಆಹ್ಲಾದ ನೀಡಿದರೂ ಇದೇ ಸಮಯಕ್ಕೆ ಆಗಮಿಸುವ ಈ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದೂ ಅಗತ್ಯವಾಗಿದೆ. ಮಳೆಗಾಲದಲ್ಲಿ ಗಾಳಿಯಲ್ಲಿ ಆವರಿಸುವ ವೈರಸ್ಸುಗಳು ಶೀತ, ಕೆಮ್ಮು ನೆಗಡಿಗಳನ್ನೂ ತರುತ್ತವೆ.

ಆದ್ದರಿಂದ ಇವೆಲ್ಲದರ ವಿರುದ್ಧ ರಕ್ಷಣೆ ಪಡೆಯಲು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ವಿಶೇಷವಾಗಿ ಸುತ್ತಮುತ್ತ ಸೊಳ್ಳೆಗಳಿದ್ದರೆ ಡೆಂಗ್ಯೂ ಜ್ವರ ಆವರಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿರುವ ಕಾರಣ ರೋಗ ನಿರೋಧಕ ಶಕ್ತಿಯನ್ನು ಈ ನಿಟ್ಟಿನಲ್ಲಿ ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬೇವಿನ ಎಲೆಗಳು ಈ ಜ್ವರವನ್ನು ಎದುರಿಸುವ ಎಲ್ಲಾ ಶಕ್ತಿಗಳಿವೆ.... ಬನ್ನಿ ಇದನ್ನು ಹೇಗೆ ಬಳಸಿಕೊಳ್ಳಬಹುದೆಂಬುದನ್ನು ಈಗ ನೋಡೋಣ.....

ಬೇವು ಬೇಯಿಸಿದ ನೀರು ಕುಡಿಯಿರಿ

ಬೇವು ಬೇಯಿಸಿದ ನೀರು ಕುಡಿಯಿರಿ

ಕೊಂಚ ಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಈ ನೀರನ್ನು ಕುಡಿಯಿರಿ. ಸಂಶೋಧನೆಗಳ ಮೂಲಕ ಈ ನೀರನ್ನು ನಿಯಮಿತವಾಗಿ ಕುಡಿದ ಡೆಂಘಿ ರೋಗಪೀಡಿತರ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿದ್ದುದು ಕಂಡುಬಂದಿದೆ.

ಬೇವು ಮತ್ತು ಪಪ್ಪಾಯಿ ಎಲೆಯ ತಿರುಳು

ಬೇವು ಮತ್ತು ಪಪ್ಪಾಯಿ ಎಲೆಯ ತಿರುಳು

ಸಮಪ್ರಮಾಣದಲ್ಲಿ ಇವೆರಡೂ ಎಲೆಗಳ ಹಸಿರು ಭಾಗವನ್ನು ಅರೆದು ಸೇವಿಸುವ ಮೂಲ ಡೆಂಗ್ಯೂ ಜ್ವರವನ್ನು ವಾಸಿ ಮಾಡಬಹುದು.

ಬೇವಿನ ಎಲೆಗಳನ್ನು ಸೇವಿಸಿ

ಬೇವಿನ ಎಲೆಗಳನ್ನು ಸೇವಿಸಿ

ನಿತ್ಯವೂ ಕೆಲವು ಬೇವಿನ ಎಲೆಗಳನ್ನು ಹಸಿಯಾಗಿ ನುಂಗುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ರಕ್ತ ಶುದ್ಧೀಕರಣ ಹಾಗೂ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ.

ಬೇವಿನ ಎಣ್ಣೆಯ ಬಳಕೆ

ಬೇವಿನ ಎಣ್ಣೆಯ ಬಳಕೆ

ಬೇವಿನ ಎಣ್ಣೆಯನ್ನು ಬೇವಿನ ಬೀಜವನ್ನು ಹಿಂಡುವ ಮೂಲಕ ಸಂಗ್ರಹಿಸಲಾಗುತ್ತದೆ. ಬೇವಿನ ಹೂವುಗಳಿದ್ದಲ್ಲಿ ಈ ಸೊಳ್ಳೆಗಳು ಬರುವುದಿಲ್ಲ. ಬೇವಿನ ಎಣ್ಣೆಯನ್ನು ಸೊಳ್ಳೆ ಕಚ್ಚಲು ಸಾಧ್ಯವಿರುವ ಚರ್ಮದ ಮೇಲೆಲ್ಲಾ ತೆಳುವಾಗಿ ಹಚ್ಚಿಕೊಳ್ಳುವ ಮೂಲಕ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳುವ ಮೂಲಕ ಈ ಜ್ವರ ಆವರಿಸುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.

ಬೇವಿನ ಎಲೆಗಳ ಹೊಗೆ

ಬೇವಿನ ಎಲೆಗಳ ಹೊಗೆ

ಜ್ವರ ಬರದಂತೆ ಮಾಡಲು ಸೊಳ್ಳೆಗಳನ್ನು ಬರದಂತೆ ಮಾಡುವುದೇ ಜಾಣತನದ ಕ್ರಮವಾಗಿದೆ. ಒಣ ಬೇವಿನ ಎಲೆಗಳನ್ನು ಕೆಂಡದ ಮೇಲಿರಿಸಿ ಮನೆಯೊಳಗೆಲ್ಲಾ ಹೊಗೆ ಹಾಕುವ ಮೂಲಕ ಈ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳಬಹುದು.

English summary

Monsoon Maladies: How To Use Neem Leaves For Dengue Fever

Neem leaves are a major source of immunity boosters and the below are its uses against Dengue, which is the most dreadful of all the monsoon diseases.
Story first published: Monday, June 19, 2017, 20:31 [IST]
X
Desktop Bottom Promotion