For Quick Alerts
ALLOW NOTIFICATIONS  
For Daily Alerts

ಪ್ರತಿ ದಿನ ಒಂದು ಗ್ಲಾಸ್ ಲಸ್ಸಿ ಕುಡಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ

By Manu
|

ಭಾರತದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಹಾರ ಹಾಗೂ ಪಾನೀಯ ಸೇವನೆ ಮಾಡುವುದು ಸಾಮಾನ್ಯ. ಆದರೆ ಹಾಲಿನಿಂದ ತಯಾರಾಗುವಂತಹ ಉತ್ಪನ್ನಗಳಾದ ಮಜ್ಜಿಗೆ ಹಾಗೂ ಲಸ್ಸಿಯನ್ನು ಪ್ರತಿಯೊಬ್ಬರು ಸೇವಿಸುತ್ತಾರೆ. ಅದರಲ್ಲೂ ಪಂಜಾಬ್ ನಲ್ಲಿ ಲಸ್ಸಿಯನ್ನು ಬೆಳಗ್ಗಿನ ಉಪಾಹಾರದೊಂದಿಗೆ ಕೂಡ ಸೇವಿಸುವರು. ಸಿಹಿಯಾಗಿರುವಂತಹ ಲಸ್ಸಿ ಪ್ರತಿಯೊಬ್ಬರಿಗೂ ತುಂಬಾ ಇಷ್ಟ. ಲಸ್ಸಿಯನ್ನು ಇಷ್ಟಪಡದೇ ಇರುವವರು ತುಂಬಾ ಕಡಿಮೆಯೆನ್ನಬಹುದು.

ಲಸ್ಸಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡ ಇವೆ. ಸ್ನಾಯುಗಳ ಬೆಳವಣಿಗೆಗೆ ಲಸ್ಸಿ ನೆರವಾಗುವುದು. ಲಸ್ಸಿಯಿಂದ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ದೇಹಕ್ಕೆ ಬೇಕಾಗುವ ಶಕ್ತಿ ಸಿಗುವುದು. ಬೇಸಿಗೆಯಲ್ಲಿ ಒಂದು ಲೋಟ ಲಸ್ಸಿ ಕುಡಿದರೆ ದೇಹದ ಆಯಾಸವು ನಿವಾರಣೆಯಾಗುವುದು.

ಮೊಸರಿನಿಂದ ತಯಾರಿಸುವ ಲಸ್ಸಿಯು ಜೀರ್ಣಾಂಗ ವ್ಯವಸ್ಥೆಗೆ ತಂಪನ್ನು ನೀಡುವುದು. ಪ್ರತೀ ದಿನ ಲಸ್ಸಿ ಕುಡಿದರೆ ಅದರಿಂದ ಆಗುವ ಆರೋಗ್ಯ ಲಾಭಗಳು ಏನು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲು ಪ್ರಯತ್ನವನ್ನು ಬೋಲ್ಡ್ ಸ್ಕೈ ಮಾಡಿದೆ. ಮೊಸರಿನಿಂದ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುವ ಲಸ್ಸಿ ದೇಹಕ್ಕೆ ತುಂಬಾ ಒಳ್ಳೆಯದು.

ಸಿಹಿಯಾದ ಲಸ್ಸಿಯನ್ನು ಶೀತ ಪ್ರಕೋಪ ಮತ್ತು ಕೆಮ್ಮು ಇರುವವರು ಸೇವನೆ ಮಾಡದೆ ಇದ್ದರೆ ಒಳ್ಳೆಯದು. ಇಂತವರನ್ನು ಹೊರತುಡಿಸಿ ಪ್ರತಿನಿತ್ಯ ಲಸ್ಸಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಲಸ್ಸಿಯಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದಿರುವ ಕಾರಣದಿಂದ ಇದು ದೀರ್ಘಾವಧಿಗೆ ಆರೋಗ್ಯಕ್ಕೆ ಒಳ್ಳೆಯದು. ಲಸ್ಸಿಯ ಮತ್ತಷ್ಟು ಆರೋಗ್ಯ ಲಾಭಗಳ ಬಗ್ಗೆ ತಿಳಿಯಲು ಮುಂದಕ್ಕೆ ಓದಿ..

ದೇಹದ ಉಷ್ಣತೆ ವಿರುದ್ಧ ಹೋರಾಡುವುದು

ದೇಹದ ಉಷ್ಣತೆ ವಿರುದ್ಧ ಹೋರಾಡುವುದು

ಲಸ್ಸಿಯು ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಲ್ಲಿ ಉನ್ನತ ಮಟ್ಟದ ವಿದ್ಯುದ್ವಿಚ್ಛೇದ್ಯಗಳು ಇವೆ ಮತ್ತು ನೀರಿನಾಂಶವು ಹೆಚ್ಚಿದೆ.ಇದು ನಿರ್ಜಲೀಕರಣ ವಿರುದ್ಧ ಹೋರಾಡುವುದು. ಇದರಲ್ಲಿ ಇರುವಂತಹ ಹೆಚ್ಚಿನ ಪ್ರಮಾಣದ ಲ್ಯಾಕ್ಟಿಕ್ ಆಮ್ಲವು ಪ್ರತಿರೋಧಕ ಶಕ್ತಿ ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡುವುದು. ದೇಹದ ಉಷ್ಣತೆ ಕಡಿಮೆ ಮಾಡಲು ಪ್ರತಿನಿತ್ಯ ಲಸ್ಸಿ ಸೇವಿಸಿ.

ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸುಧಾರಣೆ

ಇದು ಹೊಟ್ಟೆಗೆ ಸ್ನೇಹಿಯಾಗಿರುವ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುವ ಕಾರಣದಿಂದ ಇದು ಜೀರ್ಣಕ್ರಿಯೆ ಪ್ರಕ್ರಿಯೆಗೆ ತುಂಬಾ ನೆರವಾಗುವುದು. ಲಸ್ಸಿ ಸೇವಿಸಿದರೆ ಎಲ್ಲಾ ರೀತಿಯ ಜೀರ್ಣಕ್ರಿಯೆ ಸಮಸ್ಯೆಯಿಂದ ಪಾರಾಗಬಹುದು. ರಾತ್ರಿ ವೇಳೆಯೂ ಲಸ್ಸಿ ಕುಡಿಯಬಹುದು.

ಆಸಿಡಿಟಿ ನಿವಾರಣೆ

ಆಸಿಡಿಟಿ ನಿವಾರಣೆ

ಆಹಾರದಲ್ಲಿರುವ ಖಾರದ ಅಂಶವನ್ನು ತೆಗೆದು ಹಾಕುವ ಲಸ್ಸಿ ಉರಿಯೂತವಿರುವ ಹೊಟ್ಟೆಯ ಭಾಗವನ್ನು ಶಮನಗೊಳಿಸುವುದು. ಅಜೀರ್ಣ ಮತ್ತು ಎದೆ ಉರಿಯಿಂದ ಇದು ಕಾಪಾಡುವುದು.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ದೇಹವನ್ನು ಪ್ರವೇಶಿಸುವಂತಹ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ರೋಗಕಾರಗಳ ವಿರುದ್ಧ ಲಸ್ಸಿಯಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಡಿ ಹೋರಾಟ ಮಾಡುವುದು. ಇದರಲ್ಲಿ ಇರುವ ಪ್ರೋಬಯಾಟಿಕ್ ಗುಣವು ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸಿ ಬ್ಯಾಕ್ಟೀರಿಯಾ, ಸಾಮಾನ್ಯ ಜ್ವರ ಹಾಗೂ ಶೀತ ಇತ್ಯಾದಿ ವಿರುದ್ಧ ಹೋರಾಡಲು ನೆರವಾಗುವುದು. ಇದು ಲಸ್ಸಿಯ ಬಹುದೊಡ್ಡ ಆರೋಗ್ಯ ಲಾಭವಾಗಿದೆ.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಲಸ್ಸಿಯಲ್ಲಿ ಕಡಿಮೆ ಮಟ್ಟದ ಕ್ಯಾಲರಿ ಮತ್ತು ಯಾವುದೇ ರೀತಿಯ ಕೊಬ್ಬುಗಳು ಇಲ್ಲದೆ ಇರುವುದರಿಂದ ಇದನ್ನು ತೂಕ ಕಳೆದುಕೊಳ್ಳುವವರು ತಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬಹುದು. ಹೊಟ್ಟೆಯಲ್ಲಿ ಇರುವಂತಹ ಕೊಬ್ಬನ್ನು ಇದು ಶುದ್ಧೀಕರಿಸುವುದು.

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ಲಸ್ಸಿಯಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಸಂಕೋಚನ ಮತ್ತು ಆಮ್ಲೀಯ ಗುಣವನ್ನು ಹೊಂದಿದೆ. ಇದರಿಂದ ಕಲೆಗಳು ಮತ್ತು ನೆರಿಗೆಗಳನ್ನು ತೆಗೆದುಹಾಕಬಹುದು. ಜೋತುಬಿದ್ದ ಚರ್ಮವು ಇದರಿಂದ ಸರಿಯಾಗುವುದು.

ರಕ್ತದೊತ್ತಡ ಕಡಿಮೆ ಮಾಡುವುದು

ರಕ್ತದೊತ್ತಡ ಕಡಿಮೆ ಮಾಡುವುದು

ನಿಯಮಿತವಾಗಿ ಲಸ್ಸಿ ಕುಡಿದರೆ ದೇಹದಲ್ಲಿನ ರಕ್ತದೊತ್ತಡ ಮಟ್ಟವು ಸಾಮಾನ್ಯವಾಗುವುದು ಎಂದು ಸಾಬೀತಾಗಿದೆ. ಇದರಲ್ಲಿ ಇರುವ ಪೊಟಾಶಿಯಂ ಮತ್ತು ರಿಬೊಫ್ಲಾವಿನ್ ನೈಸರ್ಗಿಕವಾಗಿ ರಕ್ತದೊತ್ತಡ ಕಡಿಮೆ ಮಾಡುವುದು.

English summary

Health Benefits of Drinking Lassi Every Day

Lassi is prepared with yogurt and is the best when it comes to soothing the digestive tract. This article will let you know what are the health benefits of drinking lassi every day. Lassi is made with curd, which is prepared in the traditional way with a culture of bacteria and also chilled with ice cubes while being churned. Sweet lassi is not advisable for those who have cold or cough or phlegmatic temperament. Otherwise, it is perfectly okay to consume lassi every day.
X
Desktop Bottom Promotion