For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ಜ್ವರ ಬಂದಿದ್ದರೆ, ನಿಮ್ಮ ಆಹಾರ ಪಥ್ಯ ಹೀಗಿರಲಿ

By Arshad
|

ಮುಂಗಾರುಮಳೆಯ ಆಗಮನದೊಂದಿಗೇ ಸಾಂಕ್ರಾಮಿಕ ರೋಗಗಳೂ ಆಗಮಿಸುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಾಗಿರುವ ಡೆಂಘಿ ಅಥವಾ ಡೆಂಗ್ಯೂ ಜ್ವರವೂ ಏರುಗತಿಯಲ್ಲಿ ಆವರಿಸುತ್ತಿದೆ. (dengue ಎಂಬ ಪದ ಸಾಮಾನ್ಯವಾಗಿ ಡೆಂಗ್ಯೂ ಎಂದೇ ತಪ್ಪಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಆದರೆ ವೈದ್ಯಕೀಯವಾಗಿ ಡೆಂಘಿ ಎಂಬುದೇ ಸರಿಯಾದ ಉಚ್ಛಾರಣೆಯಾಗಿದೆ) ಇದೊಂದು ಅಪಾಯಕಾರಿಯಾಗಿದೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.


ಡೆಂಗ್ಯೂ ಜ್ವರವನ್ನು ಹತೋಟಿಯಲ್ಲಿಡುವ ಟಾಪ್ ಫುಡ್

ಆದ್ದರಿಂದ ಈ ಜ್ವರದ ಮುನ್ಸೂಚನೆಗಳು ಕಂಡುಬರುತ್ತಿದ್ದಂತೆಯೇ ಸೂಕ್ತ ಚಿಕಿತ್ಸೆ ಹಾಗೂ ಸಾಕಷ್ಟು ವಿಶ್ರಾಂತಿ ಪಡೆಯುವ ಮೂಲಕ ಈ ಜ್ವರದ ಮೇಲೆ ಹತೋಟಿ ಸಾಧಿಸಬಹುದು. ಈ ಸಮಯದಲ್ಲಿ ವೈದ್ಯರು ಔಷಧಿಗಳ ಜೊತೆಗೇ ರೋಗಿ ಪಾಲಿಸಬೇಕಾದ ಕೆಲವು ಸೂಚನೆಗಳನ್ನೂ ನೀಡುತ್ತಾರೆ. ಈ ಸೂಚನೆಗಳನ್ನು ಪಾಲಿಸುವ ಮೂಲಕ ಜ್ವರವನ್ನು ಶೀಘ್ರವೇ ಕಡಿಮೆ ಮಾಡಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ....

ಸಾಕಷ್ಟು ದ್ರವಾಹಾರ ಸೇವಿಸಿ

ಸಾಕಷ್ಟು ದ್ರವಾಹಾರ ಸೇವಿಸಿ

ಡೆಂಗ್ಯೂ ಜ್ವರ ಎಂದು ಗೊತ್ತಾದ ಬಳಿಕ ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ದ್ರವಾಹಾರವನ್ನು ಸೇವಿಸಬೇಕು. ಎಳನೀರು, ತಾಜಾ ಹಣ್ಣಿನ ರಸ, ಓ ಆರ್ ಎಸ್ (oral rehydration solution) ಮೊದಲಾದವು ನಿಮ್ಮ ದೇಹ ಕಳೆದುಕೊಂಡಿದ್ದ ನೀರಿನ ಅಂಶವನ್ನು ಮರುತುಂಬಿಸಲು ನೆರವಾಗುತ್ತವೆ.

ಸಾಕಷ್ಟು ದ್ರವಾಹಾರ ಸೇವಿಸಿ

ಸಾಕಷ್ಟು ದ್ರವಾಹಾರ ಸೇವಿಸಿ

ದೇಹದಲ್ಲಿ ನೀರಿನ ಅಂಶ ಹೆಚ್ಚಿದ್ದಷ್ಟೂ ಶರೀರದಿಂದ ಕಲ್ಮಶಗಳನ್ನು ಹೊರಹಾಕುವ ಗತಿಯೂ ತೀವ್ರಗೊಳ್ಳುತ್ತದೆ ಹಾಗೂ ಈ ಮೂಲಕ ವೈರಸ್ಸುಗಳನ್ನು ಮೂತ್ರದ ಮೂಲಕ ಹೊರಹಾಕಲು ನೆರವಾಗುತ್ತದೆ. ಈ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಈ ವೈರಸ್ಸುಗಳನ್ನು ನಿಗ್ರಹಿಸಲು ಸಾಧ್ಯವಾಗಿ ಜ್ವರ ಶೀಘ್ರವೇ ಕಡಿಮೆಯಾಗುತ್ತದೆ.

ಸೂಕ್ತ ಆಹಾರವನ್ನು ಸೇವಿಸಿ

ಸೂಕ್ತ ಆಹಾರವನ್ನು ಸೇವಿಸಿ

ಡೆಂಗ್ಯೂ ಜ್ವರ ಆವರಿಸಿದಾಗ ದೇಹದಲ್ಲಿ ಶಕ್ತಿ ತುಂಬಾ ಕಡಿಮೆಯಾಗುತ್ತದೆ. ಈ ಶಕ್ತಿಯನ್ನು ಮತ್ತೆ ಪಡೆಯಬೇಕಾದರೆ ಶರೀರಕ್ಕೆ ಹೆಚ್ಚಿನ ಪೌಷ್ಟಿಕಾಂಶಗಳ ಅಗತ್ಯವಿದೆ. ನಿಮ್ಮ ಊಟದಲ್ಲಿ ಕೊಂಚ ವೈವಿಧ್ಯತೆಯನ್ನು ಅನುಸರಿಸುವ ಮೂಲಕ ಜ್ವರದ ಕಾರಣ ನಾಲಿಗೆಯ ರುಚಿ ಕಳೆದುಕೊಂಡಿರುವುದನ್ನು ಕೊಂಚ ಮಟ್ಟಿಗೆ ಸರಿಪಡಿಸಬಹುದು.ಉತ್ತಮ ಆಯ್ಕೆ ಎಂದರೆ ಒಣಫಲಗಳು, ಸೂಪ್, ಸೇಬುಹಣ್ಣು, ಬಾಳೆಹಣ್ಣು, ಬೇಯಿಸಿದ ತರಕಾರಿ ಮೊದಲಾದವು. ರೋಗಿ ಬಯಸಿದ ಆಹಾರವನ್ನು ಕೊಂಚ ಹೆಚ್ಚೇ ಪ್ರಮಾಣದಲ್ಲಿ ಸೇವಿಸುವ ಮೂಲಕದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭಿಸುತ್ತದೆ ಹಾಗೂ ಜ್ವರದಿಂದ ಶೀಘ್ರವೇ ಗುಣಮುಖರಾಗಲು ನೆರವಾಗುತ್ತದೆ.

ಎಣ್ಣೆಯ ಮತ್ತು ಮಸಾಲೆಯುಕ್ತ ಆಹಾರ ತ್ಯಜಿಸಿ

ಎಣ್ಣೆಯ ಮತ್ತು ಮಸಾಲೆಯುಕ್ತ ಆಹಾರ ತ್ಯಜಿಸಿ

ಜ್ವರವಿದ್ದಾಗ ರೋಗಿ ಎಣ್ಣೆ ಮತ್ತು ಮಸಾಲೆಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಹುರಿದ, ಕರಿದ ತಿಂಡಿಗಳೂ ಬೇಡ. ಏಕೆಂದರೆ ಡೆಂಘಿ ಜ್ವರದ ವೈರಸ್ಸುಗಳು ಮುಖ್ಯವಾಗಿ ನಮ್ಮ ಯಕೃತ್ ಅನ್ನು ಧಾಳಿಗೆ ಗುರಿಯಾಗಿರಿಸುತ್ತವೆ. ಎಣ್ಣೆಯ ಮತ್ತು ಮಸಾಲೆಯ ಆಹಾರದಿಂದ ಯಕೃತ್ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಆಗ ಡೆಂಘಿ ವೈರಸ್ಸುಗಳಿಗೆ ಯಕೃತ್ ಮೇಲೆ ವಿಜಯ ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಬಾರದು ಎಂದರೆ ಜ್ವರ ಬಿಡುವವರೆಗಾದರೂ ಎಣ್ಣೆ ಮಸಾಲೆಗಳಿಗೆ ವಿದಾಯ ಹೇಳುವುದೇ ಮೇಲು.

ಹಲ್ಲುಜ್ಜುವುದನ್ನೂ ತಡೆಯಬೇಕು

ಹಲ್ಲುಜ್ಜುವುದನ್ನೂ ತಡೆಯಬೇಕು

ಡೆಂಗ್ಯೂ ಜ್ವರದ ಸಮಯದಲ್ಲಿ ರೋಗಿಯ ಒಸಡುಗಳು ಸಹಾ ದುರ್ಬಲವಾಗುತ್ತವೆ. ಈ ಸಮಯದಲ್ಲಿ ಹಲ್ಲುಜ್ಜುವ ಸಮಯದಲ್ಲಿ ಅತಿ ಹೆಚ್ಚಿನ ಕಾಳಜಿ ವಹಿಸಬೇಕು. ಏಕೆಂದರೆ ರೋಗಿಯ ರಕ್ತದಲ್ಲಿ ಪ್ಲೇಟ್ಲೆಟ್ ಅಥವಾ ರಕ್ತದ ಕಿರುಬಿಲ್ಲೆಗಳ ಸಂಖ್ಯೆ ತೀರಾ ಕಡಿಮೆಯಾಗುತ್ತದೆ. ಈ ಕಿರುಬಿಲ್ಲೆಗಳ ಕೆಲಸವೇನೆಂದರೆ ಗಾಯವಾದಾಗ ಹೊರಬರುವ ರಕ್ತದೊಂದಿಗೆ ಗಾಳಿಯ ಸಂಪರ್ಕ ಪಡೆಯುತ್ತಲೇ ಒಂದಕ್ಕೊಂದು ಅಂಟಿಕೊಂಡು ಗಡ್ಡೆಯಾಗಿಸಿ ಮತ್ತಷ್ಟು ರಕ್ತಸ್ರಾವವನ್ನು ತಡೆಗಟ್ಟುವುದು. ಇದನ್ನೇ ರಕ್ತ ಹೆಪ್ಪುಗಟ್ಟುವುದು ಎನ್ನುತ್ತೇವೆ.

ಹಲ್ಲುಜ್ಜುವುದನ್ನೂ ತಡೆಯಬೇಕು

ಹಲ್ಲುಜ್ಜುವುದನ್ನೂ ತಡೆಯಬೇಕು

ಈ ಕಿರುಬಿಲ್ಲೆಗಳ ಸಂಖ್ಯೆ ಕಡಿಮೆಯಾದರೆ ರಕ್ತಹೆಪ್ಪುಗಟ್ಟದೇ ಅಪಾಯಕಾರಿಯಾಗಬಹುದು. ಸಾಮಾನ್ಯವಾಗಿ ಹಲ್ಲುಜ್ಜುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಒಸಡುಗಳಿಂದ ರಕ್ತ ಒಸರುವ ಸಾಧ್ಯತೆ ಹೆಚ್ಚು. ಆದ್ದರಿಂದ ಜ್ವರ ಬಿಡುವವರೆಗೂ ಬ್ರಶ್ ಬಳಸದೇ ಕೇವಲ ಬೆರಳುಗಳಿಂದ ಮತ್ತು ಮುಕ್ಕಳಿಸುವ ಮೂಲಕ ಹಲ್ಲುಜ್ಜಿದರೆ ಸಾಕು. ಒಂದು ವೇಳೆ ಒಸಡುಗಳಿಂದ ರಕ್ತ ಒಸರಲು ಪ್ರಾರಂಭವಾದರೆ ನಿಲ್ಲಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಈಗಾಗಲೇ ಶಕ್ತಿಹೀನನಾಗಿರುವ ರೋಗಿ ಮತ್ತಷ್ಟು ಬಳಲುತ್ತಾನೆ.

ನೈಸರ್ಗಿಕ ಚಿಕಿತ್ಸೆ ಪಡೆಯಿರಿ

ನೈಸರ್ಗಿಕ ಚಿಕಿತ್ಸೆ ಪಡೆಯಿರಿ

ಡೆಂಘಿ ಜ್ವರಕ್ಕೆ ನೈಸರ್ಗಿಕ ಚಿಕಿತ್ಸೆ ಪಡೆಯುವುದು ಉತ್ತಮ ಆಯ್ಕೆಯಾಗಿದೆ. ನಮಗೆಲ್ಲಾ ಗೊತ್ತಿರುವಂತೆ ಬೇವಿನ ಎಲೆಗಳಲ್ಲಿ ಪ್ರಬಲವಾದ ಔಷಧೀಯ ಗುಣಗಳಿವೆ ಹಾಗೂ ವಿಶೇಷವಾಗಿ ವೈರಸ್ಸುಗಳನ್ನು ಕೊಲ್ಲಲು, ದೇಹದಲ್ಲಿ ವೃದ್ಧಿಗೊಳಿಸುವುದನ್ನು ತಡೆಯಲು ಹಾಗೂ ಸೋಂಕಿನಿಂದ ರಕ್ಷಿಸಲು ನೆರವಾಗುತ್ತದೆ. ಬೇವಿನ ಎಲೆಗಳ ಪ್ರಯೋಜನ ಪಡೆಯಬೇಕಾದರೆ ಮೊದಲು ಒಂದು ಪಾತ್ರೆಯಲ್ಲಿ ಕೊಂಚ ಬೇವಿನ ಎಲೆಗಳನ್ನು ತೋಯಿಸಿಟ್ಟು ಬಳಿಕ ಚೆನ್ನಾಗಿ ಕುದಿಸಬೇಕು. ಈ ನೀರನ್ನು ತಣಿಸಿ ಉಗುರುಬೆಚ್ಚಗಾದ ಬಳಿಕ ಕುಡಿಯುವ ಮೂಲಕ ರಕ್ತದಲ್ಲಿ ಕಿರುಬಿಲ್ಲೆಗಳ ಸಂಖ್ಯೆಗಳನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಡೆಂಘಿ ಜ್ವರದ ಪರಿಣಾಮಗಳನ್ನೂ ಕಡಿಮೆ ಮಾಡುತ್ತದೆ.

ಬೇವಿನ ಎಲೆಗಳು

ಬೇವಿನ ಎಲೆಗಳು

ಬೇವಿನ ಎಲೆಗಳ ಹೊರತಾಗಿ ಇನ್ನೂ ಕೆಲವು ನೈಸರ್ಗಿಕ ವಿಧಾನಗಳಿವೆ. ಪಪ್ಪಾಯಿ ಎಲೆಗಳು, ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ತುಳಸಿ ಎಲೆಗಳು ಮೊದಲಾದವು ಸಹಾ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಡೆಂಘಿ ಜ್ವರವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಆದ್ದರಿಂದ ಜ್ವರ ಬಂದರೆ ಭಯಪಡದೇ ಮೊದಲಾಗಿ ವೈದ್ಯರ ಬಳಿ ತೆರಲಿ ಸೂಕ್ತ ಔಷಧಿಗಳನ್ನೂ ಹಾಗೂ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು. ಈ ಮೇಲೆ ವಿವರಿಸಿದ ಸಲಹೆಗಳೆಲ್ಲವೂ ವೈದ್ಯರು ಸೂಚಿಸಿದ್ದವೇ ಆಗಿರುವುದರಿಂದ ಎಲ್ಲವನ್ನೂ ಪಾಲಿಸುವ ಮೂಲಕ ಈ ಜ್ವರದಿಂದ ಶೀಘ್ರವೇ ಗುಣಮುಖರಾಗಬಹುದು.

ಡೆಂಗ್ಯೂ ರೋಗ ನಿಯಂತ್ರಿಸುವ ಶಕ್ತಿ 'ಬೇವಿನ ಎಲೆ' ಗಳಲ್ಲಿದೆ!

English summary

Health Tips Given By Doctors When You Have Dengue

With the arrival of the monsoon season, we see many dengue cases on the rise. Always, prevention is better than cure but when we are not able to prevent this dangerous fever from affecting us and have somehow contracted it, we should indeed take the necessary steps to follow the health tips suggested by doctors to quickly recover from this disease. Let us have a look at some of the important tips as suggested by leading experts in the medical field to safely sail through the difficult times when we are affected by this fever.
X
Desktop Bottom Promotion