For Quick Alerts
ALLOW NOTIFICATIONS  
For Daily Alerts

ಮಂಡಿನೋವು ಸಮಸ್ಯೆ ಇದ್ದವರು ಒಮ್ಮೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ

By Hemanth
|

ವಯಸ್ಸಾಗುತ್ತಾ ಬಂದಂತೆ ಮಂಡಿ ನೋವಿನ ಸಮಸ್ಯೆಯು ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಕಾಣಸಿಗುವುದು. ಮಂಡಿಯಲ್ಲಿನ ಎಲುಬು ದುರ್ಬಲವಾಗುವ ಕಾರಣದಿಂದಾಗಿ ಮಂಡಿನೋವು ಬರುವುದು. ಆದರೆ ಇಂದಿನ ದಿನಗಳಲ್ಲಿ ಹದಿಹರೆಯದವರು ಮತ್ತು ಮಕ್ಕಳಲ್ಲೂ ಇಂತಹ ಸಮಸ್ಯೆ ಕಾಣಸಿಗುವುದು. ಇದಕ್ಕೆ ಕಾರಣ ಮಂಡಿಯಲ್ಲಿನ ಎಲುಬಿನಲ್ಲಿ ಬಿರುಕು ಅಥವಾ ಗಾಯವಾಗುವುದು. ಮಂಡಿ ನೋವಿನ ಸಮಸ್ಯೆ ಇರುವವರಿಗೆ ಹೆಚ್ಚಾಗಿ ಯಾವುದೇ ಕೆಲಸಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗಲ್ಲ. ಎಲುಬು ದುರ್ಬಲವಾಗುವ ಕಾರಣದಿಂದ ನೋವು ಮತ್ತಷ್ಟು ಹೆಚ್ಚಾಗುವುದು.

ಅದರಲ್ಲೂ ವಯಸ್ಸಾದವರಲ್ಲಿ ಈ ನೋವು ಅವರನ್ನು ದೈನಂದಿನ ಚಟವಟಿಕೆಯಲ್ಲಿ ತೊಡಗಿಕೊಳ್ಳದಂತೆ ಮಾಡುವುದು. ಮೂಳೆ ಮುರಿತ, ಗಾಯ, ಮಂಡಿ ಸ್ಥಳಾಂತರ ಮತ್ತು ಸಂಧಿವಾತದಿಂದಾಗಿ ಮಂಡಿನೋವು ಬರುವುದು. ಮಂಡಿ ಊದಿಕೊಳ್ಳುವುದು, ಬಿಗಿತ, ಕೆಂಪಾಗುವುದು ಇತ್ಯಾದಿಗಳು ಇದರ ಪ್ರಮುಖ ಲಕ್ಷಣಗಳಾಗಿವೆ.

ಮಂಡಿನೋವಿಗೆ ಸುಲಭವಾಗಿ ಸಿಗುವಂತಹ ಮನೆಮದ್ದನ್ನು ಬಳಸಿಕೊಂಡು ನೀವು ಜೀವನವನ್ನು ಆನಂದಿಸಬಹುದು. ಇದಕ್ಕೆ ದುಬಾರಿ ವೆಚ್ಚದ ಚಿಕಿತ್ಸೆ ಮಾಡಬೇಕಿಲ್ಲ. ಸರಿಯಾದ ಕ್ರಮದಲ್ಲಿ ಮನೆಮದ್ದನ್ನು ಬಳಸಿಕೊಂಡರೆ ಅದರಿಂದ ನಿಮಗೆ ಪರಿಹಾರ ಸಿಗುವುದು. ವಯಸ್ಸಾಗುವಾಗ ಬರುವ ಮಂಡಿನೋವು ಮತ್ತು ಸಂಧಿವಾತಕ್ಕೆ ಇದು ಒಳ್ಳೆಯದು. ಇದನ್ನು ಪ್ರಯೋಗಿಸುವ ಮೊದಲು ವೈದ್ಯರ ಸಲಹೆ ಪಡೆದರೆ ಒಳ್ಳೆಯದು....

ತಂಪು ಚಿಕಿತ್ಸೆ

ತಂಪು ಚಿಕಿತ್ಸೆ

ಸಂಧಿವಾತ, ಸ್ನಾಯುವಿನ ಒತ್ತಡ ಅಥವಾ ಗಾಯಾಳು ಸಮಸ್ಯೆ ಇದು ಯಾವುದರಿಂದಲೂ ಮಂಡಿ ನೋವು ಬಂದಿದ್ದರೂ ಶುಂಠಿಯು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಶುಂಠಿಯು ಮಂಡಿಯಲ್ಲಿನ ನೋವು ಮತ್ತು ಊತ ಕಡಿಮೆ ಮಾಡುವುದು.

ಒಂದು ಸಣ್ಣ ತುಂಡು ತಾಜಾ ಶುಂಠಿ ಜಜ್ಜಿಕೊಂಡು ಅದನ್ನು ಅರ್ಧ ಕಪ್ ನೀರಿಗೆ ಹಾಕಿ ಹತ್ತು ನಿಮಿಷ ಕಾಲ ಕುದಿಸಿ. ಇದನ್ನು ಸೋಸಿಕೊಂಡು ಸ್ವಲ್ಪ ಜೇನುತುಪ್ಪ ಲಿಂಬೆ ಹಾಕಿ. ನೋವು ನಿವಾರಣೆ ಆಗುವ ತನಕ ಈ ಪಾನೀಯವನ್ನು ದಿನನಿತ್ಯ ಎರಡರಿಂದ ಮೂರು ಕಪ್ ಸೇವಿಸಿ. ಶುಂಠಿ ಎಣ್ಣೆಯಿಂದ ಪ್ರತಿನಿತ್ಯ ನೀವು ಮಂಡಿಗೆ ಎರಡರಿಂದ ಮೂರು ಸಲ ಮಸಾಜ್ ಮಾಡಿದರೆ ಫಲಿತಾಂಶ ಸಿಗುವುದು.

ಲಿಂಬೆ

ಲಿಂಬೆ

ಸಂಧಿವಾತದಿಂದ ಕಾಣಿಸಿಕೊಳ್ಳುವ ಮಂಡಿನೋವಿಗೆ ಲಿಂಬೆಯು ತುಂಬಾ ಪರಿಣಾಮಕಾರಿ ಮನೆ ಔಷಧಿಯಾಗಿದೆ. ಇದರಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ಸಂಧಿವಾತಕ್ಕೆ ಕಾರಣವಾಗುವಂತಹ ಯೂರಿಕ್ ಆಮ್ಲದ ಕಲ್ಲುಗಳನ್ನು ಕರಗಿಸುವುದು. ಒಂದು ಅಥವಾ ಎರಡು ಲಿಂಬೆಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ.ಇದನ್ನು ಒಂದು ಶುದ್ಧ ಬಟ್ಟೆಯಲ್ಲಿ ಕಟ್ಟಿ ಬಿಸಿಯಾದ ಎಳ್ಳೆಣ್ಣೆಯಲ್ಲಿ ಮುಳುಗಿಸಿ.

ಬಟ್ಟೆಯನ್ನು ನೋವು ಇರುವ ಮಂಡಿ ಮೇಲೆ ಹತ್ತು ನಿಮಿಷ ಕಾಲ ಇಡಿ.

ಸಂಪೂರ್ಣವಾಗಿ ಗುಣಮುಖವಾಗುವ ತನಕ ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಒಂದು ಲಿಂಬೆ ರಸ ಹಾಕಿಕೊಂಡು ಕುಡಿದರೆ ತುಂಬಾ ಪರಿಣಾಮಕಾರಿಯಾಗಿರುವುದು.

ಅಡುಗೆಮನೆಯಲ್ಲಿ ಸದಾ ಇರುವ ಓಮದ ಕಾಳು

ಅಡುಗೆಮನೆಯಲ್ಲಿ ಸದಾ ಇರುವ ಓಮದ ಕಾಳು

ಪುಟ್ಟ ಜೀರಿಗೆಯಂತೆ ಕಾಣುವ ಓಮದ ಕಾಳುಗಳಲ್ಲಿರುವ ಅರಿವಳಿಕಾ ಮತ್ತು ಉರಿಯೂತ ನಿವಾರಕ ಗುಣಗಳು ಮಂಡಿನೋವಿನ ಶಮನಕ್ಕೂ ಉತ್ತಮ ಪರಿಹಾರ ನೀಡುತ್ತವೆ. ಉರಿಯೂತ ಅಥವಾ ಸಂಧಿವಾತದಿಂದಾಗಿ ಎದುರಾಗಿದ್ದ ಊತ, ಚರ್ಮ ಕೆಂಪಗಾಗಿರುವುದು ಮೊದಲಾದ ತೊಂದರೆಗಳೂ ಸುಲಭವಾಗಿ ಮತ್ತು ಶೀಘ್ರವಾಗಿ ಕಡಿಮೆಯಾಗುತ್ತದೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಇದಕ್ಕಾಗಿ ಕೊಂಚ ಓಮದ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಅರೆದು (ಮಿಕ್ಸಿಯಲ್ಲಿ ಅರೆಯಬಾರದು, ಬಿಸಿಗೆ ಸುಟ್ಟುಹೋಗುತ್ತದೆ) ಈ ಲೇಪನವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

ಅರಿಶಿನ

ಅರಿಶಿನ

ಮಂಡಿ ನೋವು ನಿವಾರಣೆಗೆ ನೈಸರ್ಗಿಕವಾದ ಮನೆಮದ್ದು ಎಂದರೆ ಅರಿಶಿನ. ಇದರಲ್ಲಿ ಇರುವಂತಹ ಕುರ್ಕ್ಯೂಮಿನ್ ಎನ್ನುವ ಉರಿಯೂತ ಶಮನಕಾರಿ ಅಂಶ ಮತ್ತು ಆ್ಯಂಟಿಆಕ್ಸಿಡೆಂಟ್ ನೋವು ನಿವಾರಿಸುವುದು.ಮಂಡಿ ನೋವಿಗೆ ಪ್ರಮುಖ ಕಾರಣವಾಗಿರುವ ಸಂಧಿವಾತದ ಪ್ರಗತಿಯನ್ನು ಅರಶಿನವು ಕಡಿಮೆ ಮಾಡುತ್ತದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಆ್ಯಂಡ್ ಆಲ್ಟರ್ನೇಟಿವ್ ಮೆಡಿಸಿನ್(ಎನ್ ಸಿಸಿಎಎಂ) ವರದಿಯು ಹೇಳಿದೆ.ಒಂದು ಕಪ್ ನೀರಿಗೆ ಅರ್ಥ ಚಮಚ ಶುಂಠಿ ಮತ್ತು ಅರ್ಧ ಚಮಚ ಅರಿಶಿನ ಹಾಕಿ ಹತ್ತು ನಿಮಿಷ ಕಾಲ ಕುದಿಸಿ. ಸೋಸಿಕೊಂಡ ಬಳಿಕ ರುಚಿಗೆ ತಕ್ಕಷ್ಟು ಜೇನುತುಪ್ಪ ಹಾಕಿ ಮತ್ತು ದಿನದಲ್ಲಿ ಎರಡು ಸಲ ಕುಡಿಯಿರಿ.ಒಂದು ಲೋಟ ಹಾಲಿನಲ್ಲಿ ಒಂದು ಚಮಚ ಅರಿಶಿನ ಹಾಕಿಕೊಂಡು ಕುದಿಸಿ.

ಜೇನುತುಪ್ಪ ಹಾಕಿಕೊಂಡು ದಿನದಲ್ಲಿ ಒಂದು ಸಲ ಕುಡಿಯಿರಿ.

 ಅರಿಶಿನ ಬೆರೆಸಿದ ಹಾಲು ಕುಡಿಯಿರಿ

ಅರಿಶಿನ ಬೆರೆಸಿದ ಹಾಲು ಕುಡಿಯಿರಿ

ಅರಿಶಿನ ಬೆರೆಸಿದ ಹಾಲು ಕುಡಿಯಿರಿ ಅರಿಶಿನ ಬೆರೆತ ಹಾಲು ಸೇವನೆ ಮಂಡಿ ನೋವಿಗೆ ಉಪಶಮನವನ್ನು ಒದಗಿಸುವ ಒಂದು ಮನೆಮದ್ದಾಗಿದ್ದು ನಿಮಗೆ ತಕ್ಷಣ ಆರಾಮವನ್ನು ನೀಡುತ್ತದೆ. ದಿನವೂ ಅರಿಶಿನ ಬೆರೆತ ಹಾಲನ್ನು ಕುಡಿಯಿರಿ. ಈ ಸಾಂಬಾರು ಪದಾರ್ಥವು ಉತ್ಕರ್ಷಣ ನಿರೋಧಿ, ಆಂಟಿಸೆಪ್ಟಿಕ್ ಆಗಿದೆ. ಹಾಲು ಮೂಳೆಗಳಿಗೆ ಅತ್ಯುತ್ತಮ. ಅರಿಶಿನದ ಹಾಲು ತಯಾರಿಸುವ ವಿಧಾನ.... ಹಸಿಯಾಗಿರುವ ಅರಿಶಿನದ ಕೊಂಬಿನ ಸುಮಾರು ಒಂದು ಇಂಚಿನಷ್ಟು ತುಂಡನ್ನು ಜಜ್ಜಿ ಕುದಿಯುತ್ತಿರುವ ಹಾಲಿನಲ್ಲಿ ಸೇರಿಸಿ. ಈಗ ಉರಿಯನ್ನು ಅತಿಚಿಕ್ಕದಾಗಿ ಮಾಡಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ. ಬಳಿಕ ಅರಿಶಿನದ ತುಂಡನ್ನು ಸೋಸಿ ತೆಗೆಯಿರಿ. ಈ ಹಾಲನ್ನು ತಣಿದ ಬಳಿಕವೇ ಕುಡಿಯಿರಿ. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು.

ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಯ ಮಸಾಜ್ ಮಾಡಿ

ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಯ ಮಸಾಜ್ ಮಾಡಿ

ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಬಿಸಿ ಮಾಡಿದ ಎಣ್ಣೆಯನ್ನು ನೋವಿರುವ ಜಾಗಕ್ಕೆ 10-15 ನಿಮಿಷಗಳಿಗೆ ಹಚ್ಚಿ ಹಾಗೂ ವೃತ್ತಾಕಾರವಾಗಿ ಮಸಾಜ್ ಮಾಡಿ. ಎಣ್ಣೆ ಮಸಾಜ್ ನೋವಿನಿಂದ ತ್ವರಿತ ಆರಾಮವನ್ನು ನೀಡುತ್ತದೆ.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಪುದೀನಾ ಎಣ್ಣೆಯನ್ನು ನಿಮಗೆ ನೋವು ಇರುವ ಮಂಡಿಯ ಮೇಲೆ ಹಾಕಿ ಮಸಾಜ್ ಮಾಡಿ. ಇದರಲ್ಲಿರುವ ತಂಪುಕಾರಕ ಗುಣಗಳು ನೋವನ್ನು ನಿವಾರಿಸುತ್ತದೆ. ಹೀಗಾಗಿ ಪುದೀನಾ ಎಣ್ಣೆಯು ಸಹ ಒಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ.

ತಂಪು ಚಿಕಿತ್ಸೆ

ತಂಪು ಚಿಕಿತ್ಸೆ

ಅತಿಯಾಗಿ ನೋವು ಉಂಟು ಮಾಡುತ್ತಿರುವ ಮಂಡಿಗೆ ಮಂಜುಗಡ್ಡೆಯ ತಂಪು ಚಿಕಿತ್ಸೆ ನೀಡಿದರೆ ಆಗ ನೋವು ಮತ್ತು ಊತ ಕಡಿಮೆಯಾಗುವುದು. ತಂಪು ರಕ್ತನಾಳಗಳನ್ನು ಕುಗ್ಗಿಸುವುದು. ಇದರಿಂದ ಬಾಧಿತ ಜಾಗಕ್ಕೆ ರಕ್ತಸಂಚಾರ ಕಡಿಮೆಯಾಗಿ ಊತ ತಗ್ಗುವುದು. ಇದರಿಂದ ನಿಮಗೆ ನೋವಿನಿಂದ ನಿವಾರಣೆ ಸಿಗುವುದು. ಒಂದು ಟವೆಲ್ ನಲ್ಲಿ ಮಂಜುಗಡ್ಡೆ ತುಂಡುಗಳನ್ನು ಕಟ್ಟಿಕೊಳ್ಳಿ.

ಇದನ್ನು ಸುಮಾರು 10-20 ನಿಮಿಷ ಕಾಲ ಮಂಡಿ ಮೇಲೆ ಇಟ್ಟು ಒತ್ತಡ ಹಾಕಿ.

ದಿನದಲ್ಲಿ ಎರಡರಿಂದ ಮೂರು ಸಲ ನೋವು ನಿವಾರಣೆಯಾಗುವ ತನಕ ಹೀಗೆ ಮಾಡಿ.

ದೀರ್ಘಕಾಲದ ನೋವಿದ್ದರೆ ಬಿಸಿ ಹಾಗೂ ತಂಪು ಒತ್ತಡ ನೀಡಿ ನೋವು ಕಡಿಮೆ ಮಾಡಬಹುದು. ತಂಪು ಒತ್ತಡ ನೀಡಲು ಶೀತಲೀಕರಿಸಿದ ಬೀಜಗಳನ್ನು ಬಳಸಬಹುದು.

ಸಯನ್ನೆ ಕರಿಮೆಣಸಿನ ಕಾಳು

ಸಯನ್ನೆ ಕರಿಮೆಣಸಿನ ಕಾಳು

ಸಯನ್ನೆ ಕರಿಮೆಣಸಿನ ಕಾಳಿನಲ್ಲಿ ಕಾಪ್ಸಿಯನ್ ಎನ್ನುವ ಅಂಶವಿದೆ. ಇದು ನೋವು ನಿವಾರಕವಾಗಿ ಕೆಲಸ ಮಾಡುವುದು. ಇದು ನೈಸರ್ಗಿಕ ನೋವು ಶಮನಕಾರಿ ಗುಣಗಳನ್ನು ಹೊಂದಿದೆ. ಇದು ಮಂಡಿಯಲ್ಲಿ ಬಿಸಿಯಾದ ಸ್ಪರ್ಶವನ್ನು ಉಂಟು ಮಾಡಿ ನೋವನ್ನು ಕಡಿಮೆ ಮಾಡುವುದು. ಅರ್ಧ ಕಪ್ ಬಿಸಿ ಆಲಿವ್ ತೈಲಕ್ಕೆ ಎರಡು ಚಮಚ ಸಯನ್ನೆ ಕರಿಮೆಣಸಿನ ಹುಡಿ ಹಾಕಿ ಮಿಶ್ರಣ ಮಾಡಿ. ಈ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ದಿನದಲ್ಲಿ ಎರಡು ಸಲ ಒಂದು ವಾರ ಕಾಲ ಹಚ್ಚಿ.

ಒಂದು ಕಪ್ ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಅರ್ಧ ಚಮಚದಷ್ಟು ಸಯನ್ನೆ ಕರಿಮೆಣಸಿನ ಹುಡಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣಕ್ಕೆ ಸ್ವಚ್ಛವಾಗಿರುವ ಬಟ್ಟೆಯನ್ನು ಅದ್ದಿ ಅದನ್ನು ಸುಮಾರು 20 ನಿಮಿಷ ಕಾಲ ದಿನದಲ್ಲಿ ಒಂದು ಅಥವಾ ಎರಡು ಸಲ ನೋವು ನಿವಾರಣೆ ಆಗುವ ತನಕ ಮಂಡಿ ಮೇಲೆ ಹಾಕಿಡಿ. ಕಾಪ್ಸಿಯನ್ 0.0125ಯಷ್ಟು ಇರುವಂತಹ ಜೆಲ್ ನ್ನು ನೀವು ಬಳಸಬಹುದು. ಇದು ಕೂಡ ನೋವು ನಿವಾರಣೆ ಮಾಡುವುದು.

ಮ್ಯಾಟ್ ವ್ಯಾಯಾಮ

ಮ್ಯಾಟ್ ವ್ಯಾಯಾಮ

ಲೆಗ್ ಲಿಫ್ಟ್, ಮೊಣಕಾಲು ಲಿಫ್ಟ್ ಮುಂತಾದವು ಕೆಲವು ಮ್ಯಾಟ್ ವ್ಯಾಯಾಮಗಳು ಇವು ಮೊಣಕಾಲು ನೋವು ಕಡಿಮೆಗೊಳಿಸಲು ಸಾಕಷ್ಟು ಸಹಾಯಕವಾಗಿವೆ. ಮ್ಯಾಟ್ ವ್ಯಾಯಾಮ, ಮನೆಯಲ್ಲಿ ಯಾವುದೇ ಸಮಯದಲ್ಲಿ ಮಾಡಬಹುದು. ಕಾಲನ್ನು ಎತ್ತುವಾಗ ನಿಮ್ಮ ಮಂಡಿಗಳನ್ನು ಬಗ್ಗಿಸುವಂತಿಲ್ಲ. ಕೆಲವು ಇಂಚುಗಳಷ್ಟು ಕಾಲನ್ನು ಮೇಲೇರಿಸಿ. ಈ ವ್ಯಾಯಾಮ ಮೊಣಕಾಲಿನ ನೋವು ನಿವಾರಣೆಗೆ ಅತ್ಯುತ್ತಮವಾದದ್ದು.

ಸ್ಟೆಪ್ ಅಪ್

ಸ್ಟೆಪ್ ಅಪ್

ಮೆಟ್ಟಿಲು ಅಥವಾ ಸ್ಟೆಪ್ ಅಪ್ ವ್ಯಾಯಾಮ ಅನೇಕ ಪ್ರಯೋಜನಗಳನ್ನು ಹೊಂದಿದ್ದು ಹೃದಯ ವ್ಯಾಯಾಮವಾಗಿದೆ. ಈ ವ್ಯಾಯಾಮ, ಹೃದಯ ಬಡಿತಗಳನ್ನು ಹೆಚ್ಚಿಸುತ್ತದೆ, ದೇಹದಲ್ಲಿ ಶಾಖ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ಇಡೀ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಸ್ಟೆಪ್ ಅಪ್ ಮಾಡುವಾಗ ಮಂಡಿಯನ್ನು ಬಗ್ಗಿಸಕೂಡದು. ಇದು ನೇರ ಮತ್ತು ಸ್ಥಿರವಾಗಿರಬೇಕು. ಒಂದು ನಿಮಿಷಗಳ ನಿರಂತರ ಸ್ಟೆಪ್ ಅಪ್ ವ್ಯಾಯಾಮ ಮಂಡಿಗಳಿಗೆ ಲಾಭಕರವಾಗಿರುತ್ತದೆ. ಸ್ಟೆಪ್ ಅಪ್ ವ್ಯಾಯಾಮ ಮೊಣಕಾಲನ್ನು ಬೆಚ್ಚಗಾಗಿಸುವ ಮತ್ತು ಅದರ ಮೇಲೆ ಯಾವುದೇ ತೀವ್ರವಾದ ಒತ್ತಡ ಬೀಳದಂತೆ ಕಡಿಮೆ ಮಾಡುತ್ತದೆ. ಇದು ಯಾವುದೇ ರೀತಿಯ ಮೊಣಕಾಲು ಗಾಯದಿಂದ ಬಳಲುತ್ತಿರುವ ನೀವು ಮಾಡಬಹುದಾದ ಒಂದು ತ್ವರಿತ ವ್ಯಾಯಾಮ.

ಯೋಗ

ಯೋಗ

ಯಾವುದೇ ಮೊಣಕಾಲು ಗಾಯ ಸಂಭವಿಸಿದಾಗ ಮಾಡಬಹುದಾದ ಮತ್ತೊಂದು ಉತ್ತಮ ವ್ಯಾಯಾಮ ಯೋಗ. ಯೋಗ ನಿಧಾನವಾಗಿ ಸ್ನಾಯುಗಳನ್ನು ಸಡಿಲಗೊಳಿಸಿ, ಮಂಡಿಗಳ ಮೇಲೆ ಯಾವುದೇ ಒತ್ತಡ ಅಥವಾ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಕೇವಲ ಕಾಲುಗಳು ಮತ್ತು ಮೊಣಕಾಲುಗಳ ವಿಶ್ರಾಂತಿಗೆ ಮೀಸಲಾದ ಅನೇಕ ಯೋಗ ಆಸನಗಳಿವೆ. ಯೋಗ, ಇತರ ವ್ಯಾಯಾಮಗಳಿಗೆ ಹೋಲಿಸಿದರೆ ದೀರ್ಘಾವಧಿ ಪರಿಣಾಮಗಳನ್ನು ಹೊಂದಿದೆ. ಕೇವಲ " ಸೂರ್ಯ ನಮಸ್ಕಾರ" ಒಂದೇ ಮಂಡಿ ನೋವು ನಿವಾರಿಸಲು ಸಹಾಯ ಮಾಡಬಹುದು.

ಕರ್ಪೂರದ ಎಣ್ಣೆ

ಕರ್ಪೂರದ ಎಣ್ಣೆ

ನೋವಿರುವ ಭಾಗಕ್ಕೆ ಕರ್ಪೂರದ ಎಣ್ಣೆ ಹಚ್ಚುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಸೆಳೆತ ಮತ್ತು ಒತ್ತಡವನ್ನು ನಿವಾರಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕರ್ಪೂರದ ಎಣ್ಣೆ ಸಿದ್ಧರೂಪದಲ್ಲಿ ಸಿಗುತ್ತದೆಯಾದರೂ ಎಲ್ಲೆಡೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ನಗರದಲ್ಲಿ ಲಭ್ಯವಿಲ್ಲದಿದ್ದರೆ ನೀವೇ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.ಇದಕ್ಕಾಗಿ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ, ಅಂದರೆ ಬರೆ ಕರಗಿದರೆ ಸಾಕು, ಕುದಿ ಬರಬಾರದು, ಇದಕ್ಕೆ ಒಂದು ಚಿಕ್ಕಚಮಚ ಪುಡಿಮಾಡಿದ ಕರ್ಪೂರದ ಬಿಲ್ಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಣಿಯಲು ಬಿಟ್ಟು ಒಂದು ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿ. ಮಂಡಿನೋವಿದ್ದರೆ ದಿನಕ್ಕೆರಡು ಬಾರಿ ಕೊಂಚ ಪ್ರಮಾಣವನ್ನು ನೋವಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ. ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

English summary

Home Remedies For Knee Pain Relief

Pain in the knees can be caused by weakened bone structure, and wear and tear due to aging. Other common causes include fractures, ligament injuries, meniscus injuries, dislocation of the knee joint and stiffness in the joint due to arthritis, lupus and other chronic ailments. In addition to pain, you may have symptoms like stiffness in the knee, noticeable swelling, redness, numbness in the affected leg and difficulty walking or standing. Don’t let knee pain sideline you from doing the things you enjoy. You can take care of your knee pain with some simple and easy home remedies.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more