For Quick Alerts
ALLOW NOTIFICATIONS  
For Daily Alerts

ಶೀತ, ಜ್ವರ ಹಾಗೂ ಗಂಟಲು ಕೆರೆತವೇ? ಇಲ್ಲಿದೆ ನೋಡಿ ಕಷಾಯ

By Manu
|

ಮಳೆಗಾಲ ಆರಂಭವಾದರೆ ಸಾಕು ಒಂದು ರೀತಿಯ ತಂಪಾದ ವಾತಾವರಣ, ತಂಗಾಳಿ ಸೋನೆ ಮಳೆ ಎಲ್ಲವೂ ಒಮ್ಮಿಂದೊಮ್ಮೆಲೆ ಆರಂಭಗೊಂಡಿರುತ್ತವೆ. ಒಂದೇ ಸಮನೆ ಬದಲಾಗುವ ವಾತಾವರಣ ಹಾಗೂ ಹೆಚ್ಚುವ ತೇವಾಂಶದಿಂದ ದೇಹದ ಆರೋಗ್ಯದಲ್ಲೂ ಕೊಂಚ ಏರುಪೇರು ಉಂಟಾಗುವುದು ಸಹಜ. ಈ ವ್ಯತ್ಯಾಸಕ್ಕೆ ಭಯ ಪಡುವ ಅಗತ್ಯ ಇರುವುದಿಲ್ಲ. ಸ್ವಲ್ಪ ಬಿಸಿಯಾದ ಪಾನೀಯ ಮತ್ತು ಮಸಾಲೆ ಭರಿತ ಆಹಾರವನ್ನು ಸೇವಿಸುವುದರ ಮೂಲಕ ದೇಹವನ್ನು ಬಲಪಡಿಸಿಕೊಳ್ಳಬಹುದು.

ಬಿಸಿಯ ಬೇಗೆಯಿಂದ ಮಳೆಗಾಲದ ತಂಪು ಅನುಭವಿಸುತ್ತಿದ್ದಂತೆಯೇ ಕೆಲವು ರೋಗಗಳೂ ಹುಟ್ಟಿಕೊಳ್ಳುತ್ತವೆ. ಸೊಳ್ಳೆಗಳು, ಸೂಕ್ಷ್ಮಾಣುಗಳ ಸಂಖ್ಯೆಯೂ ಹೆಚ್ಚುತ್ತವೆ. ಇವುಗಳಿಂದ ಸಾಮಾನ್ಯವಾಗಿ ಜ್ವರ, ಶೀತ ಮತ್ತು ಗಂಟಲು ನೋವು ಪ್ರಾರಂಭವಾಗುವುದು. ಎಲ್ಲಾ ಕಾಲದಲ್ಲೂ ಸಾಮಾನ್ಯವಾಗಿ ಬರುವ ಈ ರೋಗಗಳು ಮಳೆಗಾಲದಲ್ಲಿ ಸ್ವಲ್ಪ ಜಾಸ್ತಿ ಎನ್ನಬಹುದು. ಈ ಕಾಯಿಲೆಗಳ ಸಲುವಾಗಿ ಆಸ್ಪತ್ರೆಗೆ ಅಲೆದಾಡುವ ಬದಲು ಮನೆ ಮದ್ದಿನಿಂದಲೇ ಆರೈಕೆ ಮಾಡಿಕೊಳ್ಳಬಹುದು.

herbal tea

ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಪ್ರಮಾಣದಲ್ಲಿರುವಾಗಲೇ ಅನೇಕ ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಯಾವಾಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತವೆಯೋ ಆಗ ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಹಾಗಾಗಿ ನಾವು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡಿಕೊಳ್ಳಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸಣ್ಣ ಪುಟ್ಟ ಶೀತ, ಗಂಟಲು ನೋವನ್ನು ಓಡಿಸುವ ಚಿಕಿತ್ಸೆ ಇಲ್ಲಿದೆ ನೋಡಿ...

ಎಡೆಬಿಡದೆ ಕಾಡುವ ಕೆಮ್ಮಿಗೆ ಶುಂಠಿ-ಉಪ್ಪಿನ ಕಷಾಯ

ಮನೆ ಔಷಧಿ
* ಬ್ರೌನ್ ಶುಗರ್ -1 ಚಮಚ
* ಲವಂಗ 4-5
* ತುಳಸಿ 5-6
* ಅರಿಶಿನ 1 ಚಮಚ

ವಿಧಾನ
* ಒಂದು ಪಾತ್ರೆಯಲ್ಲಿ ನೀರು ಮತ್ತು ಮೇಲೆ ಹೇಳಿರುವ ಎಲ್ಲಾ ಸಾಮಾಗ್ರಿಯನ್ನು ಹಾಕಿ ಕುದಿಯಲು ಬಿಡಿ.
* ಪಾತ್ರೆಯಲ್ಲಿ ಇದ್ದ ನೀರಿನ ಪ್ರಮಾಣ ಕುದಿಯುತ್ತಲೇ ಕಡಿಮೆಯಾಗುತ್ತಾ ಬರುತ್ತದೆ, ಎಂದು ಅದು ಒಂದು ಕಪ್ ನಷ್ಟು ಉಳಿದಿರುತ್ತದೋ, ಆಗ ಉರಿಯನ್ನು ಆರಿಸಿ.
* ಒಂದು ಕಪ್‍ನಲ್ಲಿ ಸೋಸಿಕೊಳ್ಳಬೇಕು.


* ಸ್ವಲ್ಪ ಬಿಸಿ ಬಿಸಿ ಇರುವಾಗಲೇ ಇದನ್ನು ಕುಡಿಯಿರಿ.
* ಹೀಗೆ ದಿನಕ್ಕೊಮ್ಮೆ ಈ ಕಷಾಯವನ್ನು ಸೇವಿಸಿದರೆ ಕಾಯಿಲೆ ಕಡಿಮೆಯಾಗುವುದು.

ರೋಗದ ಲಕ್ಷಣ ಕಾಣಿಸಿಕೊಂಡಾಗ ಹಾಗೂ ರೋಗ ಗುಣಮುಖವಾಗುವವರೆಗೂ ಎಣ್ಣೆಯುಕ್ತ ಆಹಾರದಿಂದ ದೂರ ಇರಬೇಕು. ದೇಹವನ್ನು ಆದಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳಬೇಕು.


ಹಾಗೊಮ್ಮೆ ಜ್ವರ, ಶೀತವು ಅತಿಯಾಗುತ್ತಿದ್ದರೆ ವೈದ್ಯರಲ್ಲಿ ಪರೀಕ್ಷಿಸಿ ಕೊಳ್ಳುವುದು ಸೂಕ್ತ. ವೈರಲ್ ಫ್ಲೂ ಆಗಿದ್ದರೆ ಸೂಕ್ತ ಚಿಕಿತ್ಸೆ ಪಡೆದು ಗುಣಮುಖ ಹೊಂದಬಹುದು.
English summary

Incredible Home Remedy For Cold & Sore Throat That You Must Try!

There are certain strong antibiotics that are prescribed by the doctors to treat cold and sore throat. However, there is also a natural remedy that can help treat these conditions
X
Desktop Bottom Promotion