For Quick Alerts
ALLOW NOTIFICATIONS  
For Daily Alerts

ಮಲೇರಿಯಾ ರೋಗದ ವಿರುದ್ಧ ಹೋರಾಡುವ 'ಆಯುರ್ವೇದ ಚಿಕಿತ್ಸೆ'

ಮಲೇರಿಯಾ ರೋಗವನ್ನು ನಿಯಂತ್ರಿಸಲು ವೈದ್ಯರು ನೀಡುವ ಚಿಕಿತ್ಸೆಯೊಂದಿಗೇ ಕೆಲವು ನೈಸರ್ಗಿಕ ಆಹಾರಗಳನ್ನೂ ವೈದ್ಯರ ಅನುಮತಿಯ ಮೇರೆಗೆ ಸೇವಿಸುವ ಮೂಲಕ ಈ ರೋಗವನ್ನು ನಿಯಂತ್ರಿಸಬಹುದು

By Manu
|

ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು ಎಂಬ ಮಾತಿಗೆ ನೂರು ವರ್ಷದ ಇತಿಹಾಸವಿದ್ದರೂ ಇದಕ್ಕೆ ಮುಖ್ಯ ಕಾರಣ ಅಂದು ಮಲೆನಾಡಿನ ಕೊಪ್ಪ ಎಂಬ ಊರಿನಲ್ಲಿ ಬಾಧಿಸುತ್ತಿದ್ದ ಮಲೇರಿಯಾ ರೋಗವೇ ಕಾರಣ! ಇಂದು ಈ ರೋಗ ಎಲ್ಲೆಡೆ ಸಾಮಾನ್ಯವಾಗಿದ್ದು ಅನಾಫಿಲಿಸ್ಸೊ ಳ್ಳೆಯ ಕಡಿತವೇ ಇದಕ್ಕೆ ಕಾರಣ ಎಂದು ಗೊತ್ತಾಗಿದೆ. ಸರಳ ಟ್ರಿಕ್ಸ್ ಅನುಸರಿಸಿ, ಸೊಳ್ಳೆ ಕಾಟ ತಪ್ಪಿಸಿ

ಈ ಜ್ವರ ಬಂದ ಕೂಡಲೇ ಗುರುತಿಸಲ್ಪಟ್ಟರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಉಲ್ಬಣಗೊಳ್ಳದಂತೆ ತಡೆದು ಶೀಘ್ರವೇ ಗುಣಮುಖರಾಗಬಹುದು. ವೈದ್ಯರು ನೀಡುವ ಚಿಕಿತ್ಸೆಯೊಂದಿಗೇ ಕೆಲವು ನೈಸರ್ಗಿಕ ಆಹಾರಗಳನ್ನೂ ವೈದ್ಯರ ಅನುಮತಿಯ ಮೇರೆಗೆ ಸೇವಿಸುವ ಮೂಲಕ ಗುಣಮುಖರಾಗುವ ಗತಿಯನ್ನು ಇನ್ನಷ್ಟು ತೀವ್ರವಾಗಿಸಬಹುದು. ಮಲೇರಿಯಾಕ್ಕೆ ಬಲಿಯಾದ ಪ್ರಮುಖ 5 ವ್ಯಕ್ತಿಗಳು

ಸೊಳ್ಳೆಯ ಕಡಿತದಿಂದ ನಮ್ಮ ರಕ್ತಕ್ಕೆ ಆಗಮಿಸುವ ಪ್ಲಾಸ್ಮೋಡಿಯಂ ಎಂಬ ಅತಿಸೂಕ್ಷ್ಮ ವೈರಾಣುಗಳು ರಕ್ತದ ಕೆಂಪುಕಣಗಳು ಗುಂಪುಗೂಡುವಂತೆ ಮಾಡುತ್ತವೆ. ಪ್ರಥಮವಾಗಿ ಇದು ನಮ್ಮ ಯಕೃತ್ತನ್ನು ಬಾಧಿಸುತ್ತದೆ. ಕ್ರಮೇಣ ದೇಹದ ಇತರ ಭಾಗಗಳನ್ನೂ ಬಾಧಿಸುತ್ತಾ ಹೋಗುತ್ತದೆ. ಈ ವೈರಾಣುಗಳನ್ನು ನಿಗ್ರಹಿಸಲು ದೇಹ ತಾಪಮಾನವನ್ನು ವಿಪರೀತವಾಗಿ ಏರಿಸುತ್ತದೆ. ಈ ಹಂತಕ್ಕೇರುವ ಮುನ್ನ ಸೂಕ್ತ ವಿಧಾನಗಳನ್ನು ಅಳವಡಿಸಿಕೊಂಡರೆ ವೈರಾಣುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ...

ಶುಂಠಿ

ಶುಂಠಿ

ಶುಂಠಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕಡಿಮೆ ಉರಿಯಲ್ಲಿ 20 ನಿಮಿಷಗಳ ಕಾಲ ಕಾಯಿಸಿ. ಇದನ್ನು ಬೆಳಗ್ಗೆ ಸ್ವಲ್ಪ ದಿನಗಳ ಕಾಲ ಸೇವಿಸಿ. ಶುಂಠಿ ಟೀಯಲ್ಲಿ ಜಿಂಜೆರೊಲ್ ಎಂಬ ಅಂಶವೊಂದಿರುತ್ತದೆ. ಇದು ಉರಿಯೂತ ನಿವಾರಕ ಗುಣವನ್ನು ಹೊಂದಿದ್ದು, ಆಂಟಿಬ್ಯಾಕ್ಟೀರಿಯಲ್ ಗುಣವನ್ನು ಸಹ ಹೊಂದಿರುತ್ತದೆ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ತುಳಸಿ ಎಲೆಗಳು

ತುಳಸಿ ಎಲೆಗಳು

ಕೊಂಚ ತುಳಸಿ ಎಲೆಗಳನ್ನು ಕೊಂಚ ಕಾಳುಮೆಣಸಿನೊಂದಿಗೆ ಅರೆದು ಈ ಲೇಪನವನ್ನು ಹಾಗೇ ನುಂಗಿಬಿಡಬೇಕು. ಇದರಿಂದ ದೇಹ ಬಿಸಿಯೇರುವುದರಿಂದ ತಪ್ಪುತ್ತದೆ ಹಾಗೂ ಮಲೇರಿಯಾ ವೈರಾಣುಗಳ ವಿರುದ್ದ ದೇಹ ಹೋರಾಡಲು ಹೆಚ್ಚಿನ ಶಕ್ತಿ ಲಭಿಸುತ್ತದೆ.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಒಂದು ವೇಳೆ ಮಲೇರಿಯಾ ರೋಗ ಉಲ್ಬಣಗೊಂಡಿದ್ದು ರೋಗಿ ಸುಸ್ತಾಗಿದ್ದರೆ ಮೆಂತೆ ಕಾಳುಗಳು ಅತ್ಯುತ್ತಮವಾಗಿವೆ.ಕೊಂಚ ಮೆಂತೆ ಕಾಳುಗಳನ್ನು ನೆನೆಸಿ ಹಾಗೇ ಅಥವಾ ಅರೆದು ಲೇಪನದ ರೂಪದಲ್ಲಿ ತಿನ್ನಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ವೈರಾಣುಗಳ ವಿರುದ್ಧ ಹೋರಾಡಲು ಮತ್ತು ನಿಗ್ರಹಿಸಲು ಸಾಧ್ಯವಾಗುತ್ತದೆ.

ಚಕ್ಕೆ

ಚಕ್ಕೆ

ಚಕ್ಕೆಯಲ್ಲಿ ಸಿನ್ನಾಮಲ್ಡಿಹೈಡ್ ಎಂಬ ಒಂದು ರಾಸಾಯನಿಕ ಇರುತ್ತದೆ. ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ಡಯೇರಿಯಾ, ಜ್ವರ ಮತ್ತು ತಲೆನೋವುಗಳನ್ನು ಕಡಿಮೆ ಮಾಡುತ್ತದೆ. ಬೆಳಗ್ಗೆ ಎದ್ದ ಕೂಡಲೆ ಕೆಲವು ದಿನ ಚಕ್ಕೆಯ ಟೀಯನ್ನು ಸೇವಿಸಿ.

ಕಿತ್ತಳೆ ರಸ

ಕಿತ್ತಳೆ ರಸ

ಕಿತ್ತಳೆ ರಸದಲ್ಲಿ ವಿಟಮಿನ್ ಸಿ ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕಿನಿಂದ ಬೇಗ ಗುಣಮುಖವಾಗಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಕಿತ್ತಳೆರಸವನ್ನು ತಪ್ಪದೆ ಸೇವಿಸಿ.

ನಿಂಬೆ

ನಿಂಬೆ

ನಿಂಬೆರಸದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ನಿಮ್ಮ ದೇಹದಲ್ಲಿರುವ ಸೋಂಕನ್ನು ಗುಣಪಡಿಸುತ್ತವೆ. ಜೊತೆಗೆ ನಿಂಬೆರಸವನ್ನು ಕೆಲವೊಂದು ದಿನ ಸೇವಿಸುತ್ತಾ ಇದ್ದಲ್ಲಿ ನೀವು ಬೇಗ ಗುಣಮುಖರಾಗುತ್ತೀರಿ.

ವಿಸರ್ಜನಾಂಗಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ

ವಿಸರ್ಜನಾಂಗಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ

ಬೆಚ್ಚಗಿನ ನೀರಿನಿಂದ ತೊಳೆಯುವ ಮೂಲಕ ನಿಮ್ಮ ನಿಮ್ಮ ವಿಸರ್ಜನಾಂಗಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಸಾಮಾನ್ಯವಾಗಿ ಮಲೇರಿಯಾ ಬಂದಾಗ ಡಯೇರಿಯಾ ಸಹ ಬರುತ್ತದೆ. ಸೋಂಕನ್ನು ನಿವಾರಿಸಲು ನಿಮ್ಮ ವಿಸರ್ಜನಾಂಗಗಳನ್ನು ಚೆನ್ನಾಗಿ ತೊಳೆದು ಇರಿಸಿಕೊಳ್ಳಿ.

ತೆಂಗಿನ ಎಣ್ಣೆ -ಬೇವಿನ ಎಣ್ಣೆ

ತೆಂಗಿನ ಎಣ್ಣೆ -ಬೇವಿನ ಎಣ್ಣೆ

ಒಂದು ಚಮಚ ತೆಂಗಿನ ಎಣ್ಣೆ ಮತ್ತು ಒಂದು ಚಮಚ ಬೇವಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಚರ್ಮದ ಮೇಲೆ ಮಲಗುವಾಗ ಹಚ್ಚಿಕೊಳ್ಳಿ. ಇದನ್ನು ನಿಮ್ಮ ಮಕ್ಕಳಿಗೂ ಬಳಸಬಹುದಾಗಿದ್ದು, ಇದು ನೈಸರ್ಗಿಕವಾಗಿದ್ದು ಸುರಕ್ಷಿತವೂ ಹೌದು. ಇದರಿಂದ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ

English summary

How To Treat Malaria Naturally

A parasite known as plasmodium causes malaria. How does this parasite get into the human body? Well, female anopheles mosquitoes carry this parasite. Now, let us discuss about some home remedies to get rid of malaria naturally. But wait! You need to consult a doctor when you are infected with malaria.
X
Desktop Bottom Promotion