'ಧೂಮಪಾನಿಯ ಕೆಮ್ಮನ್ನು' ಸರಳವಾಗಿ ನಿಯಂತ್ರಿಸುವ ಟ್ರಿಕ್ಸ್!

By: Arshad
Subscribe to Boldsky

ಒಂದು ದಮ್ಮು ಎಳೆದರೆ ಎರಡು ಕೆಮ್ಮು ಫ್ರೀ! ಧೂಮಪಾನದ ದುಷ್ಪರಿಣಾಮವನ್ನು ವಿವರಿಸುವ ಮಕ್ಕಳ ಈ ಅಣಕ ವಾಸ್ತವವನ್ನು ಸ್ಪಷ್ಟವಾಗಿಯೇ ವಿವರಿಸುತ್ತಿದೆ. ಒಮ್ಮೆ ಈ ಕೆಮ್ಮು ಆವರಿಸಿತು ಎಂದರೆ ಮುಂದಿನ ಹದಿನೈದು ಇಪ್ಪತ್ತು ದಿನಗಳವರೆಗೆ ಕಡಿಮೆಯಾಗುವುದೇ ಇಲ್ಲ..! ಧೂಮಪಾನದ ಹಾನಿ ತಡೆಯುವ 9 ಆಹಾರಗಳು 

ಧೂಮಪಾನ ಮಾಡಿದ್ದಕ್ಕೇ ನಿಮಗೆ ಕೆಮ್ಮು ಬಂದಿದ್ದರೆ, ಹಾಗೇ ಆಗಬೇಕು ನಿಮಗೆ ಎಂದು ಹೇಳಿ ಸಮಾಧಾನಪಟ್ಟುಕೊಳ್ಳಬಹುದು. ಆದರೆ ಧೂಮಪಾನಿಗಳು ಬಿಟ್ಟ ಹೊಗೆಯನ್ನು ಸೇವಿಸಿ ಮನೆಯ ಸದಸ್ಯರು, ಸಹೋದ್ಯೋಗಿಗಳಿಗೆ ಈ ಕೆಮ್ಮು ಎದುರಾದರೆ? ಹತ್ತೇ ಹತ್ತು ನಿಮಿಷದಲ್ಲಿ ಜ್ವರ, ಶೀತ, ಕೆಮ್ಮು-ಮಂಗಮಾಯ!

ಹೌದು, ಈ ಹೊಗೆಯ ಸೇವನೆಯಿಂದಲೂ ಕೆಮ್ಮು ನಿಧಾನವಾಗಿ ಪ್ರಾರಂಭವಾಗಿ ಸಮಯ ಕಳೆದಂತೆ ಹೆಚ್ಚುತ್ತಾ ಉಲ್ಬಣಾವಸ್ಥೆಗೆ ತಲುಪುತ್ತದೆ ಬಳಿಕ ನಿಧಾನವಾಗಿ ಉಡುಗುತ್ತದೆ.. ಇದನ್ನೇ ಸ್ಮೋಕರ್ಸ್ ಕಫ್ ಅಥವಾ ಧೂಮಪಾನಿಯ ಕೆಮ್ಮು ಎಂದು ಕರೆಯುತ್ತಾರೆ. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು 

ಸಾಮಾನ್ಯವಾಗಿ ಈ ಕೆಮ್ಮು ಒಣದಾಗಿದ್ದು ಕೆಲವರಿಗೆ ಮಾತ್ರ ಕಫವೂ ಒಳಗೊಂಡಿರುತ್ತದೆ. ಮತ್ತೆ ಹೊಗೆಯನ್ನು ಸೇವಿಸದೇ ಇದ್ದರೆ ಒಂದೆರಡು ದಿನಗಳಲ್ಲಿಯೇ ಇದು ತನ್ನಿಂತಾನೇ ಕಡಿಮೆಯಾಗುತ್ತದೆ. ಒಂದು ವೇಳೆ ಆಗದೇ ಇದ್ದರೆ ಮಾತ್ರ ವೈದ್ಯರ ಬಳಿ ಭೇಟಿ ನೀಡುವುದು ಅಗತ್ಯ. ಇದಕ್ಕೂ ಮುನ್ನ ಮನೆಯಲ್ಲಿಯೇ ತಯಾರಿಸಬಹುದಾದ ಕೆಲವು ಮನೆಮದ್ದುಗಳ ಮೂಲಕ ಈ ಕೆಮ್ಮನ್ನು ಸುಲಭವಾಗಿ ಮಣಿಸಬಹುದು.....  

ಪರಿಹಾರ #1

ಪರಿಹಾರ #1

ಅತ್ಯಂತ ಸುಲಭವಾದ ಪರಿಹಾರವೆಂದರೆ ನೀರು ಕುಡಿಯುವುದು. ದಿನವಿಡೀ ಸಾಧ್ಯವಾದಷ್ಟು ನೀರನ್ನು ಸತತವಾಗಿ ಕುಡಿಯಬೇಕು. ಈ ನೀರು ಸಾಧ್ಯವಾದಷ್ಟು ಬಿಸಿ ಇರುವುದು ಅಗತ್ಯ. ಇದರಿಂದ ಗಂಟಲಿನ ಒಳಭಾಗದಲ್ಲಿ ಅಂಟಿಕೊಂಡಿದ್ದ ಕಫ ಕರಗಿ ಸಡಿಲಗೊಂಡು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಅಲ್ಲದೇ ದೇಹಕ್ಕೆ ಹೆಚ್ಚಿನ ನೀರು ಲಭ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಲೂ ಸಾಧ್ಯವಾಗುತ್ತದೆ.

ಪರಿಹಾರ #2

ಪರಿಹಾರ #2

ಮಧುಮೇಹವಿಲ್ಲದ ವ್ಯಕ್ತಿಗಳು ದಿನಕ್ಕೆ ಮೂರು ಬಾರಿ ಒಂದು ಚಿಕ್ಕ ಚಮಚ ಜೇನನ್ನು ಸೇವಿಸಿದರೆ ಉತ್ತಮ. ಇದರ ಉರಿಯೂತ ನಿವಾರಕ ಗುಣ ಸೋಂಕನ್ನು ನಿವಾರಿಸುವ ಜೊತೆಗೇ ಬ್ಯಾಕ್ಟೀರಿಯಾಗಳನ್ನೂ ಎದುರಿಸಿ ಕಫವನ್ನು ಇಲ್ಲವಾಗಿಸಲು ನೆರವಾಗುತ್ತದೆ.

ಪರಿಹಾರ #3

ಪರಿಹಾರ #3

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂಚು ಚಿಕ್ಕ ಚಮಚ ಉಪ್ಪು ಸೇರಿಸಿ ಈ ನೀರಿನಿಂದ ಗಳಗಳಿಸಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡುವ ಮೂಲಕ ಬಾಯಿಯ ಒಳಗಿನ ತೇವಭಾಗದಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಕೆಮ್ಮಿನಿಂದ ಹೊರಬರಲು ಸಾಧ್ಯವಾಗುತ್ತದೆ.

ಪರಿಹಾರ #4

ಪರಿಹಾರ #4

ಒಂದು ಕಪ್ ಹಾಲನ್ನು ಕುದಿಸಿ ಇದಕ್ಕೆ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಸೇರಿಸಿ. ಈ ಹಾಲನ್ನು ಇನ್ನೂ ಒಂದೆರಡು ನಿಮಿಷ ಕುದಿಸಿ ಬಿಸಿಬಿಸಿಯಿದ್ದಂತೆಯೇ ಕುಡಿಯಿರಿ. ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಗಂಟಲಿನ ಸೋಂಕನ್ನು ನಿವಾರಿಸಲು ನೆರವಾಗುತ್ತದೆ.

ಪರಿಹಾರ #5

ಪರಿಹಾರ #5

ಒಂದು ಲೋಟ ನೀರಿನಲ್ಲಿ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಸುಮಾರು ಐದು ನಿಮಿಷಗಳ ಕಾಲ ಕುದಿಸಿ ಬಳಿಕ ಇದಕ್ಕೆ ಕೊಂಚ ಹಾಲು ಬೆರೆಸಿ. ನಂತರ ಇನ್ನೂ ಐದು ನಿಮಿಷ ಕುದಿಸಿದ ನಂತರ ಒಂದು ಚಿಟಿಕೆ ಅರಿಶಿನ ಬೆರೆಸಿ ಕುಡಿಯಿರಿ. ಶುಂಠಿ ಮತ್ತು ಅರಿಶಿನದಲ್ಲಿರುವ ಗುಣಪಡಿಸುವ ಗುಣ ಮತ್ತು ಉರಿಯೂತ ನಿವಾರಕ ಗುಣಗಳು ಕೆಮ್ಮನ್ನು ಗುಣಪಡಿಸಲು ನೆರವಾಗುತ್ತವೆ.

ಪರಿಹಾರ #6

ಪರಿಹಾರ #6

ದಿನಕ್ಕೆ ಕೆಲವು ಕಪ್ ಗಳಂತೆ ಹಸಿರು ಟೀ ಪೇಯವನ್ನು (ಗ್ರೀನ್ ಟೀ) ಕುಡಿಯುತ್ತಾ ಬಂದರೆ ಕೆಮ್ಮಿನಿಂದ ಶೀಘ್ರವಾಗಿ ಹೊರಬರಲು ಸಾಧ್ಯವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಕೆಮ್ಮನ್ನು ಶೀಘ್ರವಾಗಿ ಗುಣಪಡಿಸುತ್ತದೆ.

ಪರಿಹಾರ #7

ಪರಿಹಾರ #7

ಒಂದು ಕಪ್ ನೀರನ್ನು ಕುದಿಸಿ ಇದಕ್ಕೆ ಒಂದು ಇಂಚಿನಷ್ಟು ದೊಡ್ಡ ಹಸಿಶುಂಠಿಯ ತುಂಡನ್ನು ಜಜ್ಜಿ ಬೆರೆಸಿ. ಇದಕ್ಕೆ ಕೆಲವು ಹನಿ ಲಿಂಬೆರಸವನ್ನು ಬೆರೆಸಿ ಕುಡಿಯಿರಿ. ಇವೆರಡೂ ಕೆಮ್ಮನ್ನು ಕಡಿಮೆಗೊಳಿಸಲು ನೆರವಾಗುತ್ತವೆ.

 
English summary

How To Get Rid Of Smoker's Cough

If you are a smoker, you'll surely know what smokers cough is. This kind of cough could trouble you occasionally for 15-20 days. In fact, even passive smokers may also suffer this kind of cough. Here are some home remedies to try.
Please Wait while comments are loading...
Subscribe Newsletter