Just In
- 54 min ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಸಿರಾಟ ತೊಂದರೆ: ಇದು ಅಸ್ತಮಾವೇ ಅಥವಾ ಬೇರೆ ಏನಾದರೂ ಕಾಯಿಲೆಯೇ?
ಉಸಿರಾಟದಲ್ಲಿ ತೊಂದರೆ, ಎದೆ ಬಿಗಿಯಾದಂತೆ ಅನ್ನಿಸುವುದು, ಉಸಿರಾಡುವಾಗ ಸೀಟಿ ಹೊಡೆದಂತಾಗುವುದು ಅಥವಾ ಗೂರುಬ್ಬಸ (wheezing) ಕಂಡುಬರುತ್ತಿದೆಯೇ? ಇವೆಲ್ಲಾ ಅಸ್ತಮಾ ರೋಗದ ಲಕ್ಷಣಗಳು!
ಉಸಿರಾಟದಲ್ಲಿ ತೊಂದರೆ, ಎದೆ ಬಿಗಿಯಾದಂತೆ ಅನ್ನಿಸುವುದು, ಉಸಿರಾಡುವಾಗ ಸೀಟಿ ಹೊಡೆದಂತಾಗುವುದು ಅಥವಾ ಗೂರುಬ್ಬಸ (wheezing) ಕಂಡುಬರುತ್ತಿದೆಯೇ? ಇವೆಲ್ಲಾ ಅಸ್ತಮಾ ರೋಗದ ಲಕ್ಷಣಗಳು. ಶ್ವಾಸಕೋಶಗಳ ಒಳಗಿನ ನಾಳಗಳಲ್ಲಿ ಸೋಂಕು ಉಂಟಾದಾಗ ಈ ನಾಳಗಳ ಒಳವಿಸ್ತಾರ ಕಿರಿದಾಗಿ ಇದರೊಳಗಿನಿಂದ ವಾಯು ದಾಟಲು ಹೆಚ್ಚು ಕಷ್ಟಪಡಬೇಕಾಗುತ್ತದೆ.
ಕೆಲವೊಮ್ಮೆ ಇಷ್ಟು ಕಿರಿದಾಗುತ್ತವೆಂದರೆ ಇದರ ಮೂಲಕ ಹಾದು ಹೋಗುವ ಗಾಳಿಯಿಂದ ಪಡೆಯುವ ಆಮ್ಲಜನಕ ಸಾಕಾಗದೇ ಸುಸ್ತು ಎದುರಾಗುತ್ತದೆ. ಇದನ್ನೇ ಅಸ್ತಮಾಘಾತ Asthma attack ಎಂದು ಕರೆಯುತ್ತಾರೆ. ಅಷ್ಟಕ್ಕೂ ಶ್ವಾಸನಾಳಗಳು ಕಿರಿದಾಗಲು ಕಾರಣವೇನು? ಇದೊಂದು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ. ಗಾಳಿಯ ಮೂಲಕ ಎದುರಾಗುವ ಅತಿಸೂಕ್ಷ್ಮ ಬ್ಯಾಕ್ಟೀರಿಯಾ, ಕಣಗಳು ಹಾಗೂ ಇತರ ಅಲರ್ಜಿಕಾರಕ ಕಣಗಳು ಉರಿಸಿನ ಮೂಲಕ ಶ್ವಾಸಕೋಶವನ್ನು ತಲುಪಿದಾಗ ಶ್ವಾಸನಾಳಗಳ ಒಳಗೆ ಅಂಟಿಕೊಂಡು ಅಲರ್ಜಿಯಿಂದ ನಾಳ ಕಿರಿದಾಗುತ್ತದೆ. ಕೆಲವರಲ್ಲಿ ಇದು ತೀರಾ ಹೆಚ್ಚಾಗಿರುತ್ತದೆ, ಕೆಲವರಲ್ಲಿ ಕಡಿಮೆ. ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು
ಇದಕ್ಕೆ ವಾತಾವರಣದಲ್ಲಿರುವ ಸೂಕ್ಷ್ಮ ಕಣಗಳು ಮತ್ತು ಅನುವಂಶಿಕ ಗುಣಗಳು ಸಮಾನವಾಗಿ ಕಾರಣವಾಗಿವೆ. ಇಂದಿನ ಲೇಖನದಲ್ಲಿ ಅಸ್ತಮಾ ಏಕಾಗಿ ಬರುತ್ತದೆ ಎಂಬ ವಿಷಯದ ಮೇಲೆ ಹೆಚ್ಚಿನ ವಿವರಗಳನ್ನು ನೀಡಲಾಗಿದೆ. ಅಸ್ತಮಾ ರೋಗವನ್ನು ಸೋಲಿಸುವ ಯೋಗಾಸನಗಳು
ಕೆಲವು ಸಂದರ್ಭಗಳಲ್ಲಿ ರೋಗಿಗೆ ತನಗೆ ಅಸ್ತಮಾ ಇರುವುದೇ ಗೊತ್ತಿರುವುದಿಲ್ಲ. ಏಕೆಂದರೆ ಇದು ಅಲ್ಪವಾಗಿ ಆವರಿಸಿದ್ದು ಕೇವಲ ಹೆಚ್ಚಿನ ಉಸಿರಾಟದ ಅಗತ್ಯತೆ ಇದ್ದಾಗಲೇ ಇದರ ಇರುವಿನ ಅರಿವಾಗುತ್ತದೆ....
ನಗುವಾಗ ಕಾಡುವ ಕೆಮ್ಮು!
ಒಂದು ವೇಳೆ ನಿಮಗೆ ಅಸ್ತಮಾ ರೋಗ ಈಗಾಗಲೇ ಆವರಿಸಲು ಪ್ರಾರಂಭಿಸಿದ್ದರೆ ನಗುವಾಗ, ರಾತ್ರಿ ಹೊತ್ತು ಕೆಮ್ಮುವಾಗ ಅಥವಾ ವ್ಯಾಯಾಮದ ಅವಧಿಯಲ್ಲಿ ಅಗತ್ಯವೇ ಇಲ್ಲದೇ ಕೆಮ್ಮು ಬಂದರೆ ನಿಮಗೆ ಅಸ್ತಮಾ ಇರಬಹುದು. ಈ ಸ್ಥಿತಿಗೆ coughing fits ಎಂದೂ ಕರೆಯುತ್ತಾರೆ ಹಾಗೂ ಇವು ಸಹಾ ಅಸ್ತಮಾದ ಲಕ್ಷಣಗಳಾಗಿವೆ.
ಉಸಿರಾಡಲು ಕಷ್ಟಪಡಬೇಕಾಗುವುದು
ಗಾಳಿಯಲ್ಲಿರುವ ಹಲವಾರು ಕಣಗಳು ಅಲರ್ಜಿಕಾರಕವಾಗಿ. ಈ ಕಣಗಳಿಗೆ allergens ಎಂದು ಕರೆಯುತ್ತಾರೆ. ಈ ಕಣಗಳು ಅಸ್ತಮಾಘಾತಕ್ಕೆ ಕಾರಣವಾಗಬಹುದು. ಒಂದು ವೇಳೆ ಪ್ರಾಣಿಗಳ ಜೊತೆಗೆ ಸಮಯ ಕಳೆದ ಬಳಿಕ ಉಸಿರಾಡಲು ತೊಂದರೆಯಾದರೆ, ಸತತವಾಗಿ ಗೂರುಬ್ಬಸ ಎದುರಾದರೆ, ಅಥವಾ ಕಣ್ಣುಗಳಲ್ಲಿ ಸತತವಾಗಿ ತುರಿಕೆ ಕಾಣಿಸಿಕೊಂಡರೆ ಇದೂ ಸಹಾ ನಿಮಗೆ ಅಸ್ತಮಾ ಇರಬಹುದು ಎಂದು ಸೂಚಿಸುತ್ತದೆ
ಕೆಲವು ಧೂಳಿನ, ಹೊಗೆಯ ಪ್ರಭಾವ
ಒಂದು ವೇಳೆ ಅಗರಬತ್ತಿಯ ಹೊಗೆ, ಸಿಗರೇಟಿನ ಹೊಗೆ, ಗಾಳಿಯಲ್ಲಿನ ಧೂಳು, ಹೂವಿನ ಪರಾಗ, ಕೀಟಾನಾಶಕದ ಗಾಳಿ, ಏಸಿಯ ಶೀತಲ ಗಾಳಿ, ಒಣಹವೆ ಮೊದಲಾದ ಸಂದರ್ಭದಲ್ಲಿ ಉಸಿರಾಟ ಕಷ್ಟಕರವಾಗುತ್ತಿದೆ ಎನ್ನಿಸಿದರೆ ಇದು ಸಹಾ ಅಸ್ತಮಾ ಇರಬಹುದು ಎಂಬುದನ್ನು ತೋರಿಸುತ್ತದೆ. ಕೆಲವೊಮ್ಮೆ ಕೊಂಚ ವೇಗವಾಗಿ ಓಡಿದಾಗ ಅಥವಾ ವ್ಯಾಯಾಮದ ಏದುಸಿರು ಸಹಾ ಉಸಿರಾಟ ಕಷ್ಟಕರವಾಗಿಸಬಹುದು.
ಚಿಕ್ಕಂದಿನಿಂದಲೇ ಅಸ್ತಮಾ ಇದ್ದಿದ್ದರೆ
ಒಂದು ವೇಳೆ ಚಿಕ್ಕಂದಿನಲ್ಲಿ ಅಸ್ತಮಾ ತೊಂದರೆ ಇದ್ದಿದ್ದರೆ ಈ ತೊಂದರೆ ಹಿರಿಯರಾದ ಬಳಿಕವೂ ಕಾಡಬಹುದು.
ಅಸ್ತಮಾಘಾತ ಎದುರಾದರೆ ಏನು ಮಾಡಬೇಕು?
ಅಸ್ತಮಾಕ್ಕೂ ಶ್ವಾಸಸಂಬಂಧಿ ತೊಂದರೆಗಳಿಗೂ ಸಮಾನವಾದ ಲಕ್ಷಣಗಳಿರುವುದರಿಂದ ಇವರೆಡನ್ನು ಪ್ರತ್ಯೇಕಿಸುವುದು ವೈದ್ಯರಿಗೆ ಸವಾಲಿನ ಕೆಲಸವಾಗಿದೆ. ಎದೆ ಬಿಗಿಯುವುದು ಅಥವಾ ಉಸಿರು ಕಟ್ಟಿಕೊಳ್ಳುವುದು ಹೃದಯಾಘಾತದ ಲಕ್ಷಣವೂ ಆಗಿದೆ. ಈ ಸಮಯದಲ್ಲಿ ರೋಗಿ ತಕ್ಷಣವೇ ಅಂಗಾತವಾಗಿ ಮಲಗಿ ಆದಷ್ಟು ಬೇಗನೇ ವೈದ್ಯರ ನೆರವನ್ನು ಪಡೆಯಬೇಕು.ಯಮಯಾತನೆ ನೀಡುವ ಶ್ವಾಸನಾಳದ ರೋಗಕ್ಕೆ ಪರಿಹಾರವೇನು?