For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಹೊಟ್ಟೆ ನೋವಿಗೆ-ಸಾಂತ್ವನ ನೀಡುವ ಸರಳ ಮನೆಮದ್ದುಗಳು

By Manu
|

ಮಹಿಳೆಯರ ಮಾಸಿಕ ದಿನಗಳ ಮುನ್ನಾ (ಮುಟ್ಟಿನ ದಿನ) ಮತ್ತು ನಂತರದ ದಿನಗಳಲ್ಲಿ ಕಾಡುವ ನೋವು ಅನುಭವಿಸಿದವರಿಗೇ ಗೊತ್ತು. ಇದರ ಕಾರಣ ನಿತ್ಯದ ಅವಶ್ಯಕ ಕೆಲಸಗಳಿಗೆಲ್ಲಾ ಆಗುವ ತೊಂದರೆ ಮತ್ತು ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ಹೆಚ್ಚಿನ ತೊಂದರೆ ಮತ್ತು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.

ಈ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ಹಲವಾರು ಹಾರ್ಮೋನುಗಳ ಕಾರಣ ಮಾನಸಿಕ ಉದ್ವೇಗ, ಅತಿಸೂಕ್ಷ್ಮಸಂವೇದನೆ, ಬದಲಾಗುವ ಮನೋಭಾವ, ಸುಸ್ತು, ಎಗರಾಡುವ ಪ್ರವೃತ್ತಿ, ಶೀಘ್ರವಾಗಿ ಸಿಟ್ಟಿಗೇಳುವ, ಕಿರಿಕಿರಿ ಅನುಭವಿಸುವ, ಮಾನಸಿಕ ಖಿನ್ನತೆ, ಏಕಾಗ್ರತೆಯಲ್ಲಿ ಕೊರತೆ ಮೊದಲಾದವು ಮಾನಸಿಕ ತೊಂದರೆಗಳಾದರೆ ಕೆಳಹೊಟ್ಟೆಯಲ್ಲಿ ಅತೀವ ನೋವು, ಹೊಟ್ಟೆಯುಬ್ಬರಿಕೆ, ಮುಖದಲ್ಲಿ ಮೊಡವೆಗಳು ಮೊದಲಾದವು ದೈಹಿಕ ತೊಂದರೆಗಳಾಗಿವೆ. ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

ತಜ್ಞರ ಪ್ರಕಾರ ಇದಕ್ಕೆ ಸೂಕ್ತ ಉತ್ತರವೆಂದರೆ ನಿಯಮಿತವಾಗಿ ವ್ಯಾಯಮ ಮಾಡುತ್ತಿರುವುದು. ಇದರ ಜೊತೆಗೇ ಹಲವು ಮನೆಮದ್ದುಗಳೂ ಲಭ್ಯವಿದ್ದು ಹಲವು ವರ್ಷಗಳಿಂದ ಮಹಿಳೆಯರು ಇದನ್ನು ಬಳಸುತ್ತಾ ಬಂದಿದ್ದಾರೆ. ಉದಾಹರಣೆಗೆ ಚೆಕ್ಕೆ ಪುಡಿ ಬೆರೆಸಿದ ನೀರು ಕುಡಿಯುವುದು, ಲ್ಯಾವೆಂಡರ್ ಎಣ್ಣೆಯ ಮಸಾಜ್, ಅರಿಶಿನ ಪುಡಿ ಸೇರಿಸಿದ ಹಾಲು ಕುಡಿಯುವುದು ಇತ್ಯಾದಿ. ಮುಟ್ಟಿನ ದಿನಗಳಲ್ಲಿ ಹೀಗೆಲ್ಲಾ ಮಾಡಬೇಡಿ! ಆದಷ್ಟು ಎಚ್ಚರದಿಂದಿರಿ...

ಇಂದಿನ ಲೇಖನದಲ್ಲಿ ಮುಟ್ಟಿನ ನೋವನ್ನು ನಿವಾರಿಸುವ ಕೆಲವೊಂದು ಮನೆಮದ್ದುಗಳೊಂದಿಗೆ ನಾವು ಬಂದಿದ್ದು ಇವುಗಳ ಸೇವನೆ ಸ್ವಲ್ಪವಾದರೂ ಆರಾಮವನ್ನು ಮುಟ್ಟಿನ ದಿನಗಳಲ್ಲಿ ನಿಮಗೆ ನೀಡಬಹುದು. ಹಾಗಿದ್ದರೆ ಆ ಪರಿಹಾರಗಳೇನು ಎಂಬುದನ್ನು ಅರಿತುಕೊಳ್ಳೋಣ....

ಮೊದಲು ಮಾಡಬೇಕಾದ ಕೆಲಸ- ಚೆನ್ನಾಗಿ ನೀರು ಕುಡಿಯಿರಿ!

ಮೊದಲು ಮಾಡಬೇಕಾದ ಕೆಲಸ- ಚೆನ್ನಾಗಿ ನೀರು ಕುಡಿಯಿರಿ!

ಕುಡಿಯುವ ನೀರಿನ ಸಾಮಾರ್ಥ್ಯವನ್ನು ಕಡಿಮೆಯಾಗಿ ಅಂದಾಜು ಮಾಡಬೇಡಿ. ಮುಟ್ಟಿನ ಅವಧಿಯಲ್ಲಿ ಆದಷ್ಟು ಹೆಚ್ಚಾಗಿ ನೀರು ಕುಡಿಯಿರಿ. ಪ್ರತಿ ದಿನ ಕನಿಷ್ಠ ಎರಡು ಲೀಟರ್ ನೀರು ಕುಡಿದರೆ, ನೀವು ಕಳೆದುಕೊಂಡಿರುವ ಚೈತನ್ಯವನ್ನು ಪುನಃ ಪಡೆಯಬಹುದು.

ಜೀರಿಗೆ ಹಾಕಿ ಕುದಿಸಿದ ನೀರು

ಜೀರಿಗೆ ಹಾಕಿ ಕುದಿಸಿದ ನೀರು

ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ಅದನ್ನು ಕುಡಿಯುವುದರಿಂದ ಮುಟ್ಟಿನ ಸೆಳೆತ, ಆಯಾಸ ಕಡಿಮೆಯಾಗುತ್ತದೆ. ಈ ನೀರನ್ನು ಐದು ನಿಮಷಗಳ ಕಾಲ ಕುದಿಸಿ ತಣಿಸಿದ ನಂತರ ಸೇವಿಸಿ. ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ಶುಂಠಿ ಹಾಕಿ ಕುದಿಸಿದ ನೀರು

ಶುಂಠಿ ಹಾಕಿ ಕುದಿಸಿದ ನೀರು

ಶುಂಠಿ ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತ್ರ ಅದ್ರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ. ಹಾಗೆಯೇ ಕುಡಿಯಲು ಸಾಧ್ಯವಾಗಿಲ್ಲ ಅಂದ್ರೆ ಜೇನುತುಪ್ಪ ಇಲ್ಲ ಸಕ್ಕರೆ ಅಥ್ವಾ ಬೆಲ್ಲ ಸೇರಿಸಿಯೂ ಸೇವಿಸ್ಬಹುದು. ಆ ದಿನಗಳಲ್ಲಿ ನಿಮ್ಮನ್ನ ಅತಿಯಾಗಿ ಕಾಡುವ ರಕ್ತಸ್ರಾವ ಸಮಸ್ಯೆಗೆ ಇದು ಕೂಡ ಉತ್ತಮ ರೀತಿಯಲ್ಲಿ ಪರಿಹಾರ ನೀಡಬಲ್ಲದು. ಬಿರುಬೇಸಿಗೆಯ ಧಗೆಯನ್ನು ತಂಪಾಗಿಸುವ ಶುಂಠಿ ಜ್ಯೂಸ್!

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ವಿಶೇಷವಾಗಿ ಮುಟ್ಟಿಗಿಂತ ಮೊದಲು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯಿ ಮುಟ್ಟಿನ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕಿಣ್ವ, (ಪಪಿಯನ್) ಗಳನ್ನು ಒಳಗೊಂಡಿದೆ. ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿವನ್ನು ಸಹನೀಯ ಮತ್ತು ಸುಲಭವಾಗಿ ಆಗುವಂತೆ ಮಾಡುತ್ತದೆ.

ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯಿರಿ

ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯಿರಿ

ಕ್ಯಾರೆಟ್ ಗಳು ಕೇವಲ ನಿಮ್ಮ ಕಣ್ಣುಗಳಿಗೆ ಆನಂದ ನೀಡುವುದು ಮಾತ್ರವಲ್ಲ, ಅವು ನಿಮ್ಮ ಮುಟ್ಟಿನ ಸಮಯದ ನೋವು ನೀವು ನಿವಾರಿಸಬಲ್ಲ ಶಕ್ತಿಯನ್ನೂ ಹೊಂದಿವೆ. ಋತುಚಕ್ರದ ಸಮಯದಲ್ಲಿ ರಕ್ತದ ಹರಿವು ಸುಲಭವಾಗಿ ಆಗಲು ವೈದ್ಯರು ಇಂದು ಲೋಟ ಕ್ಯಾರೆಟ್ ರಸವನ್ನು ಕುಡಿಯಲು ಸಲಹೆ ನೀಡುತ್ತಾರೆ.

ಸಿಹಿಗುಂಬಳ ಇಲ್ಲವೇ ಚೀನಿಕಾಯಿ

ಸಿಹಿಗುಂಬಳ ಇಲ್ಲವೇ ಚೀನಿಕಾಯಿ

ನೈಸರ್ಗಿಕವಾಗಿ ದೊರಕುವ ಮನೆಮದ್ದುಗಳಲ್ಲಿ ಇದೂ ಕೂಡ ಒಂದು. ಸಿಹಿಗುಂಬಳ ಅಥ್ವಾ ಹಳದಿ ಬಣ್ಣದಲ್ಲಿ ಬರುವ ಚೀನಿಕಾಯಿಯ ತಿರುಳನ್ನು ತೆಗೆದುಕೊಂಡು ರೂಮ್ ಟೆಂಪರೇಚರ್ ನಲ್ಲಿ ಸ್ವಲ್ಪ ಒಣಗಲು ಬಿಡಿ. ನಂತ್ರ ಅದನ್ನು ಮಿಕ್ಸಿ ಮಾಡ್ಕೊಂಡು ಸಕ್ಕರೆ ಮತ್ತು ಹಾಲು ಇಲ್ಲವೇ ಸಕ್ಕರೆ ಮತ್ತು ಮೊಸರು ಸೇರಿಸಿ ಪ್ರತಿದಿನ ಸೇವಿಸೋದ್ರಿಂದ ಋತುಚಕ್ರದ ಸಂದರ್ಬದಲ್ಲಿ ಅತಿಯಾದ ರಕ್ತಸ್ರಾವದಿಂದ ಬಳಲುವುದನ್ನು ತಪ್ಪಿಸಿಕೊಳ್ಳಬಹುದು.

ಮೂಸಂಬಿ ಜ್ಯೂಸ್

ಮೂಸಂಬಿ ಜ್ಯೂಸ್

ಫ್ರೆಶ್ ಜ್ಯೂಸ್ ಯಾವಾಗಲೂ ಕೂಡ ಆರೋಗ್ಯಕ್ಕೆ ಉತ್ತಮವೇ. ಮೂಸಂಬಿರಸಕ್ಕೆ ಎರಡು ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ, ದಿನಕ್ಕೆ ನಾಲ್ಕರಿಂದ ಐದು ಬಾರಿ ಸೇವಿಸಿ. ಮೂಸಂಬಿ ರಸದಲ್ಲಿ ನಿಮ್ಗೆ ವಿಟಮಿನ್ ಸಿ ಲಭ್ಯವಾಗುತ್ತೆ ಮತ್ತು ಅದಕ್ಕೆ ಸೇರಿಸಿದ ಲಿಂಬೆಯ ರಸ ಹೆಚ್ಚಿನ ರಕ್ತಸ್ರಾವವವನ್ನು ತಡೆಗಟ್ಟಿ ಆರಾಮದಾಯಕವಾಗಿರುವಂತೆ ಮಾಡುತ್ತೆ.

ಕಾಫಿಯ ಕುಡಿಬೇಡಿ

ಕಾಫಿಯ ಕುಡಿಬೇಡಿ

ಕೆಲವು ಹುಡುಗಿಯರಲ್ಲಿ ಕಾಫಿಯ ಸೇವನೆಯು ನೋವಿನ ಹೆಚ್ಚಳಕ್ಕೆ ಕಾರಣವಾಗಬಲ್ಲದು. ಒ೦ದು ವೇಳೆ ನೀವು ಕಾಫಿಯನ್ನು ಕುಡಿಯುವವರಾಗಿದ್ದು, ನೋವುಭರಿತ ಮುಟ್ಟಿನ ದಿನಗಳನ್ನು ಎದುರಿಸುತ್ತಿದ್ದಲ್ಲಿ, ಒ೦ದು ತಿ೦ಗಳ ಮಟ್ಟಿಗೆ ಕಾಫಿಯ ಸೇವನೆಯನ್ನು ತ್ಯಜಿಸಿರಿ ಹಾಗೂ ಏನಾದರೂ ಬದಲಾವಣೆಗಳು ಕ೦ಡುಬರುತ್ತವೆಯೇ ಎ೦ಬುದನ್ನು ಗಮನಿಸಿರಿ. ಒ೦ದು ವೇಳೆ ಹೀಗೆ ಮಾಡುವುದರಿ೦ದ ನೋವಿನ ತೀವ್ರತೆಯು ಕಡಿಮೆಗೊ೦ಡರೆ, ನೀವು ಕಾಫಿಯ ಸೇವನೆಯನ್ನೇ ಬಿಟ್ಟುಬಿಡುವುದರ ಕುರಿತು ಆಲೋಚಿಸುವುದು ಒಳಿತು.

ಕಿವಿ ಮಾತು

ಕಿವಿ ಮಾತು

ಒಬ್ಬೊಬ್ಬ ಮಹಿಳೆಯ ದೇಹ ಒಂದೊಂದು ರೀತಿ ಇರುತ್ತೆ. ಈ ಮೇಲಿನ ಎಲ್ಲಾ ಔಷಧಿಗಳು ಎಲ್ಲರಿಗೂ ಆಗಬೇಕೆಂದೇನೂ ಇಲ್ಲ. ಕೆಲವರಲ್ಲಿ ಚೆನ್ನಾಗಿ ಕೆಲಸ ಮಾಡ್ಬಹುದು. ಇನ್ನು ಕೆಲವರಿಗೆ ಪರಿಣಾಮ ಬೀರದೇ ಇರಬಹುದು. ಸಹಿಸಲು ಅಸಾಧ್ಯವಾದ ನೋವಿದ್ದು ಅತಿಯಾಗಿ ರಕ್ತಸ್ರಾವವಾಗ್ತಾ ಇದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಒಮ್ಮೆ ಪರಿಶೀಲಿಸಿಕೊಳ್ಳೋದು ಉತ್ತಮ.

English summary

How to reduce stomach pain during periods instantly

Painful periods can keep you home from school or work and can interrupt your daily activities. For some females, cramping begins in the lower abdomen, below the stomach area, a day or two before their menstrual period begins, and it continues for the first two or three days of the period.
X